Samrat Restaurant: ಇತಿಹಾಸದ ಪುಟ ಸೇರಲಿದೆ ಬೆಂಗಳೂರಿನ ಪ್ರಸಿದ್ಧ ರೆಸ್ಟೊರೆಂಟ್; ಬೇಸರ ವ್ಯಕ್ತಪಡಿಸಿದ ನೆಟ್ಟಿಗರು

ಬೆಂಗಳೂರಿನ ಜನರ ಅಚ್ಚುಮೆಚ್ಚಿನ ಸಾಮ್ರಾಟ್ ರೆಸ್ಟೋರೆಂಟ್ ಇದೇ ಸೆಪ್ಟೆಂಬರ್ 21 ರಂದು ಸ್ಥಗಿತಗೊಳ್ಳುತ್ತಿದ್ದು, ಈ ವಿಷಯ ತಿಳಿದ ಅನೇಕ ಸಾಮ್ರಾಟ್‌ ರೆಸ್ಟೊರೆಂಟ್‌ನ ಆಹಾರ ಪ್ರಿಯರಿಗೆ ಭಾರೀ ನಿರಾಸೆ ಮೂಡಿದೆ. ರೇಸ್ ಕೋರ್ಸ್ ರಸ್ತೆಯಲ್ಲಿರುವ ಬಸವೇಶ್ವರ ವೃತ್ತದಲ್ಲಿರುವ ಚಾಲುಕ್ಯ ಹೋಟೆಲ್ ಒಳಗೆ ಈ ಸಾಮ್ರಾಟ್‌ ರೆಸ್ಟೋರೆಂಟ್ ಇದೆ. ಈ ವಿಷಯ ಇಂಟರ್‌ನೆಟ್‌ ನಲ್ಲಿ ಭಾರೀ ಸುದ್ದಿಯಾಗಿ ಸಂಚಲನ ಮೂಡಿಸುತ್ತಿದೆ. ನೆಟ್ಟಿಗರು ಕಮೆಂಟ್‌ಗಳ ಮಹಾಪೂರವನ್ನೆ ಹರಿಸಿದ್ದಾರೆ.

ಬೆಂಗಳೂರಿನ ಪ್ರಸಿದ್ಧ ರೆಸ್ಟೊರೆಂಟ್ ʼಸಾಮ್ರಾಟ್ʼ

ಬೆಂಗಳೂರಿನ ಪ್ರಸಿದ್ಧ ರೆಸ್ಟೊರೆಂಟ್ ʼಸಾಮ್ರಾಟ್ʼ

  • Share this:
ಬೆಂಗಳೂರಿನಲ್ಲಿ (Bengaluru) ಒಂದೊಂದು ಏರಿಯಾದಲ್ಲಿ ಒಂದೊಂದು ರೆಸಿಪಿ ಪ್ರಸಿದ್ದವಾಗಿರುತ್ತವೆ (Famous Recipe). ಹಾಗೆಯೇ ಬೆಂಗಳೂರಿನ ಜನರ ಅಚ್ಚುಮೆಚ್ಚಿನ ಸಾಮ್ರಾಟ್ ರೆಸ್ಟೋರೆಂಟ್ (Samrat Restaurant) ಇದೇ ಸೆಪ್ಟೆಂಬರ್ 21 ರಂದು ಸ್ಥಗಿತಗೊಳ್ಳುತ್ತಿದ್ದು, ಈ ವಿಷಯ ತಿಳಿದ ಅನೇಕ ಸಾಮ್ರಾಟ್‌ ರೆಸ್ಟೊರೆಂಟ್‌ನ ಆಹಾರ ಪ್ರಿಯರಿಗೆ ಭಾರೀ ನಿರಾಸೆ ಮೂಡಿದೆ. ರೇಸ್ ಕೋರ್ಸ್ ರಸ್ತೆಯಲ್ಲಿರುವ (Race Course Road) ಬಸವೇಶ್ವರ ವೃತ್ತದಲ್ಲಿರುವ ಚಾಲುಕ್ಯ ಹೋಟೆಲ್ ಒಳಗೆ ಈ ಸಾಮ್ರಾಟ್‌ ರೆಸ್ಟೋರೆಂಟ್ ಇದೆ. ಈ ವಿಷಯ ಇಂಟರ್‌ನೆಟ್‌ ನಲ್ಲಿ ಭಾರೀ ಸುದ್ದಿಯಾಗಿ ಸಂಚಲನ ಮೂಡಿಸುತ್ತಿದೆ. ನೆಟ್ಟಿಗರು ಕಾಮೆಂಟ್ ಗಳ (Comments) ಮಹಾಪೂರವನ್ನೆ ಹರಿಸಿದ್ದಾರೆ.

ಇಲ್ಲಿನ ಫೇಮಸ್ ತಿನಿಸುಗಳು 
ಮಸಾಲಾ ದೋಸೆ, ರವೆ ಇಡ್ಲಿಗಳು, ಬಾದಾಮಿ ಹಲ್ವಾ ಮತ್ತು ಇತರೆ ಆಹಾರಗಳಿಗೆ ಹೆಸರುವಾಸಿಯಾದ ಈ ಐಕಾನಿಕ್ ಉಪಾಹಾರ ಗೃಹವು ನಗರದ ಮಧ್ಯಭಾಗದಲ್ಲಿದೆ. ಆದ್ದರಿಂದ ವಿಧಾನಸೌಧದಲ್ಲಿ ಕೆಲಸ ಮಾಡುವ ರಾಜಕಾರಣಿಗಳು, ಸ್ಥಳೀಯರು ಮತ್ತು ಪ್ರವಾಸಿಗರಿಗೆ ಇದು ಸೂಕ್ತವಾದ ಉಪಾಹಾರ ಗೃಹವಾಗಿತ್ತು ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Viral Video: ವೀಲ್ ಚೇರ್​ನಲ್ಲಿದ್ದ ಹುಡುಗನಿಗೆ ರೈಲು ಹತ್ತಲು ಸಹಾಯ ಮಾಡಿದ ಭದ್ರತಾ ಸಿಬ್ಬಂದಿ! ಹೃದಯಸ್ಪರ್ಶಿ ವಿಡಿಯೋ ವೈರಲ್

ಇದರ ಬಗ್ಗೆ 'ರಿಯಲೇಬಲ್‌ ಸೋರ್ಸ್' ಎಂಬ ಟ್ವಿಟರ್ ಪುಟವು "ಇದು ಅತ್ಯಂತ ದುಃಖದ ಸಂಗತಿ. ಇದು ನಿಜವೇ? ಸಾಮ್ರಾಟ್‌ ರೆಸ್ಟೊರೆಂಟ್‌ ಸೆಪ್ಟೆಂಬರ್ 21 ರಂದು ತನ್ನ ಚಾಲುಕ್ಯ ಹೋಟೆಲ್‌ ಮುಚ್ಚುತ್ತಿದೆಯೇ? ಇದನ್ನು ಯಾರಾದರೂ ಖಚಿತಪಡಿಸಬಹುದೇ? ಅವರು ಅತ್ಯುತ್ತಮವಾದ ಬಾದಾಮಿ ಹಲ್ವಾವನ್ನು ತಯಾರಿಸುತ್ತಿದ್ದರು. ಅದನ್ನು ನಾವು ಮಿಸ್‌ ಮಾಡಿಕೊಳ್ಳುತ್ತೇವೆ” ಎಂದು ಹೇಳಿದೆ.

ಬೆಂಗಳೂರಿಗರ ನೆಚ್ಚಿನ ರೆಸ್ಟೋರೆಂಟ್ ಅಂತೆ ಇದು 
“ಸಾಮ್ರಾಟ್?! ನಿಜವಾಗಿಯೂ?! ಆದರೆ ಯಾಕೆ?! ಇದು ನನ್ನ ಮೆಚ್ಚಿನ ರೆಸ್ಟೊರೆಂಟ್‌ಗಳಲ್ಲಿ ಒಂದಾಗಿದೆ! ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಬರೆದುಕೊಂಡಿದ್ದಾರೆ.

ಇನ್ನೊಬ್ಬ ನೆಟ್ಟಿಗ “ ಅದು ಪ್ರತಿಯೊಬ್ಬ ರಾಜಕಾರಣಿ, ಅಧಿಕಾರಿ, ವಕೀಲ, ಉದ್ಯಮಿ ಮತ್ತು ಅಷ್ಟೆ ಅಲ್ಲದೇ ಭೂಗತ ಲೋಕದ ತಾಣವಾಗಿತ್ತು! ಊರಿನ ಪ್ರತಿಯೊಬ್ಬ ವ್ಯಕ್ತಿಯು ಅಲ್ಲಿಯೇ ಬಂದು ಹೆಚ್ಚು ಕಾಲ ಸಮಯ ಕಳೆಯುತ್ತಿದ್ದರು. ನಾನು ಕೂಡಲೇ ನಾಳೆ ಅಲ್ಲಿಗೆ ಹೋಗಬೇಕು. ಅಲ್ಲಿನ ನನ್ನ ನೆಚ್ಚಿನ ಆಹಾರಗಳನ್ನು ಮನಸೋ ಇಚ್ಛೆ ಸೇವಿಸಬೇಕು” ಎಂದು ಜೀನಿಯಸ್ ಪ್ಯಾರಡಾಕ್ಸ್ ಎಂಬ ಟ್ವಿಟರ್ ಬಳಕೆದಾರರು ಕಾಮೆಂಟ್ ಬರೆದಿದ್ದಾರೆ.

ವಸಂತ ನಗರದಲಿದ್ಯಂತೆ ಇಂಥದ್ದೇ ಮತ್ತೊಂದು ರೆಸ್ಟೋರೆಂಟ್ 
“ಒಂದು ಚಾಲುಕ್ಯ ಮಿನಿ ಹೋಟೆಲ್ ಈಗಾಗಲೇ ವಸಂತ ನಗರಕ್ಕೆ ಬಂದಿದೆ ಮತ್ತು ಪೂರ್ಣ ಸಮಯದ ಹೋಟೆಲ್ ಆಗಲಿದೆ” ಎಂದು ಟ್ವಿಟರ್ ಬಳಕೆದಾರರು ಹೇಳಿದ್ದಾರೆ. ಆದಾಗ್ಯೂ, ಹಳೆಯ ದಿನಗಳಿಂದಲೂ ಬ್ರ್ಯಾಂಡ್‌ನ ರುಚಿ ಮತ್ತು ಗುಣಮಟ್ಟ ಕಡಿಮೆಯಾಗಿದೆ ಎಂದು ಕೆಲವರು ಹೇಳಿದರು. ಏಜೆಂಟ್ ಪೀಣ್ಯ ಎಂಬ ಟ್ವಿಟ್ಟರ್ ಬಳಕೆದಾರರು "ನೀವು ತಡವಾಗಿ ಭೇಟಿ ನೀಡಿದ್ದೀರಾ? ಅವರ ತಾಳೆ ಎಣ್ಣೆಯಲ್ಲಿ ಮಾಡುತ್ತಿದ್ದ ಆಹಾರಗಳು, ಉತ್ತರ ಮತ್ತು ದಕ್ಷಿಣ ಭಾರತ ಶೈಲಿಯ ಆಹಾರದ ಊಟದ ಗುಣಮಟ್ಟದಲ್ಲಿ ದೊಡ್ಡ ಪ್ರಮಾಣದ ಕುಸಿತ ಕಂಡಿದೆ. ಕಳೆದ ತಿಂಗಳು ಮತ್ತೊಮ್ಮೆ ಭೇಟಿ ನೀಡಿ ಕಳಪೆ ಆಹಾರ ಈಗ ಸರಿಯಾಗಿರಬಹುದೇ ಎಂದು ನೋಡಲು ಹೋದರೆ ಇಲ್ಲ, ಆ ತಪ್ಪು ಮತ್ತೆ ಮತ್ತೆ ನಡೆಯುತ್ತಿದೆ” ಎಂದು ಪೋಸ್ಟ್‌ ಮಾಡಿದ್ದಾರೆ.

ಆಹಾರದ ಗುಣಮಟ್ಟದ ಬಗ್ಗೆ ಏನಂದ್ರು
" ಕೆಲವು ವರ್ಷಗಳ ಹಿಂದೆ ಆ ಹೋಟೆಲ್‌ ಮಾಲೀಕನ ತಂದೆಯ ಮರಣದ ನಂತರ ಗುಣಮಟ್ಟವು ಕ್ಷೀಣಿಸುತ್ತಿದೆ” ಎಂದು ಕೆಲವರು ಒಪ್ಪಿಕೊಂಡರು. "ನಾನು ಕಳೆದ ತಿಂಗಳು ಅಂದರೆ ಸುಮಾರು 3 ವರ್ಷಗಳ ನಂತರ ಅಲ್ಲಿಗೆ ಹೋಗಿದ್ದೆ ಮತ್ತು ಆದರೆ ನನ್ನ ಖುಷಿ ಅಲ್ಲಿಗೆ ಹೋದ ಮೇಲೆ ಸಿಗಲಿಲ್ಲ. ಏಕೆಂದರೆ ಆಹಾರದ ಗುಣಮಟ್ಟ ಇದಕ್ಕೆ ಕಾರಣ ಆಗಿದೆ. ನಾನು ಇದರಿಂದ ನಿರಾಶೆಗೊಂಡೆ” ಎಂದು ಟ್ವೀಟರ್‌ ಬಳಕೆದಾರರೊಬ್ಬರು ಪೋಸ್ಟ್‌ ಬರೆದಿದ್ದಾರೆ.

ಇದನ್ನೂ ಓದಿ:  Dead Rat: ಬೀಟ್ರೂಟ್ ಪಲ್ಯದಲ್ಲಿ ಸಿಕ್ತು ಸತ್ತ ಇಲಿ! ಹೋಟೆಲ್‌ ಊಟ ಮಾಡೋ ಮುನ್ನ ಹುಷಾರಪ್ಪ

ಮಾಧ್ಯಮವೊಂದರ ವರದಿಯ ಪ್ರಕಾರ, “ರೆಸ್ಟೋರೆಂಟ್ ಸೆಪ್ಟೆಂಬರ್ 25 ರವರೆಗೆ ಭಕ್ಷ್ಯಗಳನ್ನು ಪೂರೈಸುತ್ತದೆ. ಇದು ಪ್ರತಿದಿನ ಸುಮಾರು 3,000 ಗ್ರಾಹಕರನ್ನು ಆಕರ್ಷಿಸುತ್ತದೆ. ಮುಚ್ಚುವಿಕೆಯಿಂದಾಗಿ ಸುಮಾರು 80 ರಿಂದ 90 ಜನರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುತ್ತಿದ್ದಾರೆ” ಎಂದು ವರದಿಯಲ್ಲಿ ಸೇರಿಸಲಾಗಿದೆ.
Published by:Ashwini Prabhu
First published: