Bengaluru Traffic: ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಸೋಷಿಯಲ್ ಮೀಡಿಯಾದಲ್ಲಿ ಪರಿಹಾರ! ನೀವೂ ಹೀಗೆ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಾಮಾಜಿಕ ಜಾಲತಾಣದಲ್ಲಿ ಜನರು ಸಂಚಾರದ ಬಗ್ಗೆ ಹಾಕೋ ದೂರುಗಳನ್ನು ಪರಿಶೀಲನೆ ಮಾಡುವಂತೆ ಸಂಚಾರಿ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಹಾಗಾದರೆ ಸಾಮಾಜಿಕ ಜಾಲತಾಣಗಳಲ್ಲಿ ಬೆಂಗಳೂಟು ಟ್ರಾಫಿಕ್ ಸಮಸ್ಯೆ ಬಗ್ಗೆ ಪೋಸ್ಟ್ ಮಾಡುವುದು ಹೇಗೆ?

 • Share this:

  ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದೀರಾ? ಟ್ರಾಫಿಕ್​ನಲ್ಲಿ ನಿಂತು ನಿಂತು ಸುಸ್ತು ಹೊಡೆಯುತ್ತಿದ್ದೀರಾ? ಈ ಸಮಸ್ಯೆಗೆ ಪರಿಹಾರ ಏನು ಎಂದು ಯೋಚಿಸುತ್ತಿದ್ದೀರಾ? ಬೆಂಗಳೂರಿನ (Bengaluru News) ಟ್ರಾಫಿಕ್ ಸಮಸ್ಯೆಯನ್ನು (Bengaluru Traffic Problem) ಪರಿಹರಿಸಲು ಇನ್ಮೇಲೆ ಟ್ರಾಫಿಕ್ ಪೊಲೀಸರು ನೀವು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ದೂರುಗಳ ಪರಿಶೀಲನೆ ಮಾಡಲಿದ್ದಾರೆ. ಅಂದರೆ ನೀವು ಎದುರಿಸುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡರೆ ಸಾಕು, ಸ್ವತಃ ಟ್ರಾಫಿಕ್ ಪೊಲೀಸರೇ (Bengaluru Traffic Police) ಈಕುರಿತು ತ್ವರಿತವಾಗಿ ಕ್ರಮ ಕೈಗೊಳ್ಳುತ್ತಾರೆ. ಹಾಗಾದರೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರಾಫಿಕ್ ಸಮಸ್ಯೆಯನ್ನು ಹೇಗೆ ಹಂಚಿಕೊಳ್ಳುವುದು? ಇಲ್ಲಿದೆ ವಿವರ.


  ಸಾಮಾಜಿಕ ಜಾಲತಾಣದಲ್ಲಿ ಜನರು ಸಂಚಾರದ ಬಗ್ಗೆ ಹಾಕೋ ದೂರುಗಳನ್ನು ಪರಿಶೀಲನೆ ಮಾಡುವಂತೆ ಸಂಚಾರಿ ಪೊಲೀಸರಿಗೆ ಸೂಚನೆ ನೀಡಲಾಗಿದೆ. ತಕ್ಷಣವೇ ಇನ್ಸ್ಪೆಕ್ಟರ್ ಆ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಬೇಕು ಎಂದು ಕಮೀಷನರ್ ಸೂಚನೆ ನೀಡಿದ್ದಾರೆ.


  ಬೆಂಗಳೂರು ಸಂಚಾರ ಪೊಲೀಸ್​ರನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಇಲ್ಲಿ ಟ್ಯಾಗ್ ಮಾಡಿ


  ಬೆಂಗಳೂರಿನ ರಸ್ತೆಗುಂಡಿಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ
  ಅಲ್ಲದೇ ಬೆಂಗಳೂರಿನ ರಸ್ತೆಯಲ್ಲಿ ಇರುವ ಗುಂಡಿಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡುವಂತೆಯೂ ಟ್ರಾಫಿಕ್ ಪೊಲೀಸರಿಗೆ ಸೂಚನೆ ನೀಡಲಾಗಿದೆ. ರಸ್ತೆಗುಂಡಿ ಇದ್ರೆ ಅದನ್ನು ನೋಟ್ ಮಾಡಿಕೊಳ್ಳಿ. ಬಿಬಿಎಂಪಿಗೆ ನೀವೇ ಮಾಹಿತಿ ನೀಡಿ. ಜೊತೆಗೆ ಟ್ಚಿಟರ್​ನಲ್ಲಿ ಬಿಬಿಎಂಪಿಗೆ ಟ್ಯಾಗ್ ಮಾಡುವಂತೆ ಸಂಚಾರಿ ಪೊಲೀಸರಿಗೆ ಕಮೀಷನರ್ ಸೂಚನೆ ನೀಡಿದ್ದಾರೆ. ಇದೇ ರೀತಿ ರಸ್ತೆಗುಂಡಿಗಳು, ಟ್ರಾಫಿಕ್ ಸಮಸ್ಯೆಗಳ ಬಗ್ಗೆಯೂ ಸಾಮಾಜಿಕ ಜಾಲತಾಣಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ.


  ಈ ಸಂದರ್ಭಗಳಲ್ಲಿ ತಡೆಯುವಂತಿಲ್ಲ, ದಂಡ ವಿಧಿಸುವಂತಿಲ್ಲ
  ಹಾಗಾದ್ರೆ ಸಂಚಾರಿ ಪೊಲೀಸರು ಇನ್ಮುಂದೆ ದಂಡ ಹಾಕುವಾಗ ಏನು ಮಾಡಬಾರದು. ಸಾರ್ವಜನಿಕರು, ವಾಹನ ಸವಾರರು ಸಹ ಈ ಸೂಚನೆಗಳನ್ನು ಅರಿತಿದ್ದರೆ ಒಳ್ಳೆಯದು.


  1) ಹೆಲ್ಮೇಟ್ ಹಾಕ್ಕೊಂಡು, ಸಂಚಾರ ನಿಯಮ ಪಾಲನೆ ಮಾಡುತ್ತಾ ಬರುವ ವಾಹನವನ್ನು ಅನಾವಶ್ಯಕವಾಗಿ ತಡೆಯಬಾರದು.


  2) ವಾಹನಗಳನ್ನು ಪರಿಶೀಲನೆ ಮಾಡೋ ಸಲುವಾಗಿ ವಾಹನ ತಡೆಯಬಾರದು


  3) ಹೆಲ್ಮೇಟ್ ಧರಿಸದೆ ಹೋಗೋದು, ಅತಿಯಾದ ವೇಗ, ಕಾರಿನಲ್ಲಿ ಜಾಸ್ತಿ ಮ್ಯೂಸಿಕ್ ಹಾಕ್ಕೊಂಡು ಹೋಗೋದು, ವಾಹನದ ರಚನೆಯಲ್ಲಿ ಬದಲಾವಣೆ, ಇಂತಹ ವಾಹನಗಳನ್ನು ಹಿಡಿಯಬಹುದು. ಆದರೆ ಇಂತಹ ಕೃತ್ಯ ಮಾಡಿರುವ ವಿಡಿಯೋ ದಾಖಲೆ ಇರಬೇಕು. ಬಾಡಿ ವಾರ್ನ್ ಕ್ಯಾಮರಾದಲ್ಲಿ ಇದೆಲ್ಲಾ ರೆಕಾರ್ಡ್ ಆಗಬೇಕು.


  ಇದನ್ನೂ ಓದಿ: Vijayapura: ಪ್ಲಾಸ್ಟಿಕ್, ಮದ್ಯದ ಬಾಟಲಿ ಹೆಕ್ಕಿದ ಸ್ವಾಮೀಜಿ! ವಿಡಿಯೋ ನೋಡಿ


  4) ರಾತ್ರಿ ವೇಳೆ ಕುಡಿದು ವಾಹನ ಚಾಲನೆ ಮಾಡೋರನ್ನು ತಪಾಸಣೆ ಮಾಡಬಹುದು. ಈ ವೇಳೆ ತಪಾಸಣೆಯ ಸಂಪೂರ್ಣ ವಿಡಿಯೋ ಮಾಡಬೇಕು


  5) ಜೊತೆಗೆ ದಾಖಲೆಗಳನ್ನ ಪರಿಶೀಲನೆ ಮಾಡೋ ನೆಪದಲ್ಲಿ ನಿಲ್ಲಿಸಬಾರದು.


  6) ಅಂತರಾಜ್ಯ ವಾಹನ ಆದ್ರೂ ಸಹ ಉಲ್ಲಂಘನೆ ಕಣ್ಣು ಮುಂದೆ ಮಾಡಿದ್ರೆ ಮಾತ್ರ ತಡೆಯಬೇಕು.


  ಇದನ್ನೂ ಓದಿ: Belagavi: ನಾಯಿ ಬರ್ತ್​ಡೇ ಆಚರಣೆ ವಿಡಿಯೋ ನೋಡಿ! 1 ಕ್ವಿಂಟಲ್ ಕೇಕ್, 5 ಸಾವಿರ ಜನರಿಗೆ ಭರ್ಜರಿ ಊಟ!


  7) ಕ್ಯಾಮರಾದಲ್ಲಿ ಸಂಚಾರಿ ಉಲ್ಲಂಘನೆ ಆಗಿರೋದು, ಹಳೇ ಕೇಸ್ ಇದ್ರೆ ಅಂತಹ ವಾಹನವನ್ನು ನಿಲ್ಲಿಸಬಹುದು, ದಾಖಲೆ ಪರಿಶೀಲನೆ ಮಾಡಬಹುದು.

  Published by:guruganesh bhat
  First published: