ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಾಡಿಗೆ (Home Rent In Bengaluru) ಮನೆ ಹುಡುಕೋದು ಅಂತಿಂಥಾ ಮಾತಲ್ಲ! ಒಂಥರಾ ಸರ್ಕಸ್ ಇದ್ದ ಹಾಗೇನೇ! ಸದ್ಯ ಬೆಂಗಳೂರಿನಲ್ಲಿ (Bengaluru News) ಬಾಡಿಗೆ ಮನೆ ಹುಡುಕುವ ಪೋಸ್ಟ್ ಒಂದು ಸಖತ್ ವೈರಲ್ ಆಗ್ತಿದೆ. “ಲೆಫ್ಟ್ ಸೈಡ್ ಕಿಡ್ನಿ (Kidney For Rented Home) ನಾನು ಮಾರ್ತಿನೀ, ನಮ್ಮನೆ ಅಡ್ವಾನ್ಸ್ ನೀವ್ ಕೊಡಿ” ಹೀಗೆ ಬರೆದಿರುವ ಪೋಸ್ಟರ್ ಒಂದರ ಚಿತ್ರ ಟ್ವಿಟರ್ನಲ್ಲಿ ಸಿಕ್ಕಾಪಟ್ಟೆ (Bengaluru Viral News) ಹರಿದಾಡುತ್ತಿದೆ.
ವ್ಯಕ್ತಿಯೊಬ್ಬ “ನನ್ನ ಕಿಡ್ನಿ ಮಾರಾಟಕ್ಕಿದೆ, ಆ ಹಣದಿಂದ ನಾನು ಮನೆ ಅಡ್ವಾನ್ಸ್ ಪೇ ಮಾಡ್ತೀನಿ” ಎಂದು ಬರೆದು ಪೋಸ್ಟರ್ ಅಂಟಿಸಿದ್ದಾನೆ. ಈ ಪೋಸ್ಟ್ನಿಂದ ಬೆಂಗಳೂರಿನಲ್ಲಿ ಮನೆ ಬಾಡಿಗೆ ಹುಡುಕುವವರ ಗೋಳಾಟ ವೈರಲ್ ಆಗಿದೆ.
Does this qualify for @peakbengaluru? pic.twitter.com/GGuMZXy2iH
— Ramyakh (@ramyakh) February 25, 2023
ಆದರೆ ಟ್ವೀಟ್ ಕೊನೆಯಲ್ಲಿ “ನಾನ್ ತಮಾಷೆ ಮಾಡಿದೆ, ಯಾರಿಗಾದ್ರೂ ಮನೆ ಗೊತ್ತಿದ್ರೆ ತಿಳಿಸಿ’ ಎಂದು ಬರೆದು ಈ ಆಸಾಮಿ ಚಮಕ್ ನೀಡಿದ್ದಾನೆ. ಒಟ್ಟಾರೆ ಬೆಂಗಳೂರಲ್ಲಿ ಮನೆ ಬಾಡಿಗೆಗೆ ಹುಡುಕುವವರ ಗೋಳಾಟ ಈ ವೈರಲ್ ಫೋಟೋದಿಂದ ಮುನ್ನೆಲೆಗೆ ಬಂದಿದೆ.
ಇದನ್ನೂ ಓದಿ: Ramadevara Betta: ದಕ್ಷಿಣ ಭಾರತದ ಅಯೋಧ್ಯೆ! ರಾಮದೇವರ ಬೆಟ್ಟ ಹೀಗಿದೆ ನೋಡಿ
ಬೆಂಗಳೂರಲ್ಲಿ ಸ್ವಂತ ಮನೆ ಇರುವವರಿಗಿಂತ ಬಾಡಿಗೆ ಮನೆಗಳಲ್ಲಿ ಇರುವವರ ಸಂಖ್ಯೆಯೇ ಹೆಚ್ಚು. ಕಾರಣ ಇಷ್ಟೇ, ರಾಜ್ಯದ ವಿವಿಧ ಜಿಲ್ಲೆಗಳ ಮತ್ತು ಹೊರ ರಾಜ್ಯದ ಜನ ಕೆಲಸ ಅರಸಿ ಇಲ್ಲಿಗೆ ಬರುವುದರಿಂದ ಬಾಡಿಗೆ ಮನೆಗಳ ಸಂಖ್ಯೆ ಹೆಚ್ಚಾಗಿಯೇ ಇದೆ. ಮನೆ ಬಾಡಿಗೆ, ಊಟ, ಪ್ರತಿದಿನ ಖರ್ಚು ಎಲ್ಲವನ್ನೂ ನಿಭಾಯಿಸಿಕೊಂಡು ಅಲ್ಪಸ್ವಲ್ಪ ಉಳಿತಾಯ ಮಾಡಿಕೊಳ್ಳುವವರಿಗೆ ಬೆಂಗಳೂರು ಯಾಕೋ ಇತ್ತೀಚೆಗೆ ದುಬಾರಿ ಆಗ್ತಿದೆ. ಇದಕ್ಕೆ ಪ್ರಮುಖ ಕಾರಣ ಮನೆ ಬಾಡಿಗೆ.
ಕಳೆದ ಎರಡು ವರ್ಷಗಳಿಂದ ಮನೆ ಬಾಡಿಗೆ ಒಂದೇ ಸಮನೆ ಏರುತ್ತಲೇ ಇದೆ ಎನ್ನಬಹುದು. 1 ಬಿಹೆಚ್‍ಕೆ, 2 ಬಿಹೆಚ್‍ಕೆ ಬಾಡಿಗೆ ಮನೆ, ಅಪಾರ್ಟ್‌ಮೆಂಟ್ ಸೇರಿದಂತೆ ಲೀಸ್ ಅಮೌಂಟ್‍ನಲ್ಲೂ ಭರ್ಜರಿ ಏರಿಕೆಯಾಗಿದೆ.
ಸಿಲಿಕಾನ್ ಸಿಟಿಯ ಗೇಟೆಡ್ ಕಮ್ಯುನಿಟಿಗಳಲ್ಲಿ ವಸತಿ ಬಾಡಿಗೆಯು ಶೇಕಡಾ 40 ರಷ್ಟು ಹೆಚ್ಚುತ್ತಿದೆ ಎಂದು ಈ ಹಿಂದೆ NoBroker.com ವರದಿ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ