Bannerghatta: ಬನ್ನೇರುಘಟ್ಟದಲ್ಲಿ ಚಿಟ್ಟೆಗಳ ಮೋಡಿ! ತರಹೇವಾರಿ ಪಾತರಗಿತ್ತಿಗಳ ಮನಮೋಹಕ ಚಿತ್ತಾರ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ದೇಶದಲ್ಲಿಯೇ ಬನ್ನೇರುಘಟ್ಟ ಚಿಟ್ಟೆ ಪಾರ್ಕ್ ಅತಿ ಹೆಚ್ಚು ಚಿಟ್ಟೆಗಳ ಪ್ರಭೇದಗಳನ್ನು ಹೊಂದಿರುವ ಪಾರ್ಕ್ ಆಗಿದೆ. ಬನ್ನೇರುಘಟ್ಟದ ಚಿಟ್ಟೆ ಪಾರ್ಕ್​ನಲ್ಲಿ ಚಿಟ್ಟೆಗಳ ಹಾರಾಟದ ಖುಷಿಯನ್ನು ನೀವೊಮ್ಮೆ ನೋಡಿಬಿಡಿ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

    ಬೆಂಗಳೂರು: ಮನಸ್ಸನ್ನು ಮಂತ್ರ ಮುಗ್ದಗೊಳಿಸುವ ಹಾರುವ ಆಭರಣಗಳು! ಕಣ್ಮನ ಸೆಳೆಯುವ ಬಣ್ಣ ಬಣ್ಣದ ತರಹೇವಾರಿ ಪಾತರಗಿತ್ತಿಗಳು. ಇವುಗಳ ಹಾರಾಟ ಪ್ರವಾಸಿಗರಿಗೆ ಪಾಲಿಗೆ ಕ್ರೇಜ್. ಅಂದಹಾಗೆ ಬಣ್ಣ ಬಣ್ಣದ ಚಿಟ್ಟೆಗಳ (Bannerghatta National Park) ಕಂಡು ನೀವು ಖುಷಿಪಡಬೇಕಾ? ಅವುಗಳ ಜೊತೆ ನೀವು ಕೂಡ ಸ್ವಚ್ಚಂದವಾಗಿ ವಿಹರಿಸಬೇಕಾ? ಹಾಗಾದ್ರೆ ತಪ್ಪದೆ ಈ ಸ್ಟೋರಿ ನೋಡಿ.


    ಹೀಗೆ ಒಂದೇ ಕಡೆ ಹತ್ತಾರು ಪ್ರಬೇಧದ ಪತಂಗಗಳು, ಮರಗಿಡಗಳ ನಡುವೆ ಹಾರಾಡುತ್ತಿರುವ ಬಣ್ಣ ಬಣ್ಣದ ಚಿಟ್ಟೆಗಳು. ಅವುಗಳನ್ನು ಕಂಡು ಖುಷಿಪಡುತ್ತಿರುವ ಪ್ರವಾಸಿಗರು. ಈ ಎಲ್ಲಾ ದೃಶ್ಯಗಳು ಕಂಡು ಬಂದದ್ದು ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಚಿಟ್ಟೆ ಪಾರ್ಕ್​ನಲ್ಲಿ.


    ವಿಶಿಷ್ಟ ಪ್ರಕ್ರಿಯೆಗೆ ಸಾಕ್ಷಿಯಾಗುತ್ತೆ ಬನ್ನೇರುಘಟ್ಟ
    ಬನ್ನೇರುಘಟ್ಟ ಜೈವಿಕ ಉದ್ಯಾನವನದ ಚಿಟ್ಟೆ ಪಾರ್ಕ್​ನಲ್ಲಿ ದೇಶದ ವಿವಿಧ ಕಡೆ ಕಾಣಸಿಗುವ 18 ಪ್ರಭೇದದ ಚಿಟ್ಟೆಗಳನ್ನು ಕಾಣಬಹುದು. 18 ಪ್ರಭೇದದ ಚಿಟ್ಟೆಗಳಲ್ಲಿ 12 ಪ್ರಭೇದಗಳ ಸಂತಾನೋತ್ಪತ್ತಿ ಇಲ್ಲೇ ಆಗುತ್ತೆ. ಇವು ಮೊಟ್ಟೆಯಿಂದ ಚಿಟ್ಟೆಗಳಾಗಲು ಇಪ್ಪರಿಂದ ಇಪ್ಪತ್ತೈದು ದಿನಗಳು ಬೇಕು. ಮೊಟ್ಟೆ, ಕ್ಯಾಟರ್ ಪಿಲ್ಲರ್, ಲಾರ್ವಾ ಪ್ಯೂಪಾ ಹಂತದ ಬಳಿಕ ಚಿಟ್ಟೆಯಾಗಿ ಹೊರಬರುತ್ತದೆ. ಶೇಕಡಾ 30 ರಷ್ಟು ಚಿಟ್ಟೆಗಳನ್ನು ಸಂತಾನೋತ್ಪತ್ತಿಗೆಂದು ಪ್ರತ್ಯೇಕಿಸಿ ಉಳಿದ ಚಿಟ್ಟೆಗಳನ್ನು ಪ್ರವಾಸಿಗರ ವೀಕ್ಷಣೆಗೆ ಗ್ಯಾಲರಿಯಲ್ಲಿ ಬಿಡಲಾಗುತ್ತದೆ.


    ಚಿಟ್ಟೆಗಳ ಸಂತಾನೋತ್ಪತ್ತಿ ಬಗ್ಗೆ ಮೂಡಲಿ ಅರಿವು
    ಅಂದಹಾಗೆ ಚಿಟ್ಟೆಗಳು ಕ್ಯಾಟರ್ ಪಿಲ್ಲರ್ ಮತ್ತು ಪ್ಯೂಪಾ ಹಂತದಲ್ಲಿದ್ದಾಗ ಕಂಡರೆ ಬೆಳೆ ಹಾಳು ಮಾಡುತ್ತವೆ ಎಂದು ಜನ ಕೊಲ್ಲುತ್ತಾರೆ. ಚಿಟ್ಟೆಗಳ ಸಂರಕ್ಷಣೆ ಜೊತೆಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ ಚಿಟ್ಟೆಗಳ ಸಂತಾನೋತ್ಪತ್ತಿ ಮಾಡಲಾಗುತ್ತಿದೆ.


    ಇದನ್ನೂ ಓದಿ: Bengaluru Potholes: ಶುದ್ಧ ಬಂಗಾರದ ಹಾಗಿದ್ದ ನಮ್ಮ ಏರಿಯಾ ಈಗ ಧೂಳಿನ ಗಣಿ! ರಸ್ತೆ ಗುಂಡಿಯಲ್ಲಿ ಕುಳಿತ ಬೆಂಗಳೂರು ವ್ಯಕ್ತಿ!




    ಸದ್ಯ ನಮ್ಮ ರಾಜ್ಯದ ಸದರನ್ ಬರ್ಡ್ ವಿಂಗ್, ಮಹಾರಾಷ್ಟ್ರದ ಬ್ಲೂಮರ್ ಮನ್, ಬ್ಲೂ ಬಾಟಲ್, ಟೇಲ್ ಜೆ ಮತ್ತು ಗ್ರೇಟ್ ಅರೇಂಜ್ ತಮ್ಮ ಬಣ್ಣದ ಮೂಲಕ ಪ್ರವಾಸಿಗರನ್ನು ಸೆಳೆಯುತ್ತಿವೆ ಎಂದು ಚಿಟ್ಟೆ ಪಾರ್ಕ್​ನ ಅಧಿಕಾರಿ ಸುಷ್ಮಾ ತಿಳಿಸಿದ್ದಾರೆ.


    ಇದನ್ನೂ ಓದಿ: Bengaluru Viral News: ಬೆಂಗಳೂರಿನಲ್ಲಿ ಬಾಡಿಗೆ ಮನೆಗಾಗಿ ಕಿಡ್ನಿ ಮಾರಾಟಕ್ಕಿಟ್ಟ ವ್ಯಕ್ತಿ!


    butterfly park in Bannerghatta
    ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


    ದೇಶದಲ್ಲಿಯೇ ಬನ್ನೇರುಘಟ್ಟ ಚಿಟ್ಟೆ ಪಾರ್ಕ್ ಅತಿ ಹೆಚ್ಚು ಚಿಟ್ಟೆಗಳ ಪ್ರಭೇದಗಳನ್ನು ಹೊಂದಿರುವ ಪಾರ್ಕ್ ಆಗಿದೆ. ಅದರಲ್ಲೂ ಬೆಂಗಳೂರು ನಗರಕ್ಕೆ ಅನತಿ ದೂರದಲ್ಲಿದ್ದು, ಬೇಸಿಗೆ ರಜೆ ವೇಳೆ ಮನೆ ಮಂದಿಯೆಲ್ಲ ಒಂದು ದಿನದ ಪಿಕ್​ನಿಕ್​​ಗೆ ಹೇಳಿ ಮಾಡಿಸಿದಂತಹ ಪ್ರವಾಸಿ ತಾಣವಾಗಿದೆ. ಈ ಚಿಟ್ಟೆಗಳ ತೋಟಕ್ಕೆ ನೀವೂ ಒಮ್ಮೆ ಭೇಟಿ ನೀಡಿ ಖುಷಿಪಡಿ!


    ವರದಿ: ಆದೂರು ಚಂದ್ರು, ನ್ಯೂಸ್ 18 ಆನೇಕಲ್.

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು