ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ ಟೋಲ್ ಸಂಗ್ರಹ ದಿನಾಂಕಖಚಿಗೊಂಡಿದೆ. ಫೆಬ್ರವರಿ 28ರಿಂದಲೇ ಈ ದಶಪಥ ಹೆದ್ದಾರಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರು ಟೋಲ್ ಪಾವತಿ (Bengaluru Mysuru Expressway Toll) ಮಾಡಬೇಕಿದೆ. ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ ಒಟ್ಟು 10 ಪಥಗಳ ಹೆದ್ದಾರಿ. ಇದರಲ್ಲಿನ ಎರಡು ಪಥಗಳ ಸರ್ವೀಸ್ ರಸ್ತೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರು ಟೋಲ್ ಹಣ ಪಾವತಿ (Bengaluru Mysuru Expressway Toll Details) ಮಾಡಬೇಕೆಂದಿಲ್ಲ.
ಸಿಗುತ್ತೆ ತಿಂಗಳ ಪಾಸ್!
ಈ ಹೆದ್ದಾರಿಯ ಟೋಲ್ ದರ ಕನಿಷ್ಠ ₹135. ಜೊತೆಗೆ ಸ್ಥಳೀಯ ವಾಹನಗಳಿಗೆ ₹70 ನಿಗದಿಪಡಿಸಲಾಗಿದೆ. ನೀವು ಈ ಹೆದ್ಧಾರಿಯಲ್ಲಿ ಖಾಯಂ ಪ್ರಯಾಣ ಮಾಡುವವರು ಎಂದರೆ ನಿಮಗೆ ತಿಂಗಳ ಪಾಸ್ ಸೌಲಭ್ಯವೂ ಸಿಗುತ್ತದೆ. ₹4,425ರಿಂದ ಆರಂಭವಾಗಿ ₹29,255 ವರೆಗೆ ಹಲವು ಬಗೆಯ ತಿಂಗಳ ಪಾಸ್ಗಳು ನಿಮಗೆ ದೊರೆಯುತ್ತವೆ.
ಎಲ್ಲಿದೆ ಟೋಲ್ ಬೂತ್?
ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಕಣಮಿಣಕಿ ಗ್ರಾಮದ ಬಳಿ ಟೋಲ್ ನಿರ್ಮಿಸಲಾಗಿದೆ. ಬೆಂಗಳೂರಿನಿಂದ ಮೈಸೂರು ಕಡೆಗೆ ಪ್ರಯಾಣಿಸುವವರು ಇದೇ ಟೋಲಲ್ ಬೂತ್ನಲ್ಲಿ ಹಣ ಪಾತಿಸಬೇಕಿದೆ.
ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರು ರಾಮನಗರ ತಾಲ್ಲೂಕಿನ ಶೇಷಗಿರಿಹಳ್ಳಿ ಸಮೀಪದ ಟೋಲ್‌ನಲ್ಲಿ ಹಣ ಪಾವತಿಸಬೇಕಿದೆ.
ಮಾಸಿಕ ಪಾಸ್ ಸಹ ಸಿಗುತ್ತೆ
ಕಾರು/ಜೀಪ್/ವ್ಯಾನ್‌ಗೆ ಒಂದು ಕಡೆ ಪ್ರಯಾಣಕ್ಕೆ ರೂ. 135 ಮತ್ತು ಒಂದೇ ದಿನದೊಳಗೆ ಹಿಂದಿರುಗುವ ಪ್ರಯಾಣಕ್ಕೆ ರೂ. 205 ಟೋಲ್ ನಿಗದಿಪಡಿಸಲಾಗಿದೆ. ಮಾಸಿಕ ಪಾಸ್‌ಗೆ ರೂ 4,525 ಆಗಿದ್ದು, ಒಂದು ತಿಂಗಳಲ್ಲಿ 50 ಬಾರಿ ಒಂದು ಬದಿ ಪ್ರಯಾಣ ಮಾಡಬಹುದಾಗಿದೆ.
ಯಾವ ವಾಹನ ಸವಾರರು ಎಷ್ಟು ಹಣ ಪಾವತಿಸಬೇಕು?
ನೀವು ಕಾರು, ಜೀಪು ಅಥವಾ ವ್ಯಾನ್ ಹೊಂದಿದ್ದರೆ ಏಕಮುಖ ಸಂಚಾರಕ್ಕೆ 135 ರೂ. ಪಾವತಿಸಬೇಕು. ಅದೇ ದಿನ ,ಮರಳಿ ಬರಲು 205 ರೂ. ಪಾವತಿಸಬೇಕು. ಸ್ಥಳೀಯ ವಾಹನಗಳಿಗೆ 70 ರೂ. ಆಗಿದ್ದು ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 4,525 ರೂ. ನಿಗದಿ ಮಾಡಲಾಗಿದೆ.
ನೀವು ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ ಅಥವಾ ಮಿನಿ ಬಸ್ ಹೊಂದಿದ್ದರೆ ಒಂದು ಬದಿ ಪ್ರಯಾಣಕ್ಕೆ 220ರೂ. ಪಾವತಿಸಬೇಕು. ಅದೇ ದಿನ ಮರಳಿ ಬರಲು 320 ರೂ. ಪಾವತಿಸಬೇಕು. ಆದರೆ ಸ್ಥಳೀಯ ವಾಹನಗಳಿಗೆ 110 ರೂ. ಪಾವತಿಸಿದರೆ ಸಾಕು. ಈ ವಾಹನಗಳಿಗೆ ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್ ಪಡೆಯಲು 7315 ರೂ. ಹಣ ನೀಡಬೇಕು.
ಇದನ್ನೂ ಓದಿ: Ramadevara Betta: ದಕ್ಷಿಣ ಭಾರತದ ಅಯೋಧ್ಯೆ! ರಾಮದೇವರ ಬೆಟ್ಟ ಹೀಗಿದೆ ನೋಡಿ
ಬಸ್ ಅಥವಾ ಟ್ರಕ್ಗಳಿಗೆ ಎಷ್ಟು?
ಬಸ್ ಅಥವಾ ಟ್ರಕ್ಗಳ ಒಂದು ಬದಿ ಪ್ರಯಾಣಕ್ಕೆ 460 ರೂ. ಪಾವತಿಸಬೇಕು. ಅದೇ ದಿನ ವಾಪಸ್ಸಾಗಲು 690 ರೂ. ನೀಡಬೇಕು. ಆದರೆ ಸ್ಥಳೀಯ ವಾಹನಗಳಿಗೆ 230ರೂ. ಪಾವತಿಸಿದರೆ ಸಾಕು. ಈ ವಾಹನಗಳ ಒಂದು ತಿಂಗಳ 50 ಒಂದು ಬದಿ ಸಂಚಾರದ ಪಾಸ್‌ಗೆ 15,325 ರೂ. ಪಾವತಿಸಿದರೆ ಸಾಕು.
ಇದನ್ನೂ ಓದಿ: Puneeth Rajkumar: ಚನ್ನಪಟ್ಟಣದಲ್ಲಿ ಅಪ್ಪು ಪ್ರತಿಮೆ! ಅಭಿಮಾನಿಗಳ ಪ್ರೀತಿಗೆ ರಾಘಣ್ಣ ಭಾವುಕ
ಮೂರು ಆಕ್ಸೆಲ್ನ ವಾಣಿಜ್ಯ ವಾಹನಗಳು
ಈ ವಾಹನಗಳು ಒಂದು ಬದಿ ಪ್ರಯಾಣಕ್ಕೆ 500 ರೂ. ಪಾವತಿಸಬೇಕಿದೆ. ಅದೇ ದಿನ ವಾಪಸ್ಸಾಗಲು 750 ರೂ. ಪಾವತಿಸಬೇಕು. ಸ್ಥಳೀಯ ವಾಹನಗಳಿಗೆ 250ರೂ. ಪಾವತಿಸದರೆ ಸಾಕು. ಈ ವಾಹನಗಳಿಗೂ ಮಾಸಿಕ ಪಾಸ್ ಇದ್ದು ಒಂದು ತಿಂಗಳ 50 ಒಂದು ಬದಿ ಪ್ರಯಾಣದ ಪಾಸ್‌ಗೆ 16,715 ರೂ. ನಿಗದಿ ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ