ಬೆಂಗಳೂರು: ಕಿವಿ ಸಲಾಡ್ ರೋಲ್, ಕ್ಯಾಲಿಫೋರ್ನಿಯಾ ರೋಲ್, ಟ್ರಫಲ್ ಸುಶಿ ಮಶ್ರೂಮ್ ರೋಲ್ ವೆಜ್ನಲ್ಲಿ ಸಿಕ್ರೆ, ನಾನ್ ವೆಜ್ನಲ್ಲಿ ಟ್ರಫಲ್ ಮಶ್ರೂಮ್ ಸುಶಿ ಚಿಕನ್ ರೋಲ್. ಇದೆಲ್ಲಾ ಯಾವ್ದೋ ಇನ್ಸ್ಟಾಗ್ರಾಂ ವಿಡಿಯೋಲಿ ನೋಡಿ ಬಾಯಲ್ಲಿ ನೀರೂರಿಸೋ ಖಾದ್ಯಗಳು ಮಾತ್ರ ಅಂತ ಅನ್ಕೊತಿದೀರಾ... ನೀವು ಇಲ್ಲಿ ನೋಡ್ತಿರೋ ಈ ಕಲರ್ಫುಲ್ ಖಾದ್ಯಗಳೆಲ್ಲಾ (Chinese Food) ಗಾರ್ಡನ್ ಸಿಟಿ ಬೆಂಗ್ಳೂರಲ್ಲೇ (Chinese Food In Bengaluru) ಸಿಗ್ತಿದೆ!
ವೈವಿಧ್ಯಮಯ ಆಹಾರ, ನೋಡೋಕೂ ಚಂದ, ತಿನ್ನೋಕೂ ರುಚಿ. ಮಂದ ಬೆಳಕಿನ ಕೂಲ್ ಕೂಲ್ ವಾತಾವರಣದಲ್ಲಿ ಕಣ್ಣ ಮುಂದೆ ಕಾಣುವ ಬಗೆಬಗೆಯ ತಿನಿಸು. ಒಂದೊಂದು ತಿನಿಸನ್ನೂ ನೋಡಿದಾಗ್ಲೂ ಹೀಗೂ ಒಂದು ತಿಂಡಿ ಉಂಟಾ ಅನ್ನೋ ಫೀಲ್, ಇದ್ರ ರುಚಿ ಹೇಗಿರಬಹುದು ಅನ್ನೋ ಕುತೂಹಲ!
ಆಹಾರಪ್ರಿಯರ ರಸಗ್ರಂಥಿಗಳಿಗೆ ಹಬ್ಬ!
ಚೈನೀಸ್ ಫುಡ್ ಅಂದತಕ್ಷಣ ಆಹಾರಪ್ರಿಯರ ಕಿವಿ ನೆಟ್ಟಗಾಗುತ್ತವೆ. ನಾಲಿಗೆಯ ರಸಗ್ರಂಥಿಗಳು ಒಮ್ಮೆ ಎಚ್ಚರಗೊಳ್ಳುತ್ತವೆ. ಈಗ್ಲೇ ಒಮ್ಮೆ ಸವಿದುಬಿಡೋಣ ಅನಿಸುತ್ತೆ. ನಮ್ ಬೆಂಗಳೂರಿನಲ್ಲೇ ಅದ್ಭುತ ರುಚಿಯ ಚೈನೀಸ್ ತಿಂಡಿಗಳ ತಾಣಗಳಿವೆ ಅನ್ನೋದು ಬಹುತೇಕರಿಗೆ ಗೊತ್ತೇ ಇಲ್ಲ.
ಏನೆಲ್ಲಾ ಐಟಮ್ಸ್ ಇರುತ್ತೆ ಗೊತ್ತಾ?
ನೀವು ರೆಸ್ಟೊರೆಂಟ್ ಒಳಹೊಕ್ಕ ತಕ್ಷಣ ಸಂಗ್ರಿಯಾ ಬೆಸಿಲ್ ಐಸ್ಡ್ ಟೀಯ ಅದ್ಭುತ ರುಚಿ ನಿಮ್ಮನ್ನು ಸ್ವಾಗತಿಸುತ್ತೆ. ಮುಂದಿನ ಪಾಳಿ ಸುಶಿಯದ್ದು, ಕಿವಿ ಸಲಾಡ್ ರೋಲ್, ಕ್ಯಾಲಿಫೋರ್ನಿಯಾ ರೋಲ್, ಟ್ರಫಲ್ ಸುಶಿ ಮಶ್ರೂಮ್ ರೋಲ್ ವೆಜ್ನಲ್ಲಿ ಸಿಕ್ರೆ, ನಾನ್ ವೆಜ್ನಲ್ಲಿ ಟ್ರಫಲ್ ಮಶ್ರೂಮ್ ಸುಶಿ ಚಿಕನ್ ರೋಲ್ ಸೇರ್ದಂತೆ ಇನ್ನೂ ನಾನಾ ವೆರೈಟಿ ಖಾದ್ಯಗಳು ಬಾಯಲ್ಲಿ ನೀರೂರಿಸುತ್ತವೆ.
ಇದನ್ನೂ ಓದಿ:Bengaluru: ಆರ್ಡರ್ ಮಾಡಿದ 20 ನಿಮಿಷದಲ್ಲೇ ಕೈಸೇರಲಿದೆ ಪಿಜ್ಜಾ!
ಮೇನ್ ಕೋರ್ಸ್ನಲ್ಲಿ ಹಲವಾರು ವೆರೈಟಿ
ಮೇನ್ ಕೋರ್ಸ್ಗೆ ಬಂದ್ರೆ, ಇಲ್ಲಿರೋ ಖಾದ್ಯಗಳನ್ನ ನೋಡಿ ಇಲ್ಲೇ ಇದ್ ಬಿಡೋಣ ಅನಿಸೋದು ಗ್ಯಾರಂಟಿ, ರೈಸ್ ಐಟಮ್ಗಳಲ್ಲೇ ಇಷ್ಟೊಂದು ರುಚಿಯಾಗಿ ವೆರೈಟಿ ವೆರೈಟಿಯಾಗಿ ಸಿಗುತ್ತಾ ಅನ್ನೋ ಪ್ರಶ್ನೆನೂ ನಿಮ್ಮಲ್ಲಿ ಹುಟ್ಟೋದು ಪಕ್ಕಾ!
ಇದನ್ನೂ ಓದಿ: Bannerghatta: ಬನ್ನೇರುಘಟ್ಟದಲ್ಲಿ ಚಿಟ್ಟೆಗಳ ಮೋಡಿ! ತರಹೇವಾರಿ ಪಾತರಗಿತ್ತಿಗಳ ಮನಮೋಹಕ ಚಿತ್ತಾರ
ಅಂದಹಾಗೆ ಇಷ್ಟೆಲ್ಲ ನೋಡಿದ್ಮೇಲೆ ನಿಮ್ಮ ನಾಲಿಗೆಗೂ ಚೈನೀಸ್ ಫುಡ್ ತಿನ್ಬೇಕು ಅನ್ನೋ ಆಸೆ ಹುಟ್ಟಿರಬಹುದು. ಮತ್ತೇಕೆ ತಡ, ಈ ಬಗೆಬಗೆಯ ಚೈನೀಸ್ ಫುಡ್ಗಳನ್ನ ಒಮ್ಮೆ ನೀವೂ ಟ್ರೈ ಮಾಡಬಹುದು ನೋಡಿ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ