• Home
 • »
 • News
 • »
 • bengaluru-urban
 • »
 • ಕರುನಾಡಲ್ಲಿ ಕೋಟಿ ಕಂಠ ಗಾಯನ! ಮುಗಿಲು, ಬಾನಲ್ಲೂ ಕನ್ನಡ ಗೀತೆಗಳ ಕಲರವ ನೋಡಿ

ಕರುನಾಡಲ್ಲಿ ಕೋಟಿ ಕಂಠ ಗಾಯನ! ಮುಗಿಲು, ಬಾನಲ್ಲೂ ಕನ್ನಡ ಗೀತೆಗಳ ಕಲರವ ನೋಡಿ

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ನೂರಕ್ಕೂ ಅಧಿಕ ಬೋಟುಗಳಲ್ಲಿ ಕಲಾವಿದರು ಕನ್ನಡ ಗೀತೆಗಳನ್ನು ಹಾಡಿದ್ದಾರೆ. ಮಲ್ಪೆ ಸೈಂಟ್ ಮೆರೀಸ್ ಸಮುದ್ರ ಮಾರ್ಗದಲ್ಲಿ ಸಾವಿರಾರು ಗಾಯಕರ ಕಂಠಕ್ಕೆ ಸಮುದ್ರದ ಅಲೆಗಳೂ ಕಿವಿಯಾಗಿವೆ.

 • News18 Kannada
 • Last Updated :
 • Bangalore [Bangalore], India
 • Share this:

  ಬೆಂಗಳೂರು: ಕನ್ನಡ.. ಕನ್ನಡ, ಎಲ್ಲೆಲ್ಲೂ ಕನ್ನಡ!  ಗಂಧದಗುಡಿಯ ಸಂಭ್ರಮದಲ್ಲಿರೋ ಕನ್ನಡಿಗರು ಕೋಟಿ ಕೋಟಿ ಸಂಖ್ಯೆಯಲ್ಲಿ ಕನ್ನಡ ಗಾನ ಮೊಳಗಿಸಿದ್ದಾರೆ ಸಹಸ್ರಾರು ಕಂಠಗಳೊಂದಿಗೆ ಕನ್ನಡ ಗೀತೆಗಳ ನಾದ ಇಡೀ ಕರುನಾಡಲ್ಲಿ ಝೇಂಕರಿಸಿದೆ. 67ನೇ ಕರ್ನಾಟಕ ರಾಜ್ಯೋತ್ಸವದ (Karnataka Rajyotsava)  ಸಂಭ್ರಮಕ್ಕೆ ಕೋಟಿ ಕಂಠ ಗಾಯನ ಆರಂಭವಾಗಿದೆ.


  ಕರ್ನಾಟಕದ ಎಲ್ಲೆಡೆ ಕನ್ನಡದ ಮಹತ್ವದ ಗೀತೆಗಳನ್ನು ಹಾಡಲಾಗುತ್ತಿದೆ. ಮೈಸೂರಿನ ಅರಮನೆ (Mysuru Palace) ಅಂಗಳದಲ್ಲಿ ಆಯೋಜಿಸಿದ್ದ ಕೋಟಿ ಕಂಠ ಗಾಯನ (Koti Kantha Gayana) ಕಾರ್ಯಕ್ರಮದಲ್ಲಿ ಸಾವಿರಾರು ಜನರು ಗೀತೆಗಳನ್ನು ಹಾಡಿದ್ದಾರೆ. ಕನ್ನಡದ ಗೀತೆಗಳಿಂದ ರಾಜ್ಯೋತ್ಸವದ ಸಂಭ್ರಮಕ್ಕೆ ಮೆರಗು ಹೆಚ್ಚುತ್ತಿದೆ.


  ಇದನ್ನೂ ಓದಿ: Bannerghatta Tiger Video: ಬನ್ನೇರುಘಟ್ಟದಲ್ಲಿ ಈ ಹುಲಿಮರಿ ಬದುಕಿದ್ದೇ ಪವಾಡ!


  ಉಡುಪಿಯಲ್ಲಿ ಬೋಟುಗಳಲ್ಲಿ ಮೊಳಗಿದ ಕನ್ನಡ
  ಉಡುಪಿಯ ಮಲ್ಪೆಯಲ್ಲಿ ಕೋಟಿ ಕಂಠ ಗಾಯನ ಚಲಿಸುತ್ತಿರುವ ಬೋಟುಗಳಲ್ಲಿ ಕನ್ನಡ ಗೀತೆಗಳು ಕಲರವ ಮೊಳಗಿದೆ.


  ಇದನ್ನೂ ಓದಿ: Puneeth Rajkumar: ಮಿಲಿಟ್ರಿ ಮಹದೇವು ಮಾಡಿದ್ದ ಬೆಲ್ಲದ ಚಹಾ ಸವಿದಿದ್ದ ಅಪ್ಪು!


  ನೂರಕ್ಕೂ ಅಧಿಕ ಬೋಟುಗಳಲ್ಲಿ ಕಲಾವಿದರು ಕನ್ನಡ ಗೀತೆಗಳನ್ನು ಹಾಡಿದ್ದಾರೆ. ಮಲ್ಪೆ ಸೈಂಟ್ ಮೆರೀಸ್ ಸಮುದ್ರ ಮಾರ್ಗದಲ್ಲಿ ಸಾವಿರಾರು ಗಾಯಕರ ಕಂಠಕ್ಕೆ ಸಮುದ್ರದ ಅಲೆಗಳೂ ಕಿವಿಯಾಗಿವೆ.

  Published by:ಗುರುಗಣೇಶ ಡಬ್ಗುಳಿ
  First published: