Bengaluru Power Cut: ಬೆಂಗಳೂರಿನ ಜನರೇ, ಈ ಏರಿಯಾಗಳಲ್ಲಿ ಜೂನ್ 23 ರಿಂದ 26 ರವರೆಗೆ ಕರೆಂಟ್ ಇರಲ್ಲ

ಬೆಂಗಳೂರಿನ ಯಾವ ಭಾಗಗಳಲ್ಲಿ ಜೂನ್ 23 ರಿಂದ ಜೂನ್ 26ರವರೆಗೆ ವಿದ್ಯುತ್ ಕಡಿತ ಉಂಟಾಗಲಿದೆ? ಎಲ್ಲ ವಿವರ ನಿಮಗಾಗಿಯೇ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ನಿರ್ವಹಣೆ, ದುರಸ್ತಿ ಮತ್ತು ಕೆಲವು ಯೋಜನಾ ಕಾರ್ಯಗಳನ್ನು ಕೈಗೊಳ್ಳಲು ಯೋಜಿಸಿದೆ. ಹೀಗಾಗಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಜೂನ್ 23 ರಿಂದ ಜೂನ್ 26ರವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ. ಮಳೆಯಿಂದ ಬಿಡುವು ಸಿಕ್ಕಾಗಲೆಲ್ಲ ಓವರ್ ಹೆಡ್ ಕೇಬಲ್​ಗಳನ್ನು ನೆಲದಡಿಗೆ ಸ್ಥಳಾಂತರಿಸುವ ಕೆಲಸವನ್ನೂ ಬೆಸ್ಕಾಂ ಮಾಡುತ್ತಿದೆ. ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕಾಮಗಾರಿ ನಡೆಯಲಿದೆ. ಬೆಂಗಳೂರಿನ ಯಾವ ಭಾಗಗಳಲ್ಲಿ ಜೂನ್ 23 ರಿಂದ ಜೂನ್ 26ರವರೆಗೆ ವಿದ್ಯುತ್ ಕಡಿತ (Bengaluru Power Cut) ಉಂಟಾಗಲಿದೆ? ಎಲ್ಲ ವಿವರ ನಿಮಗಾಗಿಯೇ ಇಲ್ಲಿದೆ.

    ಜೂನ್ 23, ಗುರುವಾರ
    ಬೆಗ್ಗರ್ಸ್​ ಕಾಲೋನಿ, ಪ್ರೇಮನಗರ, ಬಿಎಂಟಿಸಿ ಬಸ್ ಡಿಪೋ, ಶಂಕರಪ್ಪ ಇಂಡಸ್ಟ್ರಿಯಲ್ ಎಸ್ಟೇಟ್, ಸುಂಕದಕಟ್ಟೆ ಮುಖ್ಯರಸ್ತೆ, ಜಿಟಿ ಕಾಲೇಜು ಮುಖ್ಯರಸ್ತೆ, ಮೆಟ್ರೋ ಕ್ವಾರ್ಟರ್ಸ್, ಎಚ್‌ಎಂಟಿ ಮುಖ್ಯರಸ್ತೆ, ಸುಬೇದಾರ್ ಪಾಳ್ಯ, ದಿವಾನರಪಾಳ್ಯ, ಗೋಕುಲ, ಕುಂದಲಹಳ್ಳಿ ಕೆರೆ, ರಯಾನ್ ಸ್ಕೂಲ್ ರಸ್ತೆ, ದಿವ್ಯಶ್ರೀ ಅಪಾರ್ಟ್‌ಮೆಂಟ್‌ಗಳಲ್ಲಿ ಜೂನ್ 23ರಂದು ವಿದ್ಯುತ್ ಕಡಿತ ಉಂಟಾಗಲಿದೆ.

    ಜೂನ್ 24, ಶುಕ್ರವಾರ
    ಶಿವ ದೇವಸ್ಥಾನ ಪ್ರದೇಶ, ಮೀನಾಕ್ಷಿ ನಗರ, ನಂಜಪ್ಪ ಲೇಔಟ್, ಮೂರ್ತಿ ನಗರ, ಬೆಗ್ಗರ್ಸ್ ಕಾಲೋನಿ, ಪ್ರೇಮನಗರ, ಬಿಎಂಟಿಸಿ ಬಸ್ ಡಿಪೋ, ಶಂಕರಪ್ಪ ಇಂಡಸ್ಟ್ರಿಯಲ್ ಎಸ್ಟೇಟ್, ತಿಮ್ಮೇನಹಳ್ಳಿ, ಗೋವಿಂದರಾಜನಗರ ಭಾಗ, ಕೆಎಚ್‌ಬಿ ಕಾಲೋನಿ, ಪ್ರಶಾಂತನಗರ, ರಂಗನಾಥಪುರ, ಕಾಮಾಕ್ಷಿಪಾಳ್ಯ ಬ್ಯಾಂಕ್‌ಔಟ್, ಹೆಚ್.ವಿ.ಆರ್.ಡಿ.ಸಿ. ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಸುಂಕದಕಟ್ಟೆ ಮುಖ್ಯ ರಸ್ತೆ, ಜಿಟಿ ಕಾಲೇಜು ಮುಖ್ಯ ರಸ್ತೆ, ಮೆಟ್ರೋ ಕ್ವಾರ್ಟರ್ಸ್, 80 ಅಡಿ ರಸ್ತೆ, ಸಂಜಯನಗರ, ದೇವಸಂದ್ರ, ಚಿಕ್ಕಾಡುಗೋಡಿ, 8 ನೇ ಅಡ್ಡ ಮೂರುತಿ ನಗರ, ಎನ್‌ಜಿವಿ ನೇತ್ರಾವತಿ, ಕೃಷ್ಣ, ಯಮುನಾ, ಗಂಗಾ ಬ್ಲಾಕ್‌ಗಳು, 8 ನೇ ಬ್ಲಾಕ್ ಮತ್ತು ಆಡುಗೋಡಿ ರಸ್ತೆ ಕೆಎಂಎಲ್, ಗುರಪ್ಪನ ರಸ್ತೆ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ.

    ಜೂನ್ 25, ಶನಿವಾರ
    ಸುಂಕದಕಟ್ಟೆ ಮುಖ್ಯರಸ್ತೆ, ಜಿಟಿ ಕಾಲೇಜು ಮುಖ್ಯರಸ್ತೆ, ಮೆಟ್ರೋ ಕ್ವಾರ್ಟರ್ಸ್, ಡಾಲರ್ಸ್ ಕಾಲೋನಿ, ಇಸ್ರೋ, ನ್ಯೂ ಬೆಲ್ ರಸ್ತೆ, ಸಿ.ಎಂ.ಹಳ್ಳಿ, ಕುಂಬರ್ಮುಕ ಪ್ರದೇಶ, ಮಾರತಹಳ್ಳಿ, 3ನೇ ಬ್ಲಾಕ್, ‘ಜೆ’ ಬ್ಲಾಕ್, ಇಂಡಸ್ಟ್ರಿಯಲ್ ಏರಿಯಾ 3ನೇ ಬ್ಲಾಕ್, ಎಸ್‌ಬಿ ಕಾಲೋನಿ, ದಿವ್ಯಶ್ರೀ ಅಪಾರ್ಟ್‌ಮೆಂಟ್‌ಗಳು ಮತ್ತು ವಿಲ್ಲಾಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ.


    ಇದನ್ನೂ ಓದಿ: Electric Buses In Bengaluru: ಬೆಂಗಳೂರು ಜನರಿಗೆ ಖುಷಿ ಸುದ್ದಿ! ಈ ಮಾರ್ಗಗಳಲ್ಲಿ 300 ಎಲೆಕ್ಟ್ರಿಕ್ ಬಸ್ ಸಂಚಾರ​

    ಜೂನ್ 26, ಭಾನುವಾರ
    ಶಿವ ಫಾರ್ಮ್ ಇಂಡಿ ಏರಿಯಾ, ಪಿಸಿ ಇಂಡಸ್ಟ್ರಿಯಲ್ ಏರಿಯಾ, ಕಾವೇರಿಪುರ ರಂಗನಾಥಪುರ, ಕೆಸಿಜಿ ಇಂಡಿ ಏರಿಯಾ, ನಂಜಪ್ಪ ಇಂಡಿ ಎಸ್ಟೇಟ್ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

    ಇದನ್ನೂ ಓದಿ: Bidar To Bengaluru: ಬೀದರ್​ ಟು ಬೆಂಗಳೂರು, ಕೇವಲ 1 ಗಂಟೆ 10 ನಿಮಿಷಕ್ಕೆ ಪ್ರಯಾಣಿಸಿ!

    ಸಿಲಿಕಾನ್ ಸಿಟಿ ಬೆಂಗಳೂರು ಹೆಚ್ಚು ವಿಸ್ತಾರಗೊಳ್ಳುತ್ತಾ ಹೋಗುತ್ತಿದೆ. ಹೀಗಾಗಿ ನಗರದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಹಲವೆಡೆ ಕಾಮಗಾರಿಗಳು ನಡೆಯುತ್ತವೆ. ಹಾಗಾಗಿ ಬೆಂಗಳೂರು ನಗರದ  ಸಾಕಷ್ಟು ಕಡೆಗಳಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಮಳೆಗಾಲದಲ್ಲಿ ವಿದ್ಯುತ್ ಕಡಿತ ಸಾಮಾನ್ಯ. ಮಳೆ ಗಾಳಿಗೆ ಅಲ್ಲಲ್ಲಿ ಮರ ಗಿಡಗಳು ಬೀಳುವುದು, ವಿದ್ಯುತ್ ಲೈನ್ ಗಳು ಕಟ್ ಆಗುವುದು ವಿದ್ಯುತ್ ಕಡಿತಕ್ಕೆ ಕಾರಣವಾಗಲಿದೆ. ಬೆಸ್ಕಾಂ  ನಗರದ ಹಲವೆಡೆ ವಿದ್ಯುತ್ ಕಡಿತ ಮಾಡುವ ಮೂಲಕ ಶಾಕ್ ನೀಡುತ್ತಿದೆ.
    Published by:guruganesh bhat
    First published: