• Home
 • »
 • News
 • »
 • bengaluru-urban
 • »
 • Bengaluru Namma Metro: ರಾಜ್ಯೋತ್ಸವಕ್ಕೆ ನಮ್ಮ ಮೆಟ್ರೋ ಭರ್ಜರಿ ಕೊಡುಗೆ; ಹೊಸ ಸೌಲಭ್ಯ ಆರಂಭ

Bengaluru Namma Metro: ರಾಜ್ಯೋತ್ಸವಕ್ಕೆ ನಮ್ಮ ಮೆಟ್ರೋ ಭರ್ಜರಿ ಕೊಡುಗೆ; ಹೊಸ ಸೌಲಭ್ಯ ಆರಂಭ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇದರಿಂದ ಪ್ರಯಾಣಿಕರ ಸಮಯ ಉಳಿತಾಯವಾಗಲಿದೆ. ಅಲ್ಲದೇ ಚಿಲ್ಲರೆ ಸಮಸ್ಯೆ ದೂರಮಾಡೋ ಉದ್ದೇಶದಿಂದ ಹೊಸ ಯೋಜನೆಯನ್ನು ಆರಂಭಿಸಲಾಗಿದೆ.

 • News18 Kannada
 • Last Updated :
 • Bangalore [Bangalore], India
 • Share this:

  ಬೆಂಗಳೂರು: ಕರ್ನಾಟಕ ರಾಜ್ಯೋತ್ಸವಕ್ಕೆ (Karnataka Rajyotsava)  ಬೆಂಗಳೂರಿನ ನಮ್ಮ ಮೆಟ್ರೋ (Bengaluru Namma Metro) ಭರ್ಜರಿ ಕೊಡುಗೆ ಘೋಷಿಸಿದೆ. ನಾಳೆಯಿಂದ ಅಂದರೆ, ನವೆಂಬರ್ 1ರಿಂದ ಕ್ಯೂ ಆರ್ ಕೋಡ್ ಮೂಲಕ ಎಂಟ್ರಿ ಎಕ್ಸಿಟ್ ಅವಕಾಶ ನೀಡುವ ಸೌಲಭ್ಯವನ್ನು ಆರಂಭಿಸಲಿದೆ.  ಪ್ರಯಾಣಕರು ನವೆಂಬರ್ 1 ರಿಂದ ತಮ್ಮ ಮೊಬೈಲ್​ಗಳಲ್ಲೇ ಟಿಕೆಟ್ ಖರೀದಿಸಿ ಪ್ರಯಾಣಕ್ಕೆ ಅವಕಾಶವನ್ನು ನಮ್ಮ ಮೆಟ್ರೋ (Namma Metro) ಒದಗಿಸಲಿದೆ. ಇದರಿಂದ ಪ್ರಯಾಣಿಕರ ಸಮಯ ಉಳಿತಾಯವಾಗಲಿದೆ. ಅಲ್ಲದೇ ಚಿಲ್ಲರೆ ಸಮಸ್ಯೆ ದೂರಮಾಡೋ ಉದ್ದೇಶದಿಂದ ಹೊಸ ಯೋಜನೆಯನ್ನು ಆರಂಭಿಸಲಾಗಿದೆ.


  ಮೊಬೈಲ್​ನಲ್ಲೇ ಎಂಟ್ರಿ ಗೇಟ್​ನಲ್ಲಿ ಸ್ಕ್ಯಾನ್ ಮಾಡಿ ಪ್ರವೇಶ ಪಡೆಯಬಹುದಾಗಿದೆ ಎಂದು BMRCL ಅಧಿಕೃತ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.


  ಮೊಬೈಲ್​ನಲ್ಲೇ ಟಿಕೆಟ್ ಖರೀದಿ ಮಾಡುವುದು ಹೇಗೆ?
  BMRCL ಪ್ರಯಾಣಿಕರು ಒಂದೇ ಪ್ರಯಾಣದ QR ಟಿಕೆಟ್‌ಗಳನ್ನು ನಮ್ಮ ಮೆಟ್ರೋ ಮೊಬೈಲ್ ಅಪ್ಲಿಕೇಶನ್ ಅಥವಾ WhatsApp ಮೂಲಕ ಖರೀದಿಸಬಹುದು. ಆಂಡ್ರಾಯ್ಡ್ ಮೊಬೈಲ್ ಫೋನ್ ಬಳಸುವವರು ಪ್ಲೇಸ್ಟೋರ್‌ನಲ್ಲಿ ನಮ್ಮ ಮೆಟ್ರೋ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಟಿಕೆಟ್ ಖರೀದಿಸಲು ನೋಂದಾಯಿಸಿಕೊಳ್ಳಬಹುದು ಎಂದು ಮಾಹಿತಿ ನೀಡಲಾಗಿದೆ.


  ದಾಖಲೆ ನಿರ್ಮಿಸಿದ ಬೆಂಗಳೂರು ನಮ್ಮ ಮೆಟ್ರೋ
  ವಾಟ್ಸಾಪ್‌ನಲ್ಲಿ ಎಂಡ್ ಟು ಎಂಡ್ ಟಿಕೆಟಿಂಗ್ ವ್ಯವಸ್ಥೆಯನ್ನು ಪರಿಚಯಿಸಿದ ವಿಶ್ವದ ಮೊದಲ ಸಾರಿಗೆ ಸೇವೆ ನಮ್ಮ ಮೆಟ್ರೋ ಎಂದು ಬಿಎಂಆರ್‌ಸಿಎಲ್ ಹೇಳಿಕೊಂಡಿದೆ.


  ಶೀಘ್ರದಲ್ಲೇ ಶುರುವಾಗಲಿದೆ ಮೆಟ್ರೋ ಹಳದಿ ಮಾರ್ಗ
  ನಮ್ಮ ಮೆಟ್ರೋ ಆರ್‌.ವಿ.ರಸ್ತೆ- ಬೊಮ್ಮಸಂದ್ರ ಮಾರ್ಗದಲ್ಲಿ ಬೆಂಗಳೂರಿನ ನಾಗರಿಕರಿಗೆ ಶುಭಸುದ್ದಿಯೊಂದು ಹೊರಬಿದ್ದಿದೆ. ನಮ್ಮ ಮೆಟ್ರೋ ಹಳದಿ ಮಾರ್ಗವು ಆರ್‌.ವಿ.ರಸ್ತೆ- ಬೊಮ್ಮಸಂದ್ರಕ್ಕೆ ಸಂಚಾರ ಒದಗಿಸಲಿದೆ. ಈ ಮಾರ್ಗದ ಕೆಲಸ ಕಾಮಗಾರಿಗಳೂ ಬಹುತೇಕ ಮುಕ್ತಾಯಗೊಂಡಿದ್ದು ಸದ್ಯದಲ್ಲೇ ಸಾರ್ವಜನಿಕರ ಅನುಕೂಲಕ್ಕಾಗಿ ಸಂಚಾರ ಆರಂಭವಾಗಲಿದೆ.


  ಇದನ್ನೂ ಓದಿ: Masjid Tour: ಮಸೀದಿ ಒಳಗೆ ಏನೆಲ್ಲಾ ಇರುತ್ತೆ? ಇಲ್ಲಿ ಸಿಗುತ್ತೆ ಉತ್ತರ


  ಆರ್‌.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದ 18.82 ಕಿಲೋ ಮೀಟರ್ ಉದ್ದದ ಮೆಟ್ರೋ ರೈಲು ಸಂಚಾರದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಸಿದ್ಧವಾಗುತ್ತಿದೆ. ಹೀಗಾಗಿ ಶೀಘ್ರದಲ್ಲೆ ಈ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಸೇವೆ ಆರಂಭಗೊಳ್ಳಲಿದೆ. ಅಲ್ಲದೇ ಈ ಮಾರ್ಗಕ್ಕೆ ಹಳದಿ ಮಾರ್ಗ ಎಂದು ಹೆಸರಿಸಲಾಗಿದ್ದು 2023ರ ಜೂನ್ ತಿಂಗಳಿನಿಂದ ಮುಕ್ತ ಸಂಚಾರ ಆರಂಭಗೊಳ್ಳುವ ನಿರೀಕ್ಷೆಯನ್ನು ಹೊಂದಲಾಗಿದೆ.


  ಎಲ್ಲೆಲ್ಲಿ ನಿಲ್ಲಲಿದೆ ಹಳದಿ ಬಣ್ಣದ ಮೆಟ್ರೋ?
  ಆರ್‌.ವಿ.ರಸ್ತೆ, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್‌, ಸೆಂಟ್ರಲ್‌ ಸಿಲ್ಕ್ ಬೋರ್ಡ್‌, ಬೊಮ್ಮನಹಳ್ಳಿ, ಹೊಂಗಸಂದ್ರ, ಕೂಡ್ಲುಗೇಟ್‌, ಸಿಂಗಸಂದ್ರ, ಹೊಸ ರಸ್ತೆ, ಬೆರಟೇನ ಅಗ್ರಹಾರ, ಎಲೆಕ್ಟ್ರಾನಿಕ್‌ ಸಿಟಿ, ಇನ್ಫೋಸಿಸ್‌ ಫೌಂಡೇಶನ್‌ ಕೋನಪ್ಪನ ಅಗ್ರಹಾರ, ಹುಸ್ಕೂರು ರಸ್ತೆ, ಹೆಬ್ಬಗೋಡಿ ಮತ್ತು ಬೊಮ್ಮಸಂದ್ರ- ಇವು ಹಳದಿ ಬಣ್ಣದ ಮೆಟ್ರೋ ರೈಲು ನಿಲ್ಲುವ ನಿಲ್ದಾಣಗಳಾಗಿವೆ.


  4 ಸಾವಿರ ಕೋಟಿಗೂ ಹೆಚ್ಚು ಹಣದಲ್ಲಿ ನಿರ್ಮಾಣ
  ಬೊಮ್ಮಸಂದ್ರ-ಬೆರಟೇನ ಅಗ್ರಹಾರ ಪ್ರದೇಶಗಳ ನಡುವೆ 6.38 ಕಿ.ಮೀ ಮಾರ್ಗ, ಬೆರಟೇನ ಅಗ್ರಹಾರ-ಬೊಮ್ಮನಹಳ್ಳಿ ನಡುವಿನ 6.38 ಕಿ.ಮೀ ಮಾರ್ಗದಲ್ಲಿ ಈ ಹಳದಿ ಮೆಟ್ರೊ ಸಂಚಾರ ನಡೆಸಲಿದೆ. ಒಟ್ಟು 4 ಸಾವಿರ ಕೋಟಿಗೂ ಹೆಚ್ಚು ಹಣದಲ್ಲಿ ಹಳದಿ ಮಾರ್ಗದ ಮೆಟ್ರೋವನ್ನು ನಿರ್ಮಾಣ ಮಾಡಲಾಗಿದೆ.


  ಇದನ್ನೂ ಓದಿ: KSRTC ಬಸ್​ಗಳಲ್ಲಿ ಇಷ್ಟು ಕೆಜಿ ಲಗೇಜ್​ ಸಾಗಣೆ ಉಚಿತ! ನಾಯಿ ಸಾಗಣೆಗೆ ಶುಲ್ಕವೆಷ್ಟು?


  ಟ್ರಾಫಿಕ್ ಕಿರಿಕಿರಿಗೆ ಬೀಳಲಿದೆ ಬ್ರೇಕ್
  ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಮಾಡುವುದರಿಂದ ಬೆಂಗಳೂರಿನ ಪ್ರಯಾಣಿಕರಿಗೆ ಟ್ರಾಫಿಕ್ ಕಿರಿಕಿರಿ ತಪ್ಪಲಿದೆ ಎಂದೇ ಹೇಳಲಾಗಿದೆ. ಬೆಂಗಳೂರು ಮಹಾನಗರದಲ್ಲಿ ಟ್ರಾಫಿಕ್ ಕಿರಿಕಿರಿಯನ್ನು ತಪ್ಪಿಸುವ ಮಹತ್ವದ ಉದ್ದೇಶದಿಂದ ಮೆಟ್ರೋ ಮಾರ್ಗಗಳನ್ನು ಹಂತಹಂತವಾಗಿ ವಿಸ್ತರಣೆ ಮಾಡಲಾಗುತ್ತಿದೆ.

  Published by:ಗುರುಗಣೇಶ ಡಬ್ಗುಳಿ
  First published: