ಬೆಂಗಳೂರು: ಸದ್ಯದಲ್ಲೇ ಉದ್ಘಾಟನೆಗೊಳ್ಳಲಿರುವ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇಯದ್ದೇ (Bengaluru-Mysuru expressway) ಈಗ ಎಲ್ಲೆಡೆ ಸುದ್ದಿ, ದಶಪಥ ಹೆದ್ದಾರಿ ಅದ್ಭುತ ವಿಡಿಯೋವೊಂದು Bengaluru-Mysuru expressway Video) ಈಗ ಭಾರೀ ವೈರಲ್ ಆಗುತ್ತಿದೆ. ಬೆಂಗಳೂರು ಮೈಸೂರು ಹೆದ್ದಾರಿ (Bengaluru-Mysuru Highway) ಇಷ್ಟೊಂದು ಅದ್ಭುತವಾಗಿ ಇರುತ್ತಾ ಅನ್ನೋ ಕುತೂಹಲ ಇದೀಗ ಹುಟ್ಟಿಕೊಂಡಿದೆ.
ವೈರಲ್ ಆಗ್ತಿದೆ ಈ ವಿಡಿಯೋ
118 ಕಿಲೋ ಮೀಟರ್ ಉದ್ದದ ಈ ಹೆದ್ದಾರಿ ಸಾರ್ವಜನಿಕರ ಓಡಾಟಕ್ಕೆ ಮುಕ್ತವಾಗಲು ಸಜ್ಜಾಗಿದೆ. ಗ್ರೀನ್ಫೀಲ್ಡ್ ಕಾರಿಡಾರ್ ಯೋಜನೆಯ ಭಾಗವಾಗಿದೆ ಈ 10 ಪಥದ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ. ಸದ್ಯ ಸಚಿವ ಡಾ. ಅಶ್ವತ್ಥ್ ನಾರಾಯಣ ಅವರು ಶೇರ್ ಮಾಡಿರುವ ರಾಮನಗರ ಬಳಿಯ ದಶಪಥದ ನೋಟದ ಈ ವಿಡಿಯೋ ವೈರಲ್ ಆಗುತ್ತಿದೆ.
ಇದನ್ನೂ ಓದಿ: Adiyogi Statue Near Bengaluru: ಕೊಯಮತ್ತೂರಿಗೇ ಹೋಗ್ಬೇಕಂತಿಲ್ಲ, ಬೆಂಗಳೂರು ಸಮೀಪದಲ್ಲೇ ಆದಿಯೋಗಿ! ಹೀಗೆ ಹೋಗಿಬನ್ನಿ
ಈ ವಾಹನಗಳಿಗೆ ಇಲ್ವಂತೆ ಸಂಚಾರಕ್ಕೆ ಅನುಮತಿ
ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ ಬಗ್ಗೆ ಇದೀಗ ಬಂದಿರುವ ಹೊಸ ಸುದ್ದಿ ಏನೆಂದ್ರೆ ಈ ಎಕ್ಸ್ಪ್ರೆಸ್ ವೇನಲ್ಲಿ ಯಾವುದೇ ರೀತಿಯ ಬೈಕ್ಗಳು, ಸ್ಕೂಟರ್ಗಳು, ಆಟೋ ರಿಕ್ಷಾಗಳ ಸಂಚಾರಕ್ಕೆ ಅನುಮತಿ ಇರಲ್ಲ.
ಇದನ್ನೂ ಓದಿ: Vande Bharat Express Train: ಬೆಂಗಳೂರಿನಿಂದ ಬೆಳಗಾವಿಯವರೆಗೂ ವಂದೇ ಭಾರತ್!
ಇತರೇ ನಿಧಾನವಾಗಿ ಚಲಿಸುವ ವಾಹನಗಳಿಗೂ ಈ ರೋಡಲ್ಲಿ ಪ್ರವೇಶವಿಲ್ಲ. ಆದ್ರೆ ಒಟ್ಟಾರೆ ಸದ್ಯ ವೈರಲ್ ಆಗಿರೋ ವಿಡಿಯೊ ನೋಡಿದ್ರೆ ಮೈ ಝುಮ್ ಅನ್ನೋದಂತೂ ಸತ್ಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ