• Home
  • »
  • News
  • »
  • bengaluru-urban
  • »
  • Bengaluru Potholes: ಫೇಮಸ್ ಆದ ಬೆಂಗಳೂರಿನ ರಸ್ತೆ ಗುಂಡಿಗಳು, ಸಿಲಿಕಾನ್ ಸಿಟಿ ಫುಲ್ ಟ್ರೋಲ್!

Bengaluru Potholes: ಫೇಮಸ್ ಆದ ಬೆಂಗಳೂರಿನ ರಸ್ತೆ ಗುಂಡಿಗಳು, ಸಿಲಿಕಾನ್ ಸಿಟಿ ಫುಲ್ ಟ್ರೋಲ್!

 ಬೆಂಗಳೂರಿನ ಗುಂಡಿಗಳು

ಬೆಂಗಳೂರಿನ ಗುಂಡಿಗಳು

ಬೆಂಗಳೂರಿನ ಬೆಳ್ಳಂದೂರು ಪ್ರದೇಶದಲ್ಲಿ ʼಅಬಿಜರ್ಸ್ ಪಾಟ್‌ಹೋಲ್ʼ ಎಂದು ಕರೆಯಲಾಗುವ ಈ ಗುಂಡಿಯನ್ನು ಗೂಗಲ್‌ ತನ್ನ ಪಟ್ಟಿಗೆ ಸೇರಿಸಿದ ನಂತರ, ಇದಕ್ಕೆ ಅನೇಕ ಆನ್‌ಲೈನ್‌ ಬಳಕೆದಾರರು ವಿಮರ್ಶೆ ಮಾಡುತ್ತಲೇ ಇದ್ದಾರೆ. ಆ ವಿಮರ್ಶೆಗಳು ಹೇಗಿವೆ ಎಂದು ತಿಳಿದುಕೊಳ್ಳೋಣ ಬನ್ನಿ.

  • Share this:

ಇತ್ತಿಚೀಗೆ ಯಾವುದೇ ಸ್ಥಳಕ್ಕೂ ಹೋಗಬೇಕೆಂದರೂ ಸಹ ಮೊದಲು ಎಲ್ಲರೂ ಮಾಡೋ ಕೆಲಸ ಗೂಗಲ್‌ ಮ್ಯಾಪ್‌ (Google Map) ಮೂಲಕ ದಾರಿ ಹುಡುಕುತ್ತಾರೆ. ವಿಶ್ವದ ಯಾವುದೇ ಮೂಲೆಯಲ್ಲೂ ನಮ್ಮ ಮನೆ ಇದ್ದರೂ ಸಹ ಗೂಗಲ್‌ನಲ್ಲಿ ಅದು ಸುಲಭವಾಗಿ ಲಭ್ಯವಾಗುತ್ತದೆ. ಇಂತಹ ಟೆಕ್ನಾಲಜಿ (Technology) ಕಾಲದಲ್ಲಿ ನಾವು ಇರೋದು ಬಹಳ ಹೆಮ್ಮೆಯ ವಿಷಯ. ಆದರೆ ಇಲ್ಲೊಂದು ಆಶ್ವರ್ಯಪಡುವ ಸಂಗತಿ ಇದೆ. ಅದೇನು ಗೊತ್ತಾ? ಈ ಗೂಗಲ್‌ ಮ್ಯಾಪ್‌ ರಸ್ತೆಯಲ್ಲಿ ಇರುವ ಗುಂಡಿಯನ್ನು (Potholes) ಸಹ ತನ್ನ ಪಟ್ಟಿಗೆ ಸೇರಿಸಿಕೊಂಡಿದೆ ಎಂದರೆ ಯಾರಿಗೆ ತಾನೇ ಆಶ್ಚರ್ಯವಾಗೋದಿಲ್ಲ. ಇದನ್ನು ಓದಿದ ತಕ್ಷಣ ನೀವು ಕೂಡ ಗುಂಡಿನಾ..? ರಸ್ತೆಯಲ್ಲಿರೋ ಗುಂಡಿಯನ್ನು ಮ್ಯಾಪ್‌ನ ಪಟ್ಟಿಯಲ್ಲಿ ಸೇರಿಸಿಕೊಳ್ಳಲಾಗಿದೆಯೇ ಎಂಬ ಪ್ರಶ್ನೆ ಬರುವುದು ಸಹಜ.


ಇದನ್ನೂ ಓದಿ: Viral Video: ಮಳೆಯಿಂದಾದ ಸಮಸ್ಯೆ ನಡುವೆಯೂ ಹಣ ಸಂಪಾದಿಸಿದ ವ್ಯಕ್ತಿ!


ಗೂಗಲ್‌ ಟ್ವಿಟ್ಟರ್ ಕ್ಷೇತ್ರ ದಿನವನ್ನು ಆಚರಣೆ ಮಾಡಿದ ನಂತರ, ಈ ಸ್ಥಳವನ್ನು ಪಟ್ಟಿಯಿಂದ ತೆಗೆದು ಹಾಕುವ ಬದಲು ಭಾರತದ ಟೆಕ್ ಕ್ಯಾಪಿಟಲ್‌ ಎಂದು ಕರೆಯುವ ಬೆಂಗಳೂರಿನ ಈ ಗುಂಡಿಯನ್ನು ಗೂಗಲ್ ಮ್ಯಾಪ್ ತನ್ನ ಟಾಪ್‌ ಸ್ಥಳಗಳಲ್ಲಿ ಒಂದು ಎಂಬ ಪಟ್ಟಿಗೆ ಸೇರಿಸಿದೆ. ಬೆಂಗಳೂರಿನ ಬೆಳ್ಳಂದೂರು ಪ್ರದೇಶದಲ್ಲಿ ʼಅಬಿಜರ್ಸ್ ಪಾಟ್‌ಹೋಲ್ʼ ಎಂದು ಕರೆಯಲಾಗುವ ಈ ಗುಂಡಿಯನ್ನು ಗೂಗಲ್‌ ತನ್ನ ಪಟ್ಟಿಗೆ ಸೇರಿಸಿದ ನಂತರ, ಇದಕ್ಕೆ ಅನೇಕ ಆನ್‌ಲೈನ್‌ ಬಳಕೆದಾರರು ವಿಮರ್ಶೆ ಮಾಡುತ್ತಲೇ ಇದ್ದಾರೆ. ಆ ವಿಮರ್ಶೆಗಳು ಹೇಗಿವೆ ಎಂದು ತಿಳಿದುಕೊಳ್ಳೋಣ ಬನ್ನಿ.


ಗೂಗಲ್‌ ಮ್ಯಾಪ್‌ಗೆ ಸೇರಿದ ಬೆಂಗಳೂರಿನ ಗುಂಡಿ: ನೆಟ್ಟಿಗರ ವಿಮರ್ಶಾತ್ಮಕ ಪ್ರತಿಕ್ರಿಯೆ
ಅಬಿಜರ್‌ನ ಪಾಟ್‌ಹೋಲ್‌ನ ಕೆಲವು ವಿಮರ್ಶೆಗಳನ್ನು ಹಂಚಿಕೊಂಡ ಟ್ವಿಟ್ಟರ್ ಬಳಕೆದಾರರೊಬ್ಬರು, “ಬೆಂಗಳೂರು ಇಷ್ಟು ದಿನ ಟೆಕ್ನಾಲಜಿಗೆ ತುಂಬಾ ಪ್ರಸಿದ್ದಿ ಪಡೆದಿತ್ತು. ಆದರೆ ಈಗ ಬೆಂಗಳೂರಿನ , ಗುಂಡಿಗಳು ಸಹ ಗೂಗಲ್‌ ಮ್ಯಾಪ್‌ನಲ್ಲಿ ಸ್ಥಾನ ಪಡೆದಿವೆ. ಗೂಗಲ್‌ ಈ ನಿರ್ಧಾರ ಕೆಲವರಿಗೆ ಆಶ್ಚರ್ಯ ತಂದಿದೆ. ಆದ್ದರಿಂದ ಗೂಗಲ್‌ನ ಈ ನಿರ್ಧಾರಕ್ಕೆ ಅನೇಕ ವಿಮರ್ಶೆಗಳು ಹರಿದು ಬರುತ್ತಿವೆʼ ಎಂದು ಟ್ವೀಟ್‌ ಮಾಡಿದ್ದಾರೆ.


“ ನಾನು ಒಂದು ರಾತ್ರಿ ಈ ಗುಂಡಿಯ ಹತ್ತಿರ ಹೋಗಿದ್ದೆ. ಅದು ನನಗೆ ಮುಂದೆ ಹೋಗಲು ಬಿಡಲೇ ಇಲ್ಲ. ನನ್ನನ್ನು ಹಿಡಿದು, ನನಗೆ ಒಂದು ಕಥೆ ಹೇಳು ಎಂದು ದುಂಬಾಲು ಬಿತ್ತು. ಇದು ನಿಜಕ್ಕೂ ನನಗೆ ಅತ್ಯಂತ ಭಯಾನಕ ಅನುಭವ. ನಾನು ಅದಕ್ಕೆ ಕಥೆ ಹೇಳಿ ಮುಗಿಸುವವರೆಗೂ ಅದು ನನ್ನನ್ನು ಬಿಡಲೇ ಇಲ್ಲ. ರಸ್ತೆ ದುರಸ್ತಿ ಮಾಡಲು ಎಲ್ಲ ಸಂಪನ್ಮೂಲಗಳು ಇದ್ದರೂ ಸಹ ಭ್ರಷ್ಟ ರಾಜಕಾರಣಿಗಳು ಏನು ಮಾಡುತ್ತಿದ್ದಾರೆ ಎಂಬ ಕಥೆಯನ್ನು ಹೇಳಿದೆ” ಒಬ್ಬ ಆನ್‌ಲೈನ್‌ ಬಳಕೆದಾರರು ರೋಚಕವಾದ ಸಂದೇಶದ ಮೂಲಕ ವಿಮರ್ಶೆ ಮಾಡಿದ್ದಾರೆ.


“ಇದು ಬೆಂಗಳೂರಿನಲ್ಲಿರುವ ತುಂಬಾ ಒಳ್ಳೆಯ ಗುಂಡಿ. ಈ ಸ್ಥಳಕ್ಕೆ ನೀವು ಒಮ್ಮೆಯಾದರೂ ಭೇಟಿ ನೀಡಬೇಕು. ಇದು ನಿಮಗೆ ಬೆಂಗಳೂರಿನ ರಸ್ತೆಗಳು ಹೇಗಿವೆ ಎಂಬ ಸತ್ಯವನ್ನು ತೋರಿಸುತ್ತವೆ. ಇಲ್ಲಿ ನೀವು ಜಾರಿ ಬೀಳುವುದು ಗ್ಯಾರಂಟಿ" ಎಂದು ಮತ್ತೊಬ್ಬ ಬಳಕೆದಾರರು ವಿಮರ್ಶೆ ಮಾಡಿದ್ದಾರೆ.


ಟ್ವಿಟರ್‌ನಲ್ಲಿ ಸಕತ್‌ ವೈರಲ್ ಆಗ್ತಿ ಕಾಮೆಂಟ್ ಗಳು
“ಬೆಂಗಳೂರಿನ ಪ್ರದೇಶದಲ್ಲಿ ನಾನು ಇಲ್ಲಿಯವರೆಗೆ ನೋಡಿದ ಅತ್ಯುತ್ತಮ ಗುಂಡಿ ಇದಾಗಿದೆ. ಇಲ್ಲಿ ಹೋದರೆ ನಿಜವಾಗಿಯೂ ನಿಮಗೆ ಬೆನ್ನು ಮುರಿದ ಅನುಭವ ಆಗುತ್ತದೆ. ನಿಮ್ಮ ಕಾರು ನಿಮ್ಮ ನಿಯಂತ್ರಣಕ್ಕೆ ಸಿಗದೇ ಹೋಗಬಹುದು ಅಥವಾ ನಿಮ್ಮ ವಾಹನ ಹಾಳಾಗಬಹುದು” ಎಂದು ಇನ್ನೊಬ್ಬ ಬಳಕೆದಾರರು ಕಮೆಂಟ್‌ ಬರೆದಿದ್ದಾರೆ.


ಇದನ್ನೂ ಓದಿ:  Traffic Police Awareness: ವಾಹನಗಳನ್ನು ಮಾರೋ ಮುನ್ನ ಎಚ್ಚರ; ಈ ರೂಲ್ಸ್ ಫಾಲೋ ಮಾಡದಿದ್ರೆ ಕಾದಿದೆ ಗಂಡಾಂತರ!


ಈ ವಿಮರ್ಶೆಗಳು ಈಗ ಟ್ವಿಟರ್‌ನಲ್ಲಿ ಸಕತ್‌ ವೈರಲ್ ಆಗ್ತಿವೆ. ಆಶಿಶ್ ಎಂಬ ಟ್ವಿಟ್ಟರ್ ಬಳಕೆದಾರರು “ಇದನ್ನು ಗೂಗಲ್‌ನಲ್ಲಿ ಪಿನ್ ಮಾಡಲು ಉತ್ತಮ ಉಪಾಯ. ಸ್ಥಳೀಯ ಕಾರ್ಪೊರೇಟರ್ ಅಥವಾ ಎಂಎಲ್ಎ/ಎಂಪಿ ಹೆಸರನ್ನು ಈ ಗುಂಡಿಗೆ ಇರಿಸಿದ್ದರೆ ಇನ್ನು ಉತ್ತಮವಾದ ಕೆಲಸ ಆಗುತ್ತಿತ್ತು. ಗೂಗಲ್‌ನ ಹುಡುಕಾಟ ಫಲಿತಾಂಶಗಳಲ್ಲಿ ಈ ಬೆಂಗಳೂರಿನ ಪೊಟಹೋಲ್ ಅಥವಾ ಗುಂಡಿ ಅಗ್ರಸ್ಥಾನದಲ್ಲಿರುವಾಗ, ರಾಜಕಾರಣಿಗಳಿಗೆ ಸ್ವಲ್ಪವಾದರೂ ಬುದ್ದಿ ಬರಲಿ” ಎಂದು ವಿಮರ್ಶೆ ಬರೆದಿದ್ದಾರೆ.

Published by:Ashwini Prabhu
First published: