• Home
  • »
  • News
  • »
  • bengaluru-urban
  • »
  • Bengaluru: ಬೆಂಗಳೂರಿನಲ್ಲಿ ನೋಡಿ ಕಾಂತಾರ 'ಗುಳಿಗ' ಅಬ್ಬರ!

Bengaluru: ಬೆಂಗಳೂರಿನಲ್ಲಿ ನೋಡಿ ಕಾಂತಾರ 'ಗುಳಿಗ' ಅಬ್ಬರ!

ಕಾಂತಾರ

ಕಾಂತಾರ

ಇದೀಗ ಈ ನಾಟಕ ಕನ್ನಡ, ಹಿಂದಿ, ಮರಾಠಿ ಭಾಷೆಗಳಿಗೂ ಡಬ್ಬಿಂಗ್ ಆಗುವ ಕಾತರದಲ್ಲಿದೆ. ಹೀಗಾದಲ್ಲಿ ಈಗಾಗಲೇ 300 ಕ್ಕೂ ಅಧಿಕ ಪ್ರದರ್ಶನ ನೀಡಿದ 'ಶಿವಧೂತೆ ಗುಳಿಗೆ' ಅಬ್ಬರ ರಾಷ್ಟ್ರವ್ಯಾಪ್ತಿ ಹಮ್ಮಿಕೊಳ್ಳಲಿದೆ.

  • News18 Kannada
  • Last Updated :
  • Karnataka, India
  • Share this:

    ಬೆಂಗಳೂರು: 'ಕಾಂತಾರ' ಸಿನೆಮಾದ ಪ್ರಮುಖ ಆಕರ್ಷಣೆಯೇ (Attraction) ದೈವದ ಆವೇಶ‌. ಜೊತೆಗೆ ತುಳುನಾಡಿನಲ್ಲಿರುವ ಕಾರಣಿಕ ದೈವಗಳ ಮಹತ್ವವ‌ನ್ನು ನಾಡಿಗೆ ತಿಳಿಸಿಕೊಟ್ಟಿರುವುದಾಗಿದೆ. ಕರಾವಳಿಯಲ್ಲಿ ಈ ಸಿನೆಮಾ (Film) ಸಕ್ಸಸ್ ಹಿಂದೆ‌ ನಾಟಕವೊಂದರ ಪ್ರಭಾವವೂ (Effect) ಇದೆ ಅನ್ನೋದು ಮರೆಯುವಂತಿಲ್ಲ. ಅದುವೇ 'ಶಿವಧೂತೆ ಗುಳಿಗೆ'. ಪ್ರತಿ ಬಾರಿಯೂ ನಾಟಕ ರಂಗದ ಮೇಲೆ ವಿಶಿಷ್ಟ ಪ್ರಯೋಗದ ಮೂಲಕ ಹೆಸರು ಮಾಡುವ 'ಒರಿಯರ್ದೊರಿ ಅಸಲ್' ಖ್ಯಾತಿಯ ನಾಟಕಕಾರ (Drama Artist) ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಈ ನಾಟಕದ (Drama) ಕರ್ತೃ.ಈ ನಾಟಕವು ಈಗಾಗಲೇ ಕರ್ನಾಟಕ ಮಾತ್ರವಲ್ಲದೇ ಬೇರೆ ರಾಜ್ಯಗಳಲ್ಲೂ ಪ್ರದರ್ಶನ ಕಂಡಿದೆ.


    ನಾಟಕವು ತುಳು ಭಾಷೆಯಲ್ಲಿದೆ ಅನ್ನೋ ಮಿತಿಯನ್ನ ಬಿಟ್ಟರೆ, ಈ ನಾಟಕವನ್ನು ನೋಡಿದವರು ಎಲ್ಲರೂ ಇಷ್ಟಪಟ್ಟಿದ್ದಾರೆ. ಮೂರು ಗಂಟೆ ಕಾಲ ಇಲ್ಲಿ ಗುಳಿಗ ದೈವದ ಕಥೆಯನ್ನೇ ಹೇಳಿದ್ದಾರೆ. ಅದನ್ನು ರಂಗದ ಮೇಲೆ ಕಣ್ಣಿಗೆ ಕಟ್ಟುವಂತೆ ಪ್ರಸ್ತುತ ಪಡಿಸಿರುವ ಕೀರ್ತಿ ಕೊಡಿಯಾಲ್ ಬೈಲ್ ಅವರಿಗೆ ಸಲ್ಲುತ್ತದೆ.


    ಬೇರೆ ಭಾಷೆಯಲ್ಲೂ ಅಬ್ಬರ ಶುರು
    ಇದೀಗ ಈ ನಾಟಕ ಕನ್ನಡ, ಹಿಂದಿ, ಮರಾಠಿ ಭಾಷೆಗಳಿಗೂ ಡಬ್ಬಿಂಗ್ ಆಗುವ ಕಾತರದಲ್ಲಿದೆ. ಹೀಗಾದಲ್ಲಿ ಈಗಾಗಲೇ 300 ಕ್ಕೂ ಅಧಿಕ ಪ್ರದರ್ಶನ ನೀಡಿದ 'ಶಿವಧೂತೆ ಗುಳಿಗೆ' ಅಬ್ಬರ ರಾಷ್ಟ್ರವ್ಯಾಪ್ತಿ ಹಮ್ಮಿಕೊಳ್ಳಲಿದೆ. ಇದೀಗ ವಿಷ್ಯ ಏನೆಂದ್ರೆ, ಬೆಂಗಳೂರಿನಲ್ಲಿ ನೆಲೆಸಿರುವ ಕಲಾಸಕ್ತರಿಗೆ 'ಶಿವದೂತೆ ಗುಳಿಗೆ' ನಾಟಕವನ್ನು ಕಣ್ತುಂಬಿಕೊಳ್ಳುವ ಅವಕಾಶವಿದೆ. ಅದೂ ಬೇರೆ ಉಚಿತ ಪ್ರವೇಶ, ಸತತ ಮೂರು ಗಂಟೆ ಕಾಲ ಶಿವದೂತೆ ಅಬ್ಬರವನ್ನು ನೋಡಬಹುದಾಗಿದೆ.


    ಇದನ್ನೂ ಓದಿ:ಮಂಡ್ಯ ಬಾಲಕಿಯರು, ಮೈಸೂರು ಬಾಲಕರು ಖೋ ಖೋದಲ್ಲಿ ರಾಜ್ಯಕ್ಕೇ ಫಸ್ಟ್


    ಕುಲಾಲ ಸಂಘದ ಸುವರ್ಣ ಮಹೋತ್ಸವ
    ಕಾಂತಾರ ಸಿನೆಮಾದಲ್ಲಿ ಗುರುವ ಪಾತ್ರದಲ್ಲಿ ಕಾಣಿಸಿಕೊಂಡ ಸ್ವರಾಜ್ ಶೆಟ್ಟಿಯೇ ಈ ನಾಟಕದಲ್ಲಿ ಗುಳಿಗನಾಗಿ ಕಾಣಿಸಿಕೊಂಡಿದ್ದಾರೆ. ಈ ನಾಟಕವು ಕುಲಾಲ ಸಂಘ ಬೆಂಗಳೂರು ಇದರ ಸುವರ್ಣ ಮಹೋತ್ಸವ ವರ್ಷ ವೇದಿಕೆಯಲ್ಲಿ 'ಶಿವದೂತೆ ಗುಳಿಗೆ' ನಾಟಕ ಪ್ರದರ್ಶನಗೊಳ್ಳಲಿದೆ.


    ಎಲ್ಲಿ, ಯಾವಾಗ ಪ್ರದರ್ಶನ?
    ಕುಲಾಲ ಸಂಘ ಬೆಂಗಳೂರು ಇದರ ಸುವರ್ಣ ಮಹೋತ್ಸವ ಸಂಭ್ರಮವು ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾ ಕ್ಷೇತ್ರದಲ್ಲಿ ಸಂಭ್ರಮದಿಂದ ನಡೆಯಲಿದೆ.


    ಪ್ರದರ್ಶನ ಸಮಯ
    ನವೆಂಬರ್ 12 ರವಿವಾರ ಸಂಜೆ 6 ಗಂಟೆಗೆ ನಾಟಕ ಪ್ರದರ್ಶನವು ನಡೆಯಲಿದೆ. ಉಚಿತ ಪ್ರವೇಶವಿರಲಿದೆ. ಕಲಾಸಕ್ತರು ಗುಳಿಗನ ಅಬ್ಬರವನ್ನು ತುಳು ಭಾಷೆಯಲ್ಲಿ ಈ ನಾಟಕವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

    First published: