Bengaluru Nag Panchami: ಬೆಂಗಳೂರಲ್ಲಿ ಸಂಭ್ರಮದ ನಾಗರ ಪಂಚಮಿ! ಆಚರಣೆ, ವೈಭವದ ಝಲಕ್ ಹೀಗಿತ್ತು!

ಮಾರ್ಕೆಟ್ ನಲ್ಲಿ ಹೂ, ಹಣ್ಣು ದರ ದಿನನಿತ್ಯಕ್ಕಿಂತ ಕೊಂಚ ಹೆಚ್ಚೇ ಇತ್ತು. ಸೇವಂತಿಗೆ 150 ರೂನಿಂದ 200 ರೂ. ಕನಕಾಂಬರ ಹೂ ಮಾರಿಗೆ 200 ರೂ, ಮಲ್ಲಿಗೆ ಮಾರಿಗೆ 200 ರೂ. ಕಣಗಿಲೆ ಹೂ ಮಾರಿಗೆ 80 ರೂಗೆ ಮಾರಾಟ ಮಾಡಲಾಯ್ತು.

ನಾಗಪ್ಪಾ ಕಾಪಾಡಪ್ಪಾ

"ನಾಗಪ್ಪಾ ಕಾಪಾಡಪ್ಪಾ"

 • Share this:
  ನಾಗರ ಪಂಚಮಿ ಹಬ್ಬ.. ನಾಡಿನೆಲ್ಲೆಡೆ ಸಂಭ್ರಮದ ವಾತಾವರಣ.. ನಾಗ ದೇವರಿಗೆ ಕ್ಷೀರ, ಎಳನೀರಿನ ಅಭಿಷೇಕದ ಮೂಲಕ ಭಕ್ತರು ಪುನೀತರಾದರು. ನಗರದಲ್ಲೂ ನಾಗದೇವನ ನೆನೆಯುವವರ ಸಂಖ್ಯೆ ಕಡಿಮೆಯಲ್ಲಿರಲಿಲ್ಲ... ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ನಾಗದೇವರಿಗೆ (Nag Panchami 2022) ಮುಂಜಾನೆಯಿಂದಲೇ ಪೂಜೆ ಪುನಸ್ಕಾರಗಳು ಜೋರಾಗಿಯೇ ನಡೆದವು. ಕುಟುಂಬ ಸಮೇತರಾಗಿ ಬಂದ ಭಕ್ತಾಧಿಗಳು ನಾಗನಿಗೆ ತನಿ ಎರೆದು ಸಂತೃಪ್ತರಾದರು. ಬೆಂಗಳೂರು (Bengaluru) ಆಗಿರೋದರಿಂದ ಭಕ್ತರ ಸಂಖ್ಯೆಯು ಹೆಚ್ಚಾಗಿಯೇ ಇತ್ತು. ತಮ್ಮ ಊರುಗಳಿಗೆ ತೆರಳಲಾಗದ ಭಕ್ತಾದಿಗಳು ಕೂಡಾ ಇಲ್ಲೇ ಆಗಮಿಸಿ ನಾಗ ದೇವರಿಗೆ ಕೈ ಮುಗಿದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡಿಕೊಂಡರು.

  ಹೂ ಬೆಲೆ ತುಟ್ಟಿಯಾಗಿತ್ತಾ? ಎಂದಿನಂತೇ ಇತ್ತಾ?
  ಮಾರ್ಕೆಟ್ ನಲ್ಲಿ ಹೂ, ಹಣ್ಣು ದರ ದಿನನಿತ್ಯಕ್ಕಿಂತ ಕೊಂಚ ಹೆಚ್ಚೇ ಇತ್ತು. ಸೇವಂತಿಗೆ 150 ರೂನಿಂದ 200 ರೂ. ಕನಕಾಂಬರ ಹೂ ಮಾರಿಗೆ 200 ರೂ, ಮಲ್ಲಿಗೆ ಮಾರಿಗೆ 200 ರೂ. ಕಣಗಿಲೆ ಹೂ ಮಾರಿಗೆ 80 ರೂಗೆ ಮಾರಾಟ ಮಾಡಲಾಯ್ತು.

  ಇದನ್ನೂ ಓದಿ: Nag Panchami Vijayapura: ಎಳ್ಳು, ಹೋಳಿಗೆ, ಉಂಡೆ, ಅರಿಶಿನ ದಾರ! ವಿಜಯಪುರದಲ್ಲಿ ಹೀಗಿತ್ತು ನಾಗರ ಪಂಚಮಿ

  ಹಣ್ಣು ಹಂಪಲು ಬೆಲೆ ಎಷ್ಟಿತ್ತು?
  ಇನ್ನು ಹಣ್ಣು ಹಂಪಲುಗಳ ದರ ನೋಡೋದಾದ್ರೆ ಸೇಬು ಪ್ರತಿ ಕೆಜಿಗೆ ರೂ 120 ರಿಂದ 250 ರೂ , ದಾಳಿಂಬೆ ರೂ 150 ರಿಂದ 200 ರೂ, ಪೈನಾಪಲ್ ₹100 ರೂ, ದ್ರಾಕ್ಷಿ ₹200 ರೂ, ಸಪೋಟ ₹150ರೂ. ಮೂಸಂಬಿ ₹100 ರೂಪಾಯಿಗೆ ಮಾರಾಟ ಮಾಡಲಾಯ್ತು.

  ಇನ್ನು ಕೊರೊನಾ ಕಾರಣದಿಂದ ಕಳೆದೆರಡು ವರ್ಷ ಜನ ಭಾರೀ ಸಂಕಷ್ಟಪಟ್ಟಿದ್ದರು. ಆದರೆ, ಈ ಬಾರಿ ಮಾತ್ರ ನಾಗರಾಜ ತನ್ನ ಆಶೀರ್ವಾದ ತೋರಿದ್ದಾನೆ.

  ಇದನ್ನೂ ಓದಿ: Uttara Kannada: ಮುಂಡಗೋಡಿನ ಈ ಸರ್ಕಾರಿ ಹೈಸ್ಕೂಲ್ ಕಲಿಯೋಕೂ ಚಂದ, ನೋಡೋಕೋ ಚಂದ!

  ಭಕ್ತಾದಿಗಳು ಕೂಡಾ ತುಂಬಾನೇ ಉತ್ಸುಕತೆಯಿಂದ ಪಾಲ್ಗೊಂಡರು. ಆದರೆ, ಹವಾಮಾನ ವೈಪರೀತ್ಯ ಪರಿಣಾಮ ಹೂ, ಹಣ್ಣುಗಳ ದರ ಏರಿಕೆಯಾಗಿದ್ದು ಭಕ್ತರು ಹೆಚ್ಚು ಕೂಡಾ ದರ ಏರಿಕೆ ಬಿಸಿ ಎದುರಿಸುವಂತಾಯಿತು..
  Published by:guruganesh bhat
  First published: