• Home
 • »
 • News
 • »
 • bengaluru-urban
 • »
 • Bengaluru: ಬೆಂಗಳೂರಿನ ಟೀ ಶಾಪ್​ನಲ್ಲಿ ಕ್ರಿಪ್ಟೋ ಕರೆನ್ಸಿಯಲ್ಲಿ ಪೇಮೆಂಟ್!

Bengaluru: ಬೆಂಗಳೂರಿನ ಟೀ ಶಾಪ್​ನಲ್ಲಿ ಕ್ರಿಪ್ಟೋ ಕರೆನ್ಸಿಯಲ್ಲಿ ಪೇಮೆಂಟ್!

ಕ್ರಿಪ್ಟೋ ಕರೆನ್ಸಿ ಟೀ ಶಾಪ್

ಕ್ರಿಪ್ಟೋ ಕರೆನ್ಸಿ ಟೀ ಶಾಪ್

Bengaluru News: ಟೀ ಶಾಪ್​ನಲ್ಲಿ ಕ್ರಿಪ್ಟೋವನ್ನು ಹೇಗೆ ಸ್ವೀಕರಿಸುತ್ತಾರೆ? ಯಾವ ಎಲ್ಲಾ ನಾಣ್ಯಗಳನ್ನು ಸ್ವೀಕರಿಸಲಾಗುತ್ತದೆ? ವಿನಿಮಯ ದರವನ್ನು ಅವರು ಹೇಗೆ ನಿರ್ಧರಿಸುತ್ತಾರೆ? 

 • Share this:

  ನೀವು ಈ ಅಂಗಡಿಯಲ್ಲಿ ಟೀ ಕುಡಿದರೆ ಕ್ರಿಪ್ಟೋ ಕರೆನ್ಸಿಯಲ್ಲೂ ಹಣ ಪಾವತಿಸಿಬಹುದು! ಹೌದು, ಅಚ್ಚರಿ ಎನಿಸಿದರೂ ಇದು ಸತ್ಯ. ಅಲ್ಲದೇ ಈ ಅಂಗಡಿ ಇರೋದು ಸಹ ಬೆಂಗಳೂರಲ್ಲೇ! ಬೆಂಗಳೂರಿನ ಟೀ ಸ್ಟಾಲ್ (Bengaluru Tea Shop) ಮಾಲೀಕರೊಬ್ಬರು ತಮ್ಮ ಟೀ ಅಂಗಡಿಯಲ್ಲಿ ಕ್ರಿಪ್ಟೋಕರೆನ್ಸಿಯನ್ನು ಪಾವತಿಯಾಗಿ (Bengaluru Tea Shop Cryptocurrency) ಸ್ವೀಕರಿಸುತ್ತಿದ್ದಾರೆ. ಈ ಸುದ್ದಿ ಭಾರೀ ವೈರಲ್ ಆಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಸುದ್ದಿ ವೈರಲ್ ಆದ ನಂತರ ಬೆಂಗಳೂರಿನಲ್ಲಿ 'ಫ್ರುಸ್ಟ್ರೇಟೆಡ್ ಡ್ರಾಪ್‌ಔಟ್' ಶೀರ್ಷಿಕೆಯ ಅವರ ರಸ್ತೆಬದಿಯ ಚಹಾ ಅಂಗಡಿಯು ಜನಪ್ರಿಯವಾಗಿದೆ.


  ಅಕ್ಷಯ್ ಸೈನಿ ಎಂಬ ಟ್ವಿಟ್ಟರ್ ಬಳಕೆದಾರರು ಬುಧವಾರ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ.
  ಇದನ್ನೂ ಓದಿ: Bengaluru: ಬನಶಂಕರಿ ಅಮ್ಮನ ನವರಾತ್ರಿ ವಿಶೇಷ ಫೋಟೋ ಇಲ್ಲಿದೆ ನೋಡಿ


  ಕ್ರಿಪ್ಟೋದಲ್ಲಿ ಪಾವತಿ ಮಾಡೋದು ಹೇಗೆ?
  ಓರ್ವ ಟ್ವಿಟರ್ ಬಳಕೆದಾರರು ಟೀ ಶಾಪ್​ನಲ್ಲಿ ಕ್ರಿಪ್ಟೋವನ್ನು ಹೇಗೆ ಸ್ವೀಕರಿಸುತ್ತಾರೆ? ಯಾವ ಎಲ್ಲಾ ನಾಣ್ಯಗಳನ್ನು ಸ್ವೀಕರಿಸಲಾಗುತ್ತದೆ?
  ಇದನ್ನೂ ಓದಿ: KSRTC ರಿಯಾಯಿತಿ ಬಸ್ ಪಾಸ್ ಆಫರ್! ಈಗಲೇ ಪಡೆದುಕೊಳ್ಳಿ


  ಟೀ ಕುಡಿದರೆ ಕ್ರಿಪ್ಟೋದಲ್ಲಿ  ಹಣದ ಪಾವತಿ ಮಾಡುವುದು ಅಂತಾದರೆ ವಿನಿಮಯ ದರವನ್ನು ಅವರು ಹೇಗೆ ನಿರ್ಧರಿಸುತ್ತಾರೆ?  ಹೀಗೆ ನನಗೆ ಕೆಲವು ಪ್ರಶ್ನೆಗಳಿವೆ ಎಂದು ಹಲವು ಟ್ವಿಟರ್ ಬಳಕೆದಾರರು  ಕೇಳಿದ್ದಾರೆ.

  Published by:ಗುರುಗಣೇಶ ಡಬ್ಗುಳಿ
  First published: