Bengaluru Property Prices: ಬೆಂಗಳೂರಿನ ಯಾವ ಏರಿಯಾದಲ್ಲಿ ಫ್ಲಾಟ್​ಗಳ ಬೆಲೆ ಎಷ್ಟಿದೆ? ಇಲ್ಲಿದೆ ವಿವರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಂಗಳೂರಿನಲ್ಲಿ ಮನೆ ಖರೀದಿಸಬೇಕು ಅಂದುಕೊಂಡಿದ್ದೀರಾ? ಫ್ಲಾಟ್​ಗಳ ಮೊರೆ ಹೋಗಲು ಯೋಚಿಸುತ್ತಿದ್ದೀರಾ? ಬೆಂಗಳೂರಿನ ಯಾವ ಏರಿಯಾದಲ್ಲಿ ಎಷ್ಟು ಬೆಲೆ ನಡೆಯುತ್ತಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ.

  • Share this:

ಭಾರತೀಯರು ಬಹುಶಃ ವಸತಿಗಾಗಿ ಅತಿ ಹೆಚ್ಚು ಹಣವನ್ನು ಖರ್ಚು ಮಾಡುತ್ತಾರೆ. ನಗರಗಳಲ್ಲಿ ಜನಸಂಖ್ಯೆಯು ವೇಗವಾಗಿ ವಿಸ್ತರಿಸುತ್ತಿರುವುದರಿಂದ, ದೊಡ್ಡ ನಗರದಲ್ಲಿ ಮನೆ ಖರೀದಿಸುವುದು ದುಬಾರಿಯಾಗಿ ಪರಿಣಮಿಸುತ್ತಿದೆ. ಬೆಂಗಳೂರಿನಂತರ ಮೆಟ್ರೋ ನಗರಗಳಲ್ಲಿ ಮನೆ ಖರೀದಿಸಬೇಕೆಂದರೆ ಕೋಟಿ ಕೋಟಿ ಹಣ ಸುರಿಯಬೇಕು. ಅದೂ ಕೆಲವು ಏರಿಯಾಗಳಲ್ಲಿನ ಫ್ಲಾಟ್​ಗಳ ದರ ಕೇಳಿದರೆ ತಲೆ ತಿರುಗಬಹುದು! ಅಷ್ಟು ದುಬಾರಿ. ಹಾಗಾದರೆ ಬೆಂಗಳೂರಿನ ಯಾವ ಏರಿಯಾದಲ್ಲಿ (Bengaluru Property Rates) ಎಷ್ಟು ಬೆಲೆ ನಡೆಯುತ್ತಿದೆ? ಮಿಂಟ್ ಜಾಲತಾಣದ ಪ್ರಕಾರ ಇಲ್ಲಿದೆ ಬೆಂಗಳೂರಿನಲ್ಲಿನ ವಿವಿಧ ಏರಿಯಾಗಳಲ್ಲಿನ ಫ್ಲಾಟ್​ಗಳ ದರ.


ಯಾವುದೇ ಪ್ರದೇಶದಲ್ಲಿ ಆಸ್ತಿಯ ಮೌಲ್ಯವನ್ನು ನಿರ್ಧರಿಸುವುದು ಕಷ್ಟವಾಗಬಹುದು. ಆದರೆ ಆಯಾ ಪ್ರದೇಶದಲ್ಲಿನ ಸೌಲಭ್ಯಗಳನ್ನು ಪರಸ್ಪರ ಹೋಲಿಸಿ ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ.


ಚಂದಾಪುರ: 550-650 ಚದರ ಅಡಿಗಳ ಸರಾಸರಿ ಯೂನಿಟ್ ಗಾತ್ರದ 1 BHK ಫ್ಲಾಟ್‌ ಬೆಲೆ ಅಂದಾಜು ₹19.3-23.3 ಲಕ್ಷಗಳು.


ಎಲೆಕ್ಟ್ರಾನಿಕ್ ಸಿಟಿ ಸ್ಟೇಜ್ 2: 900-1,050 ಚದರ ಅಡಿಗಳ ಗಾತ್ರದ ಫ್ಲಾಟ್ ಬೆಲೆ ಸುಮಾರು 34-38 ಲಕ್ಷಗಳಿಗೆ ಮಾರಾಟವಾಗುತ್ತಿದೆ.


ಗೊಟ್ಟಿಗೆರೆ: ಬೆಂಗಳೂರಿನ ದಕ್ಷಿಣ ಹೊರವಲಯದಲ್ಲಿರುವ ಈ ಉಪನಗರದಲ್ಲಿ ಹೆಚ್ಚಾಗಿ 2 BHK ಫ್ಲಾಟ್‌ಗಳು ಲಭ್ಯವಿವೆ. ಸರಾಸರಿ 800-1,000 ಚದರ ಅಡಿಗಳ ಫ್ಲಾಟ್​ಗೆ ಸುಮಾರು 32.5-36.5 ಲಕ್ಷಗಳಷ್ಟು ದರವಿದೆ.


ತುಮಕೂರು ರಸ್ತೆ: ಇಲ್ಲಿ ಸರಾಸರಿ 800-1200 ಚದರ ಅಡಿ ವಿಸ್ತೀರ್ಣದ 2 ಬಿಎಚ್‌ಕೆ ಫ್ಲ್ಯಾಟ್‌ಗಳ ಬೆಲೆ ₹42-46 ಲಕ್ಷ.


ಕೆಂಗೇರಿ: ಮೈಸೂರು ರಸ್ತೆಯ ಉದ್ದಕ್ಕೂ ಪಶ್ಚಿಮ ಕಾರಿಡಾರ್‌ನಲ್ಲಿರುವ ಈ ಉಪನಗರದಲ್ಲಿ ಬಹುತೇಕ 2 BHK ಫ್ಲಾಟ್‌ಗಳಿವೆ. ಸರಾಸರಿ 950-1,150 ಚದರ ಅಡಿ ಗಾತ್ರದ ಈ ಫ್ಲಾಟ್​ಗಳಿಗೆ ಸರಾಸರಿ ಸುಮಾರು ₹44.2-48.2 ಲಕ್ಷ ದರವಿದೆ.


ಬೆಂಗಳೂರಿನಲ್ಲಿ ₹50-75 ಲಕ್ಷದ ಬೆಲೆಯ ಪ್ರಾಪರ್ಟಿಗಳು
ಕಾಡುಗೋಡಿ: ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಈ ಉಪನಗರದಲ್ಲಿ ಸರಾಸರಿ 1000-12000 ಚದರ ಅಡಿ ಗಾತ್ರದ 2 BHK ಫ್ಲಾಟ್‌ಗಳ ಬೆಲೆ ಅಂದಾಜು ₹51.4-55.4 ಲಕ್ಷಗಳು.


ಕೆ.ಆರ್. ಪುರಂ: ಬೆಂಗಳೂರಿನ ಈ ಉಪನಗರ ಪ್ರದೇಶದಲ್ಲಿ ಸರಾಸರಿ 1100-1300 ಚದರ ಅಡಿ ಗಾತ್ರದ 2 BHK ಫ್ಲಾಟ್‌ಗಳ ಬೆಲೆ ಸುಮಾರು ₹55.6-59.6 ಲಕ್ಷಗಳು.


ಯಲಹಂಕ: ಇದು ಬೆಂಗಳೂರಿನ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿ 1100-1200 ಚದರ ಅಡಿಗಳ ಸರಾಸರಿ ಯೂನಿಟ್ ಗಾತ್ರದ 2 BHK ಫ್ಲಾಟ್‌ಗಳ ಬೆಲೆ ಸುಮಾರು ₹55.5-60 ಲಕ್ಷಗಳಿದೆ.


ಥಣಿಸಂದ್ರ ರಸ್ತೆ: ಉತ್ತರ ಬೆಂಗಳೂರಿನಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಈ ಪ್ರದೇಶದಲ್ಲಿ 1050-1250 ಚದರ ಅಡಿ ಗಾತ್ರದ 2 BHK ಫ್ಲಾಟ್‌ಗಳು ಸುಮಾರು ₹ 58-62 ಲಕ್ಷ ವೆಚ್ಚದಲ್ಲಿ ಲಭ್ಯವಿವೆ.


ಬನ್ನೇರುಘಟ್ಟ ರಸ್ತೆ: 1000-1300 ಚದರ ಅಡಿಗಳ 2 BHK ಫ್ಲಾಟ್‌ಗಳು ಅಂದಾಜು ₹63-67 ಲಕ್ಷಗಳಿಗೆ ಲಭ್ಯವಿದೆ.


ಬೆಂಗಳೂರಿನಲ್ಲಿ ₹75 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಪ್ರಾಪರ್ಟಿಗಳು
ಮಾರತಹಳ್ಳಿ: ಬೆಂಗಳೂರಿನ ಈ ಪೂರ್ವ ಉಪನಗರದಲ್ಲಿ ಸರಾಸರಿ 1100-1550 ಚದರ ಅಡಿ ಗಾತ್ರದ 2 ಬಿಎಚ್‌ಕೆ ಫ್ಲಾಟ್‌ಗಳು ₹79.5-83.5 ಲಕ್ಷ ವೆಚ್ಚದಲ್ಲಿ ಲಭ್ಯವಿವೆ.


ವೈಟ್‌ಫೀಲ್ಡ್: ಇದು ಬೆಂಗಳೂರಿನಲ್ಲಿ ಈಗಾಗಲೇ ಅಭಿವೃದ್ಧಿ ಹೊಂದಿದ ವಸತಿ ಪ್ರದೇಶವಾಗಿದೆ. ಬೆಂಗಳೂರಿನ ಪ್ರಸಿದ್ಧ ಐಟಿ ಕೇಂದ್ರ ಎಂದೂ ಹೆಸರು ಪಡೆದಿದೆ. ವೈಟ್​ಫೀಲ್ಡ್ ತನ್ನ ಟೆಕ್ ಪಾರ್ಕ್‌ಗಳು ಮತ್ತು ದುಬಾರಿ ಅಪಾರ್ಟ್ಮೆಂಟ್ ಸಂಕೀರ್ಣಗಳಿಗೆ ಹೆಸರುವಾಸಿಯಾಗಿದೆ. 1400-1600 ಚದರ ಅಡಿಗಳ 3 BHK ಫ್ಲಾಟ್‌ಗಳು ಸಿ. ಸರ್ಜಾಪುರ ರಸ್ತೆ: ಬೆಂಗಳೂರಿನ ಪೂರ್ವ ಭಾಗದಲ್ಲಿರುವ ಈ ಅಭಿವೃದ್ಧಿಶೀಲ ಪ್ರದೇಶದಲ್ಲಿ ಸರಾಸರಿ 5800-6500 ಚದರ ಅಡಿ ಗಾತ್ರದ 3 BHK ಫ್ಲಾಟ್‌ಗಳ ಬೆಲೆ ₹92.5-96 ಲಕ್ಷಗಳ ನಡುವೆ ಇದೆ.


ಇದನ್ನೂ ಓದಿ: Belagavi: ಈ ಸರ್ಕಾರಿ ಶಾಲೇಲಿ ಕಲಿಯಲು ಪುಣ್ಯ ಮಾಡಿರಬೇಕು! ಬೆಳಗಾವಿ ಶಾಲೆಯ ವಿಡಿಯೋ ನೋಡಿ


ಜೆ.ಪಿ.ನಗರ:  ಜಯಪ್ರಕಾಶ ನಾರಾಯಣ ಅಥವಾ ಜೆ.ಪಿ.ನಗರವು ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ಸುಂದರವಾದ ವಸತಿ ಪ್ರದೇಶವಾಗಿದೆ. ಇಲ್ಲಿ 1700-2100 ಚದರ ಅಡಿಗಳ 3 BHK ಫ್ಲಾಟ್‌ಗಳ ಬೆಲೆ ಸುಮಾರು ₹1 ಕೋಟಿ  56 ಲಕ್ಷದಿಂದ-1 ಕೋಟಿ  60 ಲಕ್ಷಗಳಲ್ಲಿ ಮಾರಾಟವಾಗುತ್ತಿದೆ.


ಹೆಬ್ಬಾಳ: ಈ ಪ್ರದೇಶದಲ್ಲಿ 1600-2400 ಚದರ ಅಡಿಗಳ 3 ಬಿಎಚ್‌ಕೆ ಫ್ಲ್ಯಾಟ್‌ಗಳ ಬೆಲೆ ಸುಮಾರು  ₹1 ಕೋಟಿ  88 ಲಕ್ಷದಿಂದ  -1ಕೋಟಿ  92 ಲಕ್ಷಗಳಷ್ಟಿದೆ.


ಇದನ್ನೂ ಓದಿVijayapura: ಬದುಕು ಬದಲಿಸಿದ ಕೊರೊನಾ! ಲಕ್ಷ ಲಕ್ಷ ಸಂಪಾದಿಸುತ್ತಿರುವ ವಿಜಯಪುರ ಯುವಕ


ವರದಿಗಳ ಪ್ರಕಾರ ಮನೆಗಳ ಬೆಲೆಯಲ್ಲಿ ಇತರ ನಗರಗಳನ್ನು ಹೋಲಿಸಿದ ಹೈದರಾಬಾದ್ ದೇಶದ ಎಲ್ಲಾ ಭಾಗಗಳಿಗಿಂತ ಮನೆ ಬೆಲೆಗಳ ವಿಷಯದಲ್ಲಿ ಅಗ್ಗವಾಗಿದೆ. ವಸತಿ ವೆಚ್ಚದ ಜೊತೆಗೆ ಜೀವನ ವೆಚ್ಚದ ವಿಷಯದಲ್ಲ ಪುಣೆಯು ಕೋಲ್ಕತ್ತಾ, ಹೈದರಾಬಾದ್‌ಗಿಂತ ಅಗ್ಗದ ಬೆಲೆಯಲ್ಲಿ ನಿಲುಕುತ್ತದೆ.

top videos
    First published: