ಬೆಂಗಳೂರು: ಗಗನಚುಂಬಿ ತೇರುಗಳನ್ನು ಕಣ್ತುಂಬಿಕೊಳ್ಳುತ್ತಿರುವ ಲಕ್ಷಾಂತರ ಭಕ್ತರು, ಸಾವಿರಾರು ರಾಸುಗಳು, ಜನರ ಜಾತ್ರೆಯ ಸಂಭ್ರಮದಲ್ಲಿ (Jatra Celebration) ಮುಳುಗೆದ್ದಿತು ಬೆಂಗಳೂರು ಹೊರವಲಯ (Bengaluru News) ಆನೇಕಲ್ ತಾಲ್ಲೂಕಿನ (Anekal) ಹುಸ್ಕೂರು ಗ್ರಾಮದ ಪುರಾಣ ಪ್ರಸಿದ್ಧ ಮದ್ದೂರಮ್ಮ ದೇವಿ (Madduramma Devi Jatra)ಜಾತ್ರೆ!
ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ತೇರುಗಳು ವಿಶೇಷ ಆಕರ್ಷಣೆ. ಅನಾದಿ ಕಾಲದಿಂದಲೂ ಸುತ್ತಮುತ್ತಲ ಗ್ರಾಮಗಳಿಂದ ಹುಸ್ಕೂರು ಮದ್ದೂರಮ್ಮ ಜಾತ್ರೆಯಂದು ತೇರುಗಳನ್ನು ಹೊಲಗದ್ದೆ, ಹಳ್ಳ-ಕೊಳ್ಳ ಎನ್ನದೆ ರಾಸುಗಳ ಮೂಲಕ ಎಳೆದು ತರಲಾಗುತ್ತಿತ್ತು.
100ಕ್ಕೂ ಹೆಚ್ಚು ತೇರುಗಳು ಬರುತ್ತಿದ್ವಂತೆ!
ಹತ್ತಾರು ವರ್ಷಗಳ ಹಿಂದೆ 100 ಕ್ಕೂ ಹೆಚ್ಚು ಗ್ರಾಮಗಳ ತೇರುಗಳು ಇಲ್ಲಿಗೆ ಆಗಮಿಸುತ್ತಿದ್ದವಂತೆ. ಆದರೆ ಕಳೆದ ಹಲವು ವರ್ಷಗಳಿಂದ ತೇರುಗಳ ಸಂಖ್ಯೆ ಇಳಿಮುಖವಾಗಿದ್ದು ಈ ಬಾರಿ 3 ತೇರುಗಳು ಮಾತ್ರ ಆಗಮಿಸಿದ್ದವು.
ಇದನ್ನೂ ಓದಿ: Bengaluru To Mysuru: ಬೆಂಗಳೂರು-ಮೈಸೂರು ಪ್ರಯಾಣಕ್ಕೆ ಎಕ್ಸ್ಪ್ರೆಸ್ವೇ ಒಂದೇ ಅಲ್ಲ, ಈ ಮಾರ್ಗವೂ ಇದೆ!
140 ಅಡಿ ಎತ್ತರದ ತೇರಿನ ಆಕರ್ಷಣೆ!
ಈ ತೇರುಗಳನ್ನು ರಾಸುಗಳ ಮೂಲಕ ಎಳೆದು ತಂದು ಮದ್ದೂರಮ್ಮನಿಗೆ ಪೂಜೆ ಸಲ್ಲಿಸಲಾಗುತ್ತದೆ. ಈ ಬಾರಿ ದೊಡ್ಡನಾಗಮಂಗಲ ತೇರು ಸುಮಾರು 140 ಅಡಿ ಎತ್ತರವಿತ್ತು. ಇದು ಅತಿ ಎತ್ತರದ ತೇರು ಎಂಬ ಖ್ಯಾತಿ ಗಳಿಸಿರುವುದು ಹೆಮ್ಮೆಯ ವಿಷಯ ಎಂದು ದೊಡ್ಡನಾಗಮಂಗಲ ಗ್ರಾಮದ ರಾಜೇಶ್ ರೆಡ್ಡಿ ತಿಳಿಸಿದರು.
ಇದನ್ನೂ ಓದಿ: ಯುಗಾದಿ ಗಿಫ್ಟ್! ಚಿಕ್ಕಬಳ್ಳಾಪುರಕ್ಕೆ BMTC ಸೇವೆ ಆರಂಭ
ಒಟ್ಟಾರೆ ಹುಸ್ಕೂರು ಮದ್ದೂರಮ್ಮ ಜಾತ್ರೆಗೆ ಆಗಮಿಸುವ ಭಕ್ತರಿಗೆ ಹರಕೆ ಹೊತ್ತವರು ಅರವಟಿಕೆ ನೀಡಿ ಸತ್ಕಾರ ಮಾಡುವ ಮೂಲಕ ಜಾತಿ ಮತ ಭೇದ ಮರೆತು ಎಲ್ಲರು ಒಂದಾಗಿ ಜಾತ್ರೆಯನ್ನು ಹಬ್ಬದ ರೀತಿಯಲ್ಲಿ ಆಚರಿಸಿದರು.
ವರದಿ: ಚಂದ್ರು, ನ್ಯೂಸ್ 18 ಆನೇಕಲ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ