• Home
  • »
  • News
  • »
  • bengaluru-urban
  • »
  • Hijab Row: ಹಿಜಾಬ್ ತೀರ್ಪು ನೀಡಿದ ಮುಖ್ಯ ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆ; ದೂರು ದಾಖಲು

Hijab Row: ಹಿಜಾಬ್ ತೀರ್ಪು ನೀಡಿದ ಮುಖ್ಯ ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆ; ದೂರು ದಾಖಲು

ಕರ್ನಾಟಕ ಹೈಕೋರ್ಟ್

ಕರ್ನಾಟಕ ಹೈಕೋರ್ಟ್

ವೈರಲ್ ವಾಟ್ಸಾಫ್ ವೀಡಿಯೋದಲ್ಲಿ ನ್ಯಾಯಮೂರ್ತಿಗಳನ್ನ ನಿಂದಿಸಿ ಜೀವ ಬೆದರಿಕೆ ಹಾಕಲಾಗಿದೆ. ವೈರಲ್ ಆಗ್ತಿರೋ ವಾಟ್ಸಪ್  ವಿಡಿಯೋ (Viral video) ಸಮೇತ ವಕೀಲೆ ಸುಧಾ ಕಾಟ್ವ ದೂರು ನೀಡಿದ್ದಾರೆ.

  • Share this:

ಹಿಜಾಬ್ ತೀರ್ಪು (Hijab Judgment) ನೀಡಿರುವ ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕಲಾಗಿದೆ ಎಂದು ವಕೀಲೆ ಸುಧಾಕಾಟ್ವ ಎಂಬವರು ವಿಧಾನಸೌಧ ಪೊಲೀಸ್ ಠಾಣೆಗೆ (Vidhana soudha Police Station) ದೂರು ನೀಡಿದ್ದಾರೆ. ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ (Highcourt CJ) ಕೊಲೆ ಬೆದರಿಕೆ ಹಾಕಿರುತ್ತಾರೆ. ಅಪರಿಚಿತ ವ್ಯಕ್ತಿಗಳು ತಮಿಳು‌ ಭಾಷೆ (Tamil Language) ಬಳಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದರಿಂದ ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗೆ ಧಕ್ಕೆಯುಂಟಾಗುತ್ತದೆ. ನ್ಯಾಯಮೂರ್ತಿಗಳನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಅಪರಿಚಿತರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ವಕೀಲೆ ಸುಧಾಕಟ್ಟಾ (Lawyer Sudha Katta) ತಿಳಿಸಿದ್ದಾರೆ.


ವೈರಲ್ ವಾಟ್ಸಾಫ್ ವೀಡಿಯೋದಲ್ಲಿ ನ್ಯಾಯಮೂರ್ತಿಗಳನ್ನ ನಿಂದಿಸಿ ಜೀವ ಬೆದರಿಕೆ ಹಾಕಲಾಗಿದೆ. ವೈರಲ್ ಆಗ್ತಿರೋ ವಾಟ್ಸಪ್  ವಿಡಿಯೋ (Viral video) ಸಮೇತ ವಕೀಲೆ ಸುಧಾ ಕಾಟ್ವ ದೂರು ನೀಡಿದ್ದಾರೆ. ದೂರಿನನ್ವಯ ವಿಧಾನಸೌಧ ಪೊಲೀಸ್ ಠಾಣೆ ಯಲ್ಲಿ IPC 109, 153A, 501, 506, 504, 505, ಅಡಿಯಲ್ಲಿ ಪ್ರಕರಣ ದಾಖಲಾಗಿದೆ.


ಸುಧಾ ಕಟ್ಟಾ ದೂರಿನಲ್ಲಿ ಏನಿದೆ?


ಸುಧಾ ಅವರ ಸಹೋದ್ಯೋಗಿ ಉಮಾಪತಿ ವಕೀಲರು ಅವರ ಮೊಬೈಲ್ ಗೆ ಸುಮಾರು 4 ನಿಮಿಷ ಇರೋ ಒಂದು ವಿಡಿಯೋವನ್ನು ವಾಟ್ಸಪ್ ಗೆ ಕಳುಹಿಸಿದ್ದು, ಅದು ತಮಿಳು ಭಾಷೆಯಲ್ಲಿರುತ್ತದೆ. ಆ ವಿಡಿಯೋದಲ್ಲಿ ಹಿಜಾಬ್  ಹೈಕೋರ್ಟ್ ತೀರ್ಪಿಗೆ ಸಂಬಂಧಿಸಿದಂತೆ ಮಾನ್ಯ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕಿರುತ್ತಾರೆ.


ಇದನ್ನೂ ಓದಿ:  Yasmeena-ali: ಹಿಜಾಬ್ ಧರಿಸಿದ ಪೋರ್ನ್ ಸ್ಟಾರ್​ಗೆ ತಾಲಿಬಾನ್​ಗಳಿಂದ ಬೆದರಿಕೆ!


ಏಕವಚನ ಭಾಷೆ ಬಳಸಿ, ಅವಾಚ್ಯ  ಪದಗಳಿಂದ ನಿಂದಿಸಿರುತ್ತಾರೆ. ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ಬರುವ ರೀತಿಯಲ್ಲಿ ಹಾಗೂ ವಿವಿಧ ಗುಂಪುಗಳ ಮಧ್ಯೆ ಇತ್ಯಾದಿಗಳ ಆಧಾರದ ಮೇಲೆ ದ್ವೇಷವನ್ನುಂಟು ಮಾಡಿ ಸೌಹಾರ್ದತೆಗೆ ಬಾಧಕವಾಗುವಂತಹ ಹೇಳಿಕೆಗಳನ್ನು ನೀಡಿದ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರು ಇತ್ಯಾದಿ.


ತ್ರಿಸದಸ್ಯ ಪೀಠದಿಂದ 129 ಪುಟಗಳ ತೀರ್ಪು


ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರ ಪೂರ್ಣ ಪೀಠ ತೀರ್ಪು ಸರ್ವಸಮ್ಮತವಾಗಿ ತೀರ್ಪನ್ನು ನೀಡಿದೆ. ನ್ಯಾಯಪೀಠ, ಫೆಬ್ರವರಿ 5ರಂದು ಸರ್ಕಾರದ (Government Order) ಏಕರೂಪ ಸಮವಸ್ತ್ರ (Uniform) ಕಡ್ಡಾಯ ಆದೇಶವನ್ನು ಎತ್ತಿ ಹಿಡಿದಿದ್ದು, ಕಾನೂನುಬದ್ಧವಾಗಿದೆ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಾಲಯ ಒಟ್ಟು 129 ಪುಟಗಳ ತೀರ್ಪು ಪ್ರಕಟಿಸಿದೆ.


ಸುದೀರ್ಘ ವಾದ- ಪ್ರತಿವಾದ ಆಲಿಸಿದ ನ್ಯಾಯಾಲಯ ನಾಲ್ಕು ಪ್ರಶ್ನೆಗಳನ್ನು ಕೇಳಿಕೊಂಡಿತ್ತು. ಆ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳುವ ಮೂಲಕ ನ್ಯಾಯಾಲಯ ತನ್ನ ತೀರ್ಪು ನೀಡಿದೆ. ಆ ನಾಲ್ಕು ಪ್ರಶ್ನೆಗಳು ಮತ್ತು ನ್ಯಾಯಾಲಯ ಕಂಡುಕೊಂಡುವ ಉತ್ತರ ಇಲ್ಲಿದೆ.


ಪ್ರಶ್ನೆ 1.ಹಿಜಾಬ್ & ಹೆಡ್ ಸ್ಕಾರ್ಪ್ ಇಸ್ಲಾಂ ನಂಬಿಕೆಯಲ್ಲಿ ಅತ್ಯಗತ್ಯವೇ?


ಉತ್ತರ: ಮುಸ್ಲಿಂ ಮಹಿಳೆ ಹಿಜಾಬ್​ ಧರಿಸುವುದು ಅತ್ಯಗತ್ಯ ಆಚರಣೆಯಲ್ಲ. ಇಸ್ಲಾಂ ನಂಬಿಕೆಯ ಪ್ರಕಾರ ಹಿಜಾಬ್ ಧಾರ್ಮಿಕ ಆಚರಣೆಯಲ್ಲ.


ಪ್ರಶ್ನೆ 2: ಆರ್ಟಿಕಲ್ 19(1) ರ ಅಡಿ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯೇ ಇದರ ಅಡಿಯಲ್ಲಿ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತಾ.?


ಉತ್ತರ: ಸಿಡಿಸಿ ವಸ್ತ್ರ ಸಂಹಿತೆ ಆದೇಶ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಲ್ಲ. ಸರ್ಕಾರದ ಸಮವಸ್ತ್ರ ಸಂಹಿತೆ ಕಾನೂನು ಬದ್ಧವಾಗಿಯೇ ಇದೆ. ಇದನ್ನು ವಿದ್ಯಾರ್ಥಿಗಳು ಆಕ್ಷೇಪ ಮಾಡಬಾರದು.


ಇದನ್ನೂ ಓದಿ: Hijab Verdict: ಹೈಕೋರ್ಟ್ ತೀರ್ಪು ಗೌರವಿಸುವಂತೆ BSY ಮನವಿ, ನಮಗೆ ಕಪಾಳಮೋಕ್ಷ ಆಗಿದೆ ಎನ್ನಲಾಗಲ್ಲ ಎಂದ್ರು ಸಿದ್ದು


ಪ್ರಶ್ನೆ 3: ಸರ್ಕಾರದ ಫೆ. 5ರ ಆದೇಶ ಆರ್ಟಿಕಲ್ 14 ಮತ್ತು 15ರ ಉಲ್ಲಂಘನೆಯೇ?


ಉತ್ತರ: ಸರ್ಕಾರ ಫೆ.5 ರ ಆದೇಶ ಕಾನೂನು ಬದ್ದವಾಗಿಯೇ ಇದೆ. ಸಂವಿಧಾನದಲ್ಲಿ ಸರ್ಕಾರಕ್ಕೆ ಈ ನಿರ್ಧಾರ ತೆಗೆದುಕೊಳ್ಳಲು ಅವಕಾಶವಿದೆ.


ಪ್ರಶ್ನೆ 4: ಉಡುಪಿ ಕಾಲೇಜಿನ ವಿರುದ್ದ ಶಿಸ್ತು ಕ್ರಮಕ್ಕೆ ಆದೇಶ ಮಾಡಬೇಕೇ?


ಉತ್ತರ: ಉಡುಪಿ ಕಾಲೇಜಿನ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವ ವಿಚಾರಕ್ಕೆ ಸಂಬಂಧಿಸಿದ ಈ ಅರ್ಜಿಗಳು ಇಲ್ಲಿ ಉರ್ಜಿತವಾಗುವುದಿಲ್ಲ.

Published by:Mahmadrafik K
First published: