• Home
 • »
 • News
 • »
 • bengaluru-urban
 • »
 • Masjid Tour: ಮಸೀದಿ ಒಳಗೆ ಏನೆಲ್ಲಾ ಇರುತ್ತೆ? ಇಲ್ಲಿ ಸಿಗುತ್ತೆ ಉತ್ತರ

Masjid Tour: ಮಸೀದಿ ಒಳಗೆ ಏನೆಲ್ಲಾ ಇರುತ್ತೆ? ಇಲ್ಲಿ ಸಿಗುತ್ತೆ ಉತ್ತರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Masjid Darshan In Bengaluru: ಮುಸ್ಲಿಮರ ಪ್ರಾರ್ಥನೆ ಹೇಗಿರುತ್ತೆ? ಮಸೀದಿಯಲ್ಲಿ ಯಾವ ದೇವರಿರುತ್ತಾರೆ? ನಿಮ್ಮ ಪ್ರಶ್ನೆಗೆ ಇಲ್ಲಿ ಉತ್ತರ ಸಿಗಬಹುದು ನೋಡಿ.

 • News18 Kannada
 • Last Updated :
 • Bangalore [Bangalore], India
 • Share this:

  ಬೆಂಗಳೂರು: ಮಸೀದಿ ಎಂದರೇನು? ಮಸೀದಿ, ಮದ್ರಸ, ದರ್ಗಾ ಗಳಿಗೆ ಇರೋ ವ್ಯತ್ಯಾಸವಾದರೂ ಏನು? ಮಸೀದಿ ಒಳಗಡೆ ಏನೆಲ್ಲ ಇರುತ್ತೆ? ಮುಸ್ಲಿಮರ ಪ್ರಾರ್ಥನೆ ಹೇಗಿರುತ್ತೆ? ಮಸೀದಿಯಲ್ಲಿ ಯಾವ ದೇವರಿರುತ್ತಾರೆ? ಇಂತಹ ನೂರಾರು ಪ್ರಶ್ನೆಗಳು ಮುಸ್ಲಿಮೇತರರಲ್ಲಿ ಇರುವುದು ಸಹಜ. ಮಸೀದಿ ಬಗ್ಗೆ ಹೆಚ್ಚಿನ ಜನರಿಗೆ ಯಾವುದೇ ಸ್ಪಷ್ಟ ಪರಿಕಲ್ಪನೆ ಇರುವುದಿಲ್ಲ. ಕೇವಲ ಮುಸ್ಲಿಮರಿಗಷ್ಟೇ ಆ ಕೇಂದ್ರವು ಸೀಮಿತವಾಗಿರುತ್ತದೆ ಅನ್ನೋ ಭಾವನೆ ಇದೆ. ಇತ್ತೀಚೆಗೆ ಕರಾವಳಿ ಹಾಗೂ ಬೆಂಗಳೂರು ಭಾಗಗಳಲ್ಲಿ 'ನೋಡ ಬನ್ನಿ ನಮ್ಮೂರ ಮಸೀದಿ', 'ಮಸೀದಿ ದರ್ಶನ'ದಂತಹ (Masjid Darshan In Bengaluru) ಕಾರ್ಯಕ್ರಮಗಳು ನಡೆಯುತ್ತಾ ಬಂದಿದೆ. ಇದೀಗ ಬೆಂಗಳೂರಿನಲ್ಲಿ ಅಂತಹ ಕಾರ್ಯಕ್ರಮವೊಂದು (Bengaluru News) ಮುಂದಿನ ನವೆಂಬರ್ ತಿಂಗಳಲ್ಲಿ ನಡೆಯಲಿದೆ.


  ಯಾವಾಗ ಕಾರ್ಯಕ್ರಮ?
  'ಮಸ್ಜಿದ್ ಟೂರ್' ಅನ್ನೋ ವಿಶಿಷ್ಟ ಕಾರ್ಯಕ್ರಮವು ನವೆಂಬರ್ 5 ರಂದು ಸಂಜೆ 4 ರಿಂದ 8 ಗಂಟೆವರೆಗೆ ನಡೆಯಲಿದೆ. ಈ ಸಂದರ್ಭ ಸಾಯಂಕಾಲ, ಸೂರ್ಯಾಸ್ತ ಹಾಗೂ ರಾತ್ರಿಯ ನಮಾಝ್ ಹಾಗೂ ಆಜಾನ್ ಕೂಗುವುದನ್ನು ಹತ್ತಿರದಿಂದ ನೋಡಬಹುದಾಗಿದೆ.‌


  'ಮಸ್ಜಿದ್ ಟೂರ್' ವಿಶೇಷತೆ
  'ಮಸ್ಜಿದ್ ಟೂರ್' ನಲ್ಲಿ ಇಸ್ಲಾಮಿಕ್ ವಸ್ತು ಪ್ರದರ್ಶನ, ನಮಾಝ್ ಹಾಗೂ ಆಜಾನ್ ನೇರ ವೀಕ್ಷಣೆ, ಸಂವಾದಗಳನ್ನು ನಡೆಸಬಹುದಾಗಿದೆ.


  ಯಾರೆಲ್ಲ ಭಾಗವಹಿಸಬಹುದು?
  'ಮಸ್ಜಿದ್ ಟೂರ್' ಕಾರ್ಯಕ್ರಮದಲ್ಲಿ ಯಾವುದೇ ಮುಸ್ಲಿಮೇತರ ಧರ್ಮೀಯ ಪುರುಷ ಹಾಗೂ ಮಹಿಳೆಯರು ಭಾಗವಹಿಸಬಹುದಾಗಿದೆ.


  ಎಲ್ಲಿ ನಡೆಯುತ್ತೆ 'ಮಸ್ಜಿದ್ ಟೂರ್'?
  'ಮಸ್ಜಿದ್ ಟೂರ್' ಕಾರ್ಯಕ್ರಮವು ಬೆಂಗಳೂರಿನ ಬೆನ್ಸನ್ ಟೌನ್ ನ ಮಿಲ್ಲರ್ಸ್ ರೋಡ್ ನಲ್ಲಿರುವ 'ಮಸ್ಜಿದ್-ಇ-ಖಾದ್ರಿಯಾ' ದಲ್ಲಿ ನಡೆಯಲಿದೆ.


  ಹೀಗೆ ತಲುಪಿ


  Masjid E Khadria
  ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


  ಆಸಕ್ತರು ಗೂಗಲ್ ಲೊಕೇಶನ್ ಅನುಸರಿಸಿ ತೆರಳಬಹುದಾಗಿದೆ. ಗೂಗಲ್ ಲೊಕೇಶನ್ ಲಿಂಕ್


  ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9845741752, 9620212876 ಸಂಪರ್ಕಿಸಬಹುದಾಗಿದೆ.

  Published by:ಗುರುಗಣೇಶ ಡಬ್ಗುಳಿ
  First published: