• Home
  • »
  • News
  • »
  • bengaluru-urban
  • »
  • Bengaluru News: ಬೆಂಗಳೂರಿನಲ್ಲಿರುವ ಮಲೆನಾಡಿನ ಜನರಿಗೆ ಬಂಪರ್ ಸುದ್ದಿ

Bengaluru News: ಬೆಂಗಳೂರಿನಲ್ಲಿರುವ ಮಲೆನಾಡಿನ ಜನರಿಗೆ ಬಂಪರ್ ಸುದ್ದಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಂಗಳೂರಿನಿಂದ ಶಿವಮೊಗ್ಗಕ್ಕೂ ವಿಶೇಷ ರೈಲನ್ನು ಭಾರತೀಯ ರೈಲ್ವೇ ಘೋಷಿಸಿದೆ. ಬೆಂಗಳೂರಿನ ಯಶವಂತಪುರದಿಂದ ಶಿವಮೊಗ್ಗಕ್ಕೆ ಟೌನ್ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ನೀಡಲಿದೆ.

  • News18 Kannada
  • Last Updated :
  • Bangalore [Bangalore], India
  • Share this:

    ಬೆಂಗಳೂರು: ಮಲೆನಾಡಿನ ಜನರಿಗೆ ಖುಷಿಸುದ್ದಿಯೊಂದು ಹೊರಬಿದ್ದಿದೆ. ಬೆಂಗಳೂರಿನಲ್ಲಿ (Bengaluru News) ವಾಸವಿರುವ ಮಲೆನಾಡು ಶಿವಮೊಗ್ಗ ಜನರು (Shivamogga News) ದೀಪಾವಳಿ ಹಬ್ಬಕ್ಕೆ ಸುಲಭವಾಗಿ ಊರಿಗೆ ಪ್ರಯಾಣ ಮಾಡಬಹುದಾಗಿದೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೂ ವಿಶೇಷ ರೈಲನ್ನು ಭಾರತೀಯ ರೈಲ್ವೇ ಘೋಷಿಸಿದೆ. ಬೆಂಗಳೂರಿನ ಯಶವಂತಪುರದಿಂದ ಶಿವಮೊಗ್ಗಕ್ಕೆ ಟೌನ್ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ನೀಡಲಿದೆ.


    ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ಶಿವಮೊಗ್ಗ ಟೌನ್ ರೈಲು ನಿಲ್ದಾಣಕ್ಕೆ ಈ ರೈಲು ಸಂಚರಿಸಲಿದೆ. ದೀಪಾವಳಿಗೆ ಅಂದರೆ ಅಕ್ಟೋಬರ್ 22ರಿಂದ ಈ ವಿಶೇಷ ರೈಲು ಸಾರ್ವಜನಿಕರ ಸೇವೆಗೆ ದೊರೆಯಲಿದೆ.


    ಇದನ್ನೂ ಓದಿ: Uttara Kannada: ಘನತ್ಯಾಜ್ಯದಿಂದ ಗೊಬ್ಬರ! ಇದು ಅಡಿಕೆಗೂ ಭಾರೀ ಬೆಸ್ಟ್ ಅಂತೆ!


    ರೈಲಿನ ಸಮಯದ ವಿವರ ಇಲ್ಲಿದೆ
    ಬೆಳಗ್ಗೆ 10.30ಕ್ಕೆ ಯಶವಂತಪುರ ನಿಲ್ದಾಣದಿಂದ ಹೊರಡಲಿರುವ ಈ ರೈಲು ಅದೇ ದಿನ ಮಧ್ಯಾಹ್ನ 3.30ಕ್ಕೆ ಶಿವಮೊಗ್ಗ ರೈಲು ನಿಲ್ದಾಣವನ್ನುತಲುಪಲಿದೆ.


    ಯಾವ ರೈಲು ನಿಲ್ದಾಣಗಳಲ್ಲಿ ನಿಲುಗಡೆಯಿರಲಿದೆ?
    ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ಬೆಳಗ್ಗೆ 10.30ಕ್ಕೆ ಈ ರೈಲು ಹೊರಡಲಿದೆ. ತುಮಕೂರನ್ನು 11.15 ಕ್ಕೆ, ಅರಸೀಕೆರೆಗೆ ಮಧ್ಯಾಹ್ನ 12.33ಕ್ಕೆ, ಬೀರೂರು ರೈಲು ನಿಲ್ದಾಣವನ್ನು ಮಧ್ಯಾಹ್ನ 1.23ಕ್ಕೆ, ಭದ್ರಾವತಿ ರೈಲು ನಿಲ್ದಾಣವನ್ನು ಮಧ್ಯಾಹ್ನ 2.18ಕ್ಕೆ ಈ ರೈಲು ತಲುಪಲಿದೆ. ಶಿವಮೊಗ್ಗ ಟೌನ್ ರೈಲ್ವೆ ನಿಲ್ದಾಣವನ್ನು ಮಧ್ಯಾಹ್ನ 3.30ಕ್ಕೆ ಈ ವಿಶೇಷ ರೈಲು ತಲುಪಲಿದೆ.


    ಬೆಂಗಳೂರಿನಿಂದ ನಿಮ್ಮೂರಿಗೆ ವಿಶೇಷ ರೈಲು! ಇಲ್ಲಿದೆ ನೋಡಿ ವಿವರ
    ದೀಪಾವಳಿ ಹಬ್ಬಕ್ಕೆ (Deepavali 2022) ಭಾರತೀಯ ರೈಲ್ವೇ ವಿಶೇಷ ರೈಲುಗಳನ್ನು (Indian Railway Deepavali Special Trains) ಘೋಷಣೆ ಮಾಡಿದೆ. ಬೆಂಗಳೂರಿನಿಂದ ಕರ್ನಾಟಕದ ವಿವಿಧ ಊರುಗಳಿಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರ ಅನುಕೂಲಕ್ಕೆ ವಿಶೇಷ ರೈಲುಗಳ ಸಂಚಾರ ಘೋಷಿಸಿದೆ. ಬೆಂಗಳೂರಿನಿಂದ (Bengaluru News) ನೀವೂ ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗುವ ಪ್ಲಾನ್ ಮಾಡಿದ್ದರೆ ಈ ವಿಶೇಷ ರೈಲುಗಳಲ್ಲಿ ಬುಕಿಂಗ್ ಮಾಡಬಹುದು. ಬೆಂಗಳೂರಿನಿಂದ ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗ ಸೇರಿದಂತೆ ಹಲವೆಡೆ ಈ ರೈಲುಗಳು ಸೇವೆ ನೀಡಲಿವೆ.


    ಇದನ್ನೂ ಓದಿ: Kamakshi Temple: ಕುದಿಯುವ ಎಣ್ಣೆಯಿಂದ ವಡೆ ತೆಗೆಯೋ ಉತ್ತರ ಕನ್ನಡದ ಭಕ್ತರು!


    ಅಕ್ಟೋಬರ್ 21ರ ಮಧ್ಯಾಹ್ನ 2:30 ಕ್ಕೆ ಬೆಂಗಳೂರಿನಿಂದ ಹೊರಡುವ ಯಶವಂತಪುರ ಎಸ್ ಎಸ್ ಎಸ್ ಹುಬ್ಬಳ್ಳಿ ಸೂಪರ್ ಫಾಸ್ಟ್​ ವಿಶೇಷ ಎಕ್ಸ್​ಪ್ರೆಸ್ ರೈಲು ರಾತ್ರಿ 9:50ಕ್ಕೆ ಹುಬ್ಬಳ್ಳಿ ನಗರವನ್ನು ತಲುಪಲಿದೆ.


    ಹುಬ್ಬಳ್ಳಿಯಿಂದ ಹೊರಡುವ ಸಮಯ
    ಹುಬ್ಬಳ್ಳಿಯಿಂದ ಅಕ್ಟೋಬರ್ 22ರಂದು ಬೆಳಗ್ಗೆ 1 ಗಂಟೆಗೆ ಬೆಂಗಳೂರಿಗೆ ಹೊರಡುವ ಎಸ್.ಎಸ್.ಎಸ್. ಹುಬ್ಬಳ್ಳಿ- ಯಶವಂತಪುರ ಸೂಪರ್ ಫಾಸ್ಟ್​ ವಿಶೇಷ ಎಕ್ಸ್​ಪ್ರೆಸ್ ರೈಲು ಬೆಳಗ್ಗೆ 9:30ಕ್ಕೆಲ್ಲ ಬೆಂಗಳೂರನ್ನು ತಲುಪಲಿದೆ.


    ಬೆಳಗಾವಿ-ಯಶವಂತಪುರ ಸೂಪರ್ ಫಾಸ್ಟ್ ವಿಶೇಷ ಎಕ್ಸ್‌ಪ್ರೆಸ್ ರೈಲು
    ಅಕ್ಟೋಬರ್ 26ರಂದು ಬೆಳಗಾವಿ ರೈಲು ನಿಲ್ದಾಣದಿಂದ ಬೆಳಗಾವಿ-ಯಶವಂತಪುರ ಸೂಪರ್ ಫಾಸ್ಟ್ ವಿಶೇಷ ಎಕ್ಸ್‌ಪ್ರೆಸ್ ರೈಲು ರಾತ್ರಿ 10 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 6.50ಕ್ಕೆ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣವನ್ನು ತಲುಪಲಿದೆ.

    Published by:ಗುರುಗಣೇಶ ಡಬ್ಗುಳಿ
    First published: