• Home
  • »
  • News
  • »
  • bengaluru-urban
  • »
  • Bengaluru Traffic: ಬೆಂಗಳೂರು ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಹೊಸ ಪ್ಲಾನ್

Bengaluru Traffic: ಬೆಂಗಳೂರು ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಹೊಸ ಪ್ಲಾನ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಪಘಾತ ಹೆಚ್ಚು ಸಂಭವಿಸುವ 524 ಕಡೆ ರೋಡ್ ಹಂಪ್ ಅಳವಡಿಕೆಗೆ ಬಿಬಿಎಂಪಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

  • News18 Kannada
  • Last Updated :
  • Bangalore [Bangalore], India
  • Share this:

    ಬೆಂಗಳೂರು: ನಗರದಲ್ಲಿ ಅಪಘಾತ ತಡೆಗೆ 500 ರೋಡ್ ಹಂಪ್ಸ್​ಗಳನ್ನು ಅಳವಡಿಸಲು ಟ್ರಾಫಿಕ್ ಪೊಲೀಸರು ಪ್ರಸ್ತಾವನೆ ಸಲ್ಲಿಸಿದ್ದಾರೆ. ವೈಟ್ಫೀಲ್ಡ್, ಕೆಂಗೇರಿ, ಜಯನಗರ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಹಂಪ್ಸ್ ನಿರ್ಮಿಸಲು ಬೇಡಿಕೆ ಇಟ್ಟಿರುವ ಬೆಂಗಳೂರು ಟ್ರಾಫಿಕ್ ಪೊಲೀಸರು ಬೆಂಗಳೂರಿನಲ್ಲಿ ರಸ್ತೆ ಅಪಘಾತ (Bengaluru Road Accidents) ತಡೆಯಲು ಹೊಸ ಹೆಜ್ಜೆ ಮುಂದಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಹೊಸದಾಗಿ ಇನ್ನೂ 500 ಕ್ಕೂ ಅಧಿಕ ರೋಡ್ ಹಂಪ್ಸ್ ನಿರ್ಮಿಸಲು ಪ್ರಸ್ತಾಪ ಸಲ್ಲಿಸಲಾಗಿದೆ. ಹೀಗೆ ಹಂಪ್​ಗಳನ್ನು ನಿರ್ಮಿಸುವ ಮೂಲಕ ಬೆಂಗಳೂರು ನಗರದಲ್ಲಿ (Bengaluru News) ಸುಗಮ ಸಂಚಾರಕ್ಕೆ ಅನುವು ಮಾಡುವ ಉದ್ದೇಶವನ್ನು ಹೊಂದಲಾಗಿದೆ. ಅಲ್ಲದೇ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಯಲು ಸಹ ಈ ಹಂಪ್​ಗಳು ನೆರವಾಗಲಿದೆ ಎಂಬುದು ಬೆಂಗಳೂರು ಟ್ರಾಫಿಕ್ ಪೊಲೀಸರ (Bengaluru Traffic Police) ಉದ್ದೇಶವಾಗಿದೆ.


    ಅಪಘಾತ ಹೆಚ್ಚು ಸಂಭವಿಸುವ 524 ಕಡೆ ರೋಡ್ ಹಂಪ್ ಅಳವಡಿಕೆಗೆ ಬಿಬಿಎಂಪಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಗರದ ಒಟ್ಟು 39 ಸಂಚಾರಿ ಪೊಲೀಸ್ ಠಾಣೆಗಳಿಂದ ಪ್ರತ್ಯೇಕವಾಗಿ ಪ್ರಸ್ತಾವನೆಗಳು ಸಲ್ಲಿಕೆ ಮಾಡಲಾಗಿದೆ.


    ರೋಡ್ ಹಂಪ್ಸ್​ಗಳ ವಿವರ ಹೀಗಿದೆ ನೋಡಿ
    ವೈಟ್ ಫೀಲ್ಡ್ ಸಂಚಾರಿ ಪೊಲೀಸರು 49 ಕಡೆ ಹಂಪ್ಸ್ ನಿರ್ಮಿಸಲು ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. ಎಲ್ಲೆಲ್ಲಿ ಹಂಪ್​ಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಇಲ್ಲಿದೆ ಆ ವಿವರ.



    ಜಯನಗರ47
    ಕೆಂಗೇರಿ44
    ಹುಳಿಮಾವು33
    ಆರ್.ಟಿ.ನಗರ32
    ಬಾಣಸವಾಡಿ21
    ಹೂಡಿ22
    ಮಹದೇವರ ಹಾಗೂ ಜೆಪಿನಗರ19
    ಹಲಸೂರು ಗೇಟ್, ಜಾಲಹಳ್ಳಿ17
    ರಾಜಾಜಿನಗರ16
    ಮಲ್ಲೇಶ್ವರ14

    ಇಷ್ಟೇ ಅಲ್ಲದೇ ಈ ಪ್ರದೇಶಗಳಲ್ಲೂ ಹಂಪ್​ಗಳನ್ನು ಅಳವಡಿಸಲು ಬೆಂಗಳೂರು ಟ್ರಾಫಿಕ್ ಪೊಲೀಸರು ಬಿಬಿಎಂಪಿಗೆ ಮನವಿ ಮಾಡಿದ್ದಾರೆ.
    ವಿವಿಪುರ12
    ದೇವನಹಳ್ಳಿ11
    ಯಶವಂತಪುರ10
    ಚಿಕ್ಕಪೇಟೆ9
    ಯಲಹಂಕ6
    ಹಲಸೂರು, ಮೈಕೋ ಲೇಔಟ್, ಪುಲಕೇಶಿನಗರ, ವಿಜಯನಗರ ಹಾಗೂ ಎಚ್‌.ಎಸ್. ಆರ್ ಲೇಔಟ್4
    ಪಶ್ಚಿಮ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿ3
    ಚಿಕ್ಕಜಾಲ, ಎಚ್ಎಎಲ್, ಹೆಬ್ಬಾಳೆ, ಉಪ್ಪಾರು ಪೇಟೆ ಹಾಗೂ ವಿಲ್ಸನ್ ಗಾರ್ಡನ್2
    ಶಿವಾಜಿ ನಗರ, ಪೀಣ್ಯ, ಹೈಗೌಂಡ್ಸ್, ಕೆಆರ್ಪುರ ಹಾಗೂ ಹೂಡಿ1

    ಇದನ್ನೂ ಓದಿ: Kamakshi Temple: ಕುದಿಯುವ ಎಣ್ಣೆಯಿಂದ ವಡೆ ತೆಗೆಯೋ ಉತ್ತರ ಕನ್ನಡದ ಭಕ್ತರು!

    ಇನ್ನು ನಗರದ ಅವೈಜ್ಞಾನಿಕ ಹಂಪ್ಸ್​ಗಳಿಂದ ಮೂರು ವರ್ಷಗಳಲ್ಲಿ ಅಪಘಾತಗಳ ವಿವರ ಹೀಗಿದೆ ನೋಡಿ. 



    ವರ್ಷಅಪಘಾತ ಸಂಖ್ಯೆಸಾವು
    2019832819
    2021652618
    2022656632

    ಇದನ್ನೂ ಓದಿ: Bengaluru News: ಆಟೋ ಪ್ರಯಾಣದ ದರ ಇಳಿಕೆ


    ಹೀಗೆ ಬೆಂಗಳೂರು ನಗರದಲ್ಲಿ ಒಟ್ಟು 500 ಹಂಪ್​ಗಳನ್ನು ನಿರ್ಮಿಸುವ ಮೂಲಕ ಸುಗಮ ಸಂಚಾರ ಮತ್ತು ಅಪಘಾತ ತಡೆಗಟ್ಟಲು ಟ್ರಾಫಿಕ್ ಪೊಲೀಸರು ಪ್ರಸ್ತಾವನೆ ಸಲ್ಲಿಸಿದ್ದಾರೆ.

    Published by:ಗುರುಗಣೇಶ ಡಬ್ಗುಳಿ
    First published: