Bengaluru: ಬೆಂಗಳೂರಿನ ಗೊಂಬೆಗಳ ಲೋಕ! ನೋಡಿ ಬೆಕ್ಕಸ ಬೆರಗಾಗಿ

Bengaluru Dasara Festival: ದಸರಾ ಹಬ್ಬ ಹತ್ತಿರ ಬರುತ್ತಿದ್ದಂತೆ ರಾಜ್ಯ ರಾಜಧಾನಿ ಕಲರ್ ಫುಲ್ ಆಗುತ್ತಿದೆ. ಗೊಂಬೆಗಳ ರಾಶಿ ನಗರದಲ್ಲಿ ಕಂಡು ಬರುತ್ತಿದೆ. ಗೊಂಬೆಗಳ ಖರೀದಿಯೂ ಜೋರಾಗಿದೆ.

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

  • Share this:
    ಬೆಂಗಳೂರು: ಈ ಗೊಂದೆ ಚಂದವೋ ಆ ಗೊಂಬೆ ಚಂದವೋ.. ಒಂದಕ್ಕಿಂತ ಒಂದು ಕಣ್ಣಿಗೆ ಹಿತ, ಮನಕ್ಕೆ ಮುದ ಅನಿಸೋವಂಥಾ ಗೊಂಬೆಗಳು. ನೋಡಿದರೆ ಭಕ್ತಿ ಮೂಡಿಸುವ ದೇವಿಯರು, ಪುಷ್ಪಕ ವಿಮಾನದಲ್ಲಿ ಕುಳಿತಿರೋ ಶ್ರೀರಾಮನ ಪರಿವಾರ, ಋಷಿಮುನಿಗಳು, ಮುದ್ದು ಮುದ್ದು ಕೃಷ್ಣ, ಗಿಳಿ.. ಇನ್ನೂ ಏನೇನೋ. ಈ ಗೊಂಬೆಗಳ ಲೋಕದ ಒಳಹೊಕ್ತಿದ್ದಂತೆ ಒಂಥರಾ ಭೂಮಿ ಬಿಟ್ಟು ಬೇರೆಲ್ಲೋ ಹೋದಂತೆ ಅನುಭವ ಆಗ್ತಿತ್ತು. ಬೆಂಗಳೂರಲ್ಲಂತೂ (Bengaluru) ಈ ಸಂಭ್ರಮ ಮುಗಿಲು ಮುಟ್ಟಿದ ಥರ ಅನಿಸುವಂತಿತ್ತು.

    ಹೌದು, ಇನ್ನೇನು ದಸರಾ ಹಬ್ಬಕ್ಕೆ ಹೆಚ್ಚು ದಿನ ಇಲ್ಲ. ಹೀಗಾಗಿ ಗೊಂಬೆಗಳ ತಯಾರಿ, ಮಾರಾಟ ಜೋರಾಗಿ ನಡೀತಿದೆ.

    ಇದನ್ನೂ ಓದಿ: Kadubu Recipe: ಸಿಹಿಸಿಹಿಯಾದ ಉತ್ತರ ಕನ್ನಡ ಸ್ಪೆಷಲ್ ಕಡುಬು ಮಾಡಿ! ಇಲ್ಲಿದೆ ನೋಡಿ ರೆಸಿಪಿ

    ಎಲ್ಲಾ ಗೊಂಬೆಗಳನ್ನು ಒಟ್ಟಿಗೆ ಒಯ್ಯೋ ಸಂಭ್ರಮ
    ಗೊಂಬೆಗಳ ಮಾರುಕಟ್ಟೆಗೆ ಬಂದ ಗ್ರಾಹಕರಲ್ಲಿ ಬಣ್ಣಬಣ್ಣದ ಗೊಂಬೆಗಳನ್ನು ಕಂಡು ಎಲ್ಲಾ ಗೊಂಬೆಗಳನ್ನು ಒಟ್ಟಿಗೆ ಮನೆಗೆ ಒಯ್ಯೋ ಉತ್ಸಾಹ ಎದ್ದು ಕಾಣ್ತಿತ್ತು.

    ಇದನ್ನೂ ಓದಿ: Sirsi Marikamba Temple Buffalo: ಮಾರಿಕಾಂಬೆಯ ಪಟ್ಟದ ಕೋಣ! ಇದು ಬಾಹುಬಲಿಗಿಂತ ಅಜಾನುಬಾಹು!

    ದೇವರು ಗೊಂಬೆಯಲ್ಲೂ ನೆಲೆಸಿರ್ತಾನೆ ಎಂದು ಹೇಳೋ ಥರ ಇತ್ತು ಈ ಗೊಂಬೆ ಲೋಕ.
    Published by:ಗುರುಗಣೇಶ ಡಬ್ಗುಳಿ
    First published: