• Home
  • »
  • News
  • »
  • bengaluru-urban
  • »
  • Bengaluru Traffic: ಬೆಂಗಳೂರಿನ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ; ಬದಲಿ ಮಾರ್ಗ ಇಲ್ಲಿದೆ

Bengaluru Traffic: ಬೆಂಗಳೂರಿನ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ; ಬದಲಿ ಮಾರ್ಗ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Bengaluru News: ಬೆಂಗಳೂರಿನ ಈ ರಸ್ತೆಯಲ್ಲಿ ಪ್ರಯಾಣಿಸುವ ಸಾರ್ವಜನಿಕರು ಬದಲಿ ಮಾರ್ಗ ಬಳಸುವಂತೆ ಸೂಚನೆ ನೀಡಲಾಗಿದೆ.

  • News18 Kannada
  • Last Updated :
  • Bangalore [Bangalore], India
  • Share this:

    ಬೆಂಗಳೂರು: ವಿಧಾನಸೌಧದಲ್ಲಿ ಕರ್ನಾಟಕ ರಾಜ್ಯೋತ್ಸವ (Karnataka Rajyotsava)  ಆಚರಣೆ ಮತ್ತು ಪುನೀತ್ ರಾಜಕುಮಾರ್ ಅವರಿಗೆ (Puneeth Rajkumar) ಮರಣೋತ್ತರ ಕರ್ನಾಟಕ ರತ್ನ (Karnataka Ratna) ಪ್ರಶಸ್ತಿ ಪ್ರದಾನ ಹಿನ್ನೆಲೆಯಲ್ಲಿ ವಿಧಾನಸೌಧ ಸುತ್ತಮುತ್ತ ಬಿಗಿ ಪೊಲೀಸ್ ಸರ್ಪಗಾವಲು ಕೈಗೊಳ್ಳಲಾಗಿದೆ. ಸಾರ್ವಜನಿಕರು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸಾಧ್ಯತೆಯಿದೆ. ಹೀಗಾಗಿ ವಿಧಾನಸೌಧದ ಮುಂಭಾಗದ ರಸ್ತೆಯಲ್ಲಿ (Vdhana Soudha Road) ಸಂಚಾರ ನಿರ್ಬಂಧಿಸಲು ನಿರ್ಧರಿಸಲಾಗಿದೆ. ವಿಧಾನಸೌಧದ ಮುಂಭಾಗದ ರಸ್ತೆಯಲ್ಲಿ ಸಾರ್ವಜನಿಕರಿಗೆ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಹೀಗಾಗಿ ಬೆಂಗಳೂರಿನ ಈ ರಸ್ತೆಯಲ್ಲಿ ಪ್ರಯಾಣಿಸುವ ಸಾರ್ವಜನಿಕರು ಬದಲಿ ಮಾರ್ಗ ಬಳಸುವಂತೆ ಸೂಚನೆ ನೀಡಲಾಗಿದೆ.


    ನಾಳೆ 1 ಗಂಟೆಯಿಂದ ವಿಧಾನಸೌಧದ ಮುಂಭಾಗದ ರಸ್ತೆ ಬಂದ್ ಆಗಲಿರುವ ಕಾರಣ ನಾಳೆ ಮಧ್ಯಾಹ್ನ ವಿಧಾನಸೌಧ ಸುತ್ತಮುತ್ತ ಟ್ರಾಫಿಕ್ ಜಾಮ್ ಸಾಧ್ಯತೆ ಆಗುವ ಸಾಧ್ಯತೆಯಿದೆ. ಹೀಗಾಗಿ ಆದಷ್ಟು ಮೆಟ್ರೋ ಹಾಗೂ ಬಿಎಂಟಿಸಿ ಬಸ್ ಬಳಸುವಂತೆ ಬೆಂಗಳೂರು ಸಂಚಾರಿ ಪೊಲೀಸರು ಸೂಚನೆ ನೀಡಿದ್ದಾರೆ.


    ಕೆ.ಆರ್ ಸರ್ಕಲ್​ನಿಂದ ತಿಮ್ಮಯ್ಯ ಸರ್ಕಲ್​ವರೆಗೂ ರಸ್ತೆ ಬಂದ್
    ಕೆ.ಆರ್ ಸರ್ಕಲ್​ನಿಂದ ತಿಮ್ಮಯ್ಯ ಸರ್ಕಲ್​ವರೆಗೂ ರಸ್ತೆ ಬಂದ್ ಇರಲಿದೆ. ಹೀಗಾಗಿ  ಕೆ.ಆರ್ ಸರ್ಕಲ್​ನಿಂದ ತಿಮ್ಮಯ್ಯ ಸರ್ಕಲ್​ಗೆ ಪ್ರಯಾಣ ಮಾಡುವವರು ಮೆಟ್ರೋ ಅಥವಾ ಬಿಎಂಟಿಸಿ ಬಳಸುವಂತೆ ಸೂಚನೆ ನೀಡಲಾಗಿದೆ.


    ಕರ್ನಾಟಕ ರಾಜ್ಯೋತ್ಸವಕ್ಕೆ ನಮ್ಮ ಮೆಟ್ರೋ ಕೊಡುಗೆ
    ಕರ್ನಾಟಕ ರಾಜ್ಯೋತ್ಸವಕ್ಕೆ ಬೆಂಗಳೂರಿನ ನಮ್ಮ ಮೆಟ್ರೋ  ಭರ್ಜರಿ ಕೊಡುಗೆ ಘೋಷಿಸಿದೆ. ನಾಳೆಯಿಂದ ಅಂದರೆ, ನವೆಂಬರ್ 1ರಿಂದ ಕ್ಯೂ ಆರ್ ಕೋಡ್ ಮೂಲಕ ಎಂಟ್ರಿ ಎಕ್ಸಿಟ್ ಅವಕಾಶ ನೀಡುವ ಸೌಲಭ್ಯವನ್ನು ಆರಂಭಿಸಲಿದೆ. ಪ್ರಯಾಣಕರು ನವೆಂಬರ್ 1 ರಿಂದ ತಮ್ಮ ಮೊಬೈಲ್​ಗಳಲ್ಲೇ ಟಿಕೆಟ್ ಖರೀದಿಸಿ ಪ್ರಯಾಣಕ್ಕೆ ಅವಕಾಶವನ್ನು ನಮ್ಮ ಮೆಟ್ರೋ (Namma Metro) ಒದಗಿಸಲಿದೆ. ಇದರಿಂದ ಪ್ರಯಾಣಿಕರ ಸಮಯ ಉಳಿತಾಯವಾಗಲಿದೆ. ಅಲ್ಲದೇ ಚಿಲ್ಲರೆ ಸಮಸ್ಯೆ ದೂರಮಾಡೋ ಉದ್ದೇಶದಿಂದ ಹೊಸ ಯೋಜನೆಯನ್ನು ಆರಂಭಿಸಲಾಗಿದೆ.


    ಇದನ್ನೂ ಓದಿ: Masjid Tour: ಮಸೀದಿ ಒಳಗೆ ಏನೆಲ್ಲಾ ಇರುತ್ತೆ? ಇಲ್ಲಿ ಸಿಗುತ್ತೆ ಉತ್ತರ


    ಮೊಬೈಲ್​ನಲ್ಲೇ ಎಂಟ್ರಿ ಗೇಟ್​ನಲ್ಲಿ ಸ್ಕ್ಯಾನ್ ಮಾಡಿ ಪ್ರವೇಶ ಪಡೆಯಬಹುದಾಗಿದೆ ಎಂದು BMRCL ಅಧಿಕೃತ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.


    ಮೊಬೈಲ್​ನಲ್ಲೇ ಟಿಕೆಟ್ ಖರೀದಿ ಮಾಡುವುದು ಹೇಗೆ?
    BMRCL ಪ್ರಯಾಣಿಕರು ಒಂದೇ ಪ್ರಯಾಣದ QR ಟಿಕೆಟ್‌ಗಳನ್ನು ನಮ್ಮ ಮೆಟ್ರೋ ಮೊಬೈಲ್ ಅಪ್ಲಿಕೇಶನ್ ಅಥವಾ WhatsApp ಮೂಲಕ ಖರೀದಿಸಬಹುದು. ಆಂಡ್ರಾಯ್ಡ್ ಮೊಬೈಲ್ ಫೋನ್ ಬಳಸುವವರು ಪ್ಲೇಸ್ಟೋರ್‌ನಲ್ಲಿ ನಮ್ಮ ಮೆಟ್ರೋ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಟಿಕೆಟ್ ಖರೀದಿಸಲು ನೋಂದಾಯಿಸಿಕೊಳ್ಳಬಹುದು ಎಂದು ಮಾಹಿತಿ ನೀಡಲಾಗಿದೆ.


    ದಾಖಲೆ ನಿರ್ಮಿಸಿದ ಬೆಂಗಳೂರು ನಮ್ಮ ಮೆಟ್ರೋ
    ವಾಟ್ಸಾಪ್‌ನಲ್ಲಿ ಎಂಡ್ ಟು ಎಂಡ್ ಟಿಕೆಟಿಂಗ್ ವ್ಯವಸ್ಥೆಯನ್ನು ಪರಿಚಯಿಸಿದ ವಿಶ್ವದ ಮೊದಲ ಸಾರಿಗೆ ಸೇವೆ ನಮ್ಮ ಮೆಟ್ರೋ ಎಂದು ಬಿಎಂಆರ್‌ಸಿಎಲ್ ಹೇಳಿಕೊಂಡಿದೆ.


    ಇದನ್ನೂ ಓದಿ: KSRTC ಬಸ್​ಗಳಲ್ಲಿ ಇಷ್ಟು ಕೆಜಿ ಲಗೇಜ್​ ಸಾಗಣೆ ಉಚಿತ! ನಾಯಿ ಸಾಗಣೆಗೆ ಶುಲ್ಕವೆಷ್ಟು?


    ಶೀಘ್ರದಲ್ಲೇ ಶುರುವಾಗಲಿದೆ ಮೆಟ್ರೋ ಹಳದಿ ಮಾರ್ಗ
    ನಮ್ಮ ಮೆಟ್ರೋ ಆರ್‌.ವಿ.ರಸ್ತೆ- ಬೊಮ್ಮಸಂದ್ರ ಮಾರ್ಗದಲ್ಲಿ ಬೆಂಗಳೂರಿನ ನಾಗರಿಕರಿಗೆ ಶುಭಸುದ್ದಿಯೊಂದು ಹೊರಬಿದ್ದಿದೆ. ನಮ್ಮ ಮೆಟ್ರೋ ಹಳದಿ ಮಾರ್ಗವು ಆರ್‌.ವಿ.ರಸ್ತೆ- ಬೊಮ್ಮಸಂದ್ರಕ್ಕೆ ಸಂಚಾರ ಒದಗಿಸಲಿದೆ. ಈ ಮಾರ್ಗದ ಕೆಲಸ ಕಾಮಗಾರಿಗಳೂ ಬಹುತೇಕ ಮುಕ್ತಾಯಗೊಂಡಿದ್ದು ಸದ್ಯದಲ್ಲೇ ಸಾರ್ವಜನಿಕರ ಅನುಕೂಲಕ್ಕಾಗಿ ಸಂಚಾರ ಆರಂಭವಾಗಲಿದೆ.


    ಎಲ್ಲೆಲ್ಲಿ ನಿಲ್ಲಲಿದೆ ಹಳದಿ ಬಣ್ಣದ ಮೆಟ್ರೋ?
    ಆರ್‌.ವಿ.ರಸ್ತೆ, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್‌, ಸೆಂಟ್ರಲ್‌ ಸಿಲ್ಕ್ ಬೋರ್ಡ್‌, ಬೊಮ್ಮನಹಳ್ಳಿ, ಹೊಂಗಸಂದ್ರ, ಕೂಡ್ಲುಗೇಟ್‌, ಸಿಂಗಸಂದ್ರ, ಹೊಸ ರಸ್ತೆ, ಬೆರಟೇನ ಅಗ್ರಹಾರ, ಎಲೆಕ್ಟ್ರಾನಿಕ್‌ ಸಿಟಿ, ಇನ್ಫೋಸಿಸ್‌ ಫೌಂಡೇಶನ್‌ ಕೋನಪ್ಪನ ಅಗ್ರಹಾರ, ಹುಸ್ಕೂರು ರಸ್ತೆ, ಹೆಬ್ಬಗೋಡಿ ಮತ್ತು ಬೊಮ್ಮಸಂದ್ರ- ಇವು ಹಳದಿ ಬಣ್ಣದ ಮೆಟ್ರೋ ರೈಲು ನಿಲ್ಲುವ ನಿಲ್ದಾಣಗಳಾಗಿವೆ.

    Published by:ಗುರುಗಣೇಶ ಡಬ್ಗುಳಿ
    First published: