ಬೆಂಗಳೂರು: ಇಂದು (ಜೂನ್ 25, ಶನಿವಾರ) ಬೆಂಗಳೂರು ನಮ್ಮ ಮೆಟ್ರೋ ಸಂಚಾರ ಸೇವೆಯಲ್ಲಿ (Bengaluru Namma Metro Service)ವ್ಯತ್ಯಯ ಉಂಟಾಗಲಿದೆ. ಬಿಎಂಆರ್‌ಸಿಎಲ್ (BMRCL) ಮಾಹಿತಿ ನೀಡಿದೆ. ನೇರಳೆ ಮಾರ್ಗದ ಎಂಜಿ ರಸ್ತೆ ಮತ್ತು ಟ್ರಿನಿಟಿ ಮೆಟ್ರೋ ನಿಲ್ದಾಣಗಳ ನಡುವೆ ಶನಿವಾರ, ಜೂನ್ 25 ರಂದು ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು. ಈ ಮಾರ್ಗವನ್ನು ರಾತ್ರಿ 9.30 ರಿಂದ ಮುಚ್ಚಲಾಗುವುದು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ನೇರಳೆ ಮಾರ್ಗದ (Namma Metro Purple Line) ವಿಸ್ತರಣೆಯಲ್ಲಿ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಈ ಕಾರಣ ಎಂಜಿ ರಸ್ತೆ ಮತ್ತು ಟ್ರಿನಿಟಿ ಮೆಟ್ರೋ ನಿಲ್ದಾಣಗಳ ನಡುವೆ ಇಂದು ರಾತ್ರಿ 9:30ಕ್ಕೆ ಸೇವೆ ಕೊನೆಗೊಳ್ಳಲಿದೆ.
ನಿರ್ವಹಣಾ ಕಾಮಗಾರಿಗಳಿಗಾಗಿ ಎಂಜಿ ರಸ್ತೆ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳ ನಡುವೆ ರಾತ್ರಿ 9.30 ರಿಂದ ಮೆಟ್ರೋ ಸೇವೆಯನ್ನು ಮೊಟಕುಗೊಳಿಸಲಾಗಿದೆ. ಕೆಂಗೇರಿಯಿಂದ ಬೈಯಪ್ಪನಹಳ್ಳಿ ಕಡೆಗೆ ಹೋಗುವ ಕೊನೆಯ ರೈಲು ರಾತ್ರಿ 8.40 ಕ್ಕೆ ಹೊರಟರೆ, ಬೈಯಪ್ಪನಹಳ್ಳಿಯಿಂದ ಕೆಂಗೇರಿ ಕಡೆಗೆ ಹೋಗುವ ಕೊನೆಯ ರೈಲು ರಾತ್ರಿ 9.30 ಕ್ಕೆ ಹೊರಡಲಿದೆ. ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಬೈಯಪ್ಪನಹಳ್ಳಿ ಕಡೆಗೆ ಕೊನೆಯ ರೈಲು ರಾತ್ರಿ 9.10 ಕ್ಕೆ ಹೊರಡಲಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆ ತಿಳಿಸಿದೆ.
ಭಾನುವಾರ, ಜೂನ್ 26 ರಂದು, ಇಡೀ ನೇರಳೆ ಮಾರ್ಗದಲ್ಲಿ ಬೆಳಿಗ್ಗೆ 7 ರಿಂದ ಮೆಟ್ರೋ ರೈಲು ಸೇವೆಗಳು ಸಾಮಾನ್ಯ ರೀತಿಯಲ್ಲಿ ಪುನರಾರಂಭಗೊಳ್ಳಲಿವೆ ಎಂದು ಹೇಳಿಕೆ ತಿಳಿಸಿದೆ. ಬೆಂಗಳೂರು ಮೆಟ್ರೋದ ಹಸಿರು ಮಾರ್ಗವು ಎಂದಿನಂತೆಯೇ ಸೇವೆ ಒದಗಿಸಲಿದೆ.
ಇದನ್ನೂ ಓದಿ: Electric Buses In Bengaluru: ಬೆಂಗಳೂರು ಜನರಿಗೆ ಖುಷಿ ಸುದ್ದಿ! ಈ ಮಾರ್ಗಗಳಲ್ಲಿ 300 ಎಲೆಕ್ಟ್ರಿಕ್ ಬಸ್ ಸಂಚಾರ
ಮಡಚಬಹುದಾದ ಸೈಕಲ್ ಸಾಗಿಸಲು ಅನುಮತಿ ನೀಡಿದ್ದ ಮೆಟ್ರೋ
ಇತ್ತೀಚಿನ ಆದೇಶದಲ್ಲಿ BMRCL ತನ್ನ ಹಸಿರು ಉಪಕ್ರಮದ ಭಾಗವಾಗಿ ರೈಲುಗಳಲ್ಲಿ ಮಡಚಬಹುದಾದ ಸೈಕಲ್‌ಗಳನ್ನು ಸಾಗಿಸಲು ಪ್ರಯಾಣಿಕರಿಗೆ ಅನುಮತಿಸಲಾಗುವುದು ಎಂದು ಹೇಳಿದೆ. ಮಡಚಬಹುದಾದ ಬೈಸಿಕಲ್‌ನ ಗಾತ್ರವು 60 CM X 45 CM X 25 CM ಅನ್ನು ಮೀರಬಾರದು. 15 ಕೆಜಿ ತೂಕವನ್ನು ಮೀರಬಾರದು.
ಇದನ್ನೂ ಓದಿ: Bidar To Bengaluru: ಬೀದರ್ ಟು ಬೆಂಗಳೂರು, ಕೇವಲ 1 ಗಂಟೆ 10 ನಿಮಿಷಕ್ಕೆ ಪ್ರಯಾಣಿಸಿ!
ಪ್ರವೇಶದ ಸಮಯದಲ್ಲಿ ಬ್ಯಾಗೇಜ್ ಸ್ಕ್ಯಾನರ್ ಮೂಲಕ ಭದ್ರತಾ ತಪಾಸಣೆಗೆ ಒಳಪಡಿಸಲಾಗುತ್ತದೆ ಎಂದು BMRCL ಹೇಳಿದೆ. BMRCL 2016 ರಿಂದ ಫೋಲ್ಡಬಲ್ ಸೈಕಲ್‌ಗಳ ಕ್ಯಾರೇಜ್ ಅನ್ನು ಅನುಮತಿಸಿದ್ದರೂ, ಜೂನ್ 7, 2022 ರಂದು ಅಧಿಕೃತಗೊಳಿಸಲಾಗಿದೆ. ಸೈಕ್ಲಿಸ್ಟ್‌ಗಳು ತಮ್ಮ ಫೋಲ್ಡಬಲ್ ಸೈಕಲ್‌ಗಳಿಗೆ ಲಗೇಜ್ ಶುಲ್ಕವನ್ನು ಪಾವತಿಸುವುದರಿಂದ ವಿನಾಯಿತಿ ಪಡೆಯಬಹುದು ಎಂದು BMRCL ಸ್ಪಷ್ಟಪಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ