• Home
  • »
  • News
  • »
  • bengaluru-urban
  • »
  • Bengaluru Namma Metro: ನಮ್ಮ ಮೆಟ್ರೋ ಹಳದಿ ಮಾರ್ಗ ಶೀಘ್ರವೇ ಶುರು!

Bengaluru Namma Metro: ನಮ್ಮ ಮೆಟ್ರೋ ಹಳದಿ ಮಾರ್ಗ ಶೀಘ್ರವೇ ಶುರು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Bengaluru News: ಈ ಮಾರ್ಗದ ಕೆಲಸ ಕಾಮಗಾರಿಗಳೂ ಬಹುತೇಕ ಮುಕ್ತಾಯಗೊಂಡಿದ್ದು ಸದ್ಯದಲ್ಲೇ ಸಾರ್ವಜನಿಕರ ಅನುಕೂಲಕ್ಕಾಗಿ ಸಂಚಾರ ಆರಂಭವಾಗಲಿದೆ.

  • News18 Kannada
  • Last Updated :
  • Bangalore [Bangalore], India
  • Share this:

    ಬೆಂಗಳೂರಿನ ನಾಗರಿಕರಿಗೆ ಶುಭಸುದ್ದಿಯೊಂದು (Bengaluru News) ಹೊರಬಿದ್ದಿದೆ. ನಮ್ಮ ಮೆಟ್ರೋ (Bengaluru Namma Metro) ಆರ್‌.ವಿ.ರಸ್ತೆ- ಬೊಮ್ಮಸಂದ್ರ ಮಾರ್ಗದಲ್ಲಿ ಬೆಂಗಳೂರಿನ ನಾಗರಿಕರಿಗೆ ಶುಭಸುದ್ದಿಯೊಂದು ಹೊರಬಿದ್ದಿದೆ. ನಮ್ಮ ಮೆಟ್ರೋ ಹಳದಿ ಮಾರ್ಗವು  (Namma Metro Yellow Line) ಆರ್‌.ವಿ.ರಸ್ತೆ- ಬೊಮ್ಮಸಂದ್ರಕ್ಕೆ ಸಂಚಾರ ಒದಗಿಸಲಿದೆ. ಈ ಮಾರ್ಗದ ಕೆಲಸ ಕಾಮಗಾರಿಗಳೂ ಬಹುತೇಕ ಮುಕ್ತಾಯಗೊಂಡಿದ್ದು ಸದ್ಯದಲ್ಲೇ ಸಾರ್ವಜನಿಕರ ಅನುಕೂಲಕ್ಕಾಗಿ ಸಂಚಾರ ಆರಂಭವಾಗಲಿದೆ.


    ಆರ್‌.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದ 18.82 ಕಿಲೋ ಮೀಟರ್ ಉದ್ದದ ಮೆಟ್ರೋ ರೈಲು ಸಂಚಾರದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಸಿದ್ಧವಾಗುತ್ತಿದೆ. ಹೀಗಾಗಿ ಶೀಘ್ರದಲ್ಲೆ ಈ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಸೇವೆ ಆರಂಭಗೊಳ್ಳಲಿದೆ. ಅಲ್ಲದೇ ಈ ಮಾರ್ಗಕ್ಕೆ ಹಳದಿ ಮಾರ್ಗ ಎಂದು ಹೆಸರಿಸಲಾಗಿದ್ದು 2023ರ ಜೂನ್ ತಿಂಗಳಿನಿಂದ ಮುಕ್ತ ಸಂಚಾರ ಆರಂಭಗೊಳ್ಳುವ ನಿರೀಕ್ಷೆಯನ್ನು ಹೊಂದಲಾಗಿದೆ.


    ಎಲ್ಲೆಲ್ಲಿ ನಿಲ್ಲಲಿದೆ ಹಳದಿ ಬಣ್ಣದ ಮೆಟ್ರೋ?
    ಆರ್‌.ವಿ.ರಸ್ತೆ, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್‌, ಸೆಂಟ್ರಲ್‌ ಸಿಲ್ಕ್ ಬೋರ್ಡ್‌, ಬೊಮ್ಮನಹಳ್ಳಿ, ಹೊಂಗಸಂದ್ರ, ಕೂಡ್ಲುಗೇಟ್‌, ಸಿಂಗಸಂದ್ರ, ಹೊಸ ರಸ್ತೆ, ಬೆರಟೇನ ಅಗ್ರಹಾರ, ಎಲೆಕ್ಟ್ರಾನಿಕ್‌ ಸಿಟಿ, ಇನ್ಫೋಸಿಸ್‌ ಫೌಂಡೇಶನ್‌ ಕೋನಪ್ಪನ ಅಗ್ರಹಾರ, ಹುಸ್ಕೂರು ರಸ್ತೆ, ಹೆಬ್ಬಗೋಡಿ ಮತ್ತು ಬೊಮ್ಮಸಂದ್ರ- ಇವು ಹಳದಿ ಬಣ್ಣದ ಮೆಟ್ರೋ ರೈಲು ನಿಲ್ಲುವ ನಿಲ್ದಾಣಗಳಾಗಿವೆ.


    ಇದನ್ನೂ ಓದಿ: KSRTC ಬಸ್​ಗಳಲ್ಲಿ ಇಷ್ಟು ಕೆಜಿ ಲಗೇಜ್​ ಸಾಗಣೆ ಉಚಿತ! ನಾಯಿ ಸಾಗಣೆಗೆ ಶುಲ್ಕವೆಷ್ಟು?


    4 ಸಾವಿರ ಕೋಟಿಗೂ ಹೆಚ್ಚು ಹಣದಲ್ಲಿ ನಿರ್ಮಾಣ
    ಬೊಮ್ಮಸಂದ್ರ-ಬೆರಟೇನ ಅಗ್ರಹಾರ ಪ್ರದೇಶಗಳ ನಡುವೆ 6.38 ಕಿ.ಮೀ ಮಾರ್ಗ, ಬೆರಟೇನ ಅಗ್ರಹಾರ-ಬೊಮ್ಮನಹಳ್ಳಿ ನಡುವಿನ 6.38 ಕಿ.ಮೀ ಮಾರ್ಗದಲ್ಲಿ ಈ ಹಳದಿ ಮೆಟ್ರೊ ಸಂಚಾರ ನಡೆಸಲಿದೆ. ಒಟ್ಟು 4 ಸಾವಿರ ಕೋಟಿಗೂ ಹೆಚ್ಚು ಹಣದಲ್ಲಿ ಹಳದಿ ಮಾರ್ಗದ ಮೆಟ್ರೋವನ್ನು ನಿರ್ಮಾಣ ಮಾಡಲಾಗಿದೆ.


    ಇದನ್ನು ಓದಿ: God Sanjeeva Murthy: ಕಾಣೋಕೆ ಆಂಜನೇಯನಂತಿದ್ರೂ, ಅವನಲ್ಲ! ಈತ ಸೈನಿಕರನ್ನು ಕಾಪಾಡೋ ಸಂಜೀವ ಮೂರ್ತಿ!


    ಟ್ರಾಫಿಕ್ ಕಿರಿಕಿರಿಗೆ ಬೀಳಲಿದೆ ಬ್ರೇಕ್
    ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಮಾಡುವುದರಿಂದ ಬೆಂಗಳೂರಿನ ಪ್ರಯಾಣಿಕರಿಗೆ ಟ್ರಾಫಿಕ್ ಕಿರಿಕಿರಿ ತಪ್ಪಲಿದೆ ಎಂದೇ ಹೇಳಲಾಗಿದೆ.  ಬೆಂಗಳೂರು ಮಹಾನಗರದಲ್ಲಿ ಟ್ರಾಫಿಕ್ ಕಿರಿಕಿರಿಯನ್ನು ತಪ್ಪಿಸುವ ಮಹತ್ವದ ಉದ್ದೇಶದಿಂದ ಮೆಟ್ರೋ ಮಾರ್ಗಗಳನ್ನು ಹಂತಹಂತವಾಗಿ ವಿಸ್ತರಣೆ ಮಾಡಲಾಗುತ್ತಿದೆ. 

    Published by:ಗುರುಗಣೇಶ ಡಬ್ಗುಳಿ
    First published: