• Home
 • »
 • News
 • »
 • bengaluru-urban
 • »
 • Bengaluru To Mysuru: ಬೆಂಗಳೂರು-ಮೈಸೂರು ಜನರಿಗೆ ಸೂಪರ್ ಸುದ್ದಿ!

Bengaluru To Mysuru: ಬೆಂಗಳೂರು-ಮೈಸೂರು ಜನರಿಗೆ ಸೂಪರ್ ಸುದ್ದಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Bengaluru News: 8 ರೈಲುಗಳನ್ನು ಸೂಪರ್​ಫಾಸ್ಟ್ ದರ್ಜೆಗೆ ಏರಿಸಲು ಭಾರತೀಯ ರೈಲ್ವೇಯು ಮಹತ್ವದ ನಿರ್ಧಾರ ಕೈಗೊಂಡಿದೆ.

 • Share this:

  ಬೆಂಗಳೂರು ಮತ್ತು ಮೈಸೂರಿನ ಸಾರ್ವಜನಿಕರಿಗೆ ಮಹತ್ವದ ಸುದ್ದಿಯೊಂದು ಇಲ್ಲಿದೆ. ಬೆಂಗಳೂರಿನಿಂದ ಮೈಸೂರಿಗೆ ತೆರಳುವ ಪ್ರಯಾಣಿಕರು (Bengaluru To Mysuru) ಇನ್ನಷ್ಟು ಬೇಗ ಇನ್ಮೇಲೆ ಪ್ರಯಾಣ ಮಾಡಬಹುದಾಗಿದೆ. ಬೆಂಗಳೂರು- ಮೈಸೂರು ನಗರಗಳ (Bengaluru To Mysuru Trains) ನಡುವೆ ಸಂಚರಿಸುವ ಬರೋಬ್ಬರಿ 20 ರೈಲುಗಳ ವೇಗವನ್ನು ಹೆಚ್ಚಿಸಲಾಗಿದೆ. ಅಲ್ಲದೇ ಈ ಪೈಕಿ 8 ರೈಲುಗಳನ್ನು ಸೂಪರ್​ಫಾಸ್ಟ್ ದರ್ಜೆಗೆ ಏರಿಸಲು ಭಾರತೀಯ ರೈಲ್ವೇಯು (Indian Railways) ಮಹತ್ವದ ನಿರ್ಧಾರ ಕೈಗೊಂಡಿದೆ. ಬೆಂಗಳೂರು-ಮೈಸೂರು ನಗರಗಳ ನಡುವೆ ಪ್ರಯಾಣಿಸುವ ಈ ರೈಲುಗಳ ವೇಗವನ್ನು ಇನ್ನಷ್ಟು ಹೆಚ್ಚಿಸಲಾಗಿದೆ.


  ಹುಬ್ಬಳ್ಳಿ-ಮೈಸೂರು ಎಕ್ಸ್‌ಪ್ರೆಸ್
  ಸಾಯಿನಗರ-ಶಿರಡಿ ಮೈಸೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌
  ಹೌರಾ-ಮೈಸೂರು ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್
  ಮೈಲಾಡುತುರೈ-ಮೈಸೂರು ಎಕ್ಸ್‌ಪ್ರೆಸ್
  ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್


  ಈ ರೈಲುಗಳ ವೇಗವನ್ನು ಸಹ ಹೆಚ್ಚಿಸಲು ಭಾರತೀಯ ರೈಲ್ವೇ ತೀರ್ಮಾನ
  ಮೈಸೂರು ಯಶವಂತಪುರ ಎಕ್ಸ್‌ಪ್ರೆಸ್
  SMVT ಬೆಂಗಳೂರು-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್
  ಚಾಮರಾಜನಗರ-ತುಮಕೂರು ದೈನಂದಿನ ಪ್ಯಾಸೆಂಜರ್
  ಕೊಚುವೇಲಿ-ಮೈಸೂರು ಎಕ್ಸ್‌ಪ್ರೆಸ್
  ಅಜ್ಮೀರ್-ಮೈಸೂರು ಪಾಕ್ಷಿಕ ಎಕ್ಸ್‌ಪ್ರೆಸ್


  ಇದನ್ನೂ ಓದಿ: Bannerghatta Tiger Video: ಬನ್ನೇರುಘಟ್ಟದಲ್ಲಿ ಈ ಹುಲಿಮರಿ ಬದುಕಿದ್ದೇ ಪವಾಡ!


  ಮೈಸೂರಿನಿಂದ ದೇಶದ ವಿವಿಧೆಡೆ ಸಂಚರಿಸುವ ಪ್ರಮುಖ ರೈಲುಗಳಿವು
  ಸಾಂಸ್ಕೃತಿಕ ನಗರಿ ಮೈಸೂರಿನ ಜನರಿಗೆ ಪ್ರಮುಖ ಮಾಹಿತಿಯೊಂದು ಇಲ್ಲಿದೆ. ಮೈಸೂರು ಕರ್ನಾಟಕ ಒಂದೇ ಅಲ್ಲದೇ ಇಡೀ ದೇಶದಲ್ಲೇ ಅತ್ಯಂತ ಪ್ರಮುಖ ನಗರವೆಂದು ಹೆಸರು ಪಡೆದಿದೆ. ಮೈಸೂರು ದಸರಾ ಅಂತೂ ವಿಶ್ವದಲ್ಲೇ ಪ್ರಸಿದ್ಧ. ಮೈಸೂರಿಗೆ ದೇಶದ ನಾನಾ ಭಾಗಗಳಿಂದ ಸದಾ ಪ್ರವಾಸಿಗರು ಆಗಮಿಸುತ್ತಲೆ ಇರುತ್ತಾರೆ. ಹೀಗೆ ಆಗಮಿಸುವ ಪ್ರವಾಸಗರಿಗೆ ಸಂಚಾರಕ್ಕೆ ಭಾರತೀಯ ರೈಲ್ವೇಯು ವಿವಿಧ ರೈಲು ಸೇವೆಗಳನ್ನು ಒದಗಿಸಿದೆ. ಮೈಸೂರಿನಿಂದ ದೇಶದ ವಿವಿಧ ಪ್ರದೇಶಗಳಿಗೆ ಭಾರತೀಯ ರೈಲ್ವೆಯು (Indian Railways) ಒದಗಿಸಿರುವ ರೈಲು ಸೇವೆಗಳ (Trains To Mysuru) ವಿವರದ ಕುರಿತು ಮಹತ್ವದ ಮಾಹಿತಿ ನಿಮಗೆಂದೇ ಇಲ್ಲಿದೆ ನೋಡಿ.


  1. ಮೈಸೂರು-ವಾರಣಾಸಿ
  ಮೈಸೂರು-ವಾರಣಾಸಿ ನಡುವೆ 2014 ರಿಂದ ವಾರಕ್ಕೆ ಎರಡು ದಿನಗಳಂತೆ ಸಂಚರಿಸುವ ರೈಲು ಮೈಸೂರಿನಿಂದ ಹಿಂದೂಗಳ ಪ್ರಮುಖ ತೀರ್ಥಕ್ಷೇತ್ರದ ತಾಣವಾದ ಕಾಶಿಗೆ ಸಂಚರಿಸಲಿದೆ. ಈ ರೈಲಿನ ಮೂಲಕ ಕಾಶಿ ಯಾತ್ರೆ ಸುಲಭವಾಗಲಿದೆ.


  2. ವಿಶ್ವಮಾನವ ಎಕ್ಸ್‌ಪ್ರೆಸ್‌
  2017 ರಲ್ಲಿ ಆರಂಭವಾದ 'ವಿಶ್ವಮಾನವ ಎಕ್ಸ್‌ಪ್ರೆಸ್‌ ' ರೈಲು ಮೈಸೂರು-ಹುಬ್ಬಳ್ಳಿ-ಬೆಳಗಾವಿ ನಡುವೆ ಪ್ರತಿದಿನ ಸಂಚರಿಸುತ್ತದೆ.


  3. ಮೈಸೂರು-ಉದಯಪುರ
  2018 ರಿಂದ ಆರಂಭವಾದ ಮೈಸೂರು ಹಾಗೂ ರಾಜಸ್ತಾನದ ಉದಯಪುರ ನಡುವೆ ಪ್ರೀಮಿಯರ್ ವಾರಕ್ಕೊಮ್ಮೆ ಸಂಚರಿಸುವ ಎಕ್ಸ್‌ಪ್ರೆಸ್‌ ರೈಲು ಓಡಾಟ ನಡೆಸುತ್ತಿದೆ.


  ಇಲ್ಲೆಲ್ಲ ಪ್ರತಿದಿನ ರೈಲು ಓಡಾಟ
  4. ಮೈಸೂರು-ಬೆಂಗಳೂರು
  ಮೈಸೂರು-ಬೆಂಗಳೂರು ನಡುವೆ ಪ್ರತಿದಿನ ಮೆಮು ರೈಲು 2018 ರಿಂದ ಓಡಾಟ ನಡೆಸುತ್ತಿದೆ‌.


  5. ರಾಮನಗರ-ಮೈಸೂರು
  ರಾಮನಗರ-ಮೈಸೂರು ನಡುವೆ ಮೆಮು ಟ್ರೈನ್ 2018 ರಿಂದ ಪ್ರತಿದಿನ ಓಡಾಟ ನಡೆಸುತ್ತಿದೆ.


  6. ಡೈಲಿ ಸೂಪರ್ ಫಾಸ್ಟ್
  ಚೆನ್ನೈ- ಬೆಂಗಳೂರು - ಮೈಸೂರು ನಡುವೆ 2019 ರಿಂದ ಪ್ರತಿದಿನ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಓಡಾಟ ನಡೆಸಲಿದೆ.


  7. ಕೋಚುವೇಲಿ (ತಿರುವನಂತಪುರಂ) - ಬೆಂಗಳೂರು- ಮೈಸೂರು
  ಕೋಚುವೇಲಿ (ತಿರುವನಂತಪುರಂ) - ಬೆಂಗಳೂರು- ಮೈಸೂರು ನಡುವೆ ಪ್ರತಿದಿನ ಎಕ್ಸ್ ಪ್ರೆಸ್ ಓಡಾಟ 2019 ರಿಂದ ಆರಂಭವಾಗಿದೆ.


  8. ಕಾಚಿಗುಡ (ಹೈದರಾಬಾದ್) - ಬೆಂಗಳೂರು- ಮೈಸೂರು
  ಕಾಚಿಗುಡ (ಹೈದರಾಬಾದ್) - ಬೆಂಗಳೂರು- ಮೈಸೂರು ಪ್ರತಿದಿನ ಓಡಾಟದ ರೈಲು 2019 ರಿಂದ ಆರಂಭವಾಗಿದೆ.


  ಇದನ್ನೂ ಓದಿ: Bengaluru News: ಬೆಂಗಳೂರು ಪೊಲೀಸರ ವೆಬ್ ವಿಳಾಸ ಬದಲು


  9. ಬೆಂಗಳೂರು - ಮೈಸೂರು - ಮಂಗಳೂರು
  ಬೆಂಗಳೂರು - ಮೈಸೂರು - ಮಂಗಳೂರು ನಡುವೆ ಪ್ರತಿದಿನವು 2022ರ ಆಗಸ್ಟ್ ತಿಂಗಳಿನಿಂದ ಓಡಾಟ ಆರಂಭಿಸಿದೆ.

  Published by:ಗುರುಗಣೇಶ ಡಬ್ಗುಳಿ
  First published: