ಬೆಂಗಳೂರು: ಈಗಾಗಲೇ ಕರ್ನಾಟಕದ ರಾಜಧಾನಿ ಬೆಂಗಳೂರಲ್ಲಿ ಎಲೆಕ್ಟ್ರಿಕ್ ಬಸ್‌ಗಳು (Electric Buses In Bengaluru) ಓಡಾಡುತ್ತಿವೆ. ನೀವೂ ಹಲವು ಬಾರಿ ಎಲೆಕ್ಟ್ರಿಕ್ ಬಸ್ಗಳಲ್ಲಿ ಪ್ರಯಾಣಿಸಿರಬಹುದು. ಬೆಂಗಳೂರಿನ ಜನರಿಗೆ ಇನ್ನೊಂದು ಖುಷಿ ಸುದ್ದಿ (Bengaluru News) ಹೊರಬಿದ್ದಿದೆ. ನೀವು ಶೀಘ್ರದಲ್ಲೇ ಬೆಂಗಳೂರಿನಿಂದ ಬಿಡದಿ, ಹೊಸಕೋಟೆ ಮತ್ತು ಅತ್ತಿಬೆಲೆಗೆ ಸಹ ಎಲೆಕ್ಟ್ರಿಕ್ ಬಸ್‌ಗಳನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) 300 ನಾನ್ ಎಸಿ ಎಲೆಕ್ಟ್ರಿಕ್ ಬಸ್‌ಗಳಿಗೆ 14 ಮಾರ್ಗಗಳನ್ನು ಗುರುತಿಸಿದೆ. ಇವೆಲ್ಲವೂ ಅಕ್ಟೋಬರ್ ವೇಳೆಗೆ ಸೇವೆಗೆ ಲಭ್ಯವಾಗುವ ನಿರೀಕ್ಷೆಯಿದೆ. ಹೀಗಾಗಿ ಬೆಂಗಳೂರಿನ ಜನರು ಎಲೆಕ್ಟ್ರಿಕ್ ಬಸ್ಗಳ ಸೇವೆಯನ್ನು ಇನ್ನಷ್ಟು ಮಾರ್ಗಗಳಲ್ಲಿ ಬಳಸಬಹುದಾಗಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಇನ್ನಷ್ಟು ಎಲೆಕ್ಟ್ರಿಕ್ ಬಸ್‌ಗಳನ್ನು ಬಿಡುತ್ತಿರುವ ಮಾರ್ಗಗಳ ಪಟ್ಟಿ ಇಲ್ಲಿದೆ.
226M KR ಮಾರುಕಟ್ಟೆ-ಬಿಡದಿ, 226N ಕೆಂಪೇಗೌಡ ಬಸ್ ನಿಲ್ದಾಣ (KBS)-ಬಿಡದಿ, 276 KBS-ವಿದ್ಯಾರಣ್ಯಪುರ, 290E ಶಿವಾಜಿನಗರ-ಯಲಹಂಕ, 328H ಅತ್ತಿಬೆಲೆ-ಹೊಸಕೋಟೆ, KBS3A KBS-ಅತ್ತಿಬೇಲೆ, KBS3A KBS-ಅತ್ತಿಬೇಲೆ, KBS360K40KE, 402B/402D KBS-ಯಲಹಂಕ ಸ್ಯಾಟಲೈಟ್ ಟೌನ್, 401M ಯಶವಂತಪುರ-ಕೆಂಗೇರಿ, 500D ಹೆಬ್ಬಾಳ-ಸೆಂಟ್ರಲ್ ಸಿಲ್ಕ್ ಬೋರ್ಡ್, 500DH ಅತ್ತಿಬೆಲೆ-ಹೆಬ್ಬಾಳ, 501C ಹೆಬ್ಬಾಳ-ಕೆಂಗೇರಿ, ಮತ್ತು 600F ಬನಶಂಕರಿ- ಅತ್ತಿಬೇಲೆ.
ಅಶೋಕ್ ಲೇಲ್ಯಾಂಡ್ ಬಸ್‌ಗಳು
ಸೆಪ್ಟೆಂಬರ್ 2021 ರಲ್ಲಿ ಅಶೋಕ್ ಲೇಲ್ಯಾಂಡ್ ಕೇಂದ್ರ ಸರ್ಕಾರದ FAME II ಯೋಜನೆಯಡಿಯಲ್ಲಿ 300 ಇ-ಬಸ್ ಟೆಂಡರ್‌ನಲ್ಲಿ ಪ್ರತಿ ಕಿಮೀಗೆ ರೂ 48.95 ಅನ್ನು ಉಲ್ಲೇಖಿಸಿತ್ತು. ಈ ಮೂಲಕ ಅಶೋಕ್ ಲೇಲ್ಯಾಂಡ್ ಅತ್ಯಂತ ಕಡಿಮೆ ಬೆಲೆಗೆ ಬಿಡ್ ಮಾಡಿದ ಬಿಡ್ಡರ್ ಆಗಿ ಹೊರಹೊಮ್ಮಿತ್ತು.
BMTC ಅಧಿಕಾರಿಗಳು ಅಶೋಕ್ ಲೇಲ್ಯಾಂಡ್‌ನ ಅಂಗಸಂಸ್ಥೆಯಾದ ಸ್ವಿಚ್ ಮೊಬಿಲಿಟಿ ಲಿಮಿಟೆಡ್ ಎಲ್ಲಾ 300 12m ನಾನ್-ಎಸಿ ಇ-ಬಸ್‌ಗಳನ್ನು ಪೂರೈಸುತ್ತದೆ. ಜೊತೆಗೆ ಇದೇ ಕಂಪನಿಯೇ ಎಲ್ಲ ನಾನ್ ಎಸಿ ಎಲೆಕ್ಟ್ರಿಕ್ ಬಸ್‌ಗಳನ್ನು ನಿರ್ವಹಿಸುತ್ತಿದೆ.
ಇದನ್ನೂ ಓದಿ: Bidar To Bengaluru: ಬೀದರ್ ಟು ಬೆಂಗಳೂರು, ಕೇವಲ 1 ಗಂಟೆ 10 ನಿಮಿಷಕ್ಕೆ ಪ್ರಯಾಣಿಸಿ!
“ನಾವು ಇಲ್ಲಿಯವರೆಗೆ ಎಲೆಕ್ಟ್ರಿಕ್ ಬಸ್ಗಳ ತಯಾರಕರಿಂದ 12 ಬಸ್‌ಗಳನ್ನು ಪಡೆದಿದ್ದೇವೆ. ಆಗಸ್ಟ್ ಮೊದಲ ವಾರದ ವೇಳೆಗೆ 100 ಬಸ್‌ಗಳನ್ನು ಸೇರ್ಪಡೆಗೊಳಿಸಲಾಗುವುದು. ಅಕ್ಟೋಬರ್ ವೇಳೆಗೆ ಎಲ್ಲಾ 300 ಬಸ್‌ಗಳು ನಗರದ ರಸ್ತೆಗಳಲ್ಲಿ ಸಂಚರಿಸಲಿವೆ. ಚಾಲಕ ಸೇರಿದಂತೆ 41 ಆಸನಗಳ ಬಸ್‌ಗಳು ಒಮ್ಮೆ ಚಾರ್ಜ್ ಮಾಡಿದರೆ 150 ಕಿಮೀ ಸಂಚರಿಸುತ್ತವೆ. ಹೀಗಾಗಿ ಬೆಂಗಳೂರು ನಗರದಲ್ಲಿ ಎಲೆಕ್ಟ್ರಿಕ್ ಬಸ್ಗಳ ಸಂಚಾರ ಹೆಚ್ಚಾಗಲಿವೆ.
ಒಟ್ಟು 225 ಕಿಲೋ ಮೀಟರ್ ಸಂಚರಿಸಬಲ್ಲದು ಎಲೆಕ್ಟ್ರಾನಿಕ್ ಬಸ್
ಹೀಗಾಗಿ ದೂರದ ಮಾರ್ಗಗಳಲ್ಲಿ ಈ ಬಸ್‌ಗಳನ್ನು ಓಡಿಸಲು ನಾವು ಯೋಜಿಸುತ್ತಿದ್ದೇವೆ. 45 ನಿಮಿಷ ಚಾರ್ಜ್ ಮಾಡಿದ ನಂತರ ಮತ್ತೊಮ್ಮೆ ಅವಕಾಶ ಸಿಕ್ಕಾಗ ಚಾರ್ಜ್ ಹಾಕಿದರೂ ಮತ್ತೆ 75 ಕಿಮೀ ಬಸ್ ಸಂಚರಿಸಬಹುದು.” ಇದರರ್ಥ ಪ್ರತಿ ಬಸ್ಸು 225 ಕಿಮೀ ಕ್ರಮಿಸಬಲ್ಲದು ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೀಗಾಗಿ ಬೆಂಗಳೂರು ನಗರದಲ್ಲಿ ಇನ್ನಷ್ಟು ಎಲೆಕ್ಟ್ರಿಕ್ ಬಸ್‌ಗಳು ಸಂಚರಿಸಲಿದ್ದು ಓಡಾಟಕ್ಕೆ ಅನುಕೂಲವಾಗಲಿದೆ.
ಇದನ್ನೂ ಓದಿ: Guledagudda Khana Notebooks: ಗುಳೇದಗುಡ್ಡ ಖಣದಿಂದ ನೋಟ್ಬುಕ್! ಏನಿದರ ವಿಶೇಷ? ಎಲ್ಲಿ ಸಿಗುತ್ತೆ?
ಈ ಎಲೆಕ್ಟ್ರಿಕ್ ಬಸ್‌ಗಳು ಯಲಹಂಕ, ಬಿಡದಿ ಮತ್ತು ಅತ್ತಿಬೆಲೆ, ಈ ಮೂರು ಡಿಪೋಗಳಿಂದ ಪೆರಿಫೆರಲ್ ರಸ್ತೆಗಳ ಮೂಲಕ ಕಾರ್ಯನಿರ್ವಹಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ನಾವು ಈ ಇ-ಬಸ್‌ಗಳನ್ನು ಮೊದಲು ಯಲಹಂಕ ಡಿಪೋದಿಂದ ಓಡಿಸಲು ಯೋಜಿಸುತ್ತಿದ್ದೇವೆ. ಇ-ಬಸ್‌ಗಳು ವೀಲ್‌ಚೇರ್ ಲಿಫ್ಟಿಂಗ್‌ನಂತಹ ಸೌಲಭ್ಯಗಳೊಂದಿಗೆ ವಿಶೇಷಚೇತನರ ಸ್ನೇಹಿಯಾಗಿರಲಿವೆ ” ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ