• Home
  • »
  • News
  • »
  • bengaluru-urban
  • »
  • Bengaluru News: ಬೆಂಗಳೂರು-ಮೈಸೂರು- ಕೊಚ್ಚಿ ವಿಮಾನ ಹಾರಾಟ ಬಂದ್

Bengaluru News: ಬೆಂಗಳೂರು-ಮೈಸೂರು- ಕೊಚ್ಚಿ ವಿಮಾನ ಹಾರಾಟ ಬಂದ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭವಿಷ್ಯದಲ್ಲಿ ಮೈಸೂರು-ಕೊಚ್ಚಿ ಮಾರ್ಗದಲ್ಲಿ ಸೇವೆಗಳನ್ನು ಪುನರಾರಂಭಿಸಲು ನಾವು ಪ್ರಯತ್ನಿಸುತ್ತೇವೆ ಎಂದು ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಆರ್ ಮಂಜುನಾಥ್ ಅವರು ತಿಳಿಸಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

    ಮೈಸೂರು: ಅಲಯನ್ಸ್ ಏರ್ ನಿರ್ವಹಿಸುವ ಕೊಚ್ಚಿ-ಮೈಸೂರು-ಬೆಂಗಳೂರು ವಿಮಾನವನ್ನು (Bengaluru-Mysuru-Kochi Flights Suspended) ಪ್ರಯಾಣಿಕರ ಕೊರತೆಯಿಂದ ಸೋಮವಾರದಿಂದ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಸರಿಸುಮಾರು ಮೂರೂವರೆ ವರ್ಷಗಳ ಹಿಂದೆ ಅಲಯನ್ಸ್ ಏರ್ ಕೇಂದ್ರದ ಪ್ರಾದೇಶಿಕ ವಾಯು ಸಂಪರ್ಕ ಯೋಜನೆಯ ಭಾಗವಾಗಿ ಈ ಮಾರ್ಗದಲ್ಲಿ ಸೇವೆಗಳನ್ನು ಪ್ರಾರಂಭಿಸಲಾಗಿತ್ತು. ಅಲಯನ್ಸ್ ಏರ್ (Alliance Air)  ಮಾರ್ಚ್ 31, 2019 ರಂದು ಈ ಮಾರ್ಗದಲ್ಲಿ ಮೊದಲ ಹಾರಾಟವನ್ನು ನಡೆಸಿತ್ತು. ಆದರೆ ಇದೀಗ ಕೊಚ್ಚಿ-ಮೈಸೂರು-ಬೆಂಗಳೂರು ವಿಮಾನ ಸೇವೆ ಸ್ಥಗಿತಗೊಂಡಿದೆ.


    ಸದ್ಯ ಪ್ರಯಾಣಿಕರ ಕೊರತೆಯಿಂದ ಸ್ಥಗಿತಗೊಂಡಿರುವ ಕೊಚ್ಚಿ-ಮೈಸೂರು-ಬೆಂಗಳೂರು ವಿಮಾನ ಮುಂದಿನ ದಿನಗಳಲ್ಲಿ ಮತ್ತೆ ಆರಂಭಗೊಳ್ಳಲಿದೆಯೇ ಎಂಬ ಕುರಿತು ವಿಮಾನಯಾನ ಸಂಸ್ಥೆ ಸ್ಪಷ್ಟಪಡಿಸಿಲ್ಲ.


    ಇದನ್ನೂ ಓದಿ: Bannerghatta Tiger Video: ಬನ್ನೇರುಘಟ್ಟದಲ್ಲಿ ಈ ಹುಲಿಮರಿ ಬದುಕಿದ್ದೇ ಪವಾಡ!


    ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕರು ಹೇಳುವುದೇನು?
    ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಆರ್ ಮಂಜುನಾಥ್ ಅವರು ಈ ಮಾರ್ಗದಲ್ಲಿ ಸೇವೆಗಳನ್ನು ಸ್ಥಗಿತಗೊಳಿಸಲು ಪ್ರಯಾಣಿಕರ ಕೊರತೆಯೇ ಪ್ರಾಥಮಿಕ ಕಾರಣ ಎಂದು ಖಚಿತಪಡಿಸಿದ್ದಾರೆ. ಭವಿಷ್ಯದಲ್ಲಿ ಮೈಸೂರು-ಕೊಚ್ಚಿ ಮಾರ್ಗದಲ್ಲಿ ಸೇವೆಗಳನ್ನು ಪುನರಾರಂಭಿಸಲು ನಾವು ಪ್ರಯತ್ನಿಸುತ್ತೇವೆ ಎಂದು ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಆರ್ ಮಂಜುನಾಥ್ ಅವರು ತಿಳಿಸಿದ್ದಾರೆ.


    ಬೆಂಗಳೂರು-ಮೈಸೂರು ರೈಲುಗಳ ವೇಗ ಹೆಚ್ಚಳ
    ಬೆಂಗಳೂರು ಮತ್ತು ಮೈಸೂರಿನ ಸಾರ್ವಜನಿಕರಿಗೆ ಮಹತ್ವದ ಸುದ್ದಿಯೊಂದು ಇಲ್ಲಿದೆ. ಬೆಂಗಳೂರಿನಿಂದ ಮೈಸೂರಿಗೆ ತೆರಳುವ ಪ್ರಯಾಣಿಕರು ಇನ್ನಷ್ಟು ಬೇಗ ಇನ್ಮೇಲೆ ಪ್ರಯಾಣ ಮಾಡಬಹುದಾಗಿದೆ. ಬೆಂಗಳೂರು- ಮೈಸೂರು ನಗರಗಳ ನಡುವೆ ಸಂಚರಿಸುವ ಬರೋಬ್ಬರಿ 20 ರೈಲುಗಳ ವೇಗವನ್ನು ಹೆಚ್ಚಿಸಲಾಗಿದೆ. ಅಲ್ಲದೇ ಈ ಪೈಕಿ 8 ರೈಲುಗಳನ್ನು ಸೂಪರ್​ಫಾಸ್ಟ್ ದರ್ಜೆಗೆ ಏರಿಸಲು ಭಾರತೀಯ ರೈಲ್ವೇಯು ಮಹತ್ವದ ನಿರ್ಧಾರ ಕೈಗೊಂಡಿದೆ. ಬೆಂಗಳೂರು-ಮೈಸೂರು ನಗರಗಳ ನಡುವೆ ಪ್ರಯಾಣಿಸುವ ಈ ರೈಲುಗಳ ವೇಗವನ್ನು ಇನ್ನಷ್ಟು ಹೆಚ್ಚಿಸಲಾಗಿದೆ.


    ಇದನ್ನೂ ಓದಿ: Bengaluru News: ಬೆಂಗಳೂರು ಪೊಲೀಸರ ವೆಬ್ ವಿಳಾಸ ಬದಲು


    ಹುಬ್ಬಳ್ಳಿ-ಮೈಸೂರು ಎಕ್ಸ್‌ಪ್ರೆಸ್
    ಸಾಯಿನಗರ-ಶಿರಡಿ ಮೈಸೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌
    ಹೌರಾ-ಮೈಸೂರು ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್
    ಮೈಲಾಡುತುರೈ-ಮೈಸೂರು ಎಕ್ಸ್‌ಪ್ರೆಸ್
    ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್


    ಈ ರೈಲುಗಳ ವೇಗವನ್ನು ಸಹ ಹೆಚ್ಚಿಸಲು ಭಾರತೀಯ ರೈಲ್ವೇ ತೀರ್ಮಾನ
    ಮೈಸೂರು ಯಶವಂತಪುರ ಎಕ್ಸ್‌ಪ್ರೆಸ್
    SMVT ಬೆಂಗಳೂರು-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್
    ಚಾಮರಾಜನಗರ-ತುಮಕೂರು ದೈನಂದಿನ ಪ್ಯಾಸೆಂಜರ್
    ಕೊಚುವೇಲಿ-ಮೈಸೂರು ಎಕ್ಸ್‌ಪ್ರೆಸ್
    ಅಜ್ಮೀರ್-ಮೈಸೂರು ಪಾಕ್ಷಿಕ ಎಕ್ಸ್‌ಪ್ರೆಸ್

    Published by:ಗುರುಗಣೇಶ ಡಬ್ಗುಳಿ
    First published: