• Home
  • »
  • News
  • »
  • bengaluru-urban
  • »
  • Bengaluru: ಬೆಂಗಳೂರಿನಿಂದ ನಿಮ್ಮೂರಿಗೆ ವಿಶೇಷ ರೈಲು! ಇಲ್ಲಿದೆ ನೋಡಿ ವಿವರ

Bengaluru: ಬೆಂಗಳೂರಿನಿಂದ ನಿಮ್ಮೂರಿಗೆ ವಿಶೇಷ ರೈಲು! ಇಲ್ಲಿದೆ ನೋಡಿ ವಿವರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಂಗಳೂರಿನಿಂದ ಕರ್ನಾಟಕದ ವಿವಿಧ ಊರುಗಳಿಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರ ಅನುಕೂಲಕ್ಕೆ ವಿಶೇಷ ರೈಲುಗಳ ಸಂಚಾರ ಘೋಷಿಸಿದೆ.

  • News18 Kannada
  • Last Updated :
  • Bangalore [Bangalore], India
  • Share this:

    ಬೆಂಗಳೂರು: ದೀಪಾವಳಿ ಹಬ್ಬಕ್ಕೆ (Deepavali 2022) ಭಾರತೀಯ ರೈಲ್ವೇ ವಿಶೇಷ ರೈಲುಗಳನ್ನು (Indian Railway Deepavali Special Trains) ಘೋಷಣೆ ಮಾಡಿದೆ. ಬೆಂಗಳೂರಿನಿಂದ ಕರ್ನಾಟಕದ ವಿವಿಧ ಊರುಗಳಿಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರ ಅನುಕೂಲಕ್ಕೆ ವಿಶೇಷ ರೈಲುಗಳ ಸಂಚಾರ ಘೋಷಿಸಿದೆ. ಬೆಂಗಳೂರಿನಿಂದ (Bengaluru News) ನೀವೂ ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗುವ ಪ್ಲಾನ್ ಮಾಡಿದ್ದರೆ ಈ ವಿಶೇಷ ರೈಲುಗಳಲ್ಲಿ ಬುಕಿಂಗ್ ಮಾಡಬಹುದು. ಬೆಂಗಳೂರಿನಿಂದ ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗ ಸೇರಿದಂತೆ ಹಲವೆಡೆ ಈ ರೈಲುಗಳು ಸೇವೆ ನೀಡಲಿವೆ.


    ಅಕ್ಟೋಬರ್ 21ರ ಮಧ್ಯಾಹ್ನ 2:30 ಕ್ಕೆ ಬೆಂಗಳೂರಿನಿಂದ ಹೊರಡುವ ಯಶವಂತಪುರ ಎಸ್ ಎಸ್ ಎಸ್ ಹುಬ್ಬಳ್ಳಿ ಸೂಪರ್ ಫಾಸ್ಟ್​ ವಿಶೇಷ ಎಕ್ಸ್​ಪ್ರೆಸ್ ರೈಲು ರಾತ್ರಿ 9:50ಕ್ಕೆ ಹುಬ್ಬಳ್ಳಿ ನಗರವನ್ನು ತಲುಪಲಿದೆ.


    ಹುಬ್ಬಳ್ಳಿಯಿಂದ ಹೊರಡುವ ಸಮಯ
    ಹುಬ್ಬಳ್ಳಿಯಿಂದ ಅಕ್ಟೋಬರ್ 22ರಂದು ಬೆಳಗ್ಗೆ 1 ಗಂಟೆಗೆ ಬೆಂಗಳೂರಿಗೆ ಹೊರಡುವ ಎಸ್.ಎಸ್.ಎಸ್. ಹುಬ್ಬಳ್ಳಿ- ಯಶವಂತಪುರ ಸೂಪರ್ ಫಾಸ್ಟ್​ ವಿಶೇಷ ಎಕ್ಸ್​ಪ್ರೆಸ್ ರೈಲು ಬೆಳಗ್ಗೆ 9:30ಕ್ಕೆಲ್ಲ ಬೆಂಗಳೂರನ್ನು ತಲುಪಲಿದೆ.


    ಬೆಳಗಾವಿ-ಯಶವಂತಪುರ ಸೂಪರ್ ಫಾಸ್ಟ್ ವಿಶೇಷ ಎಕ್ಸ್‌ಪ್ರೆಸ್ ರೈಲು
    ಅಕ್ಟೋಬರ್ 26ರಂದು ಬೆಳಗಾವಿ ರೈಲು ನಿಲ್ದಾಣದಿಂದ ಬೆಳಗಾವಿ-ಯಶವಂತಪುರ ಸೂಪರ್ ಫಾಸ್ಟ್ ವಿಶೇಷ ಎಕ್ಸ್‌ಪ್ರೆಸ್ ರೈಲು ರಾತ್ರಿ 10 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 6.50ಕ್ಕೆ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣವನ್ನು ತಲುಪಲಿದೆ.


    ಇದನ್ನೂ ಓದಿ: Puneeth Rajkumar: ಅಪ್ಪು ನೆನಪಲ್ಲಿ 300 ಕೆಜಿ ಚಿಕನ್, ಮಟನ್ ಸವಿದ ಅಭಿಮಾನಿಗಳು!


    ಬೆಂಗಳೂರಿನಿಂದ ಶಿವಮೊಗ್ಗಕ್ಕೂ ವಿಶೇಷ ರೈಲು
    ಇಷ್ಟೇ ಅಲ್ಲ, ಬೆಂಗಳೂರಿನಿಂದ ಶಿವಮೊಗ್ಗಕ್ಕೂ ವಿಶೇಷ ರೈಲನ್ನು ಭಾರತೀಯ ರೈಲ್ವೇ ಘೋಷಿಸಿದೆ. ಬೆಂಗಳೂರಿನ ಯಶವಂತಪುರದಿಂದ ಶಿವಮೊಗ್ಗಕ್ಕೆ ಟೌನ್ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ನೀಡಲಿದೆ.


    ಇದನ್ನೂ ಓದಿ: Bengaluru: ಬೆಂಗಳೂರಲ್ಲಿ ಮನೆ ಕಟ್ಟೋಕೆ 5 ಲಕ್ಷ ಸಹಾಯಧನ!


    ಬೆಳಗ್ಗೆ 10.30ಕ್ಕೆ ಯಶವಂತಪುರ ನಿಲ್ದಾಣದಿಂದ ಹೊರಡಲಿರುವ ಈ ರೈಲು ಅದೇ ದಿನ ಮಧ್ಯಾಹ್ನ 3.30ಕ್ಕೆ ಶಿವಮೊಗ್ಗ ರೈಲು ನಿಲ್ದಾಣವನ್ನುತಲುಪಲಿದೆ.

    Published by:ಗುರುಗಣೇಶ ಡಬ್ಗುಳಿ
    First published: