• Home
  • »
  • News
  • »
  • bengaluru-urban
  • »
  • Champa Shashti 2022: ಸುಬ್ರಹ್ಮಣ್ಯ ದೇವರ ಬೆಳ್ಳಿ ರಥೋತ್ಸವ, ದೇವಸ್ಥಾನ ಪ್ರದಕ್ಷಿಣೆ ಹಾಕಿದ ಗರುಡ!

Champa Shashti 2022: ಸುಬ್ರಹ್ಮಣ್ಯ ದೇವರ ಬೆಳ್ಳಿ ರಥೋತ್ಸವ, ದೇವಸ್ಥಾನ ಪ್ರದಕ್ಷಿಣೆ ಹಾಕಿದ ಗರುಡ!

X
ದೇವಸ್ಥಾನದ ಪ್ರದಕ್ಷಿಣೆ ಹಾಕಿದ ಗರುಡ!

"ದೇವಸ್ಥಾನದ ಪ್ರದಕ್ಷಿಣೆ ಹಾಕಿದ ಗರುಡ!"

ಅಚ್ಚರಿಯೋ, ವಿಸ್ಮಯವೋ ಗರುಡ ಪ್ರದರ್ಶನ ಭಕ್ತರನ್ನು ರೋಮಾಂಚನದ ಕಡಲಲ್ಲಿ ಮೀಯುವಂತೆ ಮಾಡ್ತು!

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

    ಬೆಂಗಳೂರು: ಎಲ್ಲೆಲ್ಲೂ ಮೊಳಗುತ್ತಿರೋ ಜೈಕಾರ, ನಾಗಪ್ಪಾ ನೀನೇ ಕಾಪಾಡಪ್ಪಾ ಅಂತ ಪ್ರಾರ್ಥಿಸ್ತಿರೋ ಭಕ್ತರು. ಕಣ್ಮನ ಸೆಳೆಯುತ್ತಿರೋ ಅದ್ದೂರಿ ಬೆಳ್ಳಿ ರಥ! ಗರುಡ ದೇವಾಲಯದ (Temples In Bengaluru) ಸುತ್ತ ಹಾರಿದ್ದೇ ಶುರುವಾಯ್ತು ನೋಡಿ ಸಂಭ್ರಮದ ಬೆಳ್ಳಿ ರಥೋತ್ಸವ! ನಾಡಿನಲ್ಲೆಡೆ ಚಂಪಾ ಷಷ್ಠಿಯ (Champa Shashti) ವೈಭವ, ನಾಗಕ್ಷೇತ್ರಗಳಲ್ಲಿ ಭಕ್ತಿ ಭಾವದಿಂದ ವಿವಿಧ ಧಾರ್ಮಿಕ ಆಚರಣೆ ಸಾಂಗವಾಗಿ ನಡೆಯಿತು. ಬೆಂಗಳೂರಿನ (Bengaluru Temples) ವಿವಿ ಪುರದಲ್ಲಿರೋ (Bengaluru VV Puram) ಸಜ್ಜನರಾವ್ ಸರ್ಕಲ್​ನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ವಾರ್ಷಿಕ ಬೆಳ್ಳಿ ರಥೋತ್ಸವ ಸಡಗರ ಸಂಭ್ರಮ ಕಳೆಗಟ್ಟಿತ್ತು.


    ಮುಂಜಾನೆಯಿಂದಲೇ ಸಾವಿರಾರು ಭಕ್ತರು ಸುಬ್ರಹ್ಮಣ್ಯ ದೇವರ ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದರು. ದೇಗುಲದ ಹೊರಗಿನಿಂದಲೇ ದರ್ಶನ ಕಲ್ಪಿಸೋಕೆ ದೊಡ್ಡ ಸ್ಕ್ರೀನ್ಅನ್ನು ಸಹ ಅಳವಡಿಸಿ ಸೌಕರ್ಯ ಕಲ್ಪಿಸಲಾಗಿತ್ತು.


    ಇದನ್ನೂ ಓದಿ: Robot Operation: ಶಿವಮೊಗ್ಗದಲ್ಲಿ ಆಪರೇಷನ್ ಮಾಡುತ್ತೆ ರೋಬೋಟ್!


    ಗರುಡ ದೇಗುಲ ಪ್ರದಕ್ಷಿಣೆ ಹಾಕಿದ ಮೇಲೆ ಶುರು!
    ಸುಬ್ರಹ್ಮಣ್ಯ ದೇವರ ಬೆಳ್ಳಿ ರಥದ ಉತ್ಸವಕ್ಕೂ ಮುನ್ನ ಗರುಡ ದೇವಸ್ಥಾನವನ್ನು ಪ್ರದಕ್ಷಿಣೆ ಹಾಕೋದು ತುಂಬಾ ವಿಶೇಷ. ಈ ವರ್ಷವೂ ಭಕ್ತರ ನಂಬಿಕೆಯಂತೆ ಗರುಡ ಸುಬ್ರಹ್ಮಣ್ಯ ದೇವರಿಗೆ ಪ್ರದಕ್ಷಿಣೆ ಹಾಕ್ತು. ಇದು ನೆರೆದ ಆಸ್ತಿಕರ ಭಕ್ತಿ ಭಾವವನ್ನು ಹೆಚ್ಚಿಸಿತು. ಭಕ್ತರ ಹರ್ಷೋದ್ಘಾರಕ್ಕೆ ಕಾರಣವಾಯ್ತು. ಅಚ್ಚರಿಯೋ, ವಿಸ್ಮಯವೋ ಗರುಡ ಪ್ರದರ್ಶನ ಭಕ್ತರನ್ನು ರೋಮಾಂಚನದ ಕಡಲಲ್ಲಿ ಮೀಯುವಂತೆ ಮಾಡ್ತು!


    ಇದನ್ನೂ ಓದಿ: Champa Shashti: ಹಾಲಿನ ಬದಲು ಹುತ್ತಕ್ಕೆ ಕೋಳಿ ರಕ್ತ ಎರೆದು ಚಂಪಾಷಷ್ಠಿ ಆಚರಣೆ


    ಕುಕ್ಕೆಯಲ್ಲೂ ಸಂಭ್ರಮದ ಉತ್ಸವ
    ದಕ್ಷಿಣ ಕನ್ನಡದ ಕುಕ್ಕೆಯಲ್ಲೂ ಚಂಪಾಷಷ್ಠಿ ಮಹೋತ್ಸವದ ಪ್ರಯುಕ್ತ ಸುಬ್ರಹ್ಮಣ್ಯ ದೇವರ ಬ್ರಹ್ಮರಥ ಎಳೆದು ಭಕ್ತರು ಪುನೀತರಾದ್ರು. ಒಟ್ಟಾರೆ ನಾಗಪ್ಪಾ ನೀನೆ ಕಾಪಾಡಪ್ಪಾ ಅಂತ ನಾಡಿನೆಲ್ಲೆಡೆ ಲಕ್ಷಾಂತರ ಭಕ್ತರು ಹಲವು ಆಚರಣೆಗಳನ್ನು ನೆರವೇರಿಸಿದ್ರು.

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು