• Home
 • »
 • News
 • »
 • bengaluru-urban
 • »
 • Bengaluru Water: ಬೆಂಗಳೂರಿನಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ; ಇಲ್ಲಿದೆ ಏರಿಯಾವಾರು ಲಿಸ್ಟ್

Bengaluru Water: ಬೆಂಗಳೂರಿನಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ; ಇಲ್ಲಿದೆ ಏರಿಯಾವಾರು ಲಿಸ್ಟ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Bengaluru News: ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಅಕ್ಟೋಬರ್ 14 ಮತ್ತು 15 ರಂದು ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

 • News18 Kannada
 • Last Updated :
 • Bangalore, India
 • Share this:

  ಬೆಂಗಳೂರು: ಬೆಂಗಳೂರಿನ ಸಾರ್ವಜನಿಕರು (Bengaluru News) ಗಮನಿಸಲೇಬೇಕಾದ ಮಹತ್ವದ ಸುದ್ದಿಯೊಂದು ಇಲ್ಲಿದೆ. ಬೆಂಗಳೂರಿನ ಟಿ.ಕೆ.ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿ ಕಾವೇರಿ 1 ಮತ್ತು 2ನೇ ಹಂತದ ಪಂಪ್‌ಹೌಸ್‌ ದುರಸ್ತಿ ಕಾಮಗಾರಿಯನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕೈಗೆತ್ತಿಕೊಳ್ಳಲಿದೆ, ಹೀಗಾಗಿ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಅಕ್ಟೋಬರ್ 14 ಮತ್ತು 15 ರಂದು ನೀರು ಪೂರೈಕೆಯಲ್ಲಿ ವ್ಯತ್ಯಯ (Bengaluru Water Problem) ಉಂಟಾಗಲಿದೆ.


  ಪ್ರಸ್ತುತ BWSSB ಕಾವೇರಿ ನೀರು ಸರಬರಾಜು ಯೋಜನೆ (CWSS) ಹಂತ 1 ಮತ್ತು ಎರಡು ಅಡಿಯಲ್ಲಿ ಬೆಂಗಳೂರು ನಗರಕ್ಕೆ ಸಂಸ್ಕರಿಸಿದ ಕಾವೇರಿ ನೀರನ್ನು ಪೂರೈಸುತ್ತಿದೆ.


  ಇಲ್ಲಿದೆ ನೋಡಿ ನೀರು ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು
  ರಿಚ್‌ಮಂಡ್ ಟೌನ್, ಎಂಜಿ.ರೋಡ್, ಬ್ರಿಗೇಡ್ ರಸ್ತೆ, ಜೆ.ಕೆ ಪುರಂ, ಎಂ.ವಿ. ಗಾರ್ಡನ್, ವಿಕ್ಟೋರಿಯಾ ಲೇಔಟ್, ಮಾಯಾ ಬಜಾರ್, ದೊಮ್ಮಲೂರ, ಕಮಾಂಡ್ ಆಸ್ಪತ್ರೆ, ದೊಮ್ಮಲೂರು 2ನೇ ಹಂತ, ಎಚ್‌ಎಎಲ್ 2ನೇ ಹಂತ, ಅಮರಜ್ಯೋತಿ ಲೇಔಟ್, ಕಾರ್ಪೋರೇಷನ್ ಕ್ವಾರ್ಟರ್ಸ್, ಕೊಡಿಹಳ್ಳಿ, ಎಂ.ಜಿ.ರಸ್ತೆ, ಹನುಮಂತಪ್ಪ ಲೇಔಟ್, ಗಂಗಾಧರ್ ಚೆಟ್ಟಿ ರಸ್ತೆ, ಬಜಾರ್ ಸ್ಟ್ರೀಟ್, ಹಲಸೂರು, ಮರ್ಫಿ ಟೌನ್, ಜೋಗು ಪಾಳ್ಯ, ಬೈರಪ್ಪ ಬ್ಲಾಕ್, ಮೌಂಟ್ ಜಾಯ್ ಎಕ್ಸ್‌ಟೆನ್‌ಷನ್, ಅಶೋಕ ನಗರ, ಬನಶಂಕರಿ 1ನೇ ಹಂತ, ಶ್ರೀನಗರ, ಬೃಂದಾವನನಗರ, ಸುಂಕೇನಹಳ್ಳಿ, ಕುಮಾರಸ್ವಾಮಿ ಲೇಔಟ್ 1ನೇ ಹಂತ ಮತ್ತು 2 ನೇ ಹಂತ, ಇಸ್ರೋ ಲೇಔಟ್, ಸಮೃದ್ದಿ ಲೇಔಟ್, ಲಿಯಾಸ್ ನಗರ, ರಾಜ್ಯೋತ್ಸವ ನಗರ, ವಿಠ್ಠಲ ನಗರ. ಶಾಂತಲಾ ನಗರ, ಶಾಂತಿನಗರ, ವಿನಾಯಕನಗರ, ಆನೆಪಾಳ್ಯ, ಎಲ್.ಆರ್.ನಗರ, ಅಂಬೇಡ್ಕರ್ ನಗರ, ನೀಲಸಂದ್ರ, ಆಸ್ಟಿನ್ ಟೌನ್, ಈಜೀಪುರ, ವಿವೇಕ್ ನಗರಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ.


  ಈ ಪ್ರದೇಶಗಳಲ್ಲೂ ನೀರು ಪೂರೈಕೆ ವ್ಯತ್ಯಯ
  ವಾಲ್ಮಿಕೀನಗರ, ಅನಂತರಾಮಯ್ಯ ಕಾಂಪೌಂಡ್, ಮುದಲೀಯರ್ ಕಾಂಪೌಂಡ್, ವಿಠ್ಠಲ್ ನಗರ, ಅಜಾದ್ ನಗರ, ಆದರ್ಶನಗರ, ರಾಮಚಂದ್ರ ಅಗ್ರಹಾರ, ಟಿಪ್ಪುನಗರ, ಸೀತಾಪತಿ ಅಗ್ರಹಾರ, ಎನ್.ಟಿ.ಪೇಟ್, ಅಪ್ಪಜಪ್ಪ ಅಗ್ರಹಾರ, ಚಿಕ್ಕಣ್ಣ ಗಾರ್ಡನ್, ವಿನಾಯಕ ಲೇಔಟ್, ಎನ್.ಜಿ.ಕೆ ಲೇಔಟ್, ಗುರುರಾಜ ಲೇಔಟ್, ವಿವೇಕಾನಂದ ಲೇಔಟ್, ಕತ್ರಿಗುಪ್ಪೆ, ತ್ಯಾಗರಾಜನಗರ, ಬಸವನಗುಡಿ, ಶಾಸ್ತ್ರಿನಗರ, ಎನ್​.ಆರ್.ಕಾಲೋನಿ, ನೇತಾಜಿ ನಗರ, ನಾಗಮ್ಮ ನಗರ, ಕೇಶವ ನಗರ, ಕೆಪಿ ಅಗ್ರಹಾರ, ನ್ಯೂ ಬಿನ್ನಿ ಲೇಔಟ್, ರಾಘವೇಂದ್ರ ಕಾಲೊನಿ, ಟಿಪ್ಪುನಗರ, ಆನಂದಪುರ, ಚಾಮರಾಜಪೇಟೆ, ರಾಮಚಂದ್ರ ಅಗ್ರಹಾರ, ಆದರ್ಶ ನಗರ, ಕಣ್ಣಿಯಾರ್ ಕಾಲೋನಿ, ನಂಜಾಂಬ ಅಗ್ರಹಾರ, ವಾಲ್ಮೀಕಿ ನಗರ, ವಿ.ಎಸ್.ಗಾರ್ಡನ್, ಹರಿಕುಂಟೆ, ಪಾದರಾಯನಪುರ ಫ್ಲವರ್ ಗಾರ್ಡನ್, ಬಂಗಿ ಕಾಲೊನಿ, ಅಂಜನಾಪುರ ಗಾರ್ಡನ್, ಬಿನ್ನಿ ಲೇಔಟ್, ವಿದ್ಯಾಪೀಠ, ಐಟಿಐ ಕಾಲೋನಿ, ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.


  ಇಲ್ಲೂ ನೀರು ಬರಲ್ಲ
  ಎನ್.ಆರ್.ಡಿ.ಐ. ಕ್ಯಾಂಪಸ್, ಆಡುಗೋಡಿ, ಕಾವೇರಿ ಸಂಕಿರ್ಣ, ಪೋಲಿಸ್ ಕ್ವಾಟರ್ಸ್, ನೇತ್ರಾವತಿ 1 ರಿಂದ 10 ಬ್ಲಾಕ್‌ಗಳು, ನಂದಿ ಸಂಕೀರ್ಣ1 ರಿಂದ 32 ಬ್ಲಾಕ್‌ಗಳು ಮತ್ತು ಟಿಪ್ಪು ಬ್ಲಾಕ್‌, ಕೋರಮಂಗಲ 6ನೇ 7ನೇ ಬ್ಲಾಕ್, ಕೆ.ಆರ್.ಗಾರ್ಡನ್, ಕೆ.ಹೆಚ್.ಬಿ ಕಾಲೋನಿ. ಜಾನ್ ನಗರ, ಕೋರಮಂಗಲ, ಕೋರಮಂಗಲ 8ನೇ ಬ್ಲಾಕ್, ತಿಲಕ್ ಎಸ್.ಆರ್ ನಗರ, ಚಂದ್ರಪ್ಪ ನಗರ, ಈರಮ್ಮ ಲೇಔಟ್ ಮತ್ತು ಆಡುಗೋಡಿ, ವೆಂಕಟೇಶ್ವರ ಲೇಔಟ್, ಎಸ್.ಜಿ.ಪಾಳ್ಯ, ಭುವನಪ್ಪ ಲೇಔಟ್, ಕಾವೇರಿ ಲೇಔಟ್, ಜೋಗಿ ಕಾಲೋನಿ, ಕೇಂಬ್ರಿಡ್ಜ್ ಲೇಜೌಟ್, ಗೌತಮಪುರ, ಧೀನಬಂಧುನಗರ, ರಾಜೇಂದ್ರ ನಗರ, ರಾಜೇಂದ್ರ ನಗರ ಸ್ಲಮ್, ವೆಂಕಟಸ್ವಾಮಿ ರೆಡ್ಡಿ ಲೇಔಟ್, ಮಲ್ಲಪ್ಪ ರೆಡ್ಡಿ ಲೇಔಟ್, ನಂಜಪ್ಪ ರೆಡ್ಡಿ ಲೇಔಟ್, ಕೆ.ಆರ್. ನಂಜಪ್ಪ ಲೇಔಟ್, ಸೆಂಟ್ ವುಡ್ ಅಪಾರ್ಟ್ ಮೆಂಟ್, ಚಿಕ್ಕ ಆಡುಗೋಡಿ, ಬೃಂದಾವನ ನಗರ,ಸೆಂಟ್ ಜಾನ್ಸ್ ಕ್ವಾಟರ್ಸ್, ಮಾರುತಿ ನಗರ, ವಿ.ಪಿ ರೋಡ್, ಎ.ಕೆ ಕಾಲೋನಿ, ಭೋವಿ ಕಾಲೋನಿ, ಎನ್‌ಟಿವೈ ಲೇಔಟ್, ಟೆಲಿಕಾಮ್ ಲೇಔಟ್, ಬ್ಯಾಟರಾಯನಪುರ, ಕಸ್ತೂರ ಬಾ ನಗರ, ನ್ಯೂ ಗುಡ್ಡದಹಳ್ಳಿ, ಮಾರುತಿನಗರ, ಶಾಮಣ್ಣ ನಗರ, ಬಾಪೂಜಿ ನಗರ. ಜಾಲಿ ಮೊಹಲ್, ಪಿ.ವಿ.ಆರ್ ರೋಡ್, ಓ.ಟಿ.ಪೇಟೆ. ವಿ.ವಿ.ಪುರಂ, ಪಾರ್ವತಿಪುರ, ಕಲಾಸಿಪಾಳ್ಯ, ಅನ್ನಿಪುರ, ಕುಂಬಾರಗುಂಡಿ, ಬಾದಮಕಾನ್, ಸುಧಾಮನಗರ, ದೊಡ್ಡಮಾವಳ್ಳಿ, ಕೆ.ಜಿ.ನಗರ, ಶಂಕರ್ ಪುರಂ, ರುದ್ರಪ್ಪ ಗಾರ್ಡನ್‌ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.


  ಇಲ್ಲೂ ಬರಲ್ಲವಂತೆ ನೀರು
  ವಿಲ್ಸನ್ ಗಾರ್ಡನ್, ಲಕ್ಕಸಂದ್ರ, ಜೆಪಿ ನಗರ 1, 2 ಮತ್ತು 3ಫೇಸ್, ಜೀವನ್ ಭೀಮಾ ನಗರ, ಕಲ್ಲಹಳ್ಳಿ, ಅರೇಕೆಂಪನಹಳ್ಳಿ, ಎಸ್.ಆರ್.ನಗರ, ಹೊಸೂರು ರಸ್ತೆ, ದೇವರಾಜ್ ಅರಸ್ ನಗರ, ಸಿದ್ದಾರ್ಥ ನಗರ, ದೇವಗಿರಿ-1, ಮತ್ತು 2, ಜಯನಗರ ಟಿ ಬ್ಲಾಕ್‌ನ ಒಂದು ಭಾಗ, 9ನೇ ಬ್ಲಾಕ್ ನ ಒಂದು ಭಾಗ, ಜಯನಗರ ಜಯನಗರ, 1 ಮತ್ತು 25ನೇ ಬ್ಲಾಕ್ 7 ಮತ್ತು 8ನೇ ಬ್ಲಾಕ್ , ಜಯನಗರ ಪೂರ್ವ, ಜಯನಗರ, ಸಮೀರ್‌ಪುರ, ರಂಗರಾವ್ ರೋಡ್, ಡಿಸ್‌ಪೇನ್‌ಸರಿ ರೋಡ್, ಕೋಟೆ ಎರಿಯಾ, ಪಾದರಾಯನಪುರ, ಜೆ.ಜೆ.ಆರ್.ನಗರ, ರಂಗನಾಥ್ ಕಾಲೋನಿ, ಓಬಲೇಶ್ ಕಾಲೋನಿ, ರಾಯಪುರಂ, ಓಲ್ಡ್ ಗುಡ್ಡದಹಳ್ಳಿ, ವಿನಾಯಕ ನಗರ, ಅರ್‌ಫ್ತ ನಗರ, ಮಂಜುನಾಥ್ ನಗರ, ಜನತ ಕಾಲೋನಿಯಲ್ಲಿ ಅಕ್ಟೋಬರ್ 14 ಮತ್ತು 15 ರಂದು ನೀರರು ಪೂರೈಕೆಯಲ್ಲಿ ವ್ಯತ್ಯವಾಗಲಿದೆ.


  ಇದನ್ನೂ ಓದಿ: Uttara Kannada: ಕಾಂತಾರದಲ್ಲೂ ಇರದ ದೈವ, ಉತ್ತರ ಕನ್ನಡದಲ್ಲಿ ಕ್ಷೇತ್ರಪಾಲ ಜಟಿಗನ ಆರಾಧನೆ


  ಜೊತೆಗೆ ಗೌಡನಪಾಳ್ಯ, ಮಂಜುನಾಥನಗರ, ಸಾರ್ವಬೌಮ ನಗರ, ಉದಯ್‌ನಗರ, ಉತ್ತರಹಳ್ಳಿ, ರಾಮಂಜನೇಯ ನಗರ, ಪಿ.ಪಿ. ಲೇಔಟ್, ಎಜಿ.ಎಸ್.ಲೇಔಟ್, ಅರೇಹಳ್ಳಿ, ಜೆ.ಕೆ.ಪುರ, ಶಾಂತಿನಗರ, ಅಕ್ಕಿತಿಮ್ಮೇನಹಳ್ಳಿ, ಭೈರಸಂದ್ರ, ಎಲ್.ಐ.ಸಿ ಕಾಲೋನಿ, ಆರ್‌ಬಿಐ ಕಾಲೋನಿ, ಕಾರ್ಪೋರೇಷನ್ ಕಾಲೋನಿ, ಹೂವಿನ ಗಾರ್ಡನ್, ಸೋಮೇಶ್ವರ ನಗರ, ಹೊಂಬೇಗೌಡ ನಗರ, ಸಿದ್ಧಾಪುರ, ಯಡಿಯೂರು, ಕರಿಸಂದ್ರ, ಬಿ.ಎಸ್.ಕೆ. 2ನೇ ಹಂತ, ಯಾರಬ್‌ನಗರ. ಟೀಚರ್ಸ್ ಕಾಲೋನಿ, ಬನಗಿರಿ ನಗರ, ಸಿಟಿಬೆಡ್, ಕಾವೇರಿ ನಗರ, ಭವಾನಿ ನಗರ, ಕಾಮಾಕ್ಯ ಲೇಔಟ್, ಭುವನೆಶ್ವರಿ ನಗರ, ಕೃಷ್ಣಪ್ಪ ಲೇಔಟ್,ಇಟ್ಟಮಡು, ಹೊಸಕೆರೆಹಳ್ಳಿ, ಮುಕಾಂಬಿಕ ನಗರ, ದತ್ತಾತ್ರೆಯ ನಗರ, ಕೆರೆಕೊಡಿ, ಪುಷ್ಪಗಿರಿ ನಗರ, ಡಿಸೋಜಾ ನಗರ, ದ್ವಾರಕ ನಗರ, ಎನ್.ಸಿ.ಇ.ಆರ್.ಟಿ. ರೋಡ್, ಹೃಷಿಕೇಶ ನಗರ, ಗಾಂಧಿ ಬಜಾರ್, ಬಸವನಗುಡಿಯಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.


  ಇದನ್ನೂ ಓದಿ: Dandelappa: ಪರಮಾರ ದಾಂಡೇಲಪ್ಪ ಆದ ಕಥೆ! ಇದು ಕರ್ನಾಟಕ-ಗೋವಾ ಬೆಸೆಯೋ ದೇವರು!


  ಎಂ.ಡಿ ಬ್ಲಾಕ್, ಅಶೋಕ್ ನಗರ, ಬನಶಂಕರಿ, ಪ್ರಗತಿಪುರ, ಸರಬಂಡೆಪಾಳ್ಯ, ಕದಿರೇನಹಳ್ಳಿ, ಜೆ.ಹೆಚ್.ಬಿ.ಸಿ.ಎಸ್ ಲೇಔಟ್, ಪದ್ಮನಾಭ ನಗರ, ಆರ್.ಕೆ ಲೇಔಟ್, ಗುರುರಾಜ್ ಲೇಔಟ್, ಚಿಕ್ಕಲ್ಲಸಂದ್ರ, ಲಸ್ಕರ್ ಹೊಸೂರು ರಸ್ತೆ, ಆಡುಗೋಡಿ, ಶಾಕಾಂಬರಿ ನಗರ, ನರೇನಹಳ್ಳಿ, ನಾರಾಯಣಪುರ, ಬಕ್ಷಿಗಾರ್ಡನ್, ಲಕ್ಷ್ಮೀಪುರ, ಕದಿರಾಯನ ಪಾಳ್ಯ, ಚಿಕ್ಕಪೇಟೆ, ಜೆಪಿ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ

  Published by:ಗುರುಗಣೇಶ ಡಬ್ಗುಳಿ
  First published: