Pet Dog Ban: ನಾಯಿ ಪ್ರೇಮಿಗಳೇ, ಕಬ್ಬನ್ ಪಾರ್ಕ್​ಗೆ ನಾಯಿಗಳಿಗೆ ನೋ ಎಂಟ್ರಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಬ್ಬನ್ ಉದ್ಯಾನವನದ ಸುತ್ತಲೂ ನಾಯಿಗಳು ಓಡುತ್ತಿರುವ ಬಗ್ಗೆ ಮತ್ತು ನಾಯಿಗಳ ಮಲ ಮೂತ್ರಗಳನ್ನು ಸ್ವಚ್ಛಗೊಳಿಸದ ಬಗ್ಗೆ ತೋಟಗಾರಿಕಾ ಇಲಾಖೆಯು 300 ದೂರುಗಳನ್ನು ಸ್ವೀಕರಿಸಿತ್ತು.

  • Share this:

    ಬೆಂಗಳೂರು: ಪ್ರಸಿದ್ಧ ಕಬ್ಬನ್ ಪಾರ್ಕ್​ನಲ್ಲಿ ಜುಲೈ 1ರಿಂದ ಸಾಕುನಾಯಿಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲು (Bengaluru’s Cubbon Park) ತೋಟಗಾರಿಕಾ ಇಲಾಖೆ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಕಳೆದ ಆರು ತಿಂಗಳಿನಿಂದ ವಾಕಿಂಗ್ ಮತ್ತು ಜಾಗಿಂಗ್ ಮಾಡುವವರಿಂದ ಪದೇ ಪದೇ ದೂರುಗಳು ಬಂದ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್‌ನಲ್ಲಿ ಸಾಕು ನಾಯಿಗಳನ್ನು ನಿಷೇಧಿಸಲು ಸರ್ಕಾರ ಮುಂದಾಗಿದೆ. ಜುಲೈ 1 ರಿಂದ ಗೇಟ್‌ಗಳಲ್ಲಿ ಬ್ಯಾನರ್‌ಗಳನ್ನು ಅಳವಡಿಸಲಾಗುವುದು ಮತ್ತು  ವಿವಿಧ ಪ್ರತಿಕ್ರಿಯೆ ಆಧರಿಸಿ ಅಧಿಕೃತ ನಿರ್ಧಾರವನ್ನು ನಂತರ ತೆಗೆದುಕೊಳ್ಳಲಾಗುವುದು ಎಂದು ತೋಟಗಾರಿಕಾ ಇಲಾಖೆಯ (Horticulture Department) ಮೂಲಗಳು ತಿಳಿಸಿವೆ. ಈ ನಿರ್ಧಾರದ ಬಗ್ಗೆ ಸಾಕುನಾಯಿಗಳ ಪ್ರಾಣಿಪ್ರೇಮಿ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


    ಸಾಕುನಾಯಿಗಳಿಗೆ ಕಬ್ಬನ್ ಪಾರ್ಕ್​ನಲ್ಲಿ ವಿಧಿಸಲು ಉದ್ದೇಶಿಸಲಾಗಿರುವ ನಿರ್ಬಂಧವು ವಿಶೇಷವಾಗಿ ನಾಯಿಗಳು ಮುಕ್ತವಾಗಿ ಓಡಲು ಅವಕಾಶವನ್ನು ತಡೆಹಿಡಿಯಲಿದೆ. ಇದರ ಬೆನ್ನಲ್ಲೇ ಕಬ್ಬನ್ ಪಾರ್ಕ್‌ನಲ್ಲಿ ಸಾಕುಪ್ರಾಣಿಗಳ ಮೇಲಿನ ನಿಷೇಧವನ್ನು ತಡೆಯಬೇಕು, ಸಾಕುನಾಯಿಗಳಿಗೆ ಕಬ್ಬನ್ ಪಾರ್ಕ್​ನಲ್ಲಿ  ಅವಕಾಶವನ್ನು ಮುಂದುವರೆಸಬೇಕು ಎಂಬ ಮನವಿಯನ್ನು ಕಬ್ಬನ್ ಪಾರ್ಕ್ ಕ್ಯಾನೈನ್ಸ್ ಮತ್ತು ಕಬ್ಬನ್ ಡಾಗ್ ಪಾರ್ಕ್‌ನಲ್ಲಿರುವ ಇತರ ಸ್ವಯಂಸೇವಕರು Change.org ನಲ್ಲಿ ಪೋಸ್ಟ್ ಮಾಡಿದ್ದಾರೆ. ಜೂನ್ 25 ರ ಸಂಜೆ ಪೋಸ್ಟ್ ಮಾಡಿದ ನಂತರ ಅರ್ಜಿಯಲ್ಲಿ ಈಗಾಗಲೇ 5,500 ಕ್ಕೂ ಹೆಚ್ಚು ಸಹಿಗಳಿವೆ.


    ಕೆಲವರ ತಪ್ಪಿಗೆ ಎಲ್ಲರಿಗೂ ಶಿಕ್ಷೆ ಏಕೆ?
    ಕಬ್ಬನ್ ಪಾರ್ಕ್ ಗೇಟ್‌ನಲ್ಲಿರುವ ಭದ್ರತಾ ಸಿಬ್ಬಂದಿ ಉದ್ದೇಶಿತ ನಿಷೇಧದ ಬಗ್ಗೆ ಜನರಿಗೆ ತಿಳಿಯಲು ಪ್ರಾರಂಭಿಸುತ್ತಿದ್ದಂತೆ ಸಾಕುಪ್ರಾಣಿ ಪೋಷಕರು ಆನ್‌ಲೈನ್ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಕೆಲವರ ತಪ್ಪಿಗೆ ಎಲ್ಲರಿಗೂ ಶಿಕ್ಷೆ ನೀಡಬೇಡಿ ಎಂದು ತೋಟಗಾರಿಕಾ ಇಲಾಖೆಗೆ ಮನವಿ ಮಾಡಲಾಗಿದೆ.


    ಅಭಿಯಾನ ನಡೆಯುತ್ತಿದೆ
    Change.org ನಲ್ಲಿ BJ ಸ್ಮಾರಕ ಟ್ರಸ್ಟ್‌ನ 'ಕಬ್ಬನ್ ಪಾರ್ಕ್‌ನಲ್ಲಿ ಪೆಟ್ ಬ್ಯಾನ್ ಇಲ್ಲ - ನಾಯಿಗಳ ಸಲುವಾಗಿ' ಮನವಿ ಈಗಾಗಲೇ ಬೆಂಗಳೂರಿನಾದ್ಯಂತ 1,500 ಕ್ಕೂ ಹೆಚ್ಚು ಸಾಕುಪ್ರಾಣಿಗಳ ಬೆಂಬಲವನ್ನು ಗಳಿಸಿದೆ.


    Vijayapura: ಪ್ಲಾಸ್ಟಿಕ್, ಮದ್ಯದ ಬಾಟಲಿ ಹೆಕ್ಕಿದ ಸ್ವಾಮೀಜಿ! ವಿಡಿಯೋ ನೋಡಿ


    ಕಬ್ಬನ್ ಉದ್ಯಾನವನದ ಸುತ್ತಲೂ ನಾಯಿಗಳು ಓಡುತ್ತಿರುವ ಬಗ್ಗೆ ಮತ್ತು ನಾಯಿಗಳ ಮಲ ಮೂತ್ರಗಳನ್ನು ಸ್ವಚ್ಛಗೊಳಿಸದ ಬಗ್ಗೆ ತೋಟಗಾರಿಕಾ ಇಲಾಖೆಯು 300 ದೂರುಗಳನ್ನು ಸ್ವೀಕರಿಸಿತ್ತು. ಈ ದೂರುಗಳು ಬಂದ ನಂತರ ಕಬ್ಬನ್ ಪಾರ್ಕ್ ಪ್ರವೇಶಿಸುವುದನ್ನು ತಡೆಯುವ ನಿರ್ಧಾರಕ್ಕೆ ತೋಟಗಾರಿಕಾ ಇಲಾಖೆ ಬಂದಿದೆ ಎಂದು ವರದಿಯಾಗಿದೆ.


    ಸಾಕುನಾಯಿಗಳಿಂದಲೇ ನಿರ್ಮಾಣವಾಗಿದೆ ಒಂದು ಸಮುದಾಯ!
    ನಮ್ಮ ನಾಯಿಗಳು ಪ್ರತಿ ವಾರಾಂತ್ಯಕ್ಕೆ ಭೇಟಿ ನೀಡಲು ಎದುರುನೋಡುವ ಸ್ಥಳವೆಂದರೆ ಡಾಗ್ ಪಾರ್ಕ್. ಹೀಗೆ ನಿಷೇಧ ವಿಧಿಸುವುದು ನಾವು ಸಾಕಿದ ನಾಯಿಗಳು ಇತರ ನಾಯಿಗಳೊಂದಿಗೆ ಬೆರೆಯುವುದನ್ನು ತಡೆಯುತ್ತದೆ. ಸಾಕುಪ್ರಾಣಿ ಪೋಷಕರಿಗೆ ತಮ್ಮ ಶಕ್ತಿಯನ್ನು ನಿರ್ವಹಿಸುವುದು ಇನ್ನಷ್ಟು ಕಷ್ಟಕರವಾಗಿರುತ್ತದೆ. ಏಕೆಂದರೆ ನಾಯಿಗಳು ವಿಶೇಷವಾಗಿ ಆಟ ಮತ್ತು ವ್ಯಾಯಾಮದ ಮೂಲಕ ಸಕ್ರಿಯವಾಗಿರುತ್ತವೆ. ಕಬ್ಬನ್ ಪಾರ್ಕ್​ನಲ್ಲಿ ಸಾಕುನಾಯಿಗಳ ಮೂಲಕ ಒಂದು ಹೊಸ ಸಮುದಾಯವೇ ನಿರ್ಮಾಣವಾಗಿದೆ ಎಂದು ಡಾಗ್ ಪಾರ್ಕ್‌ನಲ್ಲಿ ಸ್ವಯಂಸೇವಕರಾಗಿರುವ ಶ್ರುತಿ ಬೋಪಯ್ಯ ಹೇಳಿದ್ದಾಗಿ ಖಾಸಗಿ ಆಂಗ್ಲ ಜಾಲತಾಣವೊಂದು ವರದಿ ಮಾಡಿದೆ.


    ಇದನ್ನೂ ಓದಿ: Electric Buses In Bengaluru: ಬೆಂಗಳೂರು ಜನರಿಗೆ ಖುಷಿ ಸುದ್ದಿ! ಈ ಮಾರ್ಗಗಳಲ್ಲಿ 300 ಎಲೆಕ್ಟ್ರಿಕ್ ಬಸ್ ಸಂಚಾರ​


    ಸಾಕುಪ್ರಾಣಿಗಳನ್ನು ನಿಷೇಧಿಸುವ ನಿರ್ಧಾರ ಆಘಾತ ತಂದಿದೆ ಎಂದು ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಪ್ರಿಯಾ ಚೆಟ್ಟಿ ರಾಜಗೋಪಾಲ್ ಹೇಳಿದ್ದಾರೆ. ಆದರೂ ಈ ಸಮಸ್ಯೆಯು ಕೆಲವರಿಂ ಮಾತ್ರ ಆಗುತ್ತಿದ್ದರೆ ಅಂತಹ ಸಾಕುನಾಯಿಗಳ ಪೋಷಕರು ನಾಗರಿಕ ರೀತಿಯಲ್ಲಿ ಹೆಜ್ಜೆ ಹಾಕಬೇಕೆಂದು ನಾನು ಭಾವಿಸುತ್ತೇನೆ. ಶ್ವಾನ ಉದ್ಯಾನದ ಆವರಣದ ಹೊರಗೆ, ಅವರು ತಮ್ಮ ನಾಯಿಗಳನ್ನು ಹಿಡಿದಿಟ್ಟುಕೊಳ್ಳಬೇಕು ಮತ್ತು ತಪ್ಪದೆ ಸ್ವಚ್ಛಗೊಳಿಸಬೇಕು ಎಂದು ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಪ್ರಿಯಾ ಚೆಟ್ಟಿ ರಾಜಗೋಪಾಲ್ ಅವರು ಹೇಳಿದರು.

    Published by:guruganesh bhat
    First published: