• Home
  • »
  • News
  • »
  • bengaluru-urban
  • »
  • Bengaluru Liquor Sale Ban: ಬೆಂಗಳೂರಲ್ಲಿ ಮದ್ಯ ಮಾರಾಟ ಬ್ಯಾನ್; ಆದ್ರೂ ಇಲ್ಲಿ ಸಿಗುತ್ತೆ!

Bengaluru Liquor Sale Ban: ಬೆಂಗಳೂರಲ್ಲಿ ಮದ್ಯ ಮಾರಾಟ ಬ್ಯಾನ್; ಆದ್ರೂ ಇಲ್ಲಿ ಸಿಗುತ್ತೆ!

ಮದ್ಯಪಾನ ಆರೋಗ್ಯಕ್ಕೆ ಹಾನಿಕರ

ಮದ್ಯಪಾನ ಆರೋಗ್ಯಕ್ಕೆ ಹಾನಿಕರ

Bengaluru News: ಬಾರ್ ಅಂಡ್ ರೆಸ್ಟೋರೆಂಟ್‌ಗಳು, ಎಂಎಸ್‌ಐಎಲ್ ಅಂಗಡಿ, ಪಬ್, ಬಿಯರ್ ಮತ್ತು ವೈನ್ ಸ್ಟೋರ್‌ಗಳು ಬಂದ್ ಇರಲಿವೆ.

  • Share this:

ಬೆಂಗಳೂರು: ಬೆಂಗಳೂರಿನ ಜನರು ಗಮನಿಸಲೇಬೇಕಾದ ಮಹತ್ವದ ಸುದ್ದಿಯೊಂದು ಇಲ್ಲಿದೆ. ದಸರಾ ಹಬ್ಬದ (Dasara 2022 Liquor Sale Ban)  ನಿಮಿತ್ತ ಬೆಂಗಳೂರು ನಗರ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಎರಡು ದಿನಗಳ ಕಾಲ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ದಸರಾ ಹಬ್ಬಕ್ಕೆಂದು (Dasara 2022) ಬುಧವಾರ ಅಕ್ಟೋಬರ್ 5 ರ ಬೆಳಗ್ಗೆ 7 ಗಂಟೆಯಿಂದ ಮದ್ಯ ಮಾರಾಟ ನಿಷೇಧ ಜಾರಿಗೊಳ್ಳಲಿದೆ. ಈ ಮದ್ಯ ಮಾರಾಟ ನಿಷೇಧ ( Liquor Sale Ban in Bengaluru)  ನಿಯಮ ಅಕ್ಟೋಬರ್ 6ರ ಮಧ್ಯರಾತ್ರಿ 12 ಗಂಟೆಯವರೆಗೂ ಇರಲಿದೆ.


ಬೆಂಗಳೂರಿನ ಎಲ್ಲೆಲ್ಲಿ ಈ ಮದ್ಯ ನಿಷೇಧ ನಿಯಮ ಜಾರಿಯಲ್ಲಿರಲಿದೆ? ಇಲ್ಲಿದೆ ನೋಡಿ ವಿವರ
ನವರಾತ್ರಿ ಹಬ್ಬಕ್ಕೆ ಎರಡು ದಿನಗಳ ಕಾಲ ಮದ್ಯ ಮಾರಾಟ ನಿರ್ಬಂಧವು ಮಧ್ಯ ಬೆಂಗಳೂರು, ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ, ಈಶಾನ್ಯ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಜಾರಿಯಲ್ಲಿರಲಿದೆ. ಈಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸಿಎಚ್ ಪ್ರತಾಪ್ ರೆಡ್ಡಿ ಅಧಿಕೃತ ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: Bengaluru: ಆಹಾ! ಓಹೋ! ಇದು ಬೆಂಗಳೂರಿನ ಮಾಯಾಲೋಕ!


ಎಲ್ಲಾ ಕಡೆ ಮದ್ಯ ಮಾರಾಟ ನಿಷೇಧ ಇಲ್ಲ!
ಬೆಂಗಳೂರಿನ ಎಲ್ಲಾ ಕಡೆ ಮದ್ಯ ಮಾರಾಟ ನಿಷೇಧ ಮಾಡಲಾಗಿಲ್ಲ. ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಮಾತ್ರ ನವರಾತ್ರಿ ಹಬ್ಬದ ನಿಮಿತ್ತ ಈ ನಿಯಮ ಜಾರಿಯಲ್ಲಿರಲಿದೆ. ಬಾರ್ ಅಂಡ್ ರೆಸ್ಟೋರೆಂಟ್‌ಗಳು, ಎಂಎಸ್‌ಐಎಲ್ ಅಂಗಡಿ, ಪಬ್, ಬಿಯರ್ ಮತ್ತು ವೈನ್ ಸ್ಟೋರ್‌ಳು ಬಂದ್ ಇರಲಿವೆ.


ಆದರೆ ಎಲ್ಲಿ ಸಿಗುತ್ತೆ ಮದ್ಯ?
ಆದರೆ ಮದ್ಯ ನಿಷೇಧ ನಿಯಮ ಜಾರಿಯಲ್ಲಿದ್ದರೂ ಸಹ ಕ್ಲಬ್‌ಗಳಲ್ಲಿ, ಸ್ಟಾರ್ ಹೋಟೆಲ್​ಗಳಲ್ಲಿ ಮದ್ಯ ದೊರೆಯಲಿದೆ. 


ಉತ್ತರ ಕನ್ನಡದ ಜನರಿಗೆ ಇಲ್ಲಿದೆ ಮಹತ್ವದ ಸುದ್ದಿ
ಉತ್ತರ ಕನ್ನಡದ ಜನರಿಗೆ ನವರಾತ್ರಿ ಅಂದ್ರೆ ತುಂಬಾ ಸಡಗರದ ಹಬ್ಬ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ (Uttara Kannada) ಜನ ಖುಷಿ ಪಡುವ ಸುದ್ದಿ ಇಲ್ಲೊಂದಿದೆ, ಅದೇನು ಗೊತ್ತಾ? ಯಶವಂತಪುರ-ಮುರ್ಡೇಶ್ವರ (Yeshvantpur Murdeshwar Trains) ನಡುವೆ ಹಬ್ಬದ ಪ್ರಯುಕ್ತ ವಿಶೇಷ ರೈಲನ್ನು ಪ್ರಾರಂಭಿಸಲಾಗುತ್ತಿದೆ. ಈ ಮೂಲಕ ಉತ್ತರ ಕನ್ನಡ ಜನರಿಗೆ (Uttara Kannada) ವಿಶೇಷ ಸುದ್ದಿ ಹೊರಬಿದ್ದಿದೆ.


ಇದನ್ನೂ ಓದಿ: Annamma Temple: ಮೆಜೆಸ್ಟಿಕ್​ನಲ್ಲೊಂದೇ ಅಲ್ಲ, ಶ್ರೀನಗರದಲ್ಲೂ ಇರುವಳು ಅಣ್ಣಮ್ಮ ತಾಯಿ!


ಹೆಜ್ಜೆಗೊಂದು ಮಾಸ್ತಿ, ನಾಗಯಕ್ಷಿ,ಚೌಡೇಶ್ವರಿ ಊರಿಗೊಂದು ಗ್ರಾಮದೇವಿ. ಇದಕ್ಕೆಲ್ಲ ಗೋಪುರ ಕಳಶದಂತೆ ಶಿರಸಿಯ ಮಾರಿಕಾಂಬೆ, ಹೊನ್ನಾವರದ ಕರಿಕಾನ ಪರಮೇಶ್ವರಿ, ಸಿದ್ದಾಪುರದ ಭುವನೇಶ್ವರಿ, ಯಲ್ಲಾಪುರದ ದುರ್ಗಾಂಬಾ-ಕಾಳಿಕಾಂಬಾ, ಮುಂಡಗೋಡದ ಮಾರಿಕಾಂಬೆ, ಭಟ್ಕಳದ ಸೋಡಿಗದ್ದೆ ಮಹಾಸತಿ, ಕುಮಟಾದ ಭದ್ರಕಾಳಿ, ಹಳಿಯಾಳದ ದುರ್ಗಾದೇವಿ ಹೀಗೆ ಇಡೀ ಜಿಲ್ಲೆಗೆ ಜಿಲ್ಲೆಯೇ ನವರಾತ್ರಿ ಬಂತೆಂದರೆ ನವ ರಂಗಿನ ನವೋಲ್ಲಾಸದಲ್ಲಿ ಮಿಂದೇಳುತ್ತದೆ.


ಪರ ಊರಲ್ಲಿ ದುಡಿಯುವವರೇ ಹೆಚ್ಚು
ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಪರ ಊರಿಗೆ ಹೋಗಿ ದುಡಿಯುವವರ ಸಂಖ್ಯೆಯೇ ಹೆಚ್ಚು! ಅವರು ಊರಿಗೆ ಬರುವ ಆತುರದಲ್ಲಿ ಬಸ್ಸನ್ನು ಆಶ್ರಯಿಸಹೋದರೆ ಖಾಸಗಿ ಸಾರಿಗೆಗಳ ದರ ಹೆಚ್ಚಿರುತ್ತದೆ, ಟಿಕೇಟ್ ಸಿಗುವುದೂ ಕಷ್ಟ! 


ಅಕ್ಟೋಬರ್ 1 ರಿಂದಲೇ ಈ ಸೇವೆ ಶುರು
ಅಕ್ಟೋಬರ್ 1 ನೇ ತಾರೀಕಿಂದ ರೈಲಿನ ಸೇವೆ ಆರಂಭವಾಗಿದ್ದು ರಾತ್ರಿ 11.45 ಕ್ಕೆ ಯಶವಂತಪುರದಿಂದ ಹೊರಡುವ ಈ ರೈಲು (ರೈಲಿನ ಸಂಖ್ಯೆ-06563) ಮರುದಿನ ಮಧ್ಯಾಹ್ನ 12.55 ಕ್ಕೆ ಮುರುಡೇಶ್ವರವನ್ನು ತಲುಪಲಿದೆ. ಹಾಗೂ ಅಕ್ಟೋಬರ್ 2ರಂದು ಮಧ್ಯಾಹ್ನ 1.30ಗೆ ಹೊರಡುವ ರೈಲು, (ರೈಲಿನ ಸಂಖ್ಯೆ: 06564) ಮರುದಿನ ಸಂಜೆ 4 ಕ್ಕೆ ಯಶವಂತಪುರ ತಲುಪಲಿದೆ.

Published by:ಗುರುಗಣೇಶ ಡಬ್ಗುಳಿ
First published: