• ಹೋಂ
 • »
 • ನ್ಯೂಸ್
 • »
 • ಬೆಂಗಳೂರು ನಗರ
 • »
 • Bengaluru Potholes: ಶುದ್ಧ ಬಂಗಾರದ ಹಾಗಿದ್ದ ನಮ್ಮ ಏರಿಯಾ ಈಗ ಧೂಳಿನ ಗಣಿ! ರಸ್ತೆ ಗುಂಡಿಯಲ್ಲಿ ಕುಳಿತ ಬೆಂಗಳೂರು ವ್ಯಕ್ತಿ!

Bengaluru Potholes: ಶುದ್ಧ ಬಂಗಾರದ ಹಾಗಿದ್ದ ನಮ್ಮ ಏರಿಯಾ ಈಗ ಧೂಳಿನ ಗಣಿ! ರಸ್ತೆ ಗುಂಡಿಯಲ್ಲಿ ಕುಳಿತ ಬೆಂಗಳೂರು ವ್ಯಕ್ತಿ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಹೌದು ಕಣ್ರೀ..ನಮ್ ಬೆಂಗಳೂರಲ್ಲಿ ನಡೆಯುತ್ತಲೇ ಇರುವ ಇಂಥ “ವಿಚಿತ್ರ ವಿಸ್ಮಯ”ಗಳ ವಿರುದ್ಧ ರಾಜ್ಯ ರಾಜಧಾನಿಯ ನಿವಾಸಿಯೊಬ್ರು ಬಂಡೆದಿದ್ದಾರೆ.

 • Share this:

  ಬೆಂಗಳೂರು: ರಸ್ತೆಮಧ್ಯೆಯೇ ಗುಂಡಿ, ಸಿಕ್ಕಸಿಕ್ಕಲ್ಲಿ ಬಾಯ್ತೆರೆದ ಭೂಮಿ! ಆಳದ ರಸ್ತೆ ಗುಂಡಿಲಿ ಕುಳಿತಿರೋ ಹಿರಿಯ ವ್ಯಕ್ತಿ. ಅದೇ ರೋಡಲ್ಲಿ (Bengaluru Roads) ಪ್ರತಿದಿನ ಓಡಾಡುವವರಿಗೆ ಕಳೆದ ವಾರ ತಾನೇ ಈ ರಸ್ತೆಗೆ ಡಾಂಬರು ಹಾಕಿದ್ರಲ್ಲ, ಈಗ ಮತ್ತೆ ಅಗೆದಿದ್ಯಾಕೆ ಅನ್ನೋ ಕ್ವಷ್ಚನ್. ಜೊತೆಗೆ ಈ ವ್ಯಕ್ತಿ ರಸ್ತೆ ಗುಂಡಿಲಿ (Bengaluru Potholes) ಕುಳಿತು ಏನ್ಮಾಡ್ತಿದ್ದಾರೆ ಅನ್ನೋ ಕುತೂಹಲ.


  ಹೌದು ಕಣ್ರೀ..ನಮ್ ಬೆಂಗಳೂರಲ್ಲಿ ನಡೆಯುತ್ತಲೇ ಇರುವ ಇಂಥ “ವಿಚಿತ್ರ ವಿಸ್ಮಯ”ಗಳ ವಿರುದ್ಧ ರಾಜ್ಯ ರಾಜಧಾನಿಯ ನಿವಾಸಿಯೊಬ್ರು ಬಂಡೆದಿದ್ದಾರೆ. ರಸ್ತೆ ಗುಂಡಿಯಲ್ಲೇ ಕುಳಿತು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


  ಶುದ್ಧ ಬಂಗಾರದ ಹಾಗಿದ್ದ ನಮ್ಮ ಏರಿಯಾ ಈ ಧೂಳಿನ ಗಣಿ!
  ಬಸವನಗುಡಿಯ ಹನುಮಂತನಗರದಲ್ಲಿ ಅಗೆದ ರಸ್ತೆಗಳ ವಿರುದ್ಧ ಹೋರಾಟ ಶುರುವಾಗಿದೆ. ಹೀಗೆ ರಸ್ತೆ ಗುಂಡಿಲಿ ಕುಳಿತು ಪ್ರತಿಭಟಿಸ್ತಿರೋ ಈ ವ್ಯಕ್ತಿಯ ಹೆಸರು ಅನಿಲ್ ಅಂತ. “ಶುದ್ಧ ಬಂಗಾರದ ಹಾಗಿದ್ದ ನಮ್ಮ ಬಸವನಗುಡಿ ಮತ್ತು ಹನುಮಂತನಗರ ಪ್ರದೇಶಗಳನ್ನು ಧೂಳಿನ ಗಣಿಯಂತೆ ಮಾಡಲಾಗ್ತಿದೆ. ಸುಖಾಸುಮ್ಮನೆ ಅಗೆದು ಸೌಂದರ್ಯ ಹಾಳುಮಾಡ್ತಿದ್ದಾರೆ” ಅನ್ನೋದು ಇವರ ಹೋರಾಟದ ಕಾರಣ.


  ಇದನ್ನೂ ಓದಿ: Heatwave In Bengaluru: ಬೆಂಗಳೂರಲ್ಲಿ ಬೀಸಲಿದೆ ಬಿಸಿ ಗಾಳಿ! ರಾಜಧಾನಿಯ ಮಂದಿಗೆ ಕಾದಿದೆ ಅಪಾಯ
  1 ವರ್ಷದಿಂದ ಇದೇ ಕಥೆ!
  “ಅನಧಿಕೃತವಾಗಿ OFC ಕೇಬಲ್​ಗಳನ್ನು ಅಗೆಯಲಾಗ್ತಿದೆ. ಹಿಂದೆ ನಮ್ಮ ಹನುಮಂತನಗರ ಅತ್ಯಂತ ಶುದ್ದವಾಗಿತ್ತು. ಸರ್ಕಾರದ ಅನುಮತಿ ಇಲ್ಲದೇ ಹೀಗೆ ಅಗೆಯಲಾಗ್ತಿದೆ. ಇಡೀ ಬಸವನಗುಡಿಯನ್ನು ಕಳೆದ 1 ವರ್ಷದಿಂದ ಅಗೆಯಲಾಗ್ತಿದೆ. ಧೂಳಿನಿಂದ ಇಲ್ಲಿನ ಜನರು ಉಸಿರಾಡೋಕೂ ಆಗ್ತಿಲ್ಲ. ಜನಸಾಮಾನ್ಯರಿಗೆ ತಡೆಯಲೇ ಆಗದಷ್ಟು ಸಮಸ್ಯೆ ಉಂಟಾಗ್ತಿದೆ. BBMP ಅಧಿಕಾರಿಗಳು ಅನಧಿಕೃತವಾಗಿ ರಸ್ತೆ ಗುಂಡಿ ಅಗೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಬೇಕು. ಮುಂದೆ ಎಲ್ಲೂ ಹೀಗೆ ಆಗದೇ ಇರುವಂತೆ ನೋಡಿಕೊಳ್ಭೇಕು” ಅನ್ನೋದು ಅನಿಲ್ ಅವರ ಆಗ್ರಹ.


  ಇದನ್ನೂ ಓದಿ: KSRTC ಪ್ರಯಾಣಿಕರಿಗೆ ಸಿಹಿಸುದ್ದಿ! ಹೈಟೆಕ್ ಅಂಬಾರಿ ಉತ್ಸವ ಬಸ್​ ಹೀಗಿದೆ ನೋಡಿ


  ಒಟ್ಟಾರೆ ನಮ್ ಬೆಂಗಳೂರಿನ ಸೌಂದರ್ಯ ಮುಪ್ಪಾಗದಿರ್ಲಿ, ಈಗ ಇರೋದಕ್ಕಿಂತ ಹೆಚ್ಚು ಚೆನ್ನಾಗೇ ಇರ್ಲಿ. ಶುದ್ಧ ಪರಿಸರ, ವಾತಾವರಣ ನಮ್ಮ ಮುಂದಿನ ಪೀಳಿಗೆಗೂ ಇರ್ಲಿ ಅನ್ನೋಣ ಅಲ್ವೇ?

  Published by:ಗುರುಗಣೇಶ ಡಬ್ಗುಳಿ
  First published: