• Home
 • »
 • News
 • »
 • bengaluru-urban
 • »
 • BMTC: ಬಿಎಂಟಿಸಿ ಬಸ್ ಪ್ರಯಾಣಿಕರಿಗೆ ಮತ್ತೆ ಟಿಕೆಟ್ ದರ ಬಿಸಿ!

BMTC: ಬಿಎಂಟಿಸಿ ಬಸ್ ಪ್ರಯಾಣಿಕರಿಗೆ ಮತ್ತೆ ಟಿಕೆಟ್ ದರ ಬಿಸಿ!

ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಳ

ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಳ

ಕೋವಿಡ್ ಸಮಯದಲ್ಲಿ ಇಳಿಕೆ ಮಾಡಿದ್ದ ಬಸ್ ದರವನ್ನು ಬಿಎಂಟಿಸಿ ಮತ್ತೆ ಏರಿಕೆ ಮಾಡಿದೆ. ದರ ಬದಲಾವಣೆ ಹೇಗಿದೆ ಅನ್ನೋದನ್ನ ಗಮನಿಸಿ.

 • Share this:

  ಬೆಂಗಳೂರು: ಬೆಂಗಳೂರು ಮಹಾನಗರದಲ್ಲಿ ದಿನವೊಂದಕ್ಕೆ ಓಡಾಟಕ್ಕಾಗಿ ಲಕ್ಷಾಂತರ ಮಂದಿ ಬಿಎಂಟಿಸಿ (Bengaluru Metropolitan Transport Corporation) ಬಸ್ ಸೇವೆಯನ್ನು ಅವಲಂಬಿಸಿದ್ದಾರೆ. ಆದರೆ, ದಿನಂಪ್ರತಿ ಬಸ್ ನಲ್ಲಿ ಓಡಾಟುತ್ತಿದ್ದವರು ಇನ್ಮುಂದೆ ಬಸ್ ದರದಲ್ಲಾದ ಬದಲಾವಣೆ ಗಮನಿಸಬೇಕು. ಕೋವಿಡ್ ಸಮಯದಲ್ಲಿ ಇಳಿಕೆ ಮಾಡಲಾಗಿದ್ದ ದರವನ್ನ ಮತ್ತೆ ಹಿಂದಿನ ದರಕ್ಕೆ ಬದಲಾವಣೆ ಮಾಡುವ ಮೂಲಕ ಸಾರಿಗೆ ನಿಗಮವು ಪ್ರಯಾಣ ದರ ಹೆಚ್ಚಿಸಿದೆ. BMTC ವೋಲ್ವೋ ‘ವಜ್ರ‘ ಪ್ರಯಾಣಿಕರು ಇನ್ಮುಂದೆ ಕೋವಿಡ್ ದರ ಕಡಿತ ಮಾಡುವ ಮುನ್ನ ನೀಡುತ್ತಿದ್ದ ದರವನ್ನೇ ಭರಿಸಬೇಕಾಗುತ್ತದೆ.


  ಕೋವಿಡ್ ನಲ್ಲಿ ಇಳಿಕೆಯಾಗಿದ್ದ ದರ


  ಕೋವಿಡ್ ಎರಡನೇ ಅಲೆ ರಾಜ್ಯಾದ್ಯಂತ ಭಾರೀ ಪರಿಣಾಮ ಬೀರಿತ್ತು. ಇಂತಹ ಸಮಯದಲ್ಲಿ ಮಹಾನಗರದಲ್ಲಿ ನೆಲೆಸಿರುವ ಕಾರ್ಮಿಕರ, ನೌಕರರ, ವಿದ್ಯಾರ್ಥಿಗಳ, ಉದ್ಯೋಗಿಗಳ ಹಾಗೂ ಇತರೆ ಪ್ರಯಾಣಿಕರ ಓಡಾಟಕ್ಕೆ ಅನುಕೂಲವಾಗುವಂತೆ ಬಿಎಂಟಿಸಿ ವೋಲ್ವೋ ದರವನ್ನು ಇಳಿಕೆ ಮಾಡಲಾಗಿತ್ತು. ಶೇಕಡಾ 34ರಷ್ಟು ಕಡಿಮೆ ಮಾಡಿ ನಿಗಮವು ಆದೇಶಿಸಿತ್ತು. ಇದೀಗ ಮತ್ತೆ ಹಳೆಯ ದರ ಅಂದ್ರೆ, ಕೋವಿಡ್ ಸಮಯದಲ್ಲಿ ದರ ಇಳಿಕೆ ಮಾಡುವ ಮುನ್ನ ಇದ್ದ ದರವನ್ನ ಯಥಾಸ್ಥಿತಿಗೆ ಬದಲಾಯಿಸಿದೆ.


  ಹೀಗಿರಲಿದೆ ಟಿಕೆಟ್ ದರ ಬದಲಾವಣೆ


  ಕೊರೋನಾ ಹಿನ್ನೆಲೆಯಲ್ಲಿ ಟಿಕೆಟ್ ದರ ಕಡಿಮೆ ಮಾಡಿ ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟಿದ್ದ BMTC, ಇದೀಗ ಇಂಧಿನ ಬೆಲೆ ಏರಿಕೆ ಹಿನ್ನೆಲೆ ಮತ್ತೆ ಹಳೆಯ ಟಿಕೆಟ್ ದರ ಜಾರಿ ಮಾಡಿದೆ. ಹಾಲಿ ಬದಲಾದ ದರ ಹೀಗಿರಲಿದೆ..


  • ಸಾಮಾನ್ಯ ದರ ₹20 (₹19 +₹1 GST) ರಿಂದ ₹25 (₹23.81 + ₹1.19 GST) ಕ್ಕೆ ಏರಿಕೆ
  • ಮಾಸಿಕ ಪಾಸ್ ದರ ₹1500 (₹1428 + ₹72 GST) ರಿಂದ ₹1800 (₹1714.29 + ₹85.71 GST) ಕ್ಕೆ ಏರಿಕೆ
  • ದೈನಿಕ ಪಾಸ್ ದರ ₹100 (₹95 + ₹5 GST) ರಿಂದ ₹120 (₹114.29 + ₹5.21 GST) ಕ್ಕೆ ಏರಿಕೆ

  Published by:Precilla Olivia Dias
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು