ಬೆಂಗಳೂರು: ರಾಜ್ಯ ರಾಜಧಾನಿಯ ನಿವಾಸಿಗಳಿಗೆ ಸಂತಸದ ಸುದ್ದಿಯೊಂದು (Bengaluru News) ಹೊರಬಿದ್ದಿದೆ. ಬೆಂಗಳೂರು ನಗರದಲ್ಲಿ ಸದ್ಯದಲ್ಲೇ ಡಬಲ್ ಡೆಕರ್ ಬಸ್ (Double Decker Bus In Bengaluru) ಓಡಾಟ ಶುರುವಾಗಲಿದೆ. ಜೂನ್ ತಿಂಗಳ ವೇಳೆಗೆ ಬೆಂಗಳೂರಿನಲ್ಲಿ ಮೊದಲ ಡಬಲ್ ಡೆಕ್ಕರ್ ಎಸಿ ಎಲೆಕ್ಟ್ರಿಕ್ ಬಸ್ (Bengaluru Double Decker AC Bus) ಸೇವೆ ಆರಂಭಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಮೊದಲ ಡಬಲ್ ಡೆಕ್ಕರ್ ಎಸಿ ಎಲೆಕ್ಟ್ರಿಕ್ ಬಸ್ ಅನ್ನು ಏಪ್ರಿಲ್ ಮತ್ತು ಜೂನ್ ನಡುವೆ ಪರಿಚಯಿಸಲಾಗುವುದು ಎಂದು BMTC ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಲ್ಲಿ ಮೊದಲ ಸಂಚಾರ?
ಸದ್ಯ ಆರಂಭವಾಗಲಿರುವ ಡಬಲ್ ಡೆಕರ್ ಬಸ್ಗಳ ಉದ್ದವು 9,500 ಎಂಎಂ ಮತ್ತು 11,000 ಎಂಎಂ ನಡುವೆ ಇರಲಿದೆ. ಮೊದಲ ಡಬಲ್ ಡೆಕ್ಕರ್ ಇ-ಬಸ್ ಔಟರ್ ರಿಂಗ್ ರೋಡ್ನಲ್ಲಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ.
70 ಜನರ ಆಸನ ಸಾಮರ್ಥ್ಯ
ಈ ಬಸ್ಗಳು ಸುಮಾರು 70 ಪ್ರಯಾಣಿಕರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Double Decker Bus: ಬೆಂಗಳೂರಿನ ರಸ್ತೆಗಳನ್ನು ಆಳಲಿದೆ ಡಬಲ್ ಡೆಕ್ಕರ್ ಬಸ್!
ಮೂರು ಸಂಸ್ಥೆಗಳು - ಅಶೋಕ್ ಲೇಲ್ಯಾಂಡ್-ಬೆಂಬಲಿತ ಸ್ವಿಚ್ ಮೊಬಿಲಿಟಿ, ಕಾಸಿಸ್ ಇ-ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ ಮತ್ತು ಒಲೆಕ್ಟ್ರಾ ಗ್ರೀನ್ಟೆಕ್ ಲಿಮಿಟೆಡ್ ಯೋಜನೆಯಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸಿವೆ.
ಬೆಂಗಳೂರಿನ ರಸ್ತೆಗಳನ್ನು ಆಳಿದ್ದ ಡಬಲ್ ಡೆಕರ್ ಬಸ್ಗಳು
ಡಬಲ್ ಡೆಕರ್ ಡೀಸೆಲ್ ಬಸ್ಗಳು 1970-80ರ ದಶಕದಲ್ಲಿ ಬೆಂಗಳೂರು ನಗರದಲ್ಲಿ ಸಾಮಾನ್ಯ ದೃಶ್ಯವಾಗಿತ್ತು. 1970-80 ರಲ್ಲಿ ಡಬಲ್ ಡೆಕ್ಕರ್ಗಳು ಬೆಂಗಳೂರಿನ ರಸ್ತೆಗಳನ್ನು ಆಳಿದ್ದವು. ಹಿಂದಿನ ಕನ್ನಡ ಸಿನಿಮಾಗಳಲ್ಲಿ ಬೆಂಗಳೂರಿನ ಡಬಲ್ ಡೆಕ್ಕರ್ ಬಸ್ಗಳ ಸವಾರಿಯನ್ನು ವೀಕ್ಷಿಸಬಹುದು. 1997ರ ವೇಳೆಗೆ ಅವುಗಳನ್ನು ಹಂತಹಂತವಾಗಿ ಸ್ಥಗಿತಗೊಳಿಸಲಾಗಿತ್ತು.
ಇದನ್ನೂ ಓದಿ: Adiyogi Statue Near Bengaluru: ಕೊಯಮತ್ತೂರಿಗೇ ಹೋಗ್ಬೇಕಂತಿಲ್ಲ, ಬೆಂಗಳೂರು ಸಮೀಪದಲ್ಲೇ ಆದಿಯೋಗಿ! ಹೀಗೆ ಹೋಗಿಬನ್ನಿ
ಡಬಲ್ ಡೆಕರ್ ಬಸ್ಗಳಿಗೂ ಇದೆ ಕೆಲವು ಮಿತಿ
ಡಬಲ್ ಡೆಕ್ಕರ್ ಬಸ್ಗಳು ಎಲ್ಲ ರಸ್ತೆಗಳಲ್ಲೂ ಸಂಚರಿಸಲಾರವು. ರಸ್ತೆ ಬದಿ ಮರ ಇರುವಲ್ಲಿ, ಮೇಲ್ಸೇತುವೆ, ಕೆಳಸೇತುವೆ ಇರುವಲ್ಲಿ ಡಬಲ್ ಡೆಕ್ಕರ್ ಬಸ್ ಸಂಚಾರ ಅಸಾಧ್ಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ