• Home
 • »
 • News
 • »
 • bengaluru-urban
 • »
 • Bengaluru Traffic: ಬೆಂಗಳೂರಿನ ನಾಗರಿಕರಿಗೆ ಮಹತ್ವದ ಸುದ್ದಿ; ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

Bengaluru Traffic: ಬೆಂಗಳೂರಿನ ನಾಗರಿಕರಿಗೆ ಮಹತ್ವದ ಸುದ್ದಿ; ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಳೆ ಮದ್ರಾಸ್ ರಸ್ತೆಯಿಂದ ಪೂರ್ವ ಬೆಂಗಳೂರಿನ ಇಂದಿರಾನಗರದತ್ತ ಸಂಚರಿಸುವ ಕುರಿತು ಬೆಂಗಳೂರು ಸಂಚಾರಿ ಪೊಲೀಸರು ಬುಧವಾರ ಪರ್ಯಾಯ ಸಂಚಾರಿ ಸಲಹೆ ನೀಡಿದ್ದಾರೆ.

 • News18 Kannada
 • Last Updated :
 • Bangalore [Bangalore], India
 • Share this:

  ಬೆಂಗಳೂರು: ರಾಜ್ಯ ರಾಜಧಾನಿಯ ನಾಗರಿಕರಿಗೆ ಮಹತ್ವದ ಸುದ್ದಿಯೊಂದು (Bengaluru News) ಇಲ್ಲಿದೆ. ಹಳೆ ಮದ್ರಾಸ್ ರಸ್ತೆಯ ಒಂದು ಭಾಗದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಆ ಭಾಗದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ಮಹತ್ವದ ಸೂಚನೆ ನೀಡಿದ್ದಾರೆ. ಹಳೆ ಮದ್ರಾಸ್ ರಸ್ತೆಯಿಂದ ಪೂರ್ವ ಬೆಂಗಳೂರಿನ ಇಂದಿರಾನಗರದತ್ತ ಸಂಚರಿಸುವ ಕುರಿತು ಬೆಂಗಳೂರು ಸಂಚಾರಿ ಪೊಲೀಸರು ಬುಧವಾರ ಪರ್ಯಾಯ ಸಂಚಾರಿ ಸಲಹೆ ನೀಡಿದ್ದಾರೆ.


  ಪೂರ್ವ ಬೆಂಗಳೂರು ಭಾಗಗಳಲ್ಲಿ ಸಂಚಾರ ದಟ್ಟಣೆ
  ಇಂದಿರಾನಗರ, ಹಲಸೂರು ಮತ್ತು ಜೀವನ್ ಭೀಮಾ ನಗರ ಸೇರಿದಂತೆ ಪೂರ್ವ ಬೆಂಗಳೂರು ಭಾಗಗಳಲ್ಲಿ ಸಂಚಾರ ದಟ್ಟಣೆಯಾಗುವ ಕುರಿತು ಬೆಂಗಳೂರು ಟ್ರಾಫಿಕ್ ಪೊಲೀಸರು ಪ್ರಯಾಣಿಕರಿಗೆ ಸೂಚನೆ ನೀಡಿದ್ದಾರೆ.


  ವೈಟ್ ಟಾಪಿಂಗ್ ಕಾಮಗಾರಿ
  ಹಳೆ ಮದ್ರಾಸ್ ರಸ್ತೆಯಲ್ಲಿ 100 ಅಡಿ ರಸ್ತೆ ಜಂಕ್ಷನ್ ಮತ್ತು ಲಕ್ಷ್ಮೀಪುರಂ ಜಂಕ್ಷನ್ ನಡುವೆ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ, ಹೀಗಾಗಿ ಈ ಮಾರ್ಗದಲ್ಲಿ ಸಂಚಾರ ವ್ಯತ್ಯಯ ಉಂಟಾಗಲಿದೆ.


  ಇದನ್ನೂ ಓದಿ: Vande Bharat Express Train: ಕರ್ನಾಟಕಕ್ಕೆ 2ನೇ ವಂದೇ ಭಾರತ್ ರೈಲು! ಉತ್ತರ ಕರ್ನಾಟಕದಲ್ಲಿ ಸಂಚಾರ


  ಟ್ರಾಫಿಕ್ ಪೊಲೀಸರ ಸೂಚನೆ ಹೀಗಿದೆ
  ಕೆಆರ್ ಪುರದಿಂದ ಬರುವ ಭಾರಿ ವಾಹನಗಳು 80 ಅಡಿ ರಸ್ತೆ ಮತ್ತು ಚಿನ್ಮಯ ಮಿಷನ್ ಆಸ್ಪತ್ರೆ ರಸ್ತೆಯನ್ನು ಬಳಸಿ ಹಳೆಯ ಮದ್ರಾಸ್ ರಸ್ತೆಯನ್ನು ಸಂಪರ್ಕಿಸಬಹುದಾಗಿದೆ. ಸಣ್ಣ ವಾಹನಗಳು 100 ಅಡಿ ರಸ್ತೆ ಮತ್ತು ಸಿಎಂಎಚ್ ರಸ್ತೆಯನ್ನು ಬಳಸಬೇಕೆಂದು ಬೆಂಗಳೂರು ಟ್ರಾಫಿಕ್ ಪೊಲೀಸರು ಸೂಚನೆ ನೀಡಿದ್ದಾರೆ.


  ಇದನ್ನೂ ಓದಿ: Bengaluru Parking: ಬೆಂಗಳೂರಿನ 1 ಕೋಟಿಗೂ ಹೆಚ್ಚು ವಾಹನಗಳಿಗೆ ಹೊಸ ಸೌಲಭ್ಯ!


  ಈ ಪ್ರದೇಶಗಳಲ್ಲೂ ಸಂಚಾರ ದಟ್ಟಣೆ
  ಪೂರ್ವ ಬೆಂಗಳೂರಿನ ಇಂದಿರಾನಗರ, ಹಲಸೂರು ಮತ್ತು ಜೀವನ್ ಭೀಮಾ ನಗರ ಟ್ರಾಫಿಕ್ ಪೊಲೀಸ್ ಮಿತಿಯಲ್ಲಿರುವ ಸಿಎಂಎಚ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಗಳಿವೆ ಎಂದು ಬಬೆಂಗಳೂರು ಟ್ರಾಫಿಕ್ ಪೊಲೀಸರು ಸೂಚನೆ ನೀಡಿದ್ದಾರೆ.

  Published by:ಗುರುಗಣೇಶ ಡಬ್ಗುಳಿ
  First published: