• Home
  • »
  • News
  • »
  • bengaluru-urban
  • »
  • Bus Fair Hike: ಈ ಊರುಗಳಿಗೆ ಬಸ್ ಟಿಕೆಟ್ ದರ ಹೆಚ್ಚಳ

Bus Fair Hike: ಈ ಊರುಗಳಿಗೆ ಬಸ್ ಟಿಕೆಟ್ ದರ ಹೆಚ್ಚಳ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಂಗಳೂರಿನಿಂದ ಉತ್ತರ ಕರ್ನಾಟಕ, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಿಗೆ ಪ್ರಯಾಣಿಸುವ ಜನರು ಅತಿ ಹೆಚ್ಚು ಬಸ್ ಟಿಕೆಟ್ ಪಾವತಿಸಬೇಕಾದ ಸಂದರ್ಭ ಎದುರಾಗಿದೆ.

  • News18 Kannada
  • Last Updated :
  • Bangalore [Bangalore], India
  • Share this:

    ಬೆಂಗಳೂರು: ಹಬ್ಬ ಬಂದ್ರೆ ಸಾಕು ಊರಿಗೆ ಹೊರಡೋ ಗಡಿಬಿಡಿ, ಸಂಭ್ರಮ. ಆದ್ರೆ ಬಸ್​ ಟಿಕೆಟ್ ದರ ಮಾತ್ರ ಕೇಳೋದೇ ಬೇಡ. ಖಾಸಗಿ ಬಸ್​ಗಳ (Private Bus Ticket Rate Hike)  ಟಿಕೆಟ್ ದರ ಆಕಾಶ ಮುಟ್ಟೋದಲ್ಲ, ಆಕಾಶವನ್ನೂ ಮೀರಿ ಮೇಲೇರುತ್ತವೆ. ಈ ವರ್ಷದ ದೀಪಾವಳಿಗೂ (Deepavali 2022) ಖಾಸಗಿ ಬಸ್​ಗಳ ಪ್ರಯಣ ದರ ಮಿತಿಮೀರಿದೆ ಎಂಬಷ್ಟರ ಮಟ್ಟಿಗೆ ಜೇಬಿಗೆ ದುಬಾರಿಯಾಗಿದೆ. ಸರ್ಕಾರ ಎಷ್ಟೆ ಬಿಗಿ ಹಿಡಿತದ ಭರವಸೆ ನೀಡಿದರೂ ಖಾಸಗಿ ಬಸ್ ಟಿಕೆಟ್ ದರ (Bus Ticket Price Hike) ಹೆಚ್ಚಳ ನಿಯಂತ್ರಣಕ್ಕೆ ಬಂದಿಲ್ಲ.  ಬೆಂಗಳೂರಿನಿಂದ ಉತ್ತರ ಕರ್ನಾಟಕ, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಿಗೆ ಪ್ರಯಾಣಿಸುವ ಜನರು ಅತಿ ಹೆಚ್ಚು ಬಸ್ ಟಿಕೆಟ್ ಪಾವತಿಸಬೇಕಾದ ಸಂದರ್ಭ ಎದುರಾಗಿದೆ.


    ಬೆಂಗಳೂರಿನಿಂದ ಯಾವೆಲ್ಲ ಊರಿಗೆ ಎಷ್ಟು ಟಿಕೆಟ್ ದರ ಇದೆ?
    ಬೆಂಗಳೂರು ನಗರದಿಂದ ಉತ್ತರ ಕನ್ನಡದ ಶಿರಸಿಗೆ ನೂರಾರು ಜನರು ಈ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಸುತ್ತಾರೆ. ಶಿರಸಿ ಅಥವಾ ಉತ್ತರ ಕನ್ನಡದ ಕಾರವಾರ, ಅಂಕೋಲಾ, ಯಲ್ಲಾಪುರದಂತಹ ಊರುಗಳಿಗೆ ಟಿಕೆಟ್ ಬೆಲೆ ನೋಡಿದರೆ ತಲೆ ಧಿಮ್ ಅನ್ನುತ್ತೆ! 1,400 ರೂ.ನಿಂದ ಶುರುವಾಗುವ ಖಾಸಗಿ ಬಸ್ ಟಿಕೆಟ್ ದರ 2000 ವನ್ನೂ ತಲುಪಿದೆ.


    ಇದನ್ನೂ ಓದಿ: Bengaluru News: ಆಟೋ ಪ್ರಯಾಣದ ದರ ಇಳಿಕೆ


    ಬೆಂಗಳೂರು ನಗರದಿಂದ ಹುಬ್ಬಳ್ಳಿಗೆ ಖಾಸಗಿ ಬಸ್ ಟಿಕೆಟ್ ದರ ರೂ. 2,500ವನ್ನು ತಲುಪಿದೆ! ಹೌದು ಈ ಇಷ್ಟೊಂದು ಹಣ ನೀಡಿಯಾದರೂ ಹಬ್ಬಕ್ಕೆ ಊರಿಗೆ ಹೋಗಿಬರಬೇಕು ಎಂಬ ಸ್ಥಿತಿ ಹುಬ್ಬಳ್ಳಿ ಭಾಗದ ನಾಗರಿಕರಿಗೆ ಎದುರಾಗಿದೆ. ಬೆಳಗಾವಿಗೆ 3,500 ರೂ.ವರೆಗೂ ಖಾಸಗಿ ಬಸ್ ಟಿಕೆಟ್ ದರವಿದೆ.


    ಇದನ್ನೂ ಓದಿ: SSLC ವಿದ್ಯಾರ್ಥಿಗಳಿಗೆ ಇಲ್ಲಿದೆ ಗುಡ್ ನ್ಯೂಸ್


    ಇನ್ನು ಬೆಂಗಳೂರಿನಿಂದ ಮಂಗಳೂರು ನಗರಕ್ಕೆ ಖಾಸಗಿ ಬಸ್ ಟಿಕೆಟ್ ದರ ನೋಡೋದಾದರೆ ಇಲ್ಲೂ 2 ಸಾವಿರ ತೆರಬೇಕಾದ ಪರಿಸ್ಥಿಯಿದೆ. ಹಲವು ಖಾಸಗಿ ಕಂಪನಿಗಳ ಬಸ್​ಗಳ ದರ 1,500 ವನ್ನು ಮೀರಿದೆ.


    ಖಾಸಗಿ ಬಸ್ ದರ ಹೆಚ್ಚಳಕ್ಕೆ ಪ್ರಯಾಣಿಕರಿಂದ ತೀವ್ರ ಆಕ್ರೋಶ
    ಖಾಸಗಿ ಬಸ್​ಗಳು ಹಬ್ಬ ಬಂದ್ರೆ ಸಾಕು, ಒಮ್ಮೆಲೆ ಹಿಗ್ಗಾಮುಗ್ಗಾ ಬಸ್ ಪ್ರಯಾಣ ದರ ಹೆಚ್ಚಳ ಮಾಡುತ್ತವೆ. ಎಲ್ಲರಿಗೂ ಕೆಎಸ್​ಆರ್​ಟಿಸಿ ಬಸ್ ಸೀಟುಗಳ ದೊರೆಯಲ್ಲ, ರೈಲು ಸೀಟುಗಳ ಸಹ ಸಿಗಲ್ಲ. ಹೀಗಾಗಿ ಅನಿವಾರ್ಯವಾಗಿ ಖಾಸಗಿ ಬಸ್​ಗಳನ್ನು ಆಶ್ರಯಿಸುವ ಪರಿಸ್ಥಿತಿ ಬಂದೊದಗುತ್ತದೆ. ಆದರೆ ಇದೇ ಅನಿವಾರ್ಯತೆಯನ್ನು ಖಾಸಗಿ ಬಸ್ ಸಂಸ್ಥೆಗಳು ದುರುಪಯೋಗಪಡಿಸಿಕೊಳ್ಳುವುದು ಸರಿಯಲ್ಲ. ಸರ್ಕಾರ ಖಾಸಗಿ ಬಸ್ ಸಂಸ್ಥೆಗಳಿಗೆ ಮೂಗುದಾರ ಹಾಕಬೇಕು ಎಂದು ಶಿರಸಿಯ ಅನಿಲ್ ಭಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


    ಬೆಂಗಳೂರು-ವಿಜಯವಾಡ ಕೇವಲ 6 ಗಂಟೆಯಲ್ಲಿ ಪ್ರಯಾಣಿಸಿ!
    ಬೆಂಗಳೂರು ಮತ್ತು ಆಂಧ್ರಪ್ರದೇಶದ ವಿಜಯವಾಡ (Bengaluru To Vijayawada Highway) ನಡುವೆ ಕಡಪ ಮೂಲಕ ಹಾದುಹೋಗುವ ಹೊಸ ಗ್ರೀನ್‌ಫೀಲ್ಡ್ ಪ್ರವೇಶ ಹೆದ್ದಾರಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಈ 342 ಕಿಲೋಮೀಟರ್ ಉದ್ದದ ಹೆದ್ದಾರಿಯು ದಕ್ಷಿಣ ಭಾರತದ (South India) ಎರಡು ನೆರೆಯ ರಾಜ್ಯಗಳ ನಡುವಿನ ಪ್ರಯಾಣದ ಸುಲಭತೆಯನ್ನು ಹೆಚ್ಚಿಸುತ್ತದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಬೆಂಗಳೂರು ಮತ್ತು ವಿಜಯವಾಡ ನಡುವಿನ ಹೊಸ ಹೆದ್ದಾರಿ ಕುರಿತು ಅಧಿಕೃತ ಘೋಷಣೆ ಮಾಡಿದ್ದಾರೆ. ಈ ಮೂಲಕ ಬೆಂಗಳೂರಿನಿಂದ (Bengaluru News) ವಿಜಯವಾಡ ಪ್ರಯಾಣಿಕರಿಗೆ ಶುಭಸುದ್ದಿ ನೀಡಿದ್ದಾರೆ.

    Published by:ಗುರುಗಣೇಶ ಡಬ್ಗುಳಿ
    First published: