ಬೆಂಗಳೂರು: ರಸ್ತೆಗಳಲ್ಲಿ ಓಡಾಡುವುದು ಸಹ ದುಬಾರಿಯಾದ ಕಾಲವಿದು. ಬೆಂಗಳೂರಿನ (Bengaluru News) ಜನರಿಗಂತೂ ಜನಜೀವನ ತುಟ್ಟಿಯೋ ತುಟ್ಟಿ. ಇದೀಗ ಇಂತಹುದೇ ಇನ್ನೊಂದು ದುಬಾರಿ ಸುದ್ದಿ ಹೊರಬಿದ್ದಿದೆ. ಬೆಂಗಳೂರಿನ ನೈಸ್ ರಸ್ತೆಯನ್ನು (Bengaluru NICE Road) ರೂಪಿಸುವ ಪೆರಿಫೆರಲ್ ಮತ್ತು ಲಿಂಕ್ ರಸ್ತೆಗಳ ಟೋಲ್ ಜುಲೈ 1 ರಿಂದ ಹೆಚ್ಚಾಗಲಿದೆ. ಈಕುರಿತು ನಂದಿ ಎಕನಾಮಿಕ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್ ಬುಧವಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಐದು ವರ್ಷಗಳಲ್ಲಿ ಟೋಲ್‌ನಲ್ಲಿ (NICE Road Toll Price Hike) ಇದು ಮೊದಲ ಪರಿಷ್ಕರಣೆಯಾಗಿದೆ ಎಂದು ಸಹ ಕಂಪನಿ ಸ್ಪಷ್ಟನೆ ನೀಡಿದೆ. ಹೆಚ್ಚುತ್ತಿರುವ ವೆಚ್ಚಗಳಿಂದ ಇದು ಅಗತ್ಯವಾಗಿದೆ ಎಂದು ಕಂಪನಿ ಹೇಳಿದೆ. ಪರಿಷ್ಕರಣೆಗೊಂಡಿರುವ ಟೋಲ್ ದರಗಳ ವಿವರ ಇಲ್ಲಿದೆ.
ರಸ್ತೆ | ಕಿ.ಮೀ ವ್ಯಾಪ್ತಿ | ಕಾರು(ರೂಪಾಯಿಗಳಲ್ಲಿ) | ಬಸ್(ರೂಪಾಯಿಗಳಲ್ಲಿ) | ಟ್ರಕ್(ರೂಪಾಯಿಗಳಲ್ಲಿ) | LCV(ರೂಪಾಯಿಗಳಲ್ಲಿ) | MAX (Per Axle) | Two Wheelers(ರೂಪಾಯಿಗಳಲ್ಲಿ) |
ಹೊಸೂರಿನಿಂದ ಬನ್ನೇರುಘಟ್ಟ ರಸ್ತೆ | 8.74 | 45 | 125 | 85 | 45 | 90 | 20 |
ಬನ್ನೇರುಘಟ್ಟದಿಂದ ಕನಕಪುರ ರಸ್ತೆ | 6.79 | 35 | 100 | 65 | 35 | 70 | 12 |
ಕನಕಪುರ ರಸ್ತೆಯಿಂದ ಕ್ಲೋವರ್ ಲೀಫ್ ಜಂಕ್ಷನ್‌ವರೆಗೆ | 4.36 | 25 | 65 | 40 | 25 | 40 | 8 |
ಮೈಸೂರು ರಸ್ತೆಯಿಂದ ಮಾಗಡಿ ರಸ್ತೆ | 9.55 | 45 | 135 | 90 | 55 | 95 | 20 |
ಮಾಗಡಿ ರಸ್ತೆಯಿಂದ ತುಮಕೂರು ರಸ್ತೆ | 7.48 | 40 | 105 | 70 | 40 | 75 | 12 |
ಲಿಂಕ್ ರಸ್ತೆ | 81 | 50 | 130 | 90 | 50 | 105 | 18 |
ಎಲೆಕ್ಟ್ರಾನಿಕ್ಸ್ ಸಿಟಿ ಮೇಲ್ಸೇತುವೆ ಮತ್ತು ಅತ್ತಿಬೆಲೆ ಟೋಲ್ ಬೂತ್ ಶುಲ್ಕ ಹೆಚ್ಚಳ
ಜುಲೈ 1 ರಿಂದ ಎಲೆಕ್ಟ್ರಾನಿಕ್ಸ್ ಸಿಟಿ ಮೇಲ್ಸೇತುವೆ ಮತ್ತು ಅತ್ತಿಬೆಲೆ ಟೋಲ್ ಬೂತ್‌ನಲ್ಲಿ ಶುಲ್ಕವನ್ನು ಹೆಚ್ಚಿಸಲಾಗಿದೆ. ಇದಲ್ಲದೆ ನೈಸ್ ರಸ್ತೆಯಲ್ಲಿ ಪ್ರತಿ ಕಿಲೋಮೀಟರ್ ಟೋಲ್ ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇಗಿಂತ ಕಡಿಮೆ ಇರುತ್ತದೆ ಎಂದು ಅದು ಹೇಳಿದೆ.
ಇಲ್ಲೆಲ್ಲ ಸಂಪರ್ಕ ಕಲ್ಪಿಸುತ್ತದೆ ನೈಸ್ ರಸ್ತೆ
NICE ರಸ್ತೆಯು ಬೆಂಗಳೂರು ಮತ್ತು ಮೈಸೂರನ್ನು ಸಂಪರ್ಕಿಸುವ 111 ಕಿ. ಮೀ ಉದ್ದದ ರಸ್ತೆಯಾಗಿದೆ. ಬೆಂಗಳೂರಿನೊಳಗೆ, ಇದು ಹೊಸೂರು ರಸ್ತೆಯಿಂದ ತುಮಕೂರು ರಸ್ತೆಗೆ ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆ ಮೂಲಕ 41 ಕಿಲೋಮೀಟರ್‌ಗಳವರೆಗೆ ಅರೆ-ಪೆರಿಫೆರಲ್ ರಸ್ತೆಯಲ್ಲಿ ಸಂಪರ್ಕ ಕಲ್ಪಿಸುತ್ತದೆ. ನೈಸ್ ರಸ್ತೆ, ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ ಮತ್ತು ಏರ್‌ಪೋರ್ಟ್ ರಸ್ತೆ ಬೆಂಗಳೂರಿನ ಮೂರು ಸುಂಕದ ಮಾರ್ಗಗಳಾಗಿವೆ.
ಇದನ್ನೂ ಓದಿ: Bengaluru Traffic: ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಸೋಷಿಯಲ್ ಮೀಡಿಯಾದಲ್ಲಿ ಪರಿಹಾರ! ನೀವೂ ಹೀಗೆ ಮಾಡಿ
ನಂದಿ ಎಕನಾಮಿಕ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್ ಕಂಪನಿಯು ಕರ್ನಾಟಕ ಮಕ್ಕಳ ಪಕ್ಷ ಎಂಬ ತಮ್ಮದೇ ಆದ ಪಕ್ಷವನ್ನು ಸ್ಥಾಪಿಸಿದ ಉದ್ಯಮಿ ಅಶೋಕ್ ಖೇಣಿಯ ಅವರದ್ದಾಗಿದೆ. ಅಶೋಕ್ ಖೇಣಿ 2013 ರಿಂದ 2018 ರವರೆಗೆ ಬೀದರ್ ದಕ್ಷಿಣ ಶಾಸಕರಾಗಿಯೂ ಆಯ್ಕೆಯಾಗಿದ್ದರು.
ಇದನ್ನೂ ಓದಿ: Bengaluru Traffic Police: ಟ್ರಾಫಿಕ್ ಪೊಲೀಸರು ಈ ಸಂದರ್ಭಗಳಲ್ಲಿ ದಂಡ ಹಾಕುವಂತಿಲ್ಲ! ವಾಹನ ತಡೆಯುವಂತಿಲ್ಲ!
ಫ್ಲೈಓವರ್ ಶುಲ್ಕ ಹೆಚ್ಚಳ
ಎಲೆಕ್ಟ್ರಾನಿಕ್ಸ್ ಸಿಟಿ ಮೇಲ್ಸೇತುವೆಯನ್ನು ನಿರ್ವಹಿಸುವ ಬೆಂಗಳೂರು ಎಲಿವೇಟೆಡ್ ಟೋಲ್ವೇ ಪ್ರೈವೇಟ್ ಲಿಮಿಟೆಡ್ ಕೂಡ ಜುಲೈ 1 ರಿಂದ ಜಾರಿಗೆ ಬರುವಂತೆ ಬಳಕೆದಾರರ ಶುಲ್ಕವನ್ನು ಹೆಚ್ಚಿಸಿದೆ. NICE ರಸ್ತೆಯ ಅಧಿಕಾರಿಗಳ ಪ್ರಕಾರ, ಅವರ ಪ್ರತಿ ಕಿಲೋಮೀಟರ್ ಬಳಕೆದಾರರ ಶುಲ್ಕವು ಲಘು ವಾಣಿಜ್ಯ ವಾಹನಗಳು ಮತ್ತು ಟ್ರಕ್‌ಗಳಿಗೆ ಕಡಿಮೆ ಆಗಿದೆ. ನಗರದ ಮೂರು ಸುಂಕದ ರಸ್ತೆಗಳು ಮತ್ತು ಕಾರುಗಳು/ಜೀಪ್‌ಗಳು/ವ್ಯಾನ್‌ಗಳಿಗೆ ಎರಡನೇ ಅತಿ ಕಡಿಮೆ ಟೋಲ್ ಸಂಗ್ರಹಿಸಲಾಗುತ್ತದೆಯಂತೆ. ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈಓವರ್ ಅತಿ ಹೆಚ್ಚು ಟೋಲ್ ವಿಧಿಸುತ್ತದೆ ಎಂದು NICE ರಸ್ತೆ ಅಧಿಕಾರಿಗಳು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ