• Home
  • »
  • News
  • »
  • bengaluru-urban
  • »
  • SSLC ವಿದ್ಯಾರ್ಥಿಗಳಿಗೆ ಇಲ್ಲಿದೆ ಗುಡ್ ನ್ಯೂಸ್

SSLC ವಿದ್ಯಾರ್ಥಿಗಳಿಗೆ ಇಲ್ಲಿದೆ ಗುಡ್ ನ್ಯೂಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಲವಾರು ವಿದ್ಯಾರ್ಥಿಗಳು ಹೆಚ್ಚಿನ ತರಬೇತಿಗಾಗಿ ಖಾಸಗಿಯಾಗಿ ಕೋಚಿಂಗ್ ಅಥವಾ ಟ್ಯೂಶನ್ ಕ್ಲಾಸ್​ಗಳಿಗೆ ತೆರಳಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಆದರೆ ಬಡವರ್ಗದ ಮಕ್ಕಳಿಗಾಗಿ ಇದ್ಯಾವುದೂ ಸಾಧ್ಯವಾಗದು. ಆದರೆ ಇಲ್ಲೊಂದು ಉತ್ತಮ ಅವಕಾಶ ತೆರೆದುಕೊಂಡಿದೆ.

  • News18 Kannada
  • Last Updated :
  • Bangalore [Bangalore], India
  • Share this:

    ಬೆಂಗಳೂರು: 2022-23 ನೇ ಸಾಲಿನ SSLC ಪರೀಕ್ಷೆ ಕೆಲವೇ ತಿಂಗಳಿದ್ದು ಪರೀಕ್ಷೆ ತಯಾರಿಗಳು ಭರದಿಂದ ಸಾಗಿದೆ. ಶಾಲೆಗಳಲ್ಲಂತೂ ಉತ್ತಮ ಅಂಕ ಪಡೆಯುವುದಕ್ಕಾಗಿ ಹೆಚ್ಚುವರಿ ತರಗತಿ ತೆಗೆದುಕೊಳ್ಳಲಾಗುತ್ತಿದೆ. ದಸರಾ ನಂತರ ಹತ್ತನೇ ತರಗತಿ ವಿದ್ಯಾರ್ಥಿಗಳನ್ನು ಪಠ್ಯದಲ್ಲಿ ಹೆಚ್ಚು ತೊಡಗುವಂತೆ ಪ್ರೇರೇಪಿಸಲಾಗುತ್ತಿದೆ. ಈ ಮಧ್ಯೆ ಹಲವಾರು ವಿದ್ಯಾರ್ಥಿಗಳು ಹೆಚ್ಚಿನ ತರಬೇತಿಗಾಗಿ ಖಾಸಗಿಯಾಗಿ ಕೋಚಿಂಗ್ ಅಥವಾ ಟ್ಯೂಶನ್ ಕ್ಲಾಸ್​ಗಳಿಗೆ  (SSCL Coaching) ತೆರಳಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಆದರೆ ಬಡವರ್ಗದ ಮಕ್ಕಳಿಗಾಗಿ ಇದ್ಯಾವುದೂ ಸಾಧ್ಯವಾಗದು. ಹಾಗಾಗಿ ಬೆಂಗಳೂರು ನಗರ (Bengaluru News) ವ್ಯಾಪ್ತಿಯ ಮಕ್ಕಳಿಗಾಗಿ ಉಚಿತ ಹೆಚ್ಚುವರಿ ಕ್ಲಾಸ್ ನೀಡಲು (SSLC Free Coaching In Bengaluru) ಸರಕಾರೇತರ ಸಂಸ್ಥೆಯೊಂದು ಸಿದ್ಧವಾಗಿದೆ. 'ಜ್ಞಾನಯಜ್ಞ' ಹೆಸರಿನಡಿ ಕಬೀರ್ ಟ್ರಸ್ಟ್ ಉಚಿತ ತರಬೇತಿ ನೀಡಲು ನಿರ್ಧರಿಸಿದೆ.

    ತರಗತಿಯ ಹೆಸರುSSLC ವಿದ್ಯಾರ್ಥಿಗಳಿಗೆ ಉಚಿತ ತರಬೇತಿ
    ಸಂಸ್ಥೆಯ ಹೆಸರುಕಬೀರ್ ಟ್ರಸ್ಟ್
    ಎಷ್ಟು ದಿನಗಳ ಕೋಚಿಂಗ್?100 ದಿನ
    ತರಬೇತಿ ಎಲ್ಲಿ?ಬೆಂಗಳೂರಿನ ಜೆಸಿ ನಗರ ಸಮೀಪದ ಮೋತಿ ನಗರದಲ್ಲಿರುವ ಕಬೀರ್ ಆಶ್ರಮದಲ್ಲಿ
    ಆರಂಭವಾಗುವ ದಿನಾಂಕಅಕ್ಟೋಬರ್‌ 30
    ಸಂಪರ್ಕ ಸಂಖ್ಯೆಕಬೀರ್ ಟ್ರಸ್ಟ್ ನ ಮೊಬೈಲ್ ಸಂಖ್ಯೆ 9845193425

    100 ದಿನಗಳ‌ ಕೋಚಿಂಗ್
    'ಜ್ಞಾನಯಜ್ಞ' ಯೋಜನೆಯಡಿ ಕಬೀರ್ ಟ್ರಸ್ಟ್ ವತಿಯಿಂದ 100 ದಿನಗಳ ಉಚಿತ SSLC ಕೋಚಿಂಗ್ ಇದಾಗಿರುತ್ತದೆ.


    ತರಬೇತಿ ಎಲ್ಲಿ?
    ಈ ತರಬೇತಿಯು ಬೆಂಗಳೂರಿನ ಜೆಸಿ ನಗರ ಸಮೀಪದ ಮೋತಿ ನಗರದಲ್ಲಿರುವ ಕಬೀರ್ ಆಶ್ರಮದಲ್ಲಿ ಸಾಯಂಕಾಲ 6.30 ಗಂಟೆಗೆ ಆರಂಭವಾಗಲಿದೆ.


    ಈ ದಿನಾಂಕದಂದು ಆರಂಭ
    ಅಕ್ಟೋಬರ್‌ 30 ರಿಂದ ಉಚಿತ ಕೋಚಿಂಗ್ ತರಬೇತಿ ಆರಂಭವಾಗಿ ನೂರು ದಿನಗಳ ಕಾಲ ನಡೆಯಲಿದೆ.


    ಇದನ್ನೂ ಓದಿ: Bengaluru Traffic: ಬೆಂಗಳೂರು ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಹೊಸ ಪ್ಲಾನ್


    ಅರ್ಜಿ ಸಲ್ಲಿಸಿ
    ಆಸಕ್ತ ವಿದ್ಯಾರ್ಥಿಗಳು ಐಟೆಕ್ ಇನ್ಸ್ಟಿಟ್ಯೂಟ್ ಆಫ್ ಕಂಪ್ಯೂಟರ‌್ಸ್, ಕಬೀರ್ ಆಶ್ರಮ ಇಲ್ಲಿಂದ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆ ನಡುವೆ ಅರ್ಜಿ ಪಡೆದು ಸಲ್ಲಿಸಬಹುದಾಗಿದೆ.


    ಇದನ್ನೂ ಓದಿ: Uttara Kannada: ಕಾಂತಾರದಲ್ಲೂ ಇರದ ದೈವ, ಉತ್ತರ ಕನ್ನಡದಲ್ಲಿ ಕ್ಷೇತ್ರಪಾಲ ಜಟಿಗನ ಆರಾಧನೆ


    ಹೆಚ್ಚಿನ ಮಾಹಿತಿಗಾಗಿ
    ಹೆಚ್ಚಿನ ಮಾಹಿತಿಗಾಗಿ ಆಸಕ್ತ ವಿದ್ಯಾರ್ಥಿಗಳು ಕಬೀರ್ ಟ್ರಸ್ಟ್ ನ ಮೊಬೈಲ್ ಸಂಖ್ಯೆ 9845193425 ಸಂಪರ್ಕಿಸಬಹುದಾಗಿದೆ.

    Published by:ಗುರುಗಣೇಶ ಡಬ್ಗುಳಿ
    First published: