• Home
  • »
  • News
  • »
  • bengaluru-urban
  • »
  • KS Eshwarappa ಬಂಧನಕ್ಕೆ ಆಗ್ರಹಿಸಿ ರಾಜ್ಯಾದ್ಯಂತ Congress ಪ್ರತಿಭಟನೆ

KS Eshwarappa ಬಂಧನಕ್ಕೆ ಆಗ್ರಹಿಸಿ ರಾಜ್ಯಾದ್ಯಂತ Congress ಪ್ರತಿಭಟನೆ

ಕಾಂಗ್ರೆಸ್​ ನಾಯಕರ ಪ್ರತಿಭಟನೆ

ಕಾಂಗ್ರೆಸ್​ ನಾಯಕರ ಪ್ರತಿಭಟನೆ

ಇದೀಗ ಧರಣಿಯನ್ನು ರಾಜ್ಯಾದ್ಯಂತ ಮಾಡಲು ಕಾಂಗ್ರೆಸ್ ಮಾಡಿದೆ.ಮಾಜಿ ಸಚಿವ ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ರಾಜ್ಯಾದ್ಯಂತ 5 ದಿನ ರಾಜ್ಯ ಕಾಂಗ್ರೆಸ್ ನಾಯಕರು ಪ್ರತಿಭಟನೆ ಮಾಡಲಿದ್ದಾರೆ.

  • Share this:

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ (Santosh Patil Death Case) ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬಂದಿರುವ ಹಿನ್ನೆಲೆ ಕೆ.ಎಸ್.ಈಶ್ವರಪ್ಪ  ಗ್ರಾಮೀಣಾಭಿವೃದ್ಧಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದ್ರೆ ಕಾಂಗ್ರೆಸ್ (Congress) ಭ್ರಷ್ಟಾಚಾರ ನಿಗ್ರಹ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಹಾಗೂ ಈಶ್ವರಪ್ಪ ಅವರನ್ನು ಬಂಧಿಸಬೇಕು. ಸಂತೋಷ್ ಪಾಟೀಲ್ ಮಾಡಿದ ಕಾಮಗಾರಿಯ ಬಿಲ್ 4 ಕೋಟಿ ಪಾವತಿ ಆಗಬೇಕು. ಕುಟುಂಬಕ್ಕೆ ಸರಕಾರಿ ಉದ್ಯೋಗದ ಜೊತೆಗೆ 1 ಕೋಟಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದೆ. ವಿಧಾನಸೌಧದ ಪೂರ್ವ ದ್ವಾರದ ಬಳಿಯೇ  ಕಾಂಗ್ರೆಸ್ ನಾಯಕರು (Congress Leaders Protest) ಅಹೋರಾತ್ರಿ ಧರಣಿ ಮಾಡಿದ್ದರು. ಇದೀಗ ಧರಣಿಯನ್ನು ರಾಜ್ಯಾದ್ಯಂತ ಮಾಡಲು ಕಾಂಗ್ರೆಸ್ ಮಾಡಿದೆ.ಮಾಜಿ ಸಚಿವ ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ರಾಜ್ಯಾದ್ಯಂತ  5 ದಿನ ರಾಜ್ಯ ಕಾಂಗ್ರೆಸ್ ನಾಯಕರು ಪ್ರತಿಭಟನೆ ಮಾಡಲಿದ್ದಾರೆ.


ಮೊದಲ ತಂಡ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಏ..16 ರಂದು ಗದಗ್ ಜಿಲ್ಲೆ, 17 ರಂದು ಬಾಗಲಕೋಟೆ ಜಿಲ್ಲೆ, 18 ರಂದು  ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ, 19 ರಂದು ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಪ್ರತಿಭಟನೆ ನಡೆಯಲಿದೆ.


ಎರಡನೇ ತಂಡ: ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ  ಏ. 16ರಂದು ಮೈಸೂರು ನಗರ ಹಾಗೂ ಗ್ರಾಮೀಣ ಜಿಲ್ಲೆ, 17ರಂದು ಮಂಡ್ಯ ಜಿಲ್ಲೆಯಲ್ಲಿ, 18ರಂದು ಕೊಡಗು ಜಿಲ್ಲೆ, 19ರಂದು ಹಾಸನ ಜಿಲ್ಲೆ, 20ರಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರತಿಭಟನೆ ನಡೆಯಲಿದೆ.


ಇದನ್ನೂ ಓದಿ: PSI ನೇಮಕಾತಿಯಲ್ಲಿ BJP, RSS ಕಾರ್ಯಕರ್ತರ ನೇಮಕ, ಒಬ್ಬರಿಂದ 70 ರಿಂದ 80 ಲಕ್ಷ ಲಂಚ: Congress ಆರೋಪ


ಮೂರನೇ ತಂಡ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ನೇತೃತ್ವದಲ್ಲಿ ಏ. 16 ಕಲಬುರಗಿ ಜಿಲ್ಲೆ, ಏ. 17 ಯಾದಗಿರಿ ಜಿಲ್ಲೆ ಮತ್ತು ಏ. 18 ರಾಯಚೂರು ಪ್ರತಿಭಟನೆ ನಡೆಯಲಿದೆ.


ನಾಲ್ಕನೇ ತಂಡ: ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ನೇತೃತ್ವ ಏ. 16 ರಂದು ರಾಮನಗರ ಜಿಲ್ಲೆ, ಏ. 17 ರಂದು ಕೋಲಾರ ಜಿಲ್ಲೆ, ಏ. 18 ರಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರತಿಭಟನೆ ಇರಲಿದೆ.


ಐದನೇ ತಂಡ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ನೇತೃತ್ವದಲ್ಲಿ  ಏ. 16 ರಂದು ಚಿತ್ರದುರ್ಗ ಜಿಲ್ಲೆ, ಏ. 17 ರಂದು ತುಮಕೂರು ಜಿಲ್ಲೆಯಲ್ಲಿ ಪ್ರತಿಭಟನೆ ಇರಲಿದೆ.


ಈಶ್ವರಪ್ಪ ಅವರ ಹೆಸರು ಬರೆದಿಟ್ಟು ಆತ್ಮಹತ್ಯೆ


ಉಡುಪಿಯ ಶಾಂಭವಿ ಲಾಡ್ಜ್ ನಲ್ಲಿ ಇಂದು ಏಪ್ರಿಲ್ 12ರಂದು ಮಂಗಳವಾರ ಆತ್ಮಹತ್ಯೆಗೆ  ಮಾಡಿಕೊಂಡಿರೋ ಸ್ಥಿತಿಯಲ್ಲಿ ಅವರ ಮೃತದೇಹ ಸಿಕ್ಕಿತ್ತು. ಅಲ್ಲದೆ ನನ್ನ ಸಾವಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪನವರೇ ಕಾರಣ ಎಂದು ವಾಟ್ಸಾಪ್ ಸಂದೇಶ ರವಾನಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ಮಾಧ್ಯಮಗಳಿಗೂ ಕಳುಹಿಸಿದ್ದು, ನನ್ನ ಪತ್ನಿ ಮಕ್ಕಳಿಗೆ ಸಹಾಯ ಮಾಡಿ ಎಂದು ಪ್ರಧಾನಿ ಮೋದಿ ಹಾಗೂ ಬಿ ಎಸ್ ಯಡಿಯೂರಪ್ಪನವರಿಗೆ ಮನವಿ ಮಾಡಿಕೊಂಡಿದ್ದಾರೆ.


ಮಹಿಳಾ ಕಾರ್ಯಕರ್ತೆಯರ ಕಣ್ಣೀರು


ಶಿವಮೊಗ್ಗ ನಗರ ಬಿಜೆಪಿ ಕಚೇರಿಯಲ್ಲಿ ಮಹಿಳಾ ಕಾರ್ಯಕರ್ತರು ಕಣ್ಣೀರು ಹಾಕಿ, ನೀವು ರಾಜೀನಾಮೆ ನೀಡಬಾರದು ಎಂದು ಒತ್ತಾಯಿಸಿದಾಗ ಈಶ್ವರಪ್ಪ ಸಮಾಧಾನಪಡಿಸಿದರು. ನನ್ನ ಬಗ್ಗೆ ತಿಳಿದಿರುವ ಎಲ್ಲರೂ ಸಹ ನನಗೆ ವಿಶ್ವಾಸ ತುಂಬುತ್ತಿದ್ದಾರೆ. ನೀವು ಗೆದ್ದು ಬರುತ್ತೀರಿ ಎನ್ನುತ್ತಿದ್ದಾರೆ. ನಾನು ಹೀಗೆ ನನಗೆ ಅಗ್ನಿಪರೀಕ್ಷೆ ಬರುತ್ತದೆ ಎಂದು ತಿಳಿದುಕೊಂಡಿರಲಿಲ್ಲ.


ಇದನ್ನೂ ಓದಿ:  Congress ಅಹೋರಾತ್ರಿ ಧರಣಿ ಅಂತ್ಯ; K.S ಈಶ್ವರಪ್ಪ ಸಾಮಾನ್ಯ ವ್ಯಕ್ತಿಯಲ್ಲ, ಸಾಕ್ಷಿ ನಾಶ ಮಾಡಬಲ್ಲರು- ಸಿದ್ದರಾಮಯ್ಯ


ಆದರೆ, ಜನರೇ ಬಂದು ನನ್ನನ್ನು ಮಾತನಾಡಿಸುತ್ತಿರುವುದು ಧೈರ್ಯ ತಂದಿದೆ' ಎಂದು ಅವರು ಹೇಳಿದರು.  'ನನ್ನ ಅಕ್ಕ-ತಂಗಿಯರಾದ ನೀವು ಕಣ್ಣೀರು ಹಾಕಿ ಕಳುಹಿಸುವುದು ಬೇಡ. ನೀವು ಕಣ್ಣೀರು ಹಾಕಿದ್ರೆ ನಾನು ಬೆಂಗಳೂರಿಗೆ ಹೋಗಲ್ಲ. ನೀವೆಲ್ಲ ನನಗೆ ಒಳ್ಳೆಯದಾಗಲಿ ಎಂದು ಹಾರೈಸಿ ಕಳುಹಿಸಿ ಕೊಡಿ ಎಂದು ಈಶ್ವರಪ್ಪ ಹೇಳಿದ್ರು

Published by:Mahmadrafik K
First published: