• Home
  • »
  • News
  • »
  • bengaluru-urban
  • »
  • Bengaluru: ಮಗನ ಗರ್ಲ್‌ ಫ್ರೆಂಡ್‌ನ 'ಹಸಿಬಿಸಿ' ಫೋಟೋಗಳನ್ನೇ ಸೆರೆ ಹಿಡಿದ ತಂದೆ! ಆ ಕಾಮುಕ ಯಾರು ಗೊತ್ತಾ?

Bengaluru: ಮಗನ ಗರ್ಲ್‌ ಫ್ರೆಂಡ್‌ನ 'ಹಸಿಬಿಸಿ' ಫೋಟೋಗಳನ್ನೇ ಸೆರೆ ಹಿಡಿದ ತಂದೆ! ಆ ಕಾಮುಕ ಯಾರು ಗೊತ್ತಾ?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಯುವತಿ ನೀಡಿದ ದೂರಿನಂತೆ ಪೊಲೀಸರು ರೌಡಿಶೀಟರ್‌ನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆತ ಬಾಯ್ಬಿಟ್ಟ ಸತ್ಯ ಕೇಳಿ ಪೊಲೀಸರೇ ಒಂದು ಕ್ಷಣ ದಂಗಾಗಿದ್ದಾರೆ. ಹಾಗಿದ್ರೆ ಆತ ಹೇಳಿದ್ದೇನು? ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ಇಲ್ಲಿದೆ ಓದಿ ಒಂದು ಆಘಾತಕಾರಿ ಸುದ್ದಿ...

  • Share this:

ಬೆಂಗಳೂರು: ಜಗತ್ತಿನಲ್ಲಿ ಬಹುತೇಕ ತಂದೆ (Father), ತಾಯಿ (Mother) ತಮ್ಮ ಮಕ್ಕಳ ಪ್ರೀತಿಯನ್ನು (Love) ವಿರೋಧಿಸುವವರೇ ಆಗಿರುತ್ತಾರೆ. “ನಾವು ಗೊತ್ತು ಮಾಡಿದವರನ್ನೇ ಮದುವೆಯಾಗಿ ನಮ್ಮ ಮಗ (Son) ಅಥವಾ ಮಗಳು (Daughter) ಸುಖವಾಗಿರಲಿ ಎನ್ನುವುದು ಎಲ್ಲಾ ತಂದೆ, ತಾಯಂದಿರ ಆಸೆ. ಇದಕ್ಕಾಗಿ ಮಕ್ಕಳ ಪ್ರೀತಿ, ಪ್ರೇಮವನ್ನು ಹೆತ್ತವರು ವಿರೋಧಿಸುತ್ತಾರೆ. ಇದನ್ನೇನೋ ಸಹಜ ಅಂದುಕೊಳ್ಳಬಹುದು. ಆದರೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಪಾಪಿ ತಂದೆಯೊಬ್ಬ ಮಗನನ್ನು ಆತನ ಗೆಳತಿಯಿಂದ ದೂರ ಮಾಡಲು ಖತರ್ನಾಕ್ ಪ್ಲಾನ್ (Plan) ಮಾಡಿದ್ದಾನೆ. ಮಾಡಬಾರದನ್ನು ಮಾಡಿ, ಇದೀಗ ಪೊಲೀಸರ (police) ಅತಿಥಿಯಾಗಿದ್ದಾನೆ. ಹಾಗಾದರೆ ಆತ ಯಾರು? ಆತ ಮಾಡಿದ ಕ್ರಿಮಿನಲ್ (Criminal) ಕೆಲಸವಾದರೂ ಏನು ಅಂತ ತಿಳಿದುಕೊಳ್ಳುವುದಕ್ಕೆ ಮುಂದೆ ಓದಿ…


ಇಂಥದ್ದೊಂದು ಘಟನೆ ನಡೆದಿದ್ದು ಎಲ್ಲಿ?


ರಾಜ್ಯ ರಾಜಧಾನಿ ಬೆಂಗಳೂರಿನ ಎಚ್ಎಸ್‌ಆರ್‌ ಲೇಔಟ್‌ನಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ತಂದೆಯೊಬ್ಬ ತನ್ನ ಮಗ ಹಾಗೂ ಆತನ ಗೆಳೆತಿಯನ್ನು ಬೇರೆ ಮಾಡಲು ಖತರ್ನಾಕ್ ಪ್ಲಾನ್ ಮಾಡಿದ್ದಾನೆ. ಅವರಿಬ್ಬರನ್ನು ಬೇರೆ ಮಾಡುವ ಕೆಲಸವನ್ನು ರೌಡಿ ಶೀಟರ್ ಒಬ್ಬನಿಗೆ ವಹಿಸಿದ್ದಾನೆ. ಆದರೆ ಆತ ಮಾಡಬಾರದ್ದು ಮಾಡಿ ಜೈಲು ಸೇರಿದ್ದಾನೆ.


ರೌಡಿ ಶೀಟರ್ ಬಾಯ್ಬಿಟ್ಟ ಸ್ಫೋಟಕ ಸತ್ಯ


ಬೆಂಗಳೂರಿನ ಆಗ್ನೇಯ ಸಿಇಎನ್ (ಸೈಬರ್ ಎಕನಾಮಿಕ್ ಮತ್ತು ನಾರ್ಕೋಟಿಕ್ಸ್) ಅಪರಾಧದಳದ ಪೊಲೀಸರು ಎಚ್‌ಎಸ್‌ಆರ್ ಲೇಔಟ್ ನಿವಾಸಿ, 30 ವರ್ಷದ ನಂದೀಶ್ ಎಂಬಾತನ್ನು ಅರೆಸ್ಟ್ ಮಾಡಿದ್ದರು. ಈತ ರೌಡಿ ಶೀಟರ್ ಆಗಿದ್ದು, ಮಹಿಳೆಯ ಖಾಸಗಿ ಫೋಟೋ ಸೆರೆ ಹಿಡಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಆದರೆ ವಿಚಾರಣೆ ವೇಳೆ ಈ ರೌಡಿ ಶೀಟರ್ ನಂದೀಶ್ ಬೇರೆಯದ್ದೇ ಸ್ಫೋಟಕ ಮಾಹಿತಿ ಹೇಳಿದ್ದಾನೆ.


ಇದನ್ನೂ ಓದಿ: High Court: ಹಿಜಾಬ್ ವೀಡಿಯೋಗಾಗಿ ಮಕ್ಕಳ ಬೆನ್ನು ಬೀಳದಂತೆ 60ಕ್ಕೂ ಹೆಚ್ಚು ಮಾಧ್ಯಮ ಸಂಸ್ಥೆಗಳ ವಿರುದ್ಧ PIL ಸಲ್ಲಿಕೆ


ಮಗನನ್ನು ಗೆಳತಿಯಿಂದ ದೂರ ಮಾಡಲು ತಂದೆ ಪ್ಲಾನ್


ಅಸಲಿಗೆ ಈ ನಂದೀಶ್ ಯುವತಿಯ ಫೋಟೋ ಸೆರೆಹಿಡಿದಿದ್ದು ವ್ಯಕ್ತಿಯೊಬ್ಬರು ಹೇಳಿದ ಕಾರಣಕ್ಕಾಗಿ ಎನ್ನಲಾಗಿದೆ. ಆಕೆ ಬೇರೆ ರಾಜ್ಯದ ಯುವತಿಯಾಗಿದ್ದು, ಕಂಪ್ಯೂಟರ್ ಕೋರ್ಸ್ ಓದಲು ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದಳು. ಆಕೆ ಸ್ಥಳೀಯ ಯುವಕನೊಬ್ಬನನ್ನು ಪ್ರೀತಿಸುತ್ತಾ ಇದ್ದಳು. ಇದು ಆ ಹುಡುಗನ ತಂದೆಗೆ ಗೊತ್ತಾಗಿ ತೀವ್ರ ವಿರೋಧ ಮಾಡಿದ್ದರು.


ಲಿವಿಂಗ್ ಟು ಗೆದರ್‌ನಲ್ಲಿದ್ದ ಮಗ


ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಮಗ ಮನೆ ಬಿಟ್ಟು ಬಂದಿದ್ದಾನೆ. ತನ್ನ ಗೆಳತಿಯೊಂದಿಗೆ ಲಿವಿಂಗ್ ಟು ಗೆದರ್ ರಿಲೇಷನ್‌ಶಿಪ್‌ನಲ್ಲಿ ಇದ್ದು, ಆಕೆಯೊಂದಿಗೆ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದ ಎನ್ನಲಾಗಿದೆ. ಇದು ಆ ಹುಡುಗನ ತಂದೆಯನ್ನು ಮತ್ತಷ್ಟು ಕೆರಳಿಸಿತ್ತು.


ಯುವತಿಯ ಖಾಸಗಿ ಫೋಟೋ ಸೆರೆ ಹಿಡಿಯಲು ಡೀಲ್


ಆಗ ಆಕ್ರೋಶಗೊಂಡ ಹುಡುಗನ ತಂದೆ ರೌಡಿ ಶೀಟರ್‌ ನಂದೀಶ್‌ನನ್ನು ಸಂಪರ್ಕಿಸಿದ್ದಾರೆ. ಆಕೆಯ ಖಾಸಗಿ ಚಿತ್ರ ಸೆರೆ ಹಿಡಿಯುವಂತೆ ಡೀಲ್ ಮಾಡಿಕೊಂಡಿದ್ದಾರೆ. ಡೀಲ್ ಪಡೆದುಕೊಂಡ ನಂದೀಶ್, ಆಕೆಯ ಖಾಸಗಿ ಚಿತ್ರ ಸೆರೆಲಹಿಡಿದು, ಆಕೆಯ ತಂದೆಗೆ ಅದನ್ನು ಕಳಿಸಿದ್ದಾನೆ.


ಬೆಂಗಳೂರು ಬಿಟ್ಟು ಹೋಗುವಂತೆ ಯುವತಿಗೆ ಧಮ್ಕಿ


ಅಷ್ಟಕ್ಕೆ ಸುಮ್ಮನಾಗದ ರೌಡಿ ಶೀಟರ್ ನಂದೀಶ್, ಯುವತಿಗೆ ಧಮ್ಕಿ ಹಾಕಿದ್ದಾನೆ. ಈ ಹುಡುಗನ ಸಹವಾಸ ಬಿಟ್ಟು, ಬೆಂಗಳೂರನ್ನೇ ಬಿಟ್ಟು ನಿನ್ನ ಊರಿಗೆ ಹೋಗಬೇಕು. ಇಲ್ಲವಾದರೆ ಖಾಸಗಿ ಫೋಟೋಗಳನ್ನು ವೈರಲ್ ಮಾಡುತ್ತೇನೆ ಅಂತ ಬೆದರಿಸಿದ್ದಾನೆ.


ಪೊಲೀಸರಿಂದ ರೌಡಿ ಶೀಟರ್ ಬಂಧನ


ರೌಡಿ ಬೆದರಿಕೆಯಿಂದ ಯುವತಿ ಕಂಗೆಟ್ಟಿದ್ದಾಳೆ. ಜೊತೆಗೆ ಸಂತ್ರಸ್ತೆ ಆಗ್ನೇಯ CEN ಪೊಲೀಸ್ ಠಾಣೆಗೆ ತೆರಳಿ, ದೂರು ದಾಖಲಿಸಿದ್ದಾರೆ. ಆಕೆ ನೀಡಿದ ದೂರಿನನ್ವಯ ಪೊಲೀಸರು ಆರೋಪಿ ನಂದೀಶ್‌ನನ್ನು ಬಂಧಿಸಿದ್ದಾರೆ.


ಇದನ್ನೂ ಓದಿ: Actor Chetan: 14 ದಿನ ನ್ಯಾಯಾಂಗ ಬಂಧನ: ನಟ ಚೇತನ್ ವಿರುದ್ಧ ದಾಖಲಾಗಿರುವ FIRನಲ್ಲಿರುವ ಪ್ರಮುಖ ಅಂಶಗಳು ಇಲ್ಲಿವೆ


ಯುವಕನ ತಂದೆ ವಿಚಾರಣೆ ನಡೆಸಲು ಮುಂದಾದ ಪೊಲೀಸ್


ನಂದೀಶ್ ವಿಚಾರಣೆ ವೇಳೆ ಸ್ಫೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾನೆ. ಇನ್ನು ನಂದೀಶ್ ಮೇಲೆ ಕೊಲೆ ಯತ್ನ ಮತ್ತು ಹಲ್ಲೆ ಸೇರಿದಂತೆ ಆರು ಪ್ರಕರಣಗಳು ಇರೋದು ಗೊತ್ತಾಗಿದೆ. ವಿಚಾರಣೆ ಮುಂದುವರೆದಿದ್ದು, ಯುವಕನ ತಂದೆಯನ್ನೂ ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.

Published by:Annappa Achari
First published: