• Home
  • »
  • News
  • »
  • bengaluru-urban
  • »
  • Bengaluru: ಗೊಂಬೆಯಲ್ಲಿ ಮಡಿಕೇರಿ, ಉತ್ತರ ಕನ್ನಡದ ಭೂಕುಸಿತ!

Bengaluru: ಗೊಂಬೆಯಲ್ಲಿ ಮಡಿಕೇರಿ, ಉತ್ತರ ಕನ್ನಡದ ಭೂಕುಸಿತ!

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಇಲ್ಲಿ ಹಚ್ಚಹಸಿರ ಕಾಡು, ಕಾಡಿನ ಮಧ್ಯೆ ಅಭಿವೃದ್ಧಿ ಹೆಸರಲ್ಲಿ ನಡೆದ ಅನಾಹುತಗಳನ್ನ ಖುದ್ದು ಕಲಾವಿದರೇ ಮನಸ್ಸಿಗೆ ನಾಟುವಂತೆ ವಿವರಿಸಿದ್ದಾರೆ.

  • Share this:

    ಇದು ಅಂತಿಂತ ಪ್ರತಿಕೃತಿಯಲ್ಲ. ಇಡೀ ಮಲೆನಾಡನ್ನ ತೋರಿಸೋ ದೃಶ್ಯಕಾವ್ಯ! ಇಲ್ಲಿ ಕಾಡಿದೆ, ನಾಡಿದೆ. ಭೂಕುಸಿತಗೊಂಡ ಮಡಿಕೇರಿಯೂ (Madikeri Landslide) ಇದೆ. ಆಗಬಹುದಾದ ಅನಾಹುತಗಳ ಇಡೀ ಪಕ್ಷಿನೋಟವೇ ಇದೆ. ಇದೆಲ್ಲವೂ ಕಂಡಿದ್ದು ನವರಾತ್ರಿಯ ಗೊಂಬೆಯಲ್ಲಿ. ನವರಾತ್ರಿ ಹಬ್ಬದ ಸಂದರ್ಭದಲ್ಲಿ (Navaratri 2022) ಮನೆಗಳಲ್ಲಿ ವಿಶಿಷ್ಟ ಗೊಂಬೆಗಳನ್ನ (Dasara Dolsl) ಇರಿಸುತ್ತಾರೆ. ಕಲಾವಿದರೋರ್ವರು ತಮ್ಮದೇ ಪರಿಕಲ್ಪನೆಯ ಗೊಂಬೆಗೆ ರೂಪ ನೀಡಿದ್ದಾರೆ. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸೋ ಪ್ರಯತ್ನ ಮಾಡಿದ್ದಾರೆ. ಇಲ್ಲಿ ಹಚ್ಚಹಸಿರ ಕಾಡು, ಕಾಡಿನ ಮಧ್ಯೆ ಅಭಿವೃದ್ಧಿ ಹೆಸರಲ್ಲಿ ನಡೆದ ಅನಾಹುತಗಳನ್ನ ಖುದ್ದು ಕಲಾವಿದರೇ ಮನಸ್ಸಿಗೆ ನಾಟುವಂತೆ ವಿವರಿಸಿದ್ದಾರೆ.


    ಇಲ್ಲಿದೆ ನೋಡಿ ಪರಿಸರದ ಪ್ರತಿಕೃತಿ


    ಇದನ್ನೂ ಓದಿ: ಕನ್ನಡ ತಾಯಿಗೆ ಕೈಮುಗಿಯಲು ಇಲ್ಲಿ ಬನ್ನಿ! ಏಕೈಕ ಕನ್ನಡಮ್ಮನ ದೇಗುಲ ಇದು


    ಹೀಗೆ ಅಭಿವೃದ್ಧಿ ಹೆಸರಲ್ಲಿ ಮಲೆನಾಡು ಹಾಗೂ ರಾಜ್ಯದ ಇತರೆಡೆ ನಡೆದ ಅನಾಹುತಗಳನ್ನ ಕಣ್ಣಿಗೆ ಕಟ್ಟುವಂತೆ ತೋರಿಸಲಾಗಿದೆ. ಅಷ್ಟೇ ಅಲ್ಲ, ಪವರ್ ಟ್ರಾನ್ಸ್ಮಿಷನ್, ಹೈವೇ, ಟೂರಿಸಂ ಪ್ರಾಜೆಕ್ಟ್​ಗಳಿಂದ ಅರಣ್ಯದ ಹೇಗೆ ಹಾಳಾಗ್ತಿದೆ ಅನ್ನೋದನ್ನ ವಿವರಿಸಿದ್ದಾರೆ.


    ಇದನ್ನೂ ಓದಿ: Vijayapura Dance: ವಿಜಯಪುರ ಮಹಿಳೆಯರ ಈ ಅದ್ಭುತ ಡಾನ್ಸ್​ಗೆ ನೀವು ಫಿದಾ ಆಗ್ತೀರಿ!


    ಮಡಿಕೇರಿ, ಉತ್ತರ ಕನ್ನಡ, ಮೈಸೂರು ಇನ್ನೂ ಹಲವೆಡೆ ನಡೆದ ಹಾಗೂ ನಡೆಯಬಹುದಾದ ಅನಾಹುತಗಳನ್ನ ಕಣ್ಣಿಗೆ ಕಟ್ಟುವಂತೆ ರೂಪಿಸಿದ್ದಾರೆ. ಈ ಗೊಂಬೆನ ನೋಡಿಯಾದ್ರೂ ಪ್ರಕೃತಿ ರಕ್ಷಣೆ ಮಾಡೋಕೆ ಶುರುಮಾಡೋಣ ಅಲ್ವಾ?

    Published by:ಗುರುಗಣೇಶ ಡಬ್ಗುಳಿ
    First published: