Bengaluru Holige: ಹಬ್ಬ ಮಿಸ್ಸಾದ್ರೂ ಹೋಳಿಗೆ ಮಿಸ್ ಮಾಡ್ಬೇಡಿ! ಈ ಹೋಳಿಗೆ ರುಚಿ ಬೇರೆಲ್ಲೂ ಸಿಗಲ್ಲ!

ಕಾಯಿ ಹೋಳಿಗೆ ಮತ್ತು ಬೇಳೆ ಹೋಳಿಗೆ ಅದನ್ನು ಬಿಟ್ಟರೆ ಹಲಸಿನ ಹಣ್ಣಿನ ಹೋಲಿಗೆ, ಅನಾನಸ್ ಹೋಲಿಗೆ, ಕ್ಯಾರೆಟ್ ಹೋಲಿಗೆ, ಚಾಕಲೇಟ್ ಹೋಳಿಗೆ ಹೀಗೆ ಬೇರೆ ಬೇರೆ ವಿಧದ ಹೋಳಿಗೆಗಳನ್ನು ಸವಿಯಿರಿ. ಇಲ್ಲಿದೆ ನೋಡಿ ಹೋಳಿಗೆಯ ನಾನಾ ವಿಧಗಳು!

ಆಹಾ..ಹೋಳಿಗೆಯೇ!

ಆಹಾ..ಹೋಳಿಗೆಯೇ!

  • Share this:
    ಶ್ರಾವಣ ಮಾಸ ಬಂತೆಂದರೆ ಎಲ್ಲೆಲ್ಲೂ ಹಬ್ಬದ ಸಂಭ್ರಮ ಸಡಗರ. ಒಂದೆಡೆ ದೇವಿಯ ಅಲಂಕಾರ! ಇನ್ನೊಂದೆಡೆ ಹಬ್ಬವನ್ನು ಸಂಭ್ರಮಿಸುವ ಜನರ ಸಂತೋಷವನ್ನು ನೋಡುವುದೆ ಚೆಂದ. ಅದ್ರಲ್ಲೂ ವರಮಹಾಲಕ್ಷ್ಮೀ ಪೂಜೆಯ (Varamahalakshmi Vratha 2022) ದಿನದ ಸಮಯದಲ್ಲಂತು ಹೋಳಿಗೆಗೆ ಎಲ್ಲಿಲ್ಲದ ಬೇಡಿಕೆ. ಬೆಂಗಳೂರಿನಲ್ಲಂತು (Holige Centre In Bengaluru)  ಹಬ್ಬದ ಸಂಭ್ರಮ ಸಡಗರ ಇನ್ನಷ್ಟು ಹೆಚ್ಚು! ಈ ಹಬ್ಬದ ಸಂಭ್ರಮ ಹೆಚ್ಚು ಮಾಡೋದು ರುಚಿರುಚಿ ಹೋಳಿಗೆ. ಮುಖ್ಯವಾಗಿ ಕಾಯಿ ಹೋಳಿಗೆ ಮತ್ತು ಬೇಳೆ ಹೋಳಿಗೆ ಅದನ್ನು ಬಿಟ್ಟರೆ ಹಲಸಿನ ಹಣ್ಣಿನ ಹೋಲಿಗೆ, ಅನಾನಸ್ ಹೋಲಿಗೆ, ಕ್ಯಾರೆಟ್ ಹೋಲಿಗೆ, ಚಾಕಲೇಟ್ ಹೋಳಿಗೆ ಹೀಗೆ ಬೇರೆ ಬೇರೆ ವಿಧದ ಹೋಳಿಗೆಗಳನ್ನು ಸವಿಯಿರಿ. ಇಲ್ಲಿದೆ ನೋಡಿ ಹೋಳಿಗೆಯ ನಾನಾ ವಿಧಗಳು!

    ಬೇಳೆ ಹೋಳಿಗೆ
    ಹೋಳಿಗೆಯಲ್ಲಿ ಸಾಮಾನ್ಯವಾಗಿ ಮೊದಲು ನೆನಪಿಗೆ ಬರುವ ಹೋಳಿಗೆಯೆ ಬೇಳೆ ಹೋಳಿಗೆ. ಬೇಳೆ ಹೋಳಿಗೆಯನ್ನು ಮಾಡಲು ಪ್ರಮುಖವಾದ ಪದಾರ್ಥ ಕಡಲೆ ಬೇಳೆ. ಕಡಲೆ ಬೇಳೆ ಹಾಗೂ ಬೆಲ್ಲದ ಹೂರಣ ಜೊತೆಗೆ ಹೋಳಿಗೆ ಮೃದುವಾಗಲು ಮೈದಾ ಅಥವಾ ಗೋಧಿ ಹಿಟ್ಟನ್ನು ಹಾಕುತ್ತಾರೆ. ಈ ಹೋಳಿಗೆ ಹಬ್ಬದ ಊಟದ ಪ್ರಮುಖ ಆಕರ್ಷಣೆಯಾಗಿರುತ್ತದೆ.

    ಕಾಯಿ ಹೋಳಿಗೆ
    ಹೋಳಿಗೆಯಲ್ಲಿ ಸಾಮಾನ್ಯವಾಗಿ ಎಲ್ಲರೂ ತುಂಬಾನೇ ಇಷ್ಟ ಪಡುವ ಹೋಳಿಗೆ ಅದು ಕಾಯಿ ಹೋಳಿಗೆ. ಇದನ್ನು ತೆಂಗಿನ ತುರಿ ಮತ್ತು ಬೆಲ್ಲ ಸೇರಿಸಿ ಮಾಡುತ್ತಾರೆ. ಆದ್ದರಿಂದ ಆರೋಗ್ಯಕರವಾಗಿ ಮತ್ತು ಅಷ್ಟೇ ರುಚಿಯಾಗಿಯೂ ಇರುತ್ತದೆ. ತುಪ್ಪದ ಜೊತೆ ತಿನ್ನಲು ತುಂಬಾನೇ ರುಚಿಯಾಗಿರುತ್ತದೆ. ಸಿಹಿ ಇಷ್ಟಪಡದವರೂ ಸಹ ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ಆದರೆ ತೆಂಗಿನಕಾಯಿ ಬಳಕೆಯಿಂದಾಗಿ ಹೆಚ್ಚು ದಿನ ಕೆಡದಂತೆ ಕಾಪಾಡುವುದು ಸ್ವಲ್ಪ ಕಷ್ಟ.

    ಹಣ್ಣುಗಳು ಮತ್ತು ತರಕಾರಿ ಮಿಶ್ರಿತ ಹೋಳಿಗೆ
    ಬೇಳೆ ಹೋಳಿಗೆ ಮತ್ತು ಕಾಯಿ ಹೋಳಿಗೆ ಮಾತ್ರವಲ್ಲದೆ ಹಣ್ಣುಗಳು ಮತ್ತು ತರಕಾರಿ ಮಿಶ್ರಿತ ಹೋಳಿಗೆಗಳು ಹಬ್ಬಕ್ಕೆ ಇನ್ನಷ್ಟು ಮೆರುಗು ನೀಡುತ್ತದೆ. ಇದು ಆರೋಗ್ಯಕ್ಕೂ ಹಿತಕರವಾದುದಾಗಿದೆ.

    ಹಲಸಿನ ಹೋಳಿಗೆ
    ಶ್ರಾವಣ ಮಾಸದಲ್ಲಿ ಹಲಸಿನ ಹಣ್ಣಿನ ಹೋಳಿಗೆಯು ಪ್ರಮುಖವಾಗಿ ಸ್ವಾಧಿಸುವ ಹೋಳಿಗೆಯಾಗಿದೆ. ಏಕೆಂದರೆ ಶ್ರಾವಣ ಮಾಸ ಹಲಸಿನ ಹಣ್ಣಿನ ಸೀಸನ್ ಕೂಡ ಆಗಿರುತ್ತದೆ. ಇದು ಸಿಹಿಯಾಗಿದ್ದು ಜನ ತುಂಬಾನೇ ಇಷ್ಟ ಪಡುತ್ತಾರೆ.

    ಇದನ್ನೂ ಓದಿ: Varamahalakshmi Vratha Bengaluru: ಧಾಂ ಧೂಂ ಎಂದು ವರಮಹಾಲಕ್ಷ್ಮೀ ಹಬ್ಬದ ಆಚರಣೆಗೆ ಬೆಂಗಳೂರು ರೆಡಿ!

    ಕ್ಯಾರೆಟ್ ಹೋಳಿಗೆ
    ಕ್ಯಾರೆಟ್ ಹಲ್ವದಂತೆ ಕ್ಯಾರೆಟ್ ಹೋಳಿಗೆಯೂ ತುಂಬಾ ಫೇಮಸ್. ಬೆಂಗಳೂರನಲ್ಲಿ ಕ್ಯಾರೆಟ್ ಹೋಳಿಗೆಯನ್ನಂತೂ ತುಂಬಾ ಜನರು ಇಷ್ಟ ಪಡುತ್ತಾರೆ. ಇದು ತಿನ್ನಲು ರುಚಿಯಾಗಿದ್ದು ಗರಿಗರಿಯಾಗಿರುತ್ತದೆ.

    ಇದನ್ನೂ ಓದಿ: Shivamogga: ಶಿವಮೊಗ್ಗದ ಜೇನು ಗುರು! ಜೇನ್ನೊಣಗಳೇ ಇವರ ಫ್ರೆಂಡ್ಸ್!

    ಪೈನಾಪಲ್ ಹೋಳಿಗೆ
    ಅನಾನಸನ್ನು ಇಷ್ಟ ಪಡದವರು ಯಾರೂ ಇಲ್ಲ ಇದರ ರುಚಿಗೆ ಹೆಚ್ಚಾಗಿ ಎಲ್ಲರೂ ಮನಸೋಲುತ್ತಾರೆ. ಅದರಲ್ಲೂ ಹೋಳಿಗೆ ಮಾಡಬಹುದು ಆದರೆ ಇದು ಹೆಚ್ಚಾಗಿ ಯಾರಿಗೂ ತಿಳಿದಿಲ್ಲ. ಆದರೆ ಇದನ್ನು ಒಮ್ಮೆ ಸವಿದರು ಮತ್ತೆ ಮತ್ತೆ ಬಯಸುತ್ತಾರೆ. ಇಷ್ಟೆಲ್ಲಾ ಥರಥರದ ಹೋಳಿಗೆ ಸವಿದು ನಿವೂ ಚೆನ್ನಾಗಿ ಹಬ್ಬ ಮಾಡಿ..
    Published by:guruganesh bhat
    First published: