ಬೆಂಗಳೂರು: ಮಲ್ಯ ಆಸ್ಪತ್ರೆ ಯಾರಿಗೆ ಗೊತ್ತಿಲ್ಲ ಹೇಳಿ? ಸೆಲೆಬ್ರಿಟಿಗಳು, ಚಲನಚಿತ್ರ ಕಲಾವಿದರು, ರಾಜಕೀಯ ನಾಯಕರು ಚಿಕಿತ್ಸೆ ಪಡೆಯಲು ಬೆಂಗಳೂರಿನ ಮಲ್ಯ ಆಸ್ಪತ್ರೆಗೆ (Bengaluru Mallya Hospital) ದಾಖಲಾಗುತ್ತಿದ್ದ ಎಷ್ಟೋ ಉದಾಹರಣೆಗಳಿವೆ. ಆಗಾಗ ಪ್ರಖ್ಯಾತ ಸ್ಟಾರ್ಗಳಿಗೆ ಚಿಕಿತ್ಸೆ ನೀಡಿದ ಕಾರಣದಿಂದ ಸುದ್ದಿಗಳಲ್ಲೂ ಮಲ್ಯ ಆಸ್ಪತ್ರೆ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ನೀವೂ ಮಲ್ಯ ಆಸ್ಪತ್ರೆಗೆ ಚಿಕಿತ್ಸೆಗೆ (Treatments In Mallya Hospital) ತೆರಳಿರಬಹುದು. ಇನ್ಮುಂದೂ ಮಲ್ಯ ಆಸ್ಪತ್ರೆಗೆ ಹೋಗುವ ಅಗತ್ಯತೆ ಬೀಳಬಹುದು. ಆದರೆ ನೆನಪಿಡಿ, ಇನ್ಮುಂದೆ ಮಲ್ಯ ಆಸ್ಪತ್ರೆ, ಮಲ್ಯ ಆಸ್ಪತ್ರೆ ಆಗಿಯೇ ಉಳಿಯುವುದಿಲ್ಲ! ಅರೇ ಇದೇನಿದು ಅಂದಿರಾ? ಮಲ್ಯ ಆಸ್ಪತ್ರೆಯ ಮತ್ತೆ ಏನಾಗುತ್ತೆ? ಮಲ್ಯ ಆಸ್ಪತ್ರೆಯಲ್ಲಿ ಇನ್ಮೇಲೆ ಚಿಕಿತ್ಸೆ ಸಿಗೋದೇ ಇಲ್ವಾ? ಮಲ್ಯ ಆಸ್ಪತ್ರೆ ಮತ್ತೆ ಏಕೆ ಸುದ್ದಿಯಲ್ಲಿದೆ? ಎಲ್ಲ ಪ್ರಶ್ನೆಗಳಿಗೂ ಸಾವಕಾಶವಾಗಿ ಇಲ್ಲಿ ಉತ್ತರ ಓದಿ.
ಬೆಂಗಳೂರಿನ ಹೃದಯಭಾಗವಾದ ಕಂಠೀರವ ಸ್ಟೇಡಿಯಂನ ಎದುರು ಭಾಗದಲ್ಲಿನ ಸೇಂಟ್ ಜೋಸೆಫ್ ಕಾಲೇಜ್ ಬಳಿ ಇರುವ ಮಲ್ಯ ಆಸ್ಪತ್ರೆಯ ಇದೀಗ ಇನ್ನೊಂದು ಪ್ರಮುಖ ಆಸ್ಪತ್ರೆಯ ಮುತುವರ್ಜಿಗೆ ಬಂದಿದೆ.
ಯಾವ ಆಸ್ಪತ್ರೆ ಅದು? ಬೆಂಗಳೂರಿನ ಇನ್ನೊಂದು ಪ್ರಮುಖ ಆಸ್ಪತ್ರೆಯಾದ ವೈದೇಹಿ ಆಸ್ಪತ್ರೆಯು ಮಲ್ಯ ಆಸ್ಪತ್ರೆಯ ಪಂಚತಾರಾ ಸೇವೆಗಳ ಜವಾಬ್ದಾರಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಹೀಗಾಗಿ ಇನ್ಮೇಲೆ ನೀವು ಮಲ್ಯ ಆಸ್ಪತ್ರೆಗೆ ಎಂದು ಹೋದರೆ ಅಲ್ಲಿ ಮಲ್ಯ ಆಸ್ಪತ್ರೆ ಸಿಗಲ್ಲ! ಬದಲಿಗೆ ವೈದೇಹಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ನೀವು ತಲುಪಲಿದ್ದೀರಿ.
ಶಿವರಾಜ್ ಕುಮಾರ್ ಅವರಿಗೆ ಚಿಕಿತ್ಸೆ ನೀಡಿದ್ದು ಇದೇ ಆಸ್ಪತ್ರೆಯಲ್ಲಿ ನಿಮಗೆ ಗೊತ್ತೇ? ಇತ್ತೀಚಿಗೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರಿಗೆ ಚಿಕಿತ್ಸೆ ನೀಡಿದ್ದು ಸಹ ಇದೇ ಮಲ್ಯ ಆಸ್ಪತ್ರೆಯಲ್ಲಿ. ಹೀಗೆ ಪ್ರಖ್ಯಾತ ಸೆಲೆಬ್ರಿಟಿಗಳಿಗೆ ಚಿಕಿತ್ಸೆ ನೀಡಿದ ಮಲ್ಯ ಆಸ್ಪತ್ರೆ ಇನ್ಮೇಲೆ ವೈದೇಹಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಾಗಿ ಬದಲಾಗಲಿದೆ.
ಮಲ್ಯ ಆಸ್ಪತ್ರೆ, ಅಲ್ಲ ಅಲ್ಲ, ಈಗಿನ ವೈದೇಹಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಹೋಗೋದು ಹೇಗೆ?
ಇಲ್ಲಿದೆ ನೋಡಿ ವಿಳಾಸ: ಮಲ್ಯ ಆಸ್ಪತ್ರೆ, (ಇದೀಗ ವೈದೇಹಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ) ಶ್ರೀ ಕಂಠೀರವ ಸ್ಟೇಡಿಯಂನ ಎದುರು, ಸೇಂಟ್ ಜೋಸೆಫ್ ಕಾಲೇಜಿನ ಬಳಿ ವಿಠಲ್ ಮಲ್ಯ ರಸ್ತೆ, ಬೆಂಗಳೂರು-560001
ಫೋನ್ ಸಂಖ್ಯೆ: ಸಂಪರ್ಕಕ್ಕಾಗಿ ಫೋನ್ ಸಂಖ್ಯೆ: +91-80-68697979, +91-80-68697989 ತುರ್ತು ನಿರ್ವಹಣಾ ವಿಭಾಗ: +91-80-68697999 ಇ-ಮೇಲ್ ಐಡಿ: info@mallyahospital.net
ಇದೀಗ ಇದೇ ಆಸ್ಪತ್ರೆ ವೈದೇಹಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಾಗಿ ಬದಲಾಗುತ್ತಿದೆ. ಹಾಗಾದರೆ ವೈದೇಹಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಸಿಗುವ ಸೇವೆಗಳೇನು? ಇಲ್ಲಿದೆ ವಿವರ
ಮಲ್ಯ ಆಸ್ಪತ್ರೆಯ ಪಂಚತಾರಾ ಸೇವೆಗಳ ಜವಾಬ್ದಾರಿಯನ್ನು ವಹಿಸಿಕೊಂಡಿರುವ ವೈದೇಹಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯು ಏನೆಲ್ಲ ಸೇವೆ ನೀಡಲಿದೆ ಎಂಬ ಕುತೂಹಲ ನಿಮಗೂ ಇದ್ದಿರಬಹುದು. ಯಾವ ಆರೋಗ್ಯ ಸಮಸ್ಯೆಗಳಿಗೆ ಈ ಆಸ್ಪತ್ರೆಗೆ ಹೋದರೆ ಚಿಕಿತ್ಸೆ ಸಿಗಬಹುದು ಎಂಬ ಮಾಹಿತಿ ಇಲ್ಲಿದೆ.
ಈ ಚಿಕಿತ್ಸೆ ನೀಡುತ್ತಂತೆ ವೈದೇಹಿ ಆಸ್ಪತ್ರೆ ವೈದೇಹಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯು ಕ್ರಿಟಿಕಲ್ ಕೇರ್ ಸೇವೆಗಳ ಸ್ಪೆಕ್ಟ್ರಮ್ ತುರ್ತು ಔಷಧಿ ಮತ್ತು ಆಘಾತ ಆರೈಕೆ ನೀಡುತ್ತದೆ. ಇಂಟರ್ವೆನ್ಷನಲ್ ಕಾರ್ಡಿಯಾಲಜಿ / ಟಿಎವಿಆರ್, ಅತ್ಯಾಧುನಿಕ ಹೃದಯ ಶಸ್ತ್ರಚಿಕಿತ್ಸೆಗಳು, ಪಾರ್ಶ್ವವಾಯು ನಿರ್ವಹಣೆ, ಹೈಪರ್ಬೇರಿಕ್ ಚೇಂಬರ್ನೊಂದಿಗೆ ಸುಧಾರಿತ ಗಾಯದ ಆರೈಕೆ, ಸೌಂದರ್ಯಶಾಸ್ತ್ರ, ಆರ್ಥೊಡಾಂಟಿಕ್ಸ್, ಜೆನೆಟಿಕ್ ಪ್ರೊಫೈಲಿಂಗ್, ಸುಧಾರಿತ ಐಸಿಯು ಸೇವೆಗಳು ಸಹ ವೈದೇಹಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ದೊರೆಯುತ್ತವೆ.