• Home
  • »
  • News
  • »
  • bengaluru-urban
  • »
  • ಓಲಾ, ಉಬರ್​ಗೆ ಸೆಡ್ಡು ಹೊಡೆದು BMTC ಆ್ಯಪ್ ಆಧಾರಿತ ಸೇವೆ ನೀಡುತ್ತಾ?

ಓಲಾ, ಉಬರ್​ಗೆ ಸೆಡ್ಡು ಹೊಡೆದು BMTC ಆ್ಯಪ್ ಆಧಾರಿತ ಸೇವೆ ನೀಡುತ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆ್ಯಪ್​ಗಳ ಮೂಲಕ ಸೇವೆ ಒದಗಿಸಿ ಬಿಎಂಟಿಸಿ ಸಹ ಲಾಭ ಗಳಿಸಬಹುದು. ಮನಸೋ ಇಚ್ಛೆ ಶುಲ್ಕ ವಿಧಿಸುವ ಓಲಾ, ಉಬರ್, ರಾಪಿಡೋಗಳನ್ನು ಮೀರಬಹುದು.

  • News18 Kannada
  • Last Updated :
  • Bangalore [Bangalore], India
  • Share this:

    ಬೆಂಗಳೂರು: ಓಲಾ, ಉಬರ್ ದುಬಾರಿ ಪ್ರಯಾಣ ದರದ ವಿರುದ್ಧ ಇತ್ತೀಚಿಗಷ್ಟೇ ಭಾರೀ ಆಕ್ರೋಶ ವ್ಯಕ್ತವಾಗಿತ್ತು, ಕರ್ನಾಟಕ ಸರ್ಕಾರ (Karnataka Government On Ola Uber)  ಓಲಾ, ಉಬರ್ ಆಟೋ ಸೇವೆ ಬ್ಯಾನ್ ಮಾಡಿ, ಕೋರ್ಟ್​ನಲ್ಲಿ ವಿಚಾರಣೆ ನಡೆದು ಸಮರ್ಪಕ ದರ ನಿಗದಿಪಡಿಸುವಂತೆ ಕೋರ್ಟ್ ಸೂಚನೆಯನ್ನೂ ನೀಡಿದೆ. ಇಷ್ಟೆಲ್ಲ ಪ್ರಹಸನದ ನಡುವೆ ನೆನಪಾಗುವುದು, ಪದೇ ಪದೇ ಕಣ್ಣಿಗೆ ಕಾಣುವುದು ಬೆಂಗಳೂರಿನ ಬಿಎಂಟಿಸಿ. ಸರ್ಕಾರವೇ ನೇತೃತ್ವ ವಹಿಸಿರುವ ಬಿಎಂಟಿಸಿ ಎಂಬ ಬೃಹತ್ ಸಾರಿಗೆ ಸಂಸ್ಥೆ ಓಲಾ, ಉಬರ್, ರಾಪಿಡೋ ಸೇವೆಗಳಿಗೆ  (Ola Uber Rapido Service In Bengaluru) ಪರ್ಯಾಯ ಆಗುವ ಸಾಧ್ಯವಿಲ್ಲವೇ? ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್​ಪೋರ್ಟ್​ ಕಾರ್ಪೊರೇಷನ್ (BMTC Bus) ಖಾಸಗಿ ಕಂಪನಿಗಳನ್ನು ಹಿಂದಿಕ್ಕಲಾರದೇ?


    ಆಟೋ, ಕ್ಯಾಬ್​ಗಳಂತಹ ಸೇವೆ ನೀಡುವ ಓಲಾ, ಉಬರ್ ಆ್ಯಪ್​ಗಳನ್ನು ಅಗ್ರಿಗೇಟರ್ಗಳು ಎನ್ನುತ್ತಾರೆ. ಅಂದರೆ ಆಟೋ ಸೇವೆ ನೀಡುವ ಚಾಲಕ ಮತ್ತು ಆಟೋ ಸೇವೆ ಅಗತ್ಯವಿರುವ ಗ್ರಾಹಕರ ನಡುವೆ ಸೇತುವೆಯಾಗುವ ವೇದಿಕೆಗಳಿವು. ಇಂತಹುದೇ ಸೇವೆಯನ್ನು ಬಿಎಂಟಿಸಿ ಒದಗಿಸಬಹುದು.


    ಬಿಎಂಟಿಸಿಗೂ ಇದೆ ಅವಕಾಶ
    ಬಿಎಂಟಿಸಿ ಸಹ ಆ್ಯಪ್ ಆಧಾರಿತ ಸೇವೆಗಳನ್ನು ಪರಿಚಯಿಸಲು ಅವಕಾಶ ಹೊಂದಿದೆ. ಆ್ಯಪ್​ಗಳ ಮೂಲಕ ಸೇವೆ ಒದಗಿಸಿ ಬಿಎಂಟಿಸಿ ಸಹ ಲಾಭ ಗಳಿಸಬಹುದು. ಮನಸೋ ಇಚ್ಛೆ ಶುಲ್ಕ ವಿಧಿಸುವ ಓಲಾ, ಉಬರ್, ರಾಪಿಡೋಗಳನ್ನು ಮೀರಬಹುದು.


    ಈ ಹಿಂದೆಯೇ ನಡೆದಿತ್ತು ಪ್ರಯೋಗ
    ಹಾಗಾದರೆ ಇನ್ನೂ ಇಂಥದ್ದೊಂದು ಅದ್ಭುತ ಐಡಿಯಾ ಯಾರಿಗೂ ಹೊಳೆದಿರಲಿಲ್ಲವೇ?ಇಲ್ಲ, ಈ ಹಿಂದೆಯೇ ಬಿಎಂಟಿಸಿ ಆ್ಯಪ್ ಆಧಾರಿತ ಸೇವೆ ಒದಗಿಸುವ ಪ್ರಸ್ತಾಪವಾಗಿತ್ತು. ಓಲಾ, ಉಬರ್​ಗಳಂತಹ ಅಗ್ರಿಗೇಟರ್‌ ಕಂಪನಿಗಳನ್ನು ಉದ್ದೇಶಿಸಿ “ರಾಜ್ಯ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ನಿಯಮ- 2016’ ಸಾರಿಗೆ ಇಲಾಖೆಯಲ್ಲಿ ಪ್ರಸ್ತಾಪಗೊಂಡಿತ್ತು.


    ಇದನ್ನೂ ಓದಿ: SSLC ವಿದ್ಯಾರ್ಥಿಗಳಿಗೆ ಇಲ್ಲಿದೆ ಗುಡ್ ನ್ಯೂಸ್


    ಪ್ರಯೋಗ ಕಾರ್ಯರೂಪಕ್ಕೆ ಬಂದರೆ ಆದಾಯ ಹೆಚ್ಚಳ ಪಕ್ಕಾ
    ಆದರೆ ಇನ್ನೂ ಕಾರ್ಯರೂಪಕ್ಕೆ ಮಾತ್ರ ಬಂದಿಲ್ಲ. ಇಡೀ ಬೆಂಗಳೂರಿನಲ್ಲಿ ಸಾರಿಗೆ ಸೇವೆ ಒದಗಿಸುವುದಲ್ಲಿ ಬಿಗಿ ಹಿಡಿತ ಹೊಂದಿರುವ ಬಿಎಂಟಿಸಿ ಆ್ಯಪ್ ಆಧರಿತ ಸೇವೆ ಒದಗಿಸಿದಲ್ಲಿ ಸಂಸ್ಥೆಗೂ ಆದಾಯ ಹೆಚ್ಚುವುದು ಸಹಜ. ಅಷ್ಟೇ ಅಲ್ಲದೇ ಸರ್ಕಾರಿ ಸಂಸ್ಥೆಯಾಗಿರುವ ಕಾರಣ ಹಿಗ್ಗಾಮುಗ್ಗಾ ದರ ವಿಧಿಸಲು ಸಾಧ್ಯವಿಲ್ಲ. ಇದರಿಂದ ಪ್ರಯಾಣಿಕರಿಗೂ ಅನುಕೂಲ.


    ಇದನ್ನೂ ಓದಿ: Bengaluru To Vijayawada: ಬೆಂಗಳೂರು-ವಿಜಯವಾಡ ಕೇವಲ 6 ಗಂಟೆಯಲ್ಲಿ ಪ್ರಯಾಣಿಸಿ!


    ಪ್ರಯೋಗ ಪ್ರಯೋಗವಾಗಷ್ಟೇ ಉಳಿದಿತ್ತು
    ಬಿಎಂಟಿಸಿ ಬಹಳ ಹಿಂದೆಯೇ ಆ್ಯಪ್‌ ಆಧಾರಿತ ಲಾಸ್ಟ್‌ ಮೈಲ್‌ ಕನೆಕ್ಟಿವಿಟಿ ಎಂಬ ಹೆಸರಿನ ಸೇವೆಯನ್ನು ಪ್ರಯೋಗಾರ್ಥವಾಗಿ ಆರಂಭಿಸಿತ್ತು. ಆಟೋ ಮತ್ತು ಕ್ಯಾಬ್​ಗಳನ್ನು ಈ ಆ್ಯಪ್​ನಲ್ಲಿ ಲಿಂಕ್ ಮಾಡಿ ಪ್ರಯಾಣಿಕರಿಗೆ ಸೇವೆ ಒದಗಿಸುವ ಈ ಯೋಚನೆ ಅನುಷ್ಠಾನಗೊಳ್ಳಲೇ ಇಲ್ಲ. ಪ್ರಯೋಗ ಪ್ರಯೋಗವಾಗಷ್ಟೇ ಉಳಿದು ಬೆಂಗಳೂರಿನ ನಾಗರಿಕರು ತಮ್ಮ ಹಣವನ್ನು ಓಲಾ, ಉಬರ್, ರಾಪಿಡೋಗಳಂತಹ ಖಾಸಗಿ ಕಂಪನಿಗಳಿಗೆ ತೆರುವಂತಾಯಿತು.


    ಹೈಕೋರ್ಟ್​ ಸೂಚನೆ ಹೀಗಿದೆ
    ಜನರಿಂದ ಹಣ ಸುಲಿಗೆ ಮಾಡುತ್ತಿರುವ ಆರೋಪದಡಿ ಆಟೋ ಸೇವೆ ಬ್ಯಾನ್ ವಿರುದ್ಧ ಓಲಾ, ಉಬರ್  ಕಂಪನಿಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ. ಸಾರಿಗೆ ಇಲಾಖೆ ನೀಡಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್  ಮಧ್ಯಂತರ ತಡೆ ನೀಡಿದೆ. ಓಲಾ ಉಬರ್ ಆಟೋ ಸೇವೆ ಒದಗಿಸದಂತೆ ಆದೇಶ ಮಾಡಿದ್ದ ಸಾರಿಗೆ ಇಲಾಖೆಯ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ವಿಧಿಸಿದೆ. ಸರ್ಕಾರ ಯಾವುದೇ ಬಲವಂತದ ಕ್ರಮಕೈಗೊಳ್ಳುವಂತೆ ಇಲ್ಲ. ಓಲಾ, ಉಬರ್ ಕಂಪನಿ ಅನಾಕೂಲಕರ ದರವನ್ನು ವಿಧಿಸಬೇಕು ಎಂದು ಆದೇಶಿಸಿರುವ ಕರ್ನಾಟಕ ಹೈಕೋರ್ಟ್​ ಪರವಾನಿಗೆ ಕಾಲಾವಕಾಶ ವಿಸ್ತರಿಸುವಂತೆ ಆದೇಶ ನೀಡಿದೆ.

    Published by:ಗುರುಗಣೇಶ ಡಬ್ಗುಳಿ
    First published: