Bengaluru Rain: ಬೆಂಗಳೂರಿನಲ್ಲಿ ಮಳೆ ಬಂದ್ರೆ ಪರಿಸ್ಥಿತಿ ಹರೋಹರ! ಓಡಾಡೋಕೆ ಇಷ್ಟೊಂದು ಸಮಯ ಬೇಕಾ?

ಟ್ರಾಫಿಕ್ ಸಮಸ್ಯೆಗೆ ಹೆಸರುವಾಸಿಯಾಗಿರುವ ಬೆಂಗಳೂರು ಇದೀಗ ಮಳೆಯಿಂದಾಗಿ ಇನ್ನಷ್ಟು ಅಸ್ತವ್ಯಸ್ತಗೊಂಡಿರುವ ಪರಿಸ್ಥಿತಿಗೆ ಕಾರಣವಾಗಿದೆ. ಇದರಿಂದಾಗಿ ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಬೆಂಗಳೂರಿಗರ ಪ್ರಯಾಣ ಸಮಯವು ಸರಾಸರಿ 30 % ಏರಿಕೆ ಕಂಡಿದ್ದು ಕೆಲವೊಂದು ಕಡೆಗಳಲ್ಲಿ ಪ್ರಯಾಣ ಸಮಯವು ಮಳೆ ಇಲ್ಲದ ದಿನಗಳಿಗೆ ಹೋಲಿಸಿದರೆ ಮಳೆ ಇರುವ ಸಮಯದಲ್ಲಿ 62% ಗಿಂತಲೂ ಹೆಚ್ಚಿನ ಪ್ರಯಾಣ ಸಮಯವನ್ನು ದಾಖಲಿಸಿದೆ.

ಬೆಂಗಳೂರು ಮಳೆ

ಬೆಂಗಳೂರು ಮಳೆ

  • Share this:

ಸಿಲಿಕಾನ್ ಸಿಟಿ ಎಂದೇ ಖ್ಯಾತವಾಗಿರುವ ಬೆಂಗಳೂರು (Bengaluru) ಎಷ್ಟೇ ಆಧುನೀಕತೆಯತ್ತ ಸಾಗುತ್ತಿದ್ದರೂ ಕೆಲವೊಂದು ಲೋಪದೋಷಗಳನ್ನು ಹೊಂದಿದೆ. ಟ್ರಾಫಿಕ್ ಸಮಸ್ಯೆಯಿಂದ (Traffic Problem) ಬಳಲುತ್ತಿರುವ ನಗರದಲ್ಲಿ ಮಳೆ ಬಂದಾಗಲಂತೂ ಸಮಸ್ಯೆ ಇನ್ನಷ್ಟು ಕ್ಲಿಷ್ಟವಾಗುತ್ತದೆ. ಟ್ರಾಫಿಕ್ ಸಮಸ್ಯೆಗೆ ಹೆಸರುವಾಸಿಯಾಗಿರುವ ಬೆಂಗಳೂರು ಇದೀಗ ಮಳೆಯಿಂದಾಗಿ (Rain) ಇನ್ನಷ್ಟು ಅಸ್ತವ್ಯಸ್ತಗೊಂಡಿರುವ ಪರಿಸ್ಥಿತಿಗೆ ಕಾರಣವಾಗಿದೆ. ಇದರಿಂದಾಗಿ ಆಗಸ್ಟ್ (August) ತಿಂಗಳ ಕೊನೆಯ ವಾರದಲ್ಲಿ ಬೆಂಗಳೂರಿಗರ ಪ್ರಯಾಣ (Travel) ಸಮಯವು ಸರಾಸರಿ 30 % ಏರಿಕೆ ಕಂಡಿದ್ದು ಕೆಲವೊಂದು ಕಡೆಗಳಲ್ಲಿ ಪ್ರಯಾಣ ಸಮಯವು ಮಳೆ (Rain) ಇಲ್ಲದ ದಿನಗಳಿಗೆ ಹೋಲಿಸಿದರೆ ಮಳೆ ಇರುವ ಸಮಯದಲ್ಲಿ 62% ಗಿಂತಲೂ ಹೆಚ್ಚಿನ ಪ್ರಯಾಣ ಸಮಯವನ್ನು ದಾಖಲಿಸಿದೆ.


ಮರಳಿ ಕಚೇರಿಗೆ ಮರಳುತ್ತಿರುವ ಉದ್ಯೋಗಿಗಳು:
ಹೆಚ್ಚುವರಿಯಾಗಿ ಮನೆಯಿಂದ ಕಚೇರಿಗೆ ತಲುಪುವ ಸಮಯವು ಫೆಬ್ರವರಿ ತಿಂಗಳಿನಲ್ಲಿ 42 ನಿಮಿಷಗಳಾಗಿದ್ದರೆ ನಿಧಾನವಾಗಿ ಅದು 60 ನಿಮಿಷಗಳಿಗೆ ಏರಿಕೆ ಕಂಡಿತು ಇದಕ್ಕೆ ಕಾರಣ ಹೆಚ್ಚಿನ ಉದ್ಯೋಗಿಗಳು ಕಚೇರಿಗೆ ಮರಳುತ್ತಿರುವುದು. ಅದಾಗ್ಯೂ SaaS-ಆಧಾರಿತ ಕಚೇರಿ ಪ್ರಯಾಣ ಪ್ಲ್ಯಾಟ್‌ಫಾರ್ಮ್ MoveInSync ಅಧ್ಯಯನ ನಡೆಸಿರುವಂತೆ ಆಗಸ್ಟ್ ಆರಂಭದಲ್ಲಿ ಇದು 75 ನಿಮಿಷಗಳಿಗಿಂತ ಅಧಿಕವಾಗಿದೆ ಎಂದಾಗಿದೆ.


ಇದನ್ನೂ ಓದಿ: Bengaluru News: ಬೆಂಗಳೂರಿಗರೇ ಎಚ್ಚರ ಎಚ್ಚರ! ಅಂಡರ್​ಪಾಸ್​ನಲ್ಲಿ ವಾಹನ ನಿಲ್ಲಿಸಿದ್ರೆ ದಂಡ ಗ್ಯಾರೆಂಟಿ

ಉದ್ಯೋಗಿಗಳು ಕಚೇರಿಗೆ ಮರಳುತ್ತಿರುವುದು ಜೊತೆಗೆ ಸಿಕ್ಕಾಪಟ್ಟೆಯಾಗಿ ಬರುತ್ತಿರುವ ಮಳೆಯ ಪ್ರಭಾವವನ್ನು ಇದು ಒಳಗೊಂಡಿದೆ. ನಗರದ ಹಲವು ಭಾಗಗಳಲ್ಲಿ ಹೆಚ್ಚುವರಿ ಮಳೆಯಾಗುತ್ತಿದ್ದು ಬೆಂಗಳೂರಿನ ನಿವಾಸಿಗಳು ಟ್ರಾಫಿಕ್‌ನ ಜಂಜಾಟದಲ್ಲಿ ಸಿಲುಕೊಂಡಿರುವುದರ ಜೊತೆಗೆ ಮಳೆಯ ಕಿರಿಕಿರಿಯನ್ನೂ ಅನುಭವಿಸುತ್ತಿದ್ದಾರೆ.


ಬೆಳಂದೂರು ಹಾಗೂ ವೈಟ್‌ಫೀಲ್ಡ್ ಭಾಗಗಳಲ್ಲಿ ಏರಿಕೆಯಾದ ಪ್ರಯಾಣ ಸಮಯ
ಅಧ್ಯಯನದ ಪ್ರಕಾರ ಬೆಳಂದೂರು ಭಾಗದಲ್ಲಿ ಮಳೆ ಬಂದಾಗ ಕಚೇರಿಯಿಂದ ಮನೆಗೆ ಹಿಂತಿರುಗುವ ಪ್ರಯಾಣ ಸಮಯವು 62% ಹೆಚ್ಚಳವನ್ನು ದಾಖಲಿಸಿದೆ. ವೈಟ್‌ಫೀಲ್ಡ್‌ ಭಾಗದಲ್ಲಿ ಪ್ರಯಾಣ ಸಮಯವು 48% ಏರಿಕೆಯನ್ನು ಕಂಡಿದ್ದು ಮಳೆಯ ಸಮಯದಲ್ಲಿ ಅತ್ಯಂತ ದೀರ್ಘವಾದ 102 ನಿಮಿಷಗಳ ಪ್ರಯಾಣ ಸಮಯವಾಗಿ ಇದು ಪರಿಗಣಿತವಾಗಿದೆ.


ಬೆಳ್ಳಂದೂರು ಪ್ರಯಾಣ 86 ನಿಮಿಷ!

ಇನ್ನು ಮಳೆಯ ಸಮಯದಲ್ಲಿ ಬೆಳಂದೂರಿಗೆ ಪ್ರಯಾಣ ಸಮಯವು 86 ನಿಮಿಷಗಳಾಗಿದೆ. ಮಳೆ ಇಲ್ಲದ ದಿನಗಳಲ್ಲಿ ಬೆಳಂದೂರು ಹಾಗೂ ವೈಟ್‌ಫೀಲ್ಡ್‌ಗೆ ಪ್ರಯಾಣ ಸಮಯವು ಕ್ರಮವಾಗಿ 53 ನಿಮಿಷ ಹಾಗೂ 69 ನಿಮಿಷಗಳಾಗಿದೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ.

ಕಾಡುಬೀಸನಹಳ್ಳಿ ಹಾಗೂ ಮಹದೇವಪುರದಲ್ಲಿ ಪರಿಸ್ಥಿತಿ ಹೇಗಿದೆ?
ಕಾಡುಬೀಸನಹಳ್ಳಿ ಹಾಗೂ ಮಹದೇವಪುರ ಮಳೆಯ ದಿನಗಳಲ್ಲಿ ಕ್ರಮವಾಗಿ 75 ನಿಮಿಷಗಳು ಹಾಗೂ 69 ನಿಮಿಷಗಳ ಪ್ರಯಾಣ ಸಮಯದೊಂದಿಗೆ 45% ಹಾಗೂ 33% ಏರಿಕೆಗೆ ಸಾಕ್ಷಿಯಾಗಿದೆ. ಬೆಂಗಳೂರಿನಲ್ಲಿ ಮಳೆಯು ಅತಿ ಹೆಚ್ಚಿನ ಪರಿಣಾಮವನ್ನು ಬೀರಿದ್ದರೂ ಸಂಜೆ 5 ರಿಂದ ರಾತ್ರಿ 8 ರ ನಡುವಿನ ಮಳೆಯ ಸಮಯದಲ್ಲಿ ನಗರದಾದ್ಯಂತ ಪ್ರಯಾಣದ ಸಮಯದಲ್ಲಿ ದಿನದ ವ್ಯತ್ಯಾಸಗಳನ್ನು ಅಧ್ಯಯನವು ವರದಿ ಮಾಡಿದೆ.


ಮಂಗಳವಾರ ಮತ್ತು ಬುಧವಾರದಂದು ಸರಾಸರಿ 20 ನಿಮಿಷಗಳ ಹೆಚ್ಚು ಪ್ರಯಾಣದ ಸಮಯವೆಂದು ದಾಖಲಿಸಲಾಗಿದೆ ಎಂದು ಅಧ್ಯಯನವು ಸೂಚಿಸುತ್ತದೆ ಅಂತೆಯೇ ಸೋಮವಾರವು ಕಚೇರಿ ಪ್ರಯಾಣಕ್ಕೆ ಸೂಕ್ತವಾದ ದಿನ ಎಂದೆನಿಸಿದೆ.


ಇದನ್ನೂ ಓದಿ:  Chamarajanagara: ಸ್ಮಶಾನ ಇಲ್ಲದೇ ಹೆಣ ಹೂಳಲು ಪಂಚಾಯ್ತಿ ಆವರಣದಲ್ಲಿ ಗುಂಡಿ ತೆಗೆದ ಗ್ರಾಮಸ್ಥರು

ಮೊದಲಿದ್ದ ಸ್ಥಿತಿಗೆ ಮರಳಿದ ಬೆಂಗಳೂರು
ಪ್ರಯಾಣ ಸಮಯದಲ್ಲಿ ಆಗುತ್ತಿರುವ ಏರಿಕೆಗಳನ್ನು ನೋಡಿದಾಗ ಬೆಂಗಳೂರಿಗೆ ಇದು ಅಶುಭಕರವಾಗಿದ್ದರೂ ಕೋವಿಡ್‌ನ ಪೂರ್ವ ಸ್ಥಿತಿಗೆ ನಗರವು ಮರಳುತ್ತಿದೆ ಎಂಬುದನ್ನು ಇದು ಸೂಚಿಸುತ್ತಿದೆ.


ಇದುವರೆಗೆ ವರ್ಕ್ ಫ್ರಮ್ ಹೋಮ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗಿಗಳು ಕಚೇರಿಗೆ ಮರಳುತ್ತಿದ್ದಾರೆ. ಇದರೊಂದಿಗೆ ಮಳೆಗಾಲದ ಸಮಯದಲ್ಲಿ ನಗರವು ಅತ್ಯಗತ್ಯ ಮೂಲಸೌಕರ್ಯಗಳ ಕೊರತೆಗಳನ್ನು ಎದುರಿಸುತ್ತಿದ್ದು ಅವುಗಳತ್ತ ಕೂಡ ಸಂಬಂಧಪಟ್ಟ ಅಧಿಕಾರಿಗಳು ಗಮನ ನೀಡಬೇಕಾಗಿದೆ.

Published by:Ashwini Prabhu
First published: