• Home
  • »
  • News
  • »
  • bengaluru-urban
  • »
  • Metro Tickets In WhatsApp: ವಾಟ್ಸಪ್​​​ನಲ್ಲೇ ಹೀಗೆ ಮೆಟ್ರೋ ಟಿಕೆಟ್ ಖರೀದಿಸಬಹುದು!

Metro Tickets In WhatsApp: ವಾಟ್ಸಪ್​​​ನಲ್ಲೇ ಹೀಗೆ ಮೆಟ್ರೋ ಟಿಕೆಟ್ ಖರೀದಿಸಬಹುದು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇನ್ಮೇಲೆ ಮೆಟ್ರೋ ಟಿಕೆಟ್ ಖರೀದಿ ಮಾಡಲು ಸಾಲಲ್ಲಿ ನಿಲ್ಲಬೇಕಿಲ್ಲ. ನೀವು ನಿಮ್ಮ ಕೈಲಿರುವ ಸ್ಮಾರ್ಟ್​ಫೋನ್ ಮೂಲಕವೇ ಅತ್ಯಂತ ಸುಲಭವಾಗಿ ನಮ್ಮ ಮೆಟ್ರೋ ಟಿಕೆಟ್ ಖರೀದಿ ಮಾಡಬಹುದು.

  • News18 Kannada
  • Last Updated :
  • Bangalore [Bangalore], India
  • Share this:

    ಬೆಂಗಳೂರಿನ ನಮ್ಮ ಮೆಟ್ರೋ (Bengaluru Namma Metro) ಕನ್ನಡಿಗರಿಗೆ ಹೊಸ ಸೌಲಭ್ಯವನ್ನು ಆರಂಭಿಸಿದೆ. ಇನ್ಮೇಲೆ ಮೆಟ್ರೋ ಟಿಕೆಟ್ ಖರೀದಿ ಮಾಡಲು ಸಾಲಲ್ಲಿ ನಿಲ್ಲಬೇಕಿಲ್ಲ. ನೀವು ನಿಮ್ಮ ಕೈಲಿರುವ ಸ್ಮಾರ್ಟ್​ಫೋನ್ ಮೂಲಕವೇ ಅತ್ಯಂತ ಸುಲಭವಾಗಿ ನಮ್ಮ ಮೆಟ್ರೋ ಟಿಕೆಟ್ ಖರೀದಿ ಮಾಡಬಹುದು. WhatsApp ಚಾಟ್ಬಾಟ್ ಆಧಾರಿತ QR ಕೋಡ್ ಟಿಕೆಟಿಂಗ್ ವ್ಯವಸ್ಥೆಯನ್ನು ಬಳಸಿಕೊಂಡು ನಮ್ಮ ಮೆಟ್ರೋ ಸುಲಭವಾಗಿ ಟಿಕೆಟ್ ಖರೀದಿ (How To Book Tickets Using WhatsApp) ವ್ಯವಸ್ಥೆ ಆರಂಭಿಸಿದೆ. ವಾಟ್ಸ್​ಆ್ಯಪ್ ಮೂಲಕವೇ ಟಿಕೆಟ್ಗಳನ್ನು ಹೇಗೆ ಬುಕ್ ಮಾಡಬಹುದು? ನಿಮ್ಮ ಮೆಟ್ರೋ ಕಾರ್ಡ್ಗಳನ್ನು (Metro Card Recharge) ರೀಚಾರ್ಜ್ ಮಾಡಬಹುದು? ಅರೇ! ಇದು ಹೇಗೆ ಅಂತ ಅಂದ್ಕೊಂಡ್ರಾ? ನಾವ್ ಹೇಳ್ತೀವಿ ಓದಿ.


    ಟಿಕೆಟ್ ಬುಕ್ ಮಾಡುವುದು ಹೇಗೆ?
    ಹೊಸದಾಗಿ ಪರಿಚಯಿಸಲಾದ ವಾಟ್ಸ್ಆ್ಯಪ್ ಚಾಟ್‌ಬಾಟ್ ಟಿಕೆಟಿಂಗ್ ವ್ಯವಸ್ಥೆಯನ್ನು ಸುಲಭವಾಗಿ ಬಳಕೆ ಮಾಡಬಹುದು. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMCRL) WhatsApp ಸಂಖ್ಯೆ 8105556677. ಮೊದಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್​ನಲ್ಲಿ ಸೇವ್ ಮಾಡಿಕೊಳ್ಳಿ.


    ನೀವು WhatsApp ಸಂಖ್ಯೆ 8105556677 ​ಗೆ 'ಹಾಯ್' ಎಂದು ಕಳುಹಿಸಿ. ಆಗ ನಿಮಗೆ ಮೂರು ಆಯ್ಕೆಗಳನ್ನು ಸಿಗುತ್ತವೆ.


    ಈಗ ಕಾಣಿಸುವ ಆಯ್ಕೆಗಳು ಹೀಗಿರುತ್ತವೆ:


    1. QR ಟಿಕೆಟ್‌ಗಳು


    2. ಕಾರ್ಡ್ ಮಾಹಿತಿ ಮತ್ತು ರೀಚಾರ್ಜ್


    3. ಇನ್ನಷ್ಟು ಆಯ್ಕೆಗಳು


    ನೀವು ಮೊದಲು QR ಟಿಕೆಟ್‌ಗಳ ಆಯ್ಕೆಯನ್ನು ಆರಿಸಿ. ನೀವು ಟಿಕೆಟ್ ಕಾಯ್ದಿರಿಸಲು ಬಯಸಿದರೆ, 'ಟಿಕೆಟ್ ಖರೀದಿಸಿ' ಆಯ್ಕೆಯನ್ನು ಟ್ಯಾಪ್ ಮಾಡಿ. ಈ ಆಯ್ಕೆಯಡಿ ನಿಮ್ಮ ಅಸ್ತಿತ್ವದಲ್ಲಿರುವ ಟಿಕೆಟ್ ಅನ್ನು ಸಹ ನೀವು ರದ್ದುಗೊಳಿಸಬಹುದು. ನಿಮ್ಮ ಇತ್ತೀಚಿನ ಪ್ರಯಾಣಗಳನ್ನು ಇಲ್ಲಿ ಪರಿಶೀಲಿಸಬಹುದು.


    ನೀವು 'ಟಿಕೆಟ್ ಖರೀದಿಸಿ' ಆಯ್ಕೆಯನ್ನು ಆರಿಸಿದಾಗ ಮೂರು ಆಯ್ಕೆಗಳು ಕಾಣಿಸುತ್ತವೆ.


    'ಸ್ಥಳ ಹಂಚಿಕೆ', 'ಟೈಪ್ ಸ್ಟೇಷನ್ ಹೆಸರು' ಮತ್ತು 'ಪಟ್ಟಿಯಿಂದ ಹುಡುಕಿ'. ನಿಮ್ಮ ಬಳಿ ಮೆಟ್ರೋ ನಿಲ್ದಾಣವನ್ನು ಹುಡುಕಲು ನೀವು ಪ್ರಯತ್ನಿಸುತ್ತಿರುವಾಗ 'ಸ್ಥಳವನ್ನು ಹಂಚಿಕೊಳ್ಳಿ' ಆಯ್ಕೆಯನ್ನು ಆರಿಸಿಕೊಳ್ಳಿ.


    ಇದನ್ನೂ ಓದಿ: KSRTC ಬಸ್​ಗಳಲ್ಲಿ ಇಷ್ಟು ಕೆಜಿ ಲಗೇಜ್​ ಸಾಗಣೆ ಉಚಿತ! ನಾಯಿ ಸಾಗಣೆಗೆ ಶುಲ್ಕವೆಷ್ಟು?


    ತಪ್ಪಾದ ನಿಲ್ದಾಣದ ಹೆಸರನ್ನು ನಮೂದಿಸಿದರೆ ಮುಂದೇನು ಮಾಡಬೇಕು?
    ನೀವು ಮೂಲ ಮತ್ತು ಗಮ್ಯಸ್ಥಾನದ ನಿಲ್ದಾಣವನ್ನು ನಮೂದಿಸಿದ ನಂತರ 'ಮುಂದುವರಿಯಿರಿ' ಅನ್ನು ಆಯ್ಕೆ ಟ್ಯಾಪ್ ಮಾಡಿ. WhatsApp Pay ಅನ್ನು ಬಳಸಿಕೊಂಡು ಪಾವತಿಸಲು ಅಥವಾ UPI, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅನ್ನು ಬಳಸಿಕೊಂಡು ಆನ್‌ಲೈನ್‌ನಲ್ಲಿ ಪಾವತಿ ಮಾಡುವ ಆಯ್ಕೆಯನ್ನು ನೀವು ಹೊಂದಿರುತ್ತೀರಿ. ಟಿಕೆಟ್ ಬುಕ್ ಮಾಡುವಾಗ ನೀವು ತಪ್ಪಾದ ನಿಲ್ದಾಣದ ಹೆಸರನ್ನು ನಮೂದಿಸಿದರೆ ನಮ್ಮ ಮೆಟ್ರೋ WhatsApp ಚಾಟ್‌ಬಾಟ್ ಟಿಕೆಟ್‌ಗಳನ್ನು ರದ್ದುಗೊಳಿಸಬಹುದು.


    ಇದನ್ನೂ ಓದಿ: Bengaluru Namma Metro: ನಮ್ಮ ಮೆಟ್ರೋ ಹಳದಿ ಮಾರ್ಗ ಶೀಘ್ರವೇ ಶುರು!

    ಜೊತೆಗೆ ಸ್ವಯಂಚಾಲಿತವಾಗಿ ಮೊತ್ತವನ್ನು ಮರುಪಾವತಿ ಮಾಡಬಹುದು. ಟಿಕೆಟ್‌ಗಳನ್ನು ಬುಕ್ ಮಾಡುವುದರ ಜೊತೆಗೆ, ಬಳಕೆದಾರರು ತಮ್ಮ ಅಸ್ತಿತ್ವದಲ್ಲಿರುವ ಮೆಟ್ರೋ ಕಾರ್ಡ್‌ಗಳನ್ನು ರೀಚಾರ್ಜ್ ಮಾಡಬಹುದು.


    ಶೀಘ್ರದಲ್ಲೇ ಶುರುವಾಗಲಿದೆ ಮೆಟ್ರೋ ಹಳದಿ ಮಾರ್ಗ
    ನಮ್ಮ ಮೆಟ್ರೋ ಆರ್‌.ವಿ.ರಸ್ತೆ- ಬೊಮ್ಮಸಂದ್ರ ಮಾರ್ಗದಲ್ಲಿ ಬೆಂಗಳೂರಿನ ನಾಗರಿಕರಿಗೆ ಶುಭಸುದ್ದಿಯೊಂದು ಹೊರಬಿದ್ದಿದೆ. ನಮ್ಮ ಮೆಟ್ರೋ ಹಳದಿ ಮಾರ್ಗವು ಆರ್‌.ವಿ.ರಸ್ತೆ- ಬೊಮ್ಮಸಂದ್ರಕ್ಕೆ ಸಂಚಾರ ಒದಗಿಸಲಿದೆ. ಈ ಮಾರ್ಗದ ಕೆಲಸ ಕಾಮಗಾರಿಗಳೂ ಬಹುತೇಕ ಮುಕ್ತಾಯಗೊಂಡಿದ್ದು ಸದ್ಯದಲ್ಲೇ ಸಾರ್ವಜನಿಕರ ಅನುಕೂಲಕ್ಕಾಗಿ ಸಂಚಾರ ಆರಂಭವಾಗಲಿದೆ.

    Published by:ಗುರುಗಣೇಶ ಡಬ್ಗುಳಿ
    First published: