• Home
  • »
  • News
  • »
  • bengaluru-urban
  • »
  • Bengaluru To Vijayawada: ಬೆಂಗಳೂರು-ವಿಜಯವಾಡ ಕೇವಲ 6 ಗಂಟೆಯಲ್ಲಿ ಪ್ರಯಾಣಿಸಿ!

Bengaluru To Vijayawada: ಬೆಂಗಳೂರು-ವಿಜಯವಾಡ ಕೇವಲ 6 ಗಂಟೆಯಲ್ಲಿ ಪ್ರಯಾಣಿಸಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದಕ್ಷಿಣ ರಾಜ್ಯಗಳಾದ ಕರ್ನಾಟಕ ಮತ್ತು ಆಂಧ್ರಪ್ರದೇಶದ ಎರಡು ಪ್ರಮುಖ ನಗರಗಳನ್ನು ಸಂಪರ್ಕಿಸುವ ಮೂಲಕ ಈ ಹೆದ್ದಾರಿಯು ಪ್ರಯಾಣದ ಸಮಯವನ್ನು 5 ಗಂಟೆಗಳಷ್ಟು ಕಡಿಮೆ ಮಾಡುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

    ಬೆಂಗಳೂರು ಮತ್ತು ಆಂಧ್ರಪ್ರದೇಶದ ವಿಜಯವಾಡ (Bengaluru To Vijayawada Highway) ನಡುವೆ ಕಡಪ ಮೂಲಕ ಹಾದುಹೋಗುವ ಹೊಸ ಗ್ರೀನ್‌ಫೀಲ್ಡ್ ಪ್ರವೇಶ ಹೆದ್ದಾರಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಈ 342 ಕಿಲೋಮೀಟರ್ ಉದ್ದದ ಹೆದ್ದಾರಿಯು ದಕ್ಷಿಣ ಭಾರತದ (South India) ಎರಡು ನೆರೆಯ ರಾಜ್ಯಗಳ ನಡುವಿನ ಪ್ರಯಾಣದ ಸುಲಭತೆಯನ್ನು ಹೆಚ್ಚಿಸುತ್ತದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಬೆಂಗಳೂರು ಮತ್ತು ವಿಜಯವಾಡ ನಡುವಿನ ಹೊಸ ಹೆದ್ದಾರಿ ಕುರಿತು ಅಧಿಕೃತ ಘೋಷಣೆ ಮಾಡಿದ್ದಾರೆ. ಈ ಮೂಲಕ ಬೆಂಗಳೂರಿನಿಂದ (Bengaluru News) ವಿಜಯವಾಡ ಪ್ರಯಾಣಿಕರಿಗೆ ಶುಭಸುದ್ದಿ ನೀಡಿದ್ದಾರೆ.


    ಬೆಂಗಳೂರು-ಕಡಪ-ವಿಜಯವಾಡ ಗ್ರೀನ್‌ಫೀಲ್ಡ್ ಪ್ರವೇಶ ನಿಯಂತ್ರಿತ ಕಾರಿಡಾರ್ 342 ಕಿಮೀ ಉದ್ದದ ಯೋಜನೆಯನ್ನು ಒಟ್ಟು 13,600 ಕೋಟಿ ಬಂಡವಾಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಘೋಷಣೆ ಮಾಡಿದ್ದಾರೆ.


    ಇದನ್ನೂ ಓದಿ: Kamakshi Temple: ಕುದಿಯುವ ಎಣ್ಣೆಯಿಂದ ವಡೆ ತೆಗೆಯೋ ಉತ್ತರ ಕನ್ನಡದ ಭಕ್ತರು!


    11 ಗಂಟೆ ಪ್ರಯಾಣ ಇನ್ನಿರಲ್ಲ!
    ಪ್ರಸ್ತುತ ಬೆಂಗಳೂರಿನಿಂದ ವಿಜಯವಾಡಕ್ಕೆ ಪ್ರಯಾಣಿಸಲು ಸರಿಸುಮಾರು 11 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಈ ಹೊಸ ಹೆದ್ದಾರಿಯು ಪ್ರಯಾಣದ ಸಮಯವನ್ನು 5 ಗಂಟೆಗಳಷ್ಟು ಕಡಿಮೆ ಮಾಡುವ ನಿರೀಕ್ಷೆಯಿದೆ. ಅಲ್ಲದೇ ಈ ಹೆದ್ದಾರಿಯು ಈ ಎರಡು ನಗರಗಳ ನಡುವೆ 6 ಗಂಟೆಗಳ ಪ್ರಯಾಣವನ್ನು ಮಾಡುತ್ತದೆ.


    ದಕ್ಷಿಣ ರಾಜ್ಯಗಳಾದ ಕರ್ನಾಟಕ ಮತ್ತು ಆಂಧ್ರಪ್ರದೇಶದ ಎರಡು ಪ್ರಮುಖ ನಗರಗಳನ್ನು ಸಂಪರ್ಕಿಸುವ ಮೂಲಕ ಈ ಹೆದ್ದಾರಿಯು 2 ನಗರಗಳ ನಡುವಿನ ಪ್ರಯಾಣದ ದೂರವನ್ನು 75 ಕಿಮೀ ಮತ್ತು ಪ್ರಯಾಣದ ಸಮಯವನ್ನು 5 ಗಂಟೆಗಳಷ್ಟು ಕಡಿಮೆ ಮಾಡುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.


    ಬೆಂಗಳೂರು ನಗರದಲ್ಲಿ 500 ಹಂಪ್​ಗಳ ನಿರ್ಮಾಣಕ್ಕೆ ಪ್ರಸ್ತಾಪ
    ಬೆಂಗಳೂರು ನಗರದಲ್ಲಿ ಅಪಘಾತ ತಡೆಗೆ 500 ರೋಡ್ ಹಂಪ್ಸ್​ಗಳನ್ನು ಅಳವಡಿಸಲು ಟ್ರಾಫಿಕ್ ಪೊಲೀಸರು ಪ್ರಸ್ತಾವನೆ ಸಲ್ಲಿಸಿದ್ದಾರೆ. ವೈಟ್‌ಫೀಲ್ಡ್, ಕೆಂಗೇರಿ, ಜಯನಗರ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಹಂಪ್ಸ್ ನಿರ್ಮಿಸಲು ಬೇಡಿಕೆ ಇಟ್ಟಿರುವ ಬೆಂಗಳೂರು ಟ್ರಾಫಿಕ್ ಪೊಲೀಸರು ಬೆಂಗಳೂರಿನಲ್ಲಿ ರಸ್ತೆ ಅಪಘಾತ (Bengaluru Road Accidents) ತಡೆಯಲು ಹೊಸ ಹೆಜ್ಜೆ ಮುಂದಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಹೊಸದಾಗಿ ಇನ್ನೂ 500 ಕ್ಕೂ ಅಧಿಕ ರೋಡ್ ಹಂಪ್ಸ್ ನಿರ್ಮಿಸಲು ಪ್ರಸ್ತಾಪ ಸಲ್ಲಿಸಲಾಗಿದೆ. ಹೀಗೆ ಹಂಪ್​ಗಳನ್ನು ನಿರ್ಮಿಸುವ ಮೂಲಕ ಬೆಂಗಳೂರು ನಗರದಲ್ಲಿ (Bengaluru News) ಸುಗಮ ಸಂಚಾರಕ್ಕೆ ಅನುವು ಮಾಡುವ ಉದ್ದೇಶವನ್ನು ಹೊಂದಲಾಗಿದೆ. ಅಲ್ಲದೇ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಯಲು ಸಹ ಈ ಹಂಪ್​ಗಳು ನೆರವಾಗಲಿದೆ ಎಂಬುದು ಬೆಂಗಳೂರು ಟ್ರಾಫಿಕ್ ಪೊಲೀಸರ (Bengaluru Traffic Police) ಉದ್ದೇಶವಾಗಿದೆ.


    ಇದನ್ನೂ ಓದಿ: Uttara Kannada: ಸೈಕಲ್ಲೇ ಜಿಮ್ ಆಯ್ತು! 15 ಸಾವಿರದ ಅದ್ಭುತ ಸಾಧನ ಇಲ್ಲಿ ಸಿಗುತ್ತೆ ನೋಡಿ


    ಅಪಘಾತ ಹೆಚ್ಚು ಸಂಭವಿಸುವ 524 ಕಡೆ ರೋಡ್ ಹಂಪ್ ಅಳವಡಿಕೆಗೆ ಬಿಬಿಎಂಪಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಗರದ ಒಟ್ಟು 39 ಸಂಚಾರಿ ಪೊಲೀಸ್ ಠಾಣೆಗಳಿಂದ ಪ್ರತ್ಯೇಕವಾಗಿ ಈ ಪ್ರಸ್ತಾವನೆಗಳು ಸಲ್ಲಿಕೆ ಮಾಡಲಾಗಿದೆ.

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು