• Home
 • »
 • News
 • »
 • bengaluru-urban
 • »
 • Bengaluru News: ಬೆಂಗಳೂರಿನ ಜನರೇ ಗಮನಿಸಿ, ಲಾಲ್​ಬಾಗ್​ನಲ್ಲಿ ನಡೆಯಲಿದೆ ಹಬ್ಬ!

Bengaluru News: ಬೆಂಗಳೂರಿನ ಜನರೇ ಗಮನಿಸಿ, ಲಾಲ್​ಬಾಗ್​ನಲ್ಲಿ ನಡೆಯಲಿದೆ ಹಬ್ಬ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Bengaluru Organic Festival: ಮುಂದಿನ ವಾರಾಂತ್ಯಕ್ಕೆ ಲಾಲ್​ಬಾಗ್​ ಎರಡು ದಿನಗಳ ಕಾಲ 'ಸಾವಯವ ಹಬ್ಬ' ನಡೆಯಲಿದೆ.

 • Share this:

  ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಾವಯವ ಪದಾರ್ಥಗಳು ಸಿಗುವುದೇ ಬಲು ಕಷ್ಟ. ಅದರಲ್ಲೂ ನಗರದ ಪ್ರದೇಶಗಳಲ್ಲಂತೂ ಇದು ದೂರದ ಮಾತು. ಎಲ್ಲವೂ ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ತರಕಾರಿ, ಹಣ್ಣು ಹಂಪಲು ಕೂಡಾ ಯಾವುದಾದರೂ ಕೆಮಿಕಲ್​ನಿಂದ ಬೆಳೆದು ಶೀಘ್ರದಲ್ಲಿ ಮಾರುಕಟ್ಟೆಯಲ್ಲಿ ಸಿಗುವಂತಾಗುತ್ತದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವವರಿಗೆ (Bengaluru News) ಇದೀಗ ಸಾವಯವ ಪದಾರ್ಥಗಳನ್ನ ಖರೀದಿಸಲು ಉತ್ತಮ ಅವಕಾಶವಿದೆ. ಹೌದು, ಮುಂದಿನ ವಾರಾಂತ್ಯಕ್ಕೆ ಲಾಲ್​ಬಾಗ್​ (Bengaluru Lal Bagh) ಎರಡು ದಿನಗಳ ಕಾಲ 'ಸಾವಯವ ಹಬ್ಬ' (Bengaluru Organic Festival) ನಡೆಯಲಿದೆ.


  ಕೋವಿಡ್​ನಿಂದ ಸ್ಥಗಿತವಾಗಿದ್ದ ಸಾವಯವ ಹಬ್ಬ
  2004 ರಿಂದ ಜೈವಿಕ್ ಕೃಷಿಕ್ ಸೊಸೈಟಿ ನಿರಂತರವಾಗಿ ಪ್ರತಿ ವರ್ಷ ಸಾವಯವ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದೆ. ಆದರೆ ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದಾಗಿ ಈ ಕಾರ್ಯಕ್ರಮ ನಡೆದಿರಲಿಲ್ಲ. ಈಗ ಮತ್ತೊಮ್ಮೆ 'ಸಾವಯವ ಹಬ್ಬ'ವನ್ನ ಆಚರಿಸುವ ಮೂಲಕ ಗ್ರಾಹಕರು ಹಾಗೂ ರೈತರಿಗೂ ಸಾವಯವ ಪದಾರ್ಥಗಳ ಖರೀದಿ ಹಾಗೂ ಮಾರಾಟಕ್ಕೆ ಉತ್ತಮ ವೇದಿಕೆ ಕಲ್ಪಿಸಿದೆ.


  ಸಾವಯವ ಹಬ್ಬ ಯಾವಾಗ?
  ಸಾವಯವ ಹಬ್ಬವು ಅಕ್ಟೋಬರ್ 15 ಹಾಗೂ 16 ರಂದು ಎರಡು ದಿನಗಳ ಕಾಲ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ನಡೆಯಲಿದೆ.


  ಇದನ್ನೂ ಓದಿ: Kalaburagi: ಈ ಊರಲ್ಲಿ ಮದುವೆಗೆ ಮಂಚ ಮಾತ್ರ ಗಿಫ್ಟ್ ಸಿಗಲ್ಲ!


  ಪ್ರದರ್ಶನ ಮತ್ತು ಮಾರಾಟ
  ಸಾವಯವ ಹಬ್ಬದಲ್ಲಿ ಸಾವಯವ ರಸಗೊಬ್ಬರದ ಮೂಲಕ ಬೆಳೆದ ಹಣ್ಣು, ತರಕಾರಿ, ನಾಟಿ ಬೀಜ, ಗೆಡ್ಡೆ ಗೆಣಸುಗಳು ಲಭ್ಯವಿರಲಿದೆ. ಆಸಕ್ತರು ಖರೀದಿ ಹಾಗೂ ಪ್ರದರ್ಶನವನ್ನು ಕಣ್ತುಂಬಿಕೊಳ್ಳಬಹುದು.


  ಇದನ್ನೂ ಓದಿ: Bengaluru News: ರೈಲ್ವೆ ಇಲಾಖೆಯಿಂದ ಬಂಪರ್ ಘೋಷಣೆ! ಈ ಮಾರ್ಗಗಳಲ್ಲಿ ಸ್ಪೆಷಲ್ ರೈಲು ಘೋಷಣೆ


  ರೈತರಿಗೆ ಸುವರ್ಣಾವಕಾಶ
  ಸಾವಯವ ಹಬ್ಬದಲ್ಲಿ ಸಾವಯವ ಆಹಾರ ಪದಾರ್ಥಗಳನ್ನ ಮಾರಾಟ ಮಾಡಲು ಆಸಕ್ತರಿರುವ ರೈತರು ಜೈವಿಕ್ ಸೊಸೈಟಿಯ ಮ್ಯಾನೇಜರ್ ಹರೀಶ್ ಇವರ ಮೊಬೈಲ್ ಸಂಖ್ಯೆ 9972553185 ಸಂಪರ್ಕಿಸಬಹುದಾಗಿದೆ.

  Published by:ಗುರುಗಣೇಶ ಡಬ್ಗುಳಿ
  First published: