Home Rent In Bengaluru: ಬೆಂಗಳೂರಿನಲ್ಲಿ ತುಟ್ಟಿ ಆಯ್ತು ಬಾಡಿಗೆಮನೆ! ಯಾವ ಏರಿಯಾದಲ್ಲಿ ಎಷ್ಟು ರೇಟ್?

Bengaluru News: ರಿಯಲ್ ಎಸ್ಟೇಟ್ ಸಲಹೆಗಾರ ಅನಾರಾಕ್‌ ಅಂಕಿ ಅಂಶಗಳ ಪ್ರಕಾರ, ಮೆಟ್ರೋ ಸಿಟಿಗಳಲ್ಲಿ ಅದರಲ್ಲೂ ಬೆಂಗಳೂರಿನ ಜೆಪಿ ನಗರ ಪ್ರದೇಶ ಹೆಚ್ಚು ಕಾಸ್ಟ್ಲಿಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ಐಟಿ ಸಿಟಿ ಬೆಂಗಳೂರು (Bengaluru) ಮತ್ತಷ್ಟು ದುಬಾರಿಯಾಗಿದೆ. ಅದರಲ್ಲೂ ಕೊರೋನಾ ಬಂದು ಹೋದ ಮೇಲಂತೂ ಇನ್ನಷ್ಟು ಕಾಸ್ಟ್ಲಿಯಾಗಿದೆ. ಇಲ್ಲಿನ ಐಷಾರಾಮಿ ಮನೆಗಳ ಬಾಡಿಗೆ ಏರುಗತಿಯಲ್ಲಿ ಸಾಗಿದೆ. ಬೇರೆ ಮೆಟ್ರೋ ಸಿಟಿಗಳಿಗೆ (Metro City) ಹೋಲಿಸಿದರೆ ಇಲ್ಲಿನ ಬಂಡವಾಳ ಮೌಲ್ಯ ಕೂಡ ಹೆಚ್ಚಾಗಿದೆ. ಹೌದು, ಸುದ್ದಿಸಂಸ್ಥೆಯೊಂದರ ವರದಿಯ ಪ್ರಕಾರ ಕಳೆದ ಎರಡು ವರ್ಷಗಳಲ್ಲಿ ಏಳು ಪ್ರಮುಖ ನಗರಗಳಲ್ಲಿ ಮಾಸಿಕ ಬಾಡಿಗೆಗಳು (Home Rents In Bengaluru) ಮತ್ತು ಐಷಾರಾಮಿ ವಸತಿ ಪ್ರಾಪರ್ಟಿಗಳ ಬೇಡಿಕೆ ಹೆಚ್ಚಾಗಿದೆ. ದೆಹಲಿ-ಎನ್‌ಸಿಆರ್, ಮುಂಬೈ ಮೆಟ್ರೋಪಾಲಿಟನ್ ಪ್ರದೇಶ , ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್ ಮತ್ತು ಪುಣೆ ಈ ಸಿಟಿಗಳಲ್ಲಿ ಬಾಡಿಗೆ ದರದಲ್ಲಿ ಭಾರೀ ಹೆಚ್ಚಳವಾಗಿದೆ.

ಜಾಗತಿಕ ಕೊರೋನಾ ಮಹಾಮಾರಿಯ 2 ನೇ ಅಲೆಯ ಬಳಿಕ ಬಾಡಿಗೆದಾರರು ದೊಡ್ಡ ಗಾತ್ರದ ಮನೆಗಳಿಗೆ ಒಲವು ತೋರುವ ಸಾಧ್ಯತೆಯಿರುವುದರಿಂದ ಗ್ರಾಹಕರ ನಡವಳಿಕೆಯು ಬದಲಾಗಿದೆ ಎಂದು ಅನಾರಾಕ್ ಅಧ್ಯಕ್ಷ ಅನುಜ್ ಪುರಿ ಹೇಳಿದ್ದಾರೆ.

ಜೆಪಿ ನಗರ ತುಂಬಾ ಕಾಸ್ಟ್ಲಿ
ರಿಯಲ್ ಎಸ್ಟೇಟ್ ಸಲಹೆಗಾರ ಅನಾರಾಕ್‌ ಅಂಕಿ ಅಂಶಗಳ ಪ್ರಕಾರ, ಮೆಟ್ರೋ ಸಿಟಿಗಳಲ್ಲಿ ಅದರಲ್ಲೂ ಬೆಂಗಳೂರಿನ ಜೆಪಿ ನಗರ ಪ್ರದೇಶ ಹೆಚ್ಚು ಕಾಸ್ಟ್ಲಿಯಾಗಿದೆ. ಇಲ್ಲಿ ಅತ್ಯಧಿಕ ಭೂಮಿ ಬೆಲೆ ಶೇಕಡಾ 9 ರಷ್ಟು ಅಪ್ರಿಸಿಯೇಷನ್‌ ಕಂಡಿದೆ. ಈ ಪ್ರಕಾರ ಪ್ರತಿ ಚದರ ಅಡಿಗೆ ಇದ್ದ ಸರಾಸರಿ ಬೆಲೆಗಳು ಏರಿಕೆಯಾಗಿವೆ. 2020 ರಲ್ಲಿ ಪ್ರತಿ ಚದರ ಅಡಿಗೆ 5,698 ರೂ ಇದ್ದ ಬೆಲೆ 2022 ರಲ್ಲಿ ₹6,200 ಕ್ಕೆ ಏರಿಕೆಯಾಗಿದೆ.

ದುಬಾರಿಯಾಯ್ತು ಜೆಪಿ ನಗರ!
ಬೆಂಗಳೂರಿನ ಜೆಪಿ ನಗರದಲ್ಲಿ ಐಷಾರಾಮಿ ಮನೆಗಳ ಮಾಸಿಕ ಬಾಡಿಗೆಗಳು 2020 ರಲ್ಲಿ ₹ 46,000 ಇದ್ದರೆ 2022 ರಲ್ಲಿ ₹ 52,000 ಕ್ಕೆ ಏರಿಕೆ ಆಗಿದೆ. ಅಂದರೆ ಬಾಡಿಗೆಯಲ್ಲಿ ಶೇ. 13 ರಷ್ಟು ಏರಿಕೆಯಾದಂತಾಗಿದೆ. ರಾಜಾಜಿ ನಗರದಲ್ಲಿ ಸರಾಸರಿ ಮಾಸಿಕ ಬಾಡಿಗೆಗಳು 2020 ರಲ್ಲಿ ₹ 56,000 ಇದ್ದರೆ ಕೊರೋನಾ ಬಳಿಕ ಅಂದರೆ 2022 ರಲ್ಲಿ ₹ 65,000 ಕ್ಕೆ ಏರಿಕೆಯಾಗಿದೆ. ಅಂದರೆ ಬಾಡಿಗೆ ದರದಲ್ಲಿ ಶೇ.16 ಪ್ರತಿಶತ ಏರಿಕೆಯಾಗಿದೆ. ಅಂದರೆ ಬಂಡವಾಳದ ಮೂಲ ಬೆಲೆಯ ಮೇಲೆ ಪ್ರತಿ ಅಡಿಗೆ ಶೇ 5 ರಷ್ಟು, ಅಂದರೆ 13900 ರೂ ಏರಿಕೆಯಾಗಿದೆ.

ಮುಂಬೈನಲ್ಲಿ ಎಷ್ಟಿದೆ?
ಹಾಗೆ ನೋಡಿದ್ರೆ, ಮುಂಬೈನ ವರ್ಲಿಯಲ್ಲಿ ಬಾಡಿಗೆ ಬೆಳವಣಿಗೆಯು ಅತ್ಯಧಿಕವಾಗಿದೆ. ಇಲ್ಲಿ ಕನಿಷ್ಠ 2,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿರುವ ಐಷಾರಾಮಿ ಮನೆಗಳಿಗೆ 2020 ರಲ್ಲಿ ತಿಂಗಳಿಗೆ ₹ 2 ಲಕ್ಷದಿಂದ ಬಾಡಿಗೆ ಪಡೆಯಲಾಗುತ್ತಿದ್ದರೆ ಈಗ ₹ 2.35 ಲಕ್ಷಕ್ಕೆ ಹೆಚ್ಚಾಗಿದೆ. ಆದರೂ ಬಂಡವಾಳ ಮೌಲ್ಯವು ಕೇವಲ ಎರಡು ಪ್ರತಿಶತದಷ್ಟು ಏರಿಕೆಯನ್ನು ಕಂಡಿದೆ.

ಇದನ್ನೂ ಓದಿ: Bengaluru Namma Metro: ಸ್ಮಾರ್ಟ್​ಕಾರ್ಡ್, ಟೋಕನ್ ಬೇಕಿಲ್ಲ; ಮೆಟ್ರೋ ಪ್ರಯಾಣ ಇನ್ನಷ್ಟು ಈಸಿ!

ಇನ್ನು, ದೆಹಲಿ-ಎನ್‌ಸಿಆರ್‌ನಲ್ಲಿ, ಗಾಲ್ಫ್ ಕೋರ್ಸ್ ರಸ್ತೆಯಲ್ಲಿನ ಸರಾಸರಿ ಮಾಸಿಕ ಬಾಡಿಗೆಗಳು 2020 ರಲ್ಲಿ ₹70,000 ಇದ್ದರೆ ಈಗ ₹78,000 ಕ್ಕೆ ಏರಿಕೆಯಾಗಿವೆ. ಅಂದರೆ ಶೇ. 11 ಪ್ರತಿಶತ ಹೆಚ್ಚಳ ಕಂಡಿವೆ. ಬಂಡವಾಳ ಮೌಲ್ಯಗಳು ಪ್ರತಿ ಚದರ ಅಡಿಗೆ ₹13,150 ರಿಂದ ₹13,500 ವರೆಗೆ ಅಂದರೆ ಕೇವಲ ಮೂರು ಪ್ರತಿಶತ ಹೆಚ್ಚಾಗಿವೆ.

ಚೆನ್ನೈ ಕೂಡ ಕಡಿಮೆಯಿಲ್ಲ
ಇನ್ನು ಚೆನ್ನೈ ಕೂಡ ಇದಕ್ಕೆ ಹೊರತಾಗಿಲ್ಲ. ಇಲ್ಲಿನ ಅಣ್ಣಾ ನಗರದಲ್ಲಿ ಸರಾಸರಿ ಬಾಡಿಗೆಗಳು 56,000 ರೂ. ಬಾಡಿಗೆ ಪಡೆಯುತ್ತಿದ್ದವು. ಇದೀಗ ಅವು ತಮ್ಮ ಬಾಡಿಗೆಯನ್ನು ತಿಂಗಳಿಗೆ 63,000 ಕ್ಕೆ ಏರಿಸಿಕೊಂಡಿವೆ.

ಇದನ್ನೂ ಓದಿ: Vande Bharat Express: ಕರ್ನಾಟಕಕ್ಕೂ ಬರಲಿದೆ ವಂದೇ ಭಾರತ್ ರೈಲು! ಬೆಂಗಳೂರಿನಿಂದ ಈ ನಗರಕ್ಕೆ ಸೇವೆ

ಹೈದರಾಬಾದ್‌ನ ಜುಬಿಲಿ ಹಿಲ್ಸ್ ಸರಾಸರಿ ಮಾಸಿಕ ₹62,000 ಬಾಡಿಗೆಯನ್ನು ಕಂಡಿದೆ. ಇದು 2020 ರಿಂದ ಶೇ. 15 ರಷ್ಟು ಹೆಚ್ಚಾಗಿದೆ. ಆದರೆ ಬಂಡವಾಳ ಮೌಲ್ಯವು ಪ್ರತಿ ಚದರ ಅಡಿಗೆ ₹6,950 ರಿಂದ ₹7,400 ಕ್ಕೆ ಏರಿಕೆ ಕಂಡಿದೆ.

ಒಟ್ಟಾರೆ, ಕೊರೋನಾ ನಂತರ ಜನಜೀವನ ಬದಲಾಗಿದೆ. ಹಾಗೆಯೇ ಐಷಾರಾಮಿ ಬಾಡಿಗೆ ಮನೆಗಳ ದರವೂ ಹೆಚ್ಚಾದಂತೆ ಆಸ್ತಿಗಳ ಮೌಲ್ಯವೂ ಬದಲಾಗಿದೆ ಅನ್ನೋದು ಸತ್ಯ.
Published by:ಗುರುಗಣೇಶ ಡಬ್ಗುಳಿ
First published: